X

ರೈಲ್ವೆ ಖಾಸಗೀಕರಣ‌ದ ಬಗ್ಗೆ ರಾಹುಲ್ ಗಾಂಧಿ ಟ್ವೀಟ್ ಸುಳ್ಳು: ಫ್ಯಾಕ್ಟ್ ಚೆಕ್‌ನಲ್ಲಿ ಬಯಲು

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಸುಳ್ಳು ಹೇಳುವ ಮೂಲಕ ಮತ್ತೆ ನಗೆಪಾಟಿಲಿಗೀಡಾಗಿದ್ದಾರೆ. ರೈಲ್ವೆ ಖಾಸಗೀಕರಣಕ್ಕೆ ಸಂಬಂಧಿಸಿದಂತೆ ಅವರು ಮಾಡಿದ ಟ್ವೀಟ್ ಒಂದರ ಫ್ಯಾಕ್ಟ್ ಚೆಕ್ ಮಾಡೌದ ಪಿಐಬಿ, ರಾಹುಲ್ ಹಂಚಿಕೊಂಡಿರುವ ಮಾಹಿತಿ ಸುಳ್ಳು ಎಂದು ತಿಳಿಸಿದೆ.

ಇನ್ನು ಪಿಐಬಿಯು ರಾಹುಲ್ ಗಾಂಧಿ ಮಾಡಿರುವ ಟ್ವೀಟ್‌ನ ಸ್ಕ್ರೀನ್ ಶಾಟ್ ಅನ್ನು ಸಹ ಹಂಚಿಕೊಂಡಿದ್ದು, ಇದರಲ್ಲಿ ರಾಹುಲ್ ಗಾಂಧಿ ಅವರು ‘ಭಾರತೀಯ ರೈಲ್ವೆ‌ಯ 151 ರೈಲುಗಳನ್ನು ಖಾಸಗೀಕರಣ‌ಗೊಳಿಸಲಾಗಿದೆ ಎಂದು ತಿಳಿಸಿದ್ದರು. ಈ ಸುದ್ದಿಯು ಸಂಪೂರ್ಣ ಆಧಾರ ರಹಿತವಾಗಿದ್ದು, ಸುಳ್ಳು ಸುದ್ದಿಯಾಗಿದೆ ಎಂದು ಪಿಐಬಿ ಫ್ಯಾಕ್ಟ್ ಚೆಕ್‌ನಲ್ಲಿ ತಿಳಿದು ಬಂದಿದೆ. ರೈಲ್ವೆ‌ಯು ತನ್ನ ಯಾವುದೇ ಆಸ್ತಿಯನ್ನು ಖಾಸಗೀಕರಣ ಮಾಡಿಲ್ಲ ಎಂದು ಸಹ ತಿಳಿಸಿದೆ.

ಈ ಟ್ವೀಟ್ ಅನ್ನು ರಾಹುಲ್ ಗಾಂಧಿ ಅವರು ಶನಿವಾರ ಹಂಚಿಕೊಂಡಿದ್ದಾರೆ. ಇದರಲ್ಲಿ ಒಂದು ವಿಡಿಯೋ ಸಹ ಹಂಚಿಕೊಂಡಿದ್ದಾರೆ. ಹಾಗೆಯೇ ರೈಲ್ವೆ‌ಯು ಭಾರತವನ್ನು ಸಂಪರ್ಕಿಸುತ್ತದೆ. ಪ್ರತಿ ನಿತ್ಯ 2.5 ಕೋಟಿ ಪ್ರಯಾಣಿಕರಿಗೆ ಸೇವೆಗಳನ್ನು ಮತ್ತು 12 ಲಕ್ಷ ಜನರಿಗೆ ಉದ್ಯೋಗ ಒದಗಿಸುತ್ತದೆ. ಪ್ರಧಾನಮಂತ್ರಿಜಿ, ರೈಲ್ವೆ‌ಯು ದೇಶದ ಆಸ್ತಿ. ಖಾಸಗೀಕರಣ ಮಾಡಬೇಡಿ. ಅದನ್ನು ಬಲಗೊಳಿಸಿ, ಮಾರಬೇಡಿ ಎಂಬುದಾಗಿಯೂ ಬರೆದುಕೊಂಡಿದ್ದಾರೆ.

ಈ ಟ್ವೀಟ್‌ನ ಸ್ಕ್ರೀನ್ ಶಾಟ್ ಅನ್ನು ಸಹ ಪ್ರಕಟಿಸಿರುವ ಪಿಐಬಿ‌ಯು ಇದನ್ನು ಸುಳ್ಳು ಎಂಬುದಾಗಿ ತಿಳಿಸಿದೆ.

Post Card Balaga:
Related Post