X

ಕೊಲೆಗಡುಕ ಆರೋಪಿಗೆ ಟಿಕೆಟ್: ಕರಾವಳಿಯಲ್ಲಿ ಮತ್ತೊಂದು ಕೃತ್ಯಕ್ಕೆ ಸಾಕ್ಷಿಯಾಗುತ್ತಿದೆ SDPI

ಎಸ್‌ಡಿಪಿಐ ಎಂತಹ ಉಗ್ರ ಪ್ರೇರಿತ ಸಂಘಟನೆ ಎಂಬುದಕ್ಕೆ ದಕ್ಷಿಣ ಕನ್ನಡದ ಪುತ್ತೂರಿನಲ್ಲಿ ಮತ್ತೊಮ್ಮೆ ಸಾಕ್ಷಿ ಸಿಕ್ಕಿದೆ. ಎಸ್‌ಡಿ‌ಪಿ‌ಐ ಈ ಬಾರಿ ವಿಧಾನಸಭಾ ಚುನಾವಣೆಗೆ ಪ್ರವೀಣ್ ನೆಟ್ಟಾರ್ ಎಂಬ ಯುವಕನ ಹತ್ಯೆಯ ಆರೋಪದಲ್ಲಿ ಜೈಲು ಪಾಲಾಗಿರುವ ಶಾಫಿ ಬೆಳ್ಳಾರೆ ಎಂಬಾತನಿಗೆ ಪುತ್ತೂರಿನಲ್ಲಿ ಸ್ಪರ್ಧಿಸಲು ಟಿಕೆಟ್ ನೀಡುವುದಾಗಿ ಘೋಷಣೆ ಮಾಡುವ ಮೂಲಕ, ತಾನೊಂದು ನಟೋರಿಯಸ್ ಸಂಘಟನೆ ಎಂಬುದನ್ನು ಮತ್ತೊಮ್ಮೆ ಜಗಜ್ಜಾಹೀರು ಮಾಡಿದೆ.

ಪ್ರವೀಣ್ ನೆಟ್ಟಾರು ಹತ್ಯೆ ಇಡೀ ದೇಶವನ್ನೇ ಬೆಚ್ಚಿ ಬೀಳಿಸಿದ್ದ ಘಟನೆ. ಈ ದುಷ್ಕ್ೃತ್ಯದ ತನಿಖೆ ನಡೆಸುತ್ತಿದ್ದ ಎನ್‌ಐಎ ಸಹ ಆರೋಪಿ ನಟೋರಿಯಸ್ ಶಾಫಿ ಬೆಳ್ಳಾರೆಯ ವಿರುದ್ಧ ಸಾಕ್ಷ್ಯಾಧಾರ ಒದಗಿಸಿತ್ತು. ಇದೀಗ ಈತನಿಗೆ ಟಿಕೆಟ್ ನೀಡುವ ಮೂಲಕ ಎಸ್‌ಡಿಪಿಐ ಒಂದು ಭಯೋತ್ಪಾದಕ ಸಂಘಟನೆ, ಈ ಪಕ್ಷದಲ್ಲಿ ಜಿ ಹಾದಿ ಕೊಲೆಗಡುಕರಿಗೆ ಮಾತ್ರವೇ ಅವಕಾಶ ಎಂಬುದನ್ನು ಸಾಬೀತು ಮಾಡಿ ತೋರಿಸಿದೆ. ಎಸ್‌ಡಿ‌ಪಿಐ ಮತ್ತು ಪ್ರವೀಣ್ ನೆಟ್ಟಾರು ಕೊಲೆಗೆ ಸಂಬಂಧ ಇದೆ ಎನ್ನುವುದಕ್ಕೆ ಈ ಟಿಕೆಟ್ ಘೋಷಣೆಯೇ ಸಾಕ್ಷಿ ನುಡಿಯುತ್ತಿದೆ.

ಎಸ್‌ಡಿಪಿಐ ಯಾವ ರೀತಿಯ ಸಂಘಟನೆ?, ಈ ಸಂಘಟನೆ ಬೆಳೆದರೆ ಇದರಿಂದ ದೇಶಕ್ಕಾಗುವ ಅಪಾಯ ಏನು?, ಇಂತಹ ಕೊಲೆ ಗಡಿ ಕರಿ ಗೆ ಮಣೆ ಹಾಕುವ ಸಂಘಟನೆಯನ್ನು ನಿಷೇಧಿಸದೆ ಹೋದಲ್ಲಿ ಮುಂದಾಗುವ ಅಪಾಯ… ಈ ಎಲ್ಲವನ್ನೂ ಮನಗಂಡು ಸರ್ಕಾರ ಇಂತಹ ಉಗ್ರ ಪ್ರೇಮಿ ಸಂಘಟನೆಯನ್ನು ಬ್ಯಾನ್ ಮಾಡುವ ಕಾರ್ಯಕ್ಕೆ ಮುಂದಾಗಬೇಕು. ಕೊಲೆಗಡುಕರು ಚುನಾವಣೆಗೆ ನಿಂತ ಕೂಡಲೇ ಜನತೆ ಅವರಿಗೆ ಮತ ನೀಡಿ ಗೆಲ್ಲಿಸುತ್ತಾರೆ ಎಂದಲ್ಲ. ಆದರೆ, ಇಂತಹ ಕ್ರಿಮಿಗಳಿಗೆ ಹೀಗೆ ಚುನಾವಣಾ ಅಭ್ಯರ್ಥಿಯಾಗಿ ಸ್ಪರ್ಧೆಗೆ ಅವಕಾಶ ನೀಡಿದಲ್ಲಿ ಮುಂದಿನ ದಿನಗಳಲ್ಲಿ ಕೊಲೆ ಮಾಡಿದರೂ ನಮಗೆ ಮನ್ನಣೆ ದೊರೆಯುತ್ತದೆ ಎಂಬ ಮನಸ್ಥಿತಿ ಹಲವು ಜಿಹಾದಿಗಳಲ್ಲಿ ಬೆಳೆಯುವುದು ಸಾಧ್ಯ. ಮುಂದೊಮ್ಮೆ ಕೆಲವು ಭಯೋತ್ಪಾದಕ ಪಕ್ಷಗಳು ನಮ್ಮ ದೇಶದ ಸಂವಿಧಾನದ ಮೇಲೆಯೇ ಸವಾರಿ ಮಾಡುವ ದಿನ ಬರುವುದಕ್ಕೂ ಇಂತಹ ಘಟನೆಗಳು ಕಾರಣವಾಗಬಹುದು ಎನ್ನುವುದರಲ್ಲಿ ಎರಡು ಮಾತಿಲ್ಲ.

ಇಂದು ಕೊಲೆ ಆರೋಪಿಗೆ ಟಿಕೆಟ್ ನೀಡಿರುವ ಎಸ್‌ಡಿಪಿಐ ಪಕ್ಷದ ಜಿಹಾದಿಗಳು ಮುಂದಿನ ದಿನಗಳಲ್ಲಿ ಹಾಡು ಹಗಲೇ ಜನರನ್ನು ನಡು ರಸ್ತೆಯಲ್ಲಿಯೇ ಕೊಚ್ಚಿ ಹಾಕುವ ಅಪಾಯವನ್ನೂ ನಾವು ಅಲ್ಲಗಳೆಯುವಂತಿಲ್ಲ. ಆದ್ದರಿಂದ ರಾಜ್ಯ, ಕೇಂದ್ರ ಸರ್ಕಾರಗಳು ಕೂಡಲೇ ಎಸ್‌ಡಿಪಿಐ ನಂತಹ ಜಿಹಾದಿ ಸಂಘಟನೆಯ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಆ ಮೂಲಕ ಮುಂದಿನ ದಿನಗಳಲ್ಲಿ ದೇಶಕ್ಕೆ ಬಂದೊದಗುವ ಆಪತ್ತಿನಿಂದ ರಕ್ಷಣೆ ನೀಡಬೇಕು ಎನ್ನುವುದು ದೇಶಭಕ್ತ ಸಾರ್ವಜನಿಕರ ಆಗ್ರಹವೂ ಹೌದು.“““““““““““““““““““““““““““““““““““““““““““““““““““““““““““““““““““““““““““““““““““““““““““““““““““““““““““““““““““““““““““““““““““““““““““““““““““`

Post Card Balaga:
Related Post