X

ಭಗವಾ ರಾಜ್ಯಗಳ ಸಾಲಿಗೆ ಕರ್ನಾಟಕವೂ ಸೇರ್ಪಡೆ?? ಕೊನೆಘಳಿಗೆಯಲ್ಲಿ ಆದರೆ ಮೋದಿ ಗೇಮ್ ಛೇಂಜರ್?? ನಡೆದೀತೆ ಕರ್ನಾಟಕದಲ್ಲೂ ಮೋದಿ ಮೋಡಿ?? ಆಗಬಹುದೆನ್ನುತ್ತದೆ 5ಫೋರ್ಟಿ3 ಸಂಸ್ಥೆ!!

5ಫೋರ್ಟಿ3 ಡೇಟಾ ಲ್ಯಾಬ್ ಎನ್ನುವ ಸಾರ್ವಜನಿಕ ಅಭಿಪ್ರಾಯ ಸಂಗ್ರಹಣೆ ಮಾಡುವ ಸಂಸ್ಥೆ, ಮಾಪಿ – ಮೈಕ್ರೋ ಅನಾಲಿಟಿಕ್ಸ್ ಪ್ರೊಜೆಕ್ಷನ್ಸ್ (ಇಂಟೆಲಿಜೆನ್ಸ್) ಎಂಬ ವಿಶೇಷ ಸಾಧನವನ್ನು ಅಭಿವೃದ್ಧಿಪಡಿಸಿದೆ . ಇದು ವಿವಿಧ ದತ್ತಾಂಶಗಳ ಮೂಲಕ ಭಾರತದ ಸಾಮೂಹಿಕ ಮಾರುಕಟ್ಟೆಗಳ ಸಾಮಾಜಿಕ-ರಾಜಕೀಯ ಮತ್ತು ಸಾಮಾಜಿಕ-ಆರ್ಥಿಕ ಬದಲಾವಣೆಗಳನ್ನು ಅಳೆಯುವ ಸಾಧನವಾಗಿದೆ. 5ಫೋರ್ಟಿ3 ಡೇಟಾ ಲ್ಯಾಬ್ ನ ಸಿಇಒ ಮತ್ತು ಸಂಸ್ಥಾಪಕ ಡಾ. ಪ್ರವೀಣ್ ಪಾಟೀಲ್ ಅವರು ಕರ್ನಾಟಕ ವಿಧಾನಸಭೆ ಚುನಾವಣೆಗಳ ಫಲಿತಾಂಶ ಯಾವ ರೀತಿ ಇರಬಹುದೆಂದು ಊಹಿಸಿದ್ದಾರೆ.

ಚುನಾವ್ ಪೀಡಿಯಾ(ChunavpediA ) ಎಂಬ ಹೊಸ ವೇದಿಕೆಯಡಿ ಕೆಳಮಟ್ಟದಲ್ಲಿರುವ ಭಾರತೀಯ ಚುನಾವಣಾ ಕ್ಷೇತ್ರಗಳ ಅಧ್ಯಯನ ನಡೆಸಿ ಚುನಾವಣಾ ಮುನ್ಸೂಚನೆಯನ್ನು ನಡೆಸಲಾಗುತ್ತದೆ. ಚುನಾವಣಾ ಕ್ಷೇತ್ರಗಳನ್ನು ಉತ್ತರ ಕರ್ನಾಟಕ, ಮಧ್ಯ ಕರ್ನಾಟಕ ಮತ್ತು ದಕ್ಷಿಣ ಕರ್ನಾಟಕ ಎಂದು ಮೂರು ಭಾಗಗಳಾಗಿ ವಿಂಗಡಿಸಿ ವಿಶ್ಲೇಷಣೆ ನಡೆಸಲಾಗಿದೆ. 5 ಮೇ 2018 ರಂದು ಕೊನೆಯ ಹಂತದ ಪ್ರಚಾರಕ್ಕೂ ಮುನ್ನ 5ಫೋರ್ಟಿ3 ಸಂಸ್ಥೆಯು ಈ ಮುಂದಿನ ಭವಿಷ್ಯವನ್ನು ನುಡಿದಿದೆ.

ರಾಜ್ಯದ ಚುನಾವಣೆಯನ್ನು ಸಿದ್ದರಾಮಯ್ಯ ಮತ್ತು “ಉತ್ತರ ಭಾರತೀಯ ಪಕ್ಷವಾದ ಬಿಜೆಪಿ” ಯ ವಿರುದ್ಧದ ಹೋರಾಟವಾಗಿ ಪರಿವರ್ತಿಸಿ ಕರ್ನಾಟಕದಲ್ಲಿ ಮತ್ತೊಮ್ಮೆ ಗದ್ದುಗೆ ಏರುವುದರಲ್ಲಿ ಬಹುತೇಕ ಸಫಲವಾಗಿದ್ದ ಕಾಂಗ್ರೆಸ್ ತದನಂತರ ಟಿಕೆಟ್ ಹಂಚಿಕೆ ಕಚ್ಚಾಟ, ಸಿದ್ದರಾಮಯ್ಯನವರ ವರುಣಾ ಸೀಟ್ ಬಿಟ್ಟುಕೊಡುವಿಕೆ ಮತ್ತು ಮೂರು ಡಝನಿಗೂ ಅಧಿಕ ಸೀಟ್ ಗಳನ್ನು ಬಿಜೆಪಿ-ಜೆಡಿಎಸ್ ಗೆ ಅನಾಯಾಸವಾಗಿ ಬಿಟ್ಟುಕೊಟ್ಟಿತ್ತು. ಈ ಮೂರು ತಪ್ಪುಗಳಿಂದಾಗಿ ಕಾಂಗ್ರೆಸ್ ತನಗೆ ತಾನೆ ಗುಂಡಿ ತೋಡಿಬಿಟ್ಟಿತು. ಕಾಂಗ್ರೆಸಿನ ಈ ತಪ್ಪುಗಳು ಬಿಜೆಪಿಗೆ ವರದಾನವಾಗಿ ಪರಿಣಮಿಸಿತು. ಎಲ್ಲಾ ಕ್ಷೇತ್ರಗಳಲ್ಲಿಯೂ ಬಹುತೇಕ ಕಳೆಗುಂದಿದ ಹಳೆ ನಾಯಕರಿಗೆ ಟಿಕೆಟ್ ನೀಡಿದ್ದೂ ಕೂಡಾ ಕಾಂಗ್ರೆಸ್ ಹಿನ್ನಡೆಗೆ ಕಾರಣವೆನ್ನಲಾಗುತ್ತಿದೆ.

ಇನ್ನು ಇಡಿಯ ಕರ್ನಾಟಕದ ಚುನಾವಣೆಯ ಹೀರೊ ಆಗಿ ಹೊರಹೊಮ್ಮಿದ್ದು ಮೋದಿ!! ಮೋದಿ ಕರ್ನಾಟಕಕ್ಕೆ ಕಾಲಿಟ್ಟ ಘಳಿಗೆಯಿಂದಲೆ ಚುನಾವಣಾ ಕಣಕ್ಕೆ ಬೇರೆಯದೆ ರಂಗು ಹಬ್ಬಿತು. ಕರ್ನಾಟಕದಲ್ಲಿ ಬಿಜೆಪಿ ಏನಾದರೂ ಅಧಿಕಾರ ಹಿಡಿದರೆ ಅದಕ್ಕೆ ಕಾರಣ ಮೋದಿ. ಏಕೆಂದರೆ ಮೋದಿ ಮೋಡಿಗೆ ಒಳಗಾದ ಜನರು ಅಭ್ಯರ್ಥಿಯನ್ನು ಲೆಕ್ಕಿಸದೆ ಕೇವಲ ಮೋದಿಗಾಗಿ ಓಟು ಮಾಡುತ್ತಿದ್ದಾರೆ. ಆ ಮಟ್ಟಿಗೆ ಮೋದಿ ಕರ್ನಾಟಕ ಚುನಾವಣೆಯ “ಗೇಮ್ ಛೇಂಜರ್”!! ಸೋಲುವ ಭೀತಿಯಲ್ಲಿದ್ದ ಬಿಜೆಪಿಗೆ ಸರಕಾರ ರಚಿಸುವ ಧೈರ್ಯ ಬಂದಿದೆ ಎಂದಾದರೆ ಅದಕ್ಕೆ ಕಾರಣ ಕೇವಲ ಮೋದಿ.

ಕಳೆದ ಕೆಲವು ವಾರಗಳಲ್ಲಿ ಬಿಜೆಪಿ ಕಡೆಗೆ ನಾಲ್ಕು ಹಿಂದುಳಿದ ಸಮುದಾಯಗಳ ಬೆಂಬಲ ನಿಚ್ಚಳವಾಗಿ ಕಂಡುಬರುತ್ತಿದೆ. ವಾಲ್ಮೀಕಿ-ಈಡಿಗ-ಮಾದಿಗ-ಪರಿಶಿಷ್ಟ ಜಾತಿಗಳು “ಸಂಘಟಿತ ಹಿಂದೂ” ಮತಗಳಾಗಿ ಪರಿವರ್ತಿತವಾಗಿವೆ ಎಂಬುದು 5ಫೋರ್ಟಿ3 ಸಂಸ್ಥೆಯ ವಿಶ್ಲೇಷಣೆ. ಉತ್ತರ ಕರ್ನಾಟಕದ 81 ಸೀಟುಗಳಲ್ಲಿ 45 ಸೀಟುಗಳು ಬಿಜೆಪಿ ತೆಕ್ಕೆಗೆ ಬೀಳಬಹುದು ಎಂದು ಅಂದಾಜಿಸಲಾಗಿದೆ. ಈ ಸಂಸ್ಥೆ ಅಂದಾಜಿಸಿರುವ ಪ್ರಕಾರ ಮಧ್ಯ ಕರ್ನಾಟಕದ ಭಾಗದಲ್ಲಿ ಬಿಜಿಪಿಯು ಮಕಾಡೆ ಮಲಗುವುದಲ್ಲಿತ್ತು. ಕರಾವಳಿ-ಮಲೆನಾಡು ಭಾಗದ 31 ಸೀಟುಗಳಲ್ಲಿ ಕಷ್ಟದಲ್ಲಿ 14 ಗಳಿಸುವಂತಿತ್ತು ಬಿಜೆಪಿ. ಸಂಸ್ಥೆಯ ಪ್ರಕಾರ ಈ ಪ್ರದೇಶದ ಸನ್ನಿವೇಶದಲ್ಲಿ ಮಹತ್ತರವಾದ ಬದಲಾವಣೆಯನ್ನು ತರುವ ಏಕೈಕ ವ್ಯಕ್ತಿ ಎಂದರೆ ಅದು ಸ್ವತಃ ನರೇಂದ್ರ ಮೋದಿ!! ಇನ್ನು ದಕ್ಷಿಣ ಕರ್ನಾಟಕದ ಹಳೆ ಮೈಸೂರು-ಮಂಡ್ಯ ಭಾಗದಲ್ಲಿ ಬಿಜೆಪಿಗೆ ಗೆಲುವು ಗಗನ ಕುಸುಮವೆಂದೆ ಹೇಳಲಾಗುತ್ತಿದೆ.

ಕಳೆದ ಐದು ವರ್ಷಗಳ ಚುನಾವಣಾ ಇತಿಹಾಸದ ಪ್ರಕಾರ ಚುನಾವಣಾ ಸಮೀಕರಣಗಳನ್ನು ತನ್ನ ಪರವಾಗಿ ತಿರುಗಿಸುವ ಶಕ್ತಿ ಮೋದಿ ಸಮಾವೇಶಗಳಿವೆ. ಪ್ರತಿ ಚುನಾವಣೆಯಲ್ಲೂ ಇದು ಮತ್ತೆ ಮತ್ತೆ ಸಾಬೀತಾಗುತ್ತಿದೆ. ಸಮಾವೇಶಗಳು ಮೋದಿ ಕೇಂದ್ರವಾಗುತ್ತಿದ್ದಂತೆಯೆ ವಿರೋಧಿಗಳಿಗೆ ತಲೆನೋವಿಟ್ಟುಕೊಳ್ಳುತ್ತದೆ. ಚುನಾವಣೆಯ ಕೊನೆಯ ಹಂತದ ಪ್ರಚಾರದ ನಂತರ ನಡೆಸಿದ ವಿಶ್ಲೇಷಣೆಗಳ ಪ್ರಕಾರ ಮೋದಿ ಸಮಾವೇಶಗಳು ರಾಜ್ಯದಲ್ಲಿ ಬಹುತೇಕ ಭಗವಾ ಧ್ವಜ ಹಾರುವುದರತ್ತ ಸಂಕೇತ ನೀಡುತ್ತಿವೆ ಎಂದು ಸಂಸ್ಥೆ ಊಹಿಸುತ್ತಿದೆ. ಮಾಪಿ ಚುನಾವಣಾ ಸಾಧನವು ಬಿಜೆಪಿ ಈಗಾಗಲೇ 100 ಸ್ಥಾನಗಳನ್ನು ಮುಟ್ಟಿದೆ ಎಂದು ತೋರಿಸಲು ಆರಂಭಿಸಿದೆ. ಒಂದು ವೇಳೆ ಈ ಸಂಸ್ಥೆ ನಡೆಸಿದ ವಿಶ್ಲೇಷಣೆ ಕರಾರುವಕ್ಕಾಗಿದ್ದರೆ ಈ ಬಾರಿ ಕರ್ನಾಟಕದಲ್ಲಿ ಮುದುಡಿದ ತಾವರೆ ಅರಳಿ ಇಪ್ಪತ್ತೆರಡು ರಾಜ್ಯಗಳಂತೆ ಭಗವಾ ಧ್ವಜ ಅರಳಲಿದೆ….. ಕರ್ನಾಟಕದ ಮಹಾಜನತೆ ಮೋದಿ ಮೇಲೆ ಇಟ್ಟ ಭರವಸೆ ಯಾವತ್ತೂ ಸುಳ್ಳಾಗಲು ಬಿಡುವುದಿಲ್ಲ ನಮ್ಮ ಪ್ರಧಾನ ಸೇವಕ….

-ಶಾರ್ವರಿ

Editor Postcard Kannada:
Related Post