X

ಪುಲ್ವಾಮ ದಾಳಿಯನ್ನೂ ಮರೆಯುವಂತಿಲ್ಲ: ಸರ್ಜಿಕಲ್ ಸ್ಟ್ರೈಕ್‌ಗೆ ಸಾಕ್ಷಿ ಕೇಳಿದ ಕಾಂಗ್ರೆಸ್‌ನ ದೇಶವಿರೋಧಿ ನೀತಿಯನ್ನೂ ಮರೆಯುವಂತಿಲ್ಲ!

ಅದು 2019 ಫೆಬ್ರವರಿ 14. ಭಾರತೀಯರು ತಣ್ಣಗೆ ತಮ್ಮ ತಮ್ಮ ಮನೆಗಳಲ್ಲಿ ಕುಳಿತು ಚಹಾ ಸೇವಿಸುವ ಹೊತ್ತು. ನಾವೆಲ್ಲರೂ ನಿರ್ಭೀತಿಯಿಂದ ನಮ್ಮ ನಮ್ಮ ಕೆಲಸ ಮಾಡಬೇಕಾದರೆ, ನಮಗ್ಯಾರಿಗೂ ಶತ್ರುಗಳಿಂದ ಅಪಾಯವಾಗದಂತೆ ಬಂದೂಕು ಹಿಡಿದ ಯೋಧರು ಪ್ರಾಣದ ಹಂಗು ತೊರೆದು ರಕ್ಷಣಾ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದರು. ಆದರೆ ಕುತಂತ್ರಿ ಪಾಪಿಸ್ತಾನದ ನಾಮರ್ಧರು ಆ ದಿನ ಸಂಜೆ ನಮ್ಮ ರಕ್ಷಣೆಯ ಹೊಣೆ ಹೊತ್ತ ಸೈನಿಕರನ್ನು ಹೊತ್ತು ಸಾಗುತ್ತಿದ್ದ ವಾಹನದ ಮೇಲೆ ದಾಳಿ ನಡೆಸಿದ್ದರು. ಕಾಶ್ಮೀರದ ಪುಲ್ವಾಮಾದಲ್ಲಿ ನಡೆದ ಈ ಘಟನೆಯಲ್ಲಿ ಹುತಾತ್ಮರಾದವರು ನಮ್ಮ ದೇಶದ 40 ಮಂದಿ ಯೋಧರೆಂಬ ಮುತ್ತುಗಳು.

ಈ ಘಟನೆ ನಡೆದು 4 ವರ್ಷಗಳಾಗಿವೆ. ಆದರೆ ಅದರ ಕರಾಳ ನೆನಪು ಮಾತ್ರ ದೇಶಪ್ರೇಮಿ ಭಾರತೀಯರೆದೆಯಲ್ಲಿ ಇನ್ನೂ ಜೀವಂತವಾಗಿದೆ. ಮನೆ ಮಕ್ಕಳನ್ನು ಕಳೆದುಕೊಂಡ ಕುಟುಂಬದ ನೋವಿನ ಬೆಂಕಿ ಇನ್ನೂ ಆರಿಲ್ಲ, ಆರುವುದೂ ಇಲ್ಲ. ಪಾಕಿಸ್ತಾನದ ಕುತಂತ್ರ ಬುದ್ಧಿಯ ಈ ದಾಳಿ ಭಾರತದ 40 ಕುಟುಂಬಗಳನ್ನು ಅತಂತ್ರಗೊಳಿಸಿದ್ದು ಸುಳ್ಳಲ್ಲ.

ಪಾಕ್‌ನ ಈ ಕೃತ್ಯಕ್ಕೆ ಆಗ ಕೇಂದ್ರದ ಆಡಳಿತ ಚುಕ್ಕಾಣಿ ಹಿಡಿದಿದ್ದ ಪ್ರಧಾನಿ ಮೋದಿ ನೇತೃತ್ವದ ಸರ್ಕಾರ ಸರ್ಜಿಕಲ್ ಸ್ಟ್ರೈಕ್ ಮೂಲಕ ತಕ್ಕ ಉತ್ತರ ಮತ್ತು ಮುಟ್ಟಿ ನೋಡಿಕೊಳ್ಳುವಂತಹ ಉತ್ತರವನ್ನೇ ನೀಡಿತ್ತು. ಭಾರತದ ಪ್ರತಿಕಾರಕ್ಕೆ ಪಾಕಿಸ್ತಾನ ಮತ್ತು ಭಾರತದಲ್ಲೇ ಇದ್ದ ಪಾಕ್ ಪ್ರೇಮಿಗಳು ನಲುಗಿ ಹೋಗಿದ್ದರು. ಭಾರತದ ವಿಷಯಕ್ಕೆ ಹೋದರೆ ಇನ್ನು ಉಳಿಗಾಲ ಇಲ್ಲ ಎಂಬ ಸತ್ಯ ದರ್ಶನ ಪಾಕ್ ಮತ್ತು ಪಾಕ್ ಪ್ರೇಮಿಗಳಿಗೆ ಆಗಿ ಹೋಗಿತ್ತು. ಭಾರತೀಯರಿಗೂ ಭಾರತದಲ್ಲೇ ಇದ್ದು, ಭಾರತದ ಮೇಲೆಯೇ ಹಗೆ ಸಾಧಿಸುವ ನಾಲಾಯಕುಗಳ್ಯಾರು ಎನ್ನುವ ಸತ್ಯದ ಅರಿವಾಗಿತ್ತು.

ಇನ್ನು ಈ ಸಂದರ್ಭದಲ್ಲಿ ಪಕ್ಷಬೇಧ ಮರೆತು ಕೇಂದ್ರ ಸರ್ಕಾರದ ಜೊತೆ ನಿಲ್ಲಬೇಕಿದ್ದ ಸೋನಿಯಾ ಗಾಂಧಿ ಕೃಪಾಪೋಷಿತ ನಕಲಿ ಗಾಂಧಿ ನಾಟಕ ಸಂಘ ‘ಕಾಂಗ್ರೆಸ್’ ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರ ನಡೆಸಿದ ಸರ್ಜಿಕಲ್ ಸ್ಟ್ರೈಕ್ ಎಂಬುದನ್ನೇ ಸುಳ್ಳು ಎಂದರು. ಅದನ್ನು ನಡೆಸಲಾಗಿದೆ ಎನ್ನುವುದಕ್ಕೆ ದಾಖಲೆ ನೀಡುವಂತೆ ಹೇಳಿ, ಭಾರತೀಯರ ದಾರಿ ತಪ್ಪಿಸುವ ವ್ಯರ್ಥ ಪ್ರಯತ್ನ ನಡೆಸಿದರು. ದೇಶದ ಭದ್ರತೆಗೆ ಸಂಬಂಧಿಸಿದ ವಿಷಯವನ್ನು ರಾಜಕೀಯವಾಗಿ ಬಳಸುವ ಮೂಲಕ ಓಟ್ ಬ್ಯಾಂಕ್ ನಡೆಸಲು ಮುಂದಾದರು. ಆದರೆ ಜಾಗೃತ ಭಾರತೀಯರು ಪಾಕ್ ಪ್ರೇಮಿ ಕಾಂಗ್ರೆಸ್‌ನ ಇಂತಹ ನಾಟಕಗಳಿಗೆ ಸೊಪ್ಪು ಹಾಕದೆ, ಪ್ರಧಾನಿ ಮೋದಿ ಅವರ ಜೊತೆ ನಿಂತರು.

ಇವೆಲ್ಲ ನಡೆದು ನಾಲ್ಕು ವರ್ಷಗಳಾಗಿವೆ. ಆದರೂ ಭಾರತೀಯರು ಅಮೂಲ್ಯ ರತ್ನಗಳನ್ನು ಕಳೆದುಕೊಂಡ ನೋವಿಂದ ಮಾತ್ರ ಹೊರಬಂದಿಲ್ಲ. ಆದರೆ ಪಾಕಿಸ್ತಾನ ಮಾತ್ರ ತಾನು ಮಾಡಿದ ಅನ್ಯಾಯಕ್ಕೆ ಶಿಕ್ಷೆ ಅನುಭವಿಸುತ್ತಿದೆ. ಆಹಾರ, ಆರ್ಥಿಕ ಆಘಾತ ಆ ದೇಶವನ್ನು ಕಂ ಗೆ ಡಿ ಸಿ ಬಿಟ್ಟಿದೆ. ಇದು ದೇವರೇ ಆ ಪಾಪಿ ರಾಷ್ಟ್ರಕ್ಕೆ ನೀಡಿದ ಶಿಕ್ಷೆ ಎಂಬಂತೆ ಜಗತ್ತು ಮಾತನಾಡಿಕೊಳ್ಳುತ್ತಿದೆ. ಅಕ್ಷರಶಃ ಬಿಕ್ಷುಕ ರಾಷ್ಟ್ರವಾಗಿರುವ ಪಾಕಿಸ್ತಾನ ಈ ಪರಿಸ್ಥಿತಿಯಿಂದ ಹೊರಬರಲು ಭಾರತದ ನೆರವು ಯಾಚಿಸುತ್ತಿದೆ. ಮಾಡಿದ್ದುಣ್ಣೋ ಮಹರಾಯ ಎಂಬಂತೆ ಪಾಕಿಸ್ತಾನದ ಸದ್ಯದ ಪರಿಸ್ಥಿತಿ ಇದೆ.

ಏನೇ ಇರಲಿ. ನಾವು ಕಳೆದುಕೊಂಡ ಅಮೂಲ್ಯ ರತ್ನಗಳನ್ನು ನಾವು ಮತ್ತೆ ಪಡೆಯುವುದು ಅಸಾಧ್ಯ. ಹುತಾತ್ಮರ ಕುಟುಂಬಗಳಿಗೆ ಅವರು ಕಳೆದುಕೊಂಡ ಮನೆಯ ಮಕ್ಕಳ ಜೀವವನ್ನು ಮತ್ತೆ ತಂದುಕೊಡುವುದೂ ಅಸಾಧ್ಯ. ಆದರೆ ನಾವು ಅವರೊಂದಿಗಿದ್ದೇವೆ ಎಂಬುದನ್ನು ದೇಶ ಪ್ರೇಮದ ಮೂಲಕ ತೋರಿಸಿ ಕೊಳ್ಳುವುದು ಸಾಧ್ಯ. ನಮ್ಮ ದೇಶವನ್ನು ಹುರಿದು ಮುಕ್ಕುವವರ ಕೈಯಿಂದ ದೇಶವನ್ನು ರಕ್ಷಿಸುವ ಕೆಲಸ ಮಾಡಿದರೆ, ನಾವೂ ಯೋಧರಾದಂತೆಯೇ ಸರಿ. ನಮ್ಮನ್ನು ರಕ್ಷಿಸುವ ಯೋಧರಿಗೆ ರಕ್ಷಣೆ ನೀಡುವ ಪ್ರಧಾನಿ ಮೋದಿ ಅವರಂತಹ ನಾಯಕನನ್ನು ಆರಿಸುವ ಮೂಲಕ ನಮ್ಮ ಕರ್ತವ್ಯವನ್ನು ಸರಿಯಾಗಿ ಪಾಲನೆ ಮಾಡಿದಲ್ಲಿ ಅದಕ್ಕಿಂತ ದೇಶ ಸೇವೆ ಬೇರೊಂದಿಲ್ಲ.

ಕೊನೆಯದಾಗಿ, ಪುಲ್ವಾಮಾ ದಾಳಿಯಲ್ಲಿ ಮಡಿದ ವೀರಯೋಧರಿಗೆ ನಮ್ಮ ಗೌರವ ನಮನಗಳು. ಕೊನೆಯ ಉಸಿರಿನ ವರೆಗೆ ಈ ದೇಶ ನಿಮ್ಮ ಬಲಿದಾನವನ್ನು ಮರೆಯದು. ನಮ್ಮೆದೆಗಳಲ್ಲಿ ನಿಮ್ಮೆಲ್ಲರ ನೆನಪು ಅಮರ.

Post Card Balaga:
Related Post