X

ಕಾಂಗ್ರೆಸ್ ನಿಂದ ದೂರ ಸರಿಯಲಿದ್ದಾರೆ ರೆಬೆಲ್ ಸ್ಟಾರ್ ಅಂಬರೀಶ್.! ವರ್ಕ್ ಔಟ್ ಆಗುತ್ತಾ ಬಿಜೆಪಿ ಮಾಸ್ಟರ್ ಪ್ಲಾನ್..?!

ಕರ್ನಾಟಕ ರಾಜ್ಯ ವಿಧಾನಸಭಾ ಚುನಾವಣೆ ಭಾರೀ ರಂಗೇರುತ್ತಿದ್ದಂತೆ ಕಾಂಗ್ರೆಸ್ ಗೆ ಪಕ್ಷಾಂತರ ಪರ್ವದ ಭೀತಿಯೂ ಬಹಳ ಹೆಚ್ಚಾಗಿ ಕಾಡುತ್ತಿದೆ. ಕರ್ನಾಟಕ ವಿಧಾನಸಭಾ ಚುನಾವಣೆ ಎಲ್ಲಾ ರಾಜಕೀಯ ಪಕ್ಷಗಳಿಗೂ ಪ್ರತಿಷ್ಟೆಯ ಕಣವಾಗಿರುವುದರಿಂದ ಭಾರೀ ಕುತೂಹಲ ಕೆರಳಿಸಿದೆ. ಈಗಾಗಲೇ ಎಲ್ಲಾ ಪಕ್ಷಗಳು ಭರ್ಜರಿ ಪ್ರಚಾರ ಕಾರ್ಯ ಆರಂಭಿಸಿದ್ದು, ರಾಜ್ಯ, ರಾಷ್ಟ್ರೀಯ ನಾಯಕರು ಕರ್ನಾಟಕದಲ್ಲೇ ಟಿಕಾಣಿ ಹೂಡಿದ್ದಾರೆ.

ಒಬ್ಬರ ಬೆನ್ನಲ್ಲೆ ಮತ್ತೊಬ್ಬರು ಆಗಮಿಸುತ್ತಿದ್ದು ಭಾರೀ ಪೈಪೋಟಿಗೆ ಇಳಿದಿದ್ದಾರೆ.‌  ಟಿಕೆಟ್ ಹಂಚಿಕೆ ವಿಚಾರವಾಗಿ ಈಗಾಗಲೇ ಕಾಂಗ್ರೆಸ್ ನಿಂದ ಅಸಮಧಾನಗೊಂಡು ಬಿಜೆಪಿ ಸೇರ್ಪಡೆಯಾದ ನಾಯಕರ ಸಾಲೇ ಕಣ್ಣ ಮುಂದಿದೆ.‌ಆದರೆ ಇದೀಗ ಕಾಂಗ್ರೆಸ್ ಬಹಳ ದೊಡ್ಡ ಏಟು ಕೊಡಲು ಮತ್ತೊಬ್ಬ ಮಾಜಿ ಸಚಿವ ಸಜ್ಜಾಗಿದ್ದಾರೆ..!

ಸಿದ್ದರಾಮಯ್ಯನವರ ಆಡಳಿತಕ್ಕೆ ಮತ್ತು ಕಾಂಗ್ರೆಸ್ ನ ತುಷ್ಟೀಕರಣ ನೀತಿಗೆ ಬೇಸತ್ತ ಪಕ್ಷದ ಮುಖಂಡರು ಈಗಾಗಲೇ ತಮ್ಮ ಪಕ್ಷ ತೊರೆದು ಬೇರೆ ಪಕ್ಷಗಳ‌ ಕಡೆ ಮುಖ ಮಾಡಿದ್ದು, ಕಾಂಗ್ರೆಸ್ ಗೆ ತುಂಬಲಾರದ ನಷ್ಟವಾಗಿದೆ.

ಕಾಂಗ್ರೆಸ್ ಗೆ ಗುಡ್ ಬೈ ಹೇಳಲಿದ್ದಾರೆ ರೆಬೆಲ್ ಸ್ಟಾರ್..!

ಮಂಡ್ಯದ ಗಂಡು , ಕಾಂಗ್ರೆಸ್ ನ ಪ್ರಭಾವಿ ನಾಯಕ , ಮಂಡ್ಯ ಕಾಂಗ್ರೆಸ್ ನ‌ ಕೈ ನಟ ಅಂಬರೀಶ್ ಇದೀಗ ಕಾಂಗ್ರೆಸ್ ತೊರೆಯಲು ತಯಾರಿ ನಡೆಸಿದಂತಿದೆ. ಈಗಾಗಲೇ ಅನೇಕ ಬಾರಿ ರಾಜ್ಯ ಸರಕಾರದ ವಿರುದ್ಧ ನಡೆದುಕೊಂಡಿದ್ದ ಅಂಬರೀಶ್ ಇದೀಗ ನೇರವಾಗಿ ಪಕ್ಷದಿಂದ ದೂರ ಸರಿಯಲಿದ್ದಾರೆ ಎಂಬ ಮಾತೂ ಕೇಳಿ ಬರುತ್ತಿದೆ. ಯಾಕೆಂದರೆ ಚುನಾವಣೆ ಘೋಷಣೆಯಾಗಿ ಇಷ್ಟು ದಿನವಾದರೂ ಕೂಡ ಅಂಬರೀಶ್ ಪದಕ ಯಾವುದೇ ಪ್ರಚಾರ ಕಾರ್ಯ ಆರಂಭಿಸಿಲ್ಲ.‌ ಪಕ್ಷದ ಹಿರಿಯ ನಾಯಕನಾಗಿ, ಮಂಡ್ಯ ಕಾಂಗ್ರೆಸ್ ಗೆ ಜೀವಕಳೆ ತುಂಬಿ ಪಕ್ಷ ಸಂಘಟನೆ ಮಾಡಿದ ರೆಬೆಲ್ ಸ್ಟಾರ್ ಇದೀಗ ಮೌನ ವಹಿಸಿದ್ದಾರೆ. ರಾಜ್ಯಾದ್ಯಂತ ಕಾಂಗ್ರೆಸ್ ನಾಯಕರು ಸರಣಿ ಕಾರ್ಯಕ್ರಮ ನಡೆಸಿ , ಪ್ರಚಾರ ಮಾಡುತ್ತಿದ್ದರೆ ಇತ್ತ ಮಂಡ್ಯದಲ್ಲಿ ಯಾವುದೇ ಪ್ರಚಾರ ಕಾರ್ಯ ಆರಂಭವಾಗಲಿಲ್ಲ. ಕಾಂಗ್ರೆಸ್ ನ ಪುಷ್ಟೀಕರಣ ನೀತಿಗೆ ಬೇಸತ್ತ ಅಂಬರೀಶ್ ಪಕ್ಷ ತೊರೆಯುವ ಮುನ್ಸೂಚನೆ ನೀಡಿದ್ದಾರೆ.

ಅಂಬರೀಶ್ ಗೆ ಬಿಜೆಪಿ ಗಾಳ..!

ಅಂಬರೀಶ್ ಕನ್ನಡ ಚಿತ್ರರಂಗದ ಪ್ರಸಿದ್ಧ ನಟ. ರಾಜ್ಯಾದ್ಯಂತ ಲಕ್ಷಾಂತರ ಅಭಿಮಾನಿಗಳನ್ನು ಹೊಂದಿರುವ ರೆಬೆಲ್ ಸ್ಟಾರ್ ಕಾಂಗ್ರೆಸ್ ತೊರೆದಿದ್ದೇ ಆದಲ್ಲಿ ಮಂಡ್ಯದಲ್ಲಿ ಕಾಂಗ್ರೆಸ್ ಸೋಲು ಖಚಿತ ಎಂಬುದು ಸ್ವತಃ ಕಾಂಗ್ರೆಸಿಗರಿಗೇ ತಿಳಿದಿರುವ ವಿಚಾರ. ಅದಕ್ಕಾಗಿಯೇ ಪಕ್ಷದಿಂದ ದೂರ ಸರಿದಿರುವ ಅಂಬರೀಶ್ ರನ್ನು ಬಿಜೆಪಿ ತನ್ನತ್ತ ಸೆಳೆಯುವ ಪ್ರಯತ್ನ ನಡೆಸುತ್ತಿದೆ. ಚುನಾವಣೆ ಸಮೀಪಿಸುತ್ತಿದ್ದಂತೆ ಇಂತಹ ದೊಡ್ಡ ಬೆಳವಣಿಗೆ ಕಂಡು ಬರುತ್ತಿದ್ದು , ಕರ್ನಾಟಕವನ್ನು ಕಾಂಗ್ರೆಸ್ ಮುಕ್ತಗೊಳಿಸುವ ಬಿಜೆಪಿ ಕನಸಿಗೆ ಮತ್ತಷ್ಟು ಬಲ ಬಂದಂತಿದೆ. ಅಂಬರೀಶ್ ರನ್ನು ಬಿಜೆಪಿಯತ್ತ ಸೆಳೆಯಲು ಸ್ವತಃ ಕೇಂದ್ರ ನಾಯಕರೇ ಬರುತ್ತಿದ್ದಾರೆ ಎಂಬ ಅಂಶವೂ ವರದಿಯಾಗಿದೆ.

ಈವರೆಗೆ ಚುನಾವಣೆಯಲ್ಲಿ ಸ್ಪರ್ಧಿಸುವ ಅಥವಾ ತಟಸ್ಥರಾಗಿಯೇ ಉಳಿಯುತ್ತಾರ ಎಂಬ ವಿಚಾರವೂ ತಿಳಿದಿಲ್ಲ. ಆದ್ದರಿಂದ ಅಂಬರೀಶ್ ಅವರ ಈ ನಡೆ ಕಾಂಗ್ರೆಸ್ ಭಾರೀ ತಲೆನೋವಾಗಿ ಪರಣಮಿಸಿರುವುದಂತೂ ಸತ್ಯ..!

source: public tv

–ಅರ್ಜುನ್

Editor Postcard Kannada:
Related Post