X

“ಅವರಲ್ಲಿರುವುದು ಶೌರ್ಯ‌ವಲ್ಲ, ಕ್ರೌರ್ಯ

ಶೌರ್ಯ‌ದ ಗುಣ ಮುಸ್ಲಿಮರಲ್ಲಿಲ್ಲ. ಅವರಲ್ಲಿರುವುದು ಕ್ರೌರ್ಯ‌ದ ಗುಣ ಎಂಬುದಾಗಿ ಸಂಸದ ಪ್ರತಾಪ್ ಸಿಂಹ ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಇತಿಹಾಸ ಗಮನಿಸಿದಾಗ ಯಾರು ಹೋರಾಟದ ಮೂಲಕ ಗೆಲುವು ಪಡೆದುಕೊಂಡಿದ್ದಾರೆ ತೋರಿಸಿ. ಯಾರು ಕುತಂತ್ರ‌ಗಳ ಮೂಲಕ, ದ್ರೋಹವೆಸಗಿ ಗೆದ್ದಿದ್ದಾರೆ. ನೇರಾ ನೇರ ಖಡ್ಗ ಹಿಡಿದು ಹೋರಾಟ ಮಾಡದ ಮುಸ್ಲಿಮರಲ್ಲಿ ಶೌರ್ಯ‌ದ ಗುಣ ಇಲ್ಲ. ಬದಲಾಗಿ ಕ್ರೌರ್ಯ‌ದ ಗುಣವಿದೆ ಎಂದು ಅವರು ಹೇಳಿದ್ದಾರೆ.

ಟಿಪ್ಪು‌ವಿನ ಆಡಳಿತದ 10 ವರ್ಷಗಳ‌ಲ್ಲಿ ಖಡ್ಗವನ್ನು ಹಿಡಿದು ಒಂದೇ ಒಂದು ಯುದ್ಧವನ್ನು ಮಾಡಿಲ್ಲ. ಯುದ್ಧವನ್ನು ಮುನ್ನಡೆಸುವ ಕೆಲಸವನ್ನು ಸಹ ಮಾಡಿಲ್ಲ. ಯಾರನ್ನು ಗೆಲ್ಲದೆ ಹೋದರೂ, ತನ್ನನ್ನು ತಾನೇ ಸುಲ್ತಾನ ಎಂಬುದಾಗಿ ಸ್ವಯಂಘೋಷಣೆ ಮಾಡಿಕೊಂಡವ. ಆತ ಹುಲಿಯನ್ನು ಬರಿಗೈಯಲ್ಲಿ ಹುಲಿಯ ಸಂಹಾರ ಮಾಡಿಲ್ಲ. ಆದರೂ ಆತ ಕೈಯಿಂದಲೇ ಹುಲಿಯನ್ನು ಕೊಂದ ಎಂಬುದಾಗಿ ಪಠ್ಯ‌ಗಳಲ್ಲಿ ಸುಳ್ಳು ಹೇಳಲಾಗಿದೆ. ಅದನ್ನೇ ನಾವು ಪರೀಕ್ಷೆ‌ಯಲ್ಲೂ ಬರೆದಿದ್ದೇವೆ. ಆದರೆ ಬರಿಗೈಯಿಂದ ಹುಲಿಯನ್ನು ಕೊಲ್ಲಲು ಸಾಧ್ಯವೇ?. ಇದನ್ನು ಹಿರಿಯರು ಸಹ ಪ್ರಶ್ನೆ ಮಾಡಿಲ್ಲ. ಈ ಅಸತ್ಯ‌ವನ್ನೇ ಸತ್ಯ ಎಂಬಂತೆ ಒಪ್ಪಿಕೊಂಡು ಬಿಟ್ಟಿದ್ದಾರೆ ಎಂದು ಹೇಳಿದ್ದಾರೆ.

ಟಿಪ್ಪು ಹುಲಿಯನ್ನು ಕೊಂದಿದ್ದರೆ, ರಣರಂಗದಲ್ಲಿ‌ಯೂ ಖಡ್ಗ ಹಿಡಿದು ಹೋರಾಟ ನಡೆಸಬೇಕಾಗಿತ್ತು. ಆದರೆ ಆತನಲ್ಲಿ ಶೌರ್ಯ ಇಲ್ಲದೆ, ಪುಕ್ಕಲನಾಗಿದ್ದ ಕಾರಣ ಬ್ರಿಟಿಷರ ಜೊತೆಗೆ ಒಪ್ಪಂದ ಮಾಡಿಕೊಂಡಿದ್ದ. ಆತನ ಕ್ರೌರ್ಯ, ಇಸ್ಲಾಮೀಕರಣದ ಪ್ರಯತ್ನ, ಅನ್ಯ ಧರ್ಮದ ಮೇಲೆ ಅಸಹಿಷ್ಣುತೆ ಇಂತಹ ಗುಣಗಳ ಕಾರಣಕ್ಕೆ‌ಯೇ, ಅವನನ್ನು ಸೋಲಿಸಲು ಎಲ್ಲರೂ ಬ್ರಿಟಿಷರ ಜೊತೆ ಸೇರಿ ಯುದ್ಧ ಮಾಡಿದರು. ಆತ ಅನ್ಯ ಧರ್ಮ‌ಗಳನ್ನು ದ್ವೇಷಿಸುತ್ತಿದ್ದ ಎಂಬುದನ್ನು ಮೈಸೂರು ಮಹಾರಾಜ‌ರು ನಡೆಸಿಕೊಂಡು ಬಂದಿದ್ದ ದಸರಾ ಹಬ್ಬ‌ವನ್ನು ನಿಲ್ಲಿಸಿದ್ದೇ ಸಾಕ್ಷಿ ಎಂದು ಪ್ರತಾಪ್ ಸಿಂಹ ತಿಳಿಸಿದ್ದಾರೆ.

ಟಿಪ್ಪು ತನ್ನ ಆಡಳಿತದಲ್ಲಿ ಕನ್ನಡ ಬಿಟ್ಟು ಪರ್ಶಿಯನ್ ಭಾಷೆ ಬಳಕೆಗೆ ತಂದಿದ್ದ. ಕಂದಾಯ ಇಲಾಖೆಯ‌ಲ್ಲಿ ಈಗಲೂ ಆ ಪದಗಳು ಬಳಕೆಯಲ್ಲಿವೆ. ಕನ್ನಡ ಕೊಂದ ಟಿಪ್ಪು ಹೇಗೆ ಕನ್ನಡ ಪ್ರೇಮಿಯಾಗುತ್ತಾನೆ. ಅವನೇನು ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದಾನಾ? ಎಂದು ಪ್ರಶ್ನಿಸಿದ್ದಾರೆ.

ಇನ್ನು ಶಾಸಕ ತನ್ವೀರ್ ಸೇಠ್ ಟಿಪ್ಪು‌ವಿನ ಧರ್ಮದವರು‌. ಆದರೆ ಎಚ್. ವಿಶ್ವನಾಥ್ ಅವರು ಟಿಪ್ಪುವಿನ ಗುಣಗಾನ ಮಾಡುವ ಅನಿವಾರ್ಯ‌ತೆ ಏನಿದೆ ಎಂದು ಅವರು ಈ ಸಂದರ್ಭದಲ್ಲಿ ಪ್ರಶ್ನಿಸಿದರು.

Post Card Balaga:
Related Post