X

ಪ್ರಧಾನಿ ಮೋದಿ ಜೊತೆ ಸೆಲ್ಫಿ ಕ್ಲಿಕ್ಕಿಸಿದ ಆಸ್ಟ್ರೇಲಿಯಾ ಪ್ರಧಾನಿ

ಪ್ರಧಾನಿ ನರೇಂದ್ರ ಮೋದಿ ಅವರೆಂದರೆ ಕೇವಲ ಭಾರತೀಯರಿಗಷ್ಟೇ ಪ್ರೀತಿ, ಗೌರವವಲ್ಲ. ಅವರಿಗೆ ಪ್ರಪಂಚದ ಹಲವು ದೇಶಗಳ ನಾಯಕರು ಗೌರವ ನೀಡುತ್ತಾರೆ.‌ ಪ್ರಧಾನಿ ಮೋದಿ ಅವರ ಬಗ್ಗೆ ಆದರವಿರಿಸಿಕೊಂಡಿದ್ದಾರೆ. ದೇಶ ವಿದೇಶಗಳೆಲ್ಲೆಡೆ ಪ್ರಧಾನಿ ಮೋದಿ ಅವರಿಗೆ ಅಭಿಮಾನಿಗಳಿದ್ದಾರೆ ಎಂಬುದು ಎಲ್ಲರಿಗೂ ತಿಳಿದ ವಿಷಯ.

ಹಾಗೆಯೇ ಪ್ರಧಾನಿ ಮೋದಿ ಅವರನ್ನು ವಿರೋಧ ಮಾಡುವವರಿಗೂ ಕಡಿಮೆ ಇಲ್ಲ. ಅಂತಹ ವಿರೋಧಿಗಳ ಉರಿ ಹೆಚ್ಚಿಸುವ ಘಟನೆಯೊಂದು ನಡೆದಿದೆ.

ಗುಜರಾತ್‌ನ ಅಹಮದಾಬಾದ್ ನಲ್ಲಿ ಭಾರತ – ಆಸ್ಟ್ರೇಲಿಯಾ ನಡುವೆ ಟೆಸ್ಟ್ ಪಂದ್ಯ ನಡೆಯುತ್ತಿದ್ದು, ಈ ಪಂದ್ಯಾಟವನ್ನು ವೀಕ್ಷಿಸಲು ಭಾರತದ ಪ್ರಧಾನಿ ಮೋದಿ ಮತ್ತು ಆಸ್ಟ್ರೇಲಿಯಾ ಪ್ರಧಾನಿ ಅಂಟೋನಿ ಅಲ್ಬೇನಿಸ್ ಅವರು ಅಹಮದಾಬಾದ್‌ಗೆ ಆಗಮಿಸಿದ್ದಾರೆ. ಆಸ್ಟ್ರೇಲಿಯಾ ಪ್ರಧಾನಿ ಅವರು ಭಾರತದ ಪ್ರಧಾನಿ ಗಳ ಜೊತೆಗೆ ಸ್ಟೇಡಿಯಂ ನಲ್ಲಿ ಸೆಲ್ಫಿ ಕ್ಲಿಕ್ಕಿಸಿಕೊಂಡಿದ್ದು, ಇದು ಮೋದಿ ಅಭಿಮಾನಿಗಳಿಗೆ ಸಂತಸ ನೀಡಿದರೆ, ಮೋದಿ ವಿರೋಧಿಗಳ ಉರಿ ಹೆಚ್ಚಿಸಿದೆ.

ಇಷ್ಟು ಮಾತ್ರವಲ್ಲದೆ, ಆಸ್ಟ್ರೇಲಿಯಾ ಪ್ರಧಾನಿ ಅವರು ಈ ಚಿತ್ರವನ್ನು ತಮ್ಮ ಟ್ವಿಟರ್ ಮೂಲಕ ಹಂಚಿಕೊಂಡಿದ್ದು, ಭಾರತದ ಪ್ರಧಾನಿ ಮೋದಿ ಅವರೊಂದಿಗೆ, ಕ್ರಿಕೆಟ್ ಮೂಲಕ ಉಭಯ ದೇಶಗಳ ೭೫ ವರ್ಷಗಳ ಸ್ನೇಹವನ್ನು ಆಚರಿಸುತ್ತಿದ್ದೇವೆ ಎಂಬುದಾಗಿ ಬರೆದುಕೊಂಡಿದ್ದಾರೆ.

Post Card Balaga:
Related Post