X

ರಾಹುಲ್ ಗಾಂಧಿ ಮೇಲೆ ಶಿಸ್ತು ಕ್ರಮ ಕೈಗೊಳ್ಳುವ ಧಮ್ ಖರ್ಗೆ ಅವರಿಗಿದೆಯೇ?: ಬಿಜೆಪಿ ಪ್ರಶ್ನೆ

ಭಾರತದಲ್ಲಿ ಕಾಂಗ್ರೆಸ್ ಅಧಿಕಾರ ಮುಗಿದು, ಪ್ರಧಾನಿ ಮೋದಿ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಕಾಂಗ್ರೆಸ್ ಪರಿಸ್ಥಿತಿ ಶೋಚನೀಯವಾಗಿದೆ. ವಿದೇಶದಲ್ಲಿ ಹೋಗಿ ಭಾರತದ ಬಗ್ಗೆ ಪ್ರಪಂಚದ ಅತಿ ದೊಡ್ಡ ಪ್ರಜಾಪ್ರಭುತ್ವ ವಾದ ಭಾರತದ ಪ್ರಜಾಪ್ರಭುತ್ವವನ್ನೇ ಪ್ರಶ್ನೆ ಮಾಡುವಷ್ಟು ಕಾಂಗ್ರೆಸ್ ನಾಯಕರು ತಮ್ಮ ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದಾಗಿ ರಾಜ್ಯ ಬಿಜೆಪಿ ತಿಳಿಸಿದೆ.

ಈ ಬಗ್ಗೆ ಟ್ವೀಟ್ ಮಾಡಿರುವ ರಾಜ್ಯ ಬಿಜೆಪಿ, ವಿದೇಶಗಳಿಗೆ ಹೋಗಿ ಭಾರತವನ್ನು ಅವಮಾನಿಸುವ ರಾಹುಲ್ ಗಾಂಧಿ ಮಾನಸಿಕ ಅಸ್ವಸ್ಥರೇ? ಎಂಬುದಾಗಿ ಕೇಳಿದೆ. ಕಳೆದ ಆರು ದಶಕಗಳವರೆಗೆ ಕಾಂಗ್ರೆಸ್ ಕಪಿಮುಷ್ಠಿಗೆ ಸಿಲುಕಿದ್ದ ಭಾರತ ಬಡದೇಶವಾಗಿಯೇ ಉಳಿದಿತ್ತು. ಆದರೆ ಈಗ ಭಾರತ ವಿಶ್ವಗುರುವಾಗುವತ್ತ ಹೆಜ್ಜೆ ಇಡುತ್ತಿದೆ. ರಾಹುಲ್ ಗಾಂಧಿ ಅವರ ರಕ್ತದಲ್ಲಿ ಭಾರತ ಇನ್ನೂ ಪರಕೀಯಕ ಅಧೀನವಾಗಿಯೇ ಇರಬೇಕು ಎಂಬ ಭಾವನೆ ಇದ್ದಂತಿದೆ ಎಂದು ಬಿಜೆಪಿ ಕಿಡಿಕಾರಿದೆ.

ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಭಾರತದ ಬಗ್ಗೆ ವಿದೇಶದಲ್ಲಿ ನಿಂತುಕೊಂಡು ದೇಶದ್ರೋಹಿ ಹೇಳಿಕೆ ಕೊಟ್ಟ ರಾಹುಲ್ ಗಾಂಧಿ ವಿರುದ್ಧ ಶಿಸ್ತು ಕ್ರಮ ಕೈಗೊಂಡು, ರಾಜೀನಾಮೆ ಪಡೆಯುವ ತಾಕತ್ತು ಇದೆಯೇ? ಎಂಬುದಾಗಿಯೂ ಬಿಜೆಪಿ ಪ್ರಶ್ನೆ ಮಾಡಿದೆ. ಅಥವಾ ಅಂತಹ ಸ್ವಾತಂತ್ರ್ಯವನ್ನು ಸೋನಿಯಾ ಗಾಂಧಿ ನೀಡಿಲ್ಲವೇ ಎಂದು ಪ್ರಶ್ನೆ ಮಾಡಿದೆ. ಕೊರೋನಾದಂತಹ ಕಠಿಣ ಸ್ಥಿತಿಯನ್ನೂ ಜಯಿಸಿ ಭಾರತ ಆರ್ಥಿಕವಾಗಿಯೂ ಸದೃಢವಾಗಿ ಇಡೀ ವಿಶ್ವಕ್ಕೆ ಮಾದರಿಯಾಗಿದೆ. ಆತ್ಮನಿರ್ಭರದ ಮೂಲಕ ಭಾರತ ಸ್ವಾವಲಂಬಿಯಾಗಿದೆ.

ಇಂತಹ ಸಂದರ್ಭದಲ್ಲಿ ಭಾರತದ ಮೇಲೆ ಅಮೆರಿಕ, ಯೂರೋಪ್‌ಗಳು ಯುದ್ಧ ಮಾಡುವಂತೆ ರಾಹುಲ್ ಗಾಂಧಿ ಪ್ರಚೋದಿಸುತ್ತಾರೆ. ಇದು ದೇಶದ್ರೋಹಕ್ಕಿಂತಲೂ ದೊಡ್ಡ ಅಪರಾಧ. ಭಾರತದಲ್ಲಿ ವಿಪಕ್ಷ ಸ್ಥಾನವನ್ನೂ ಕಳೆದುಕೊಳ್ಳಲಿರುವ ಕಾಂಗ್ರೆಸ್ ದೇಶಕ್ಕೆ ಹಿಂದಿಗಿಂತಲೂ ಅಪಾಯಕಾರಿಯಾಗಿ ಬದಲಾಗಿದೆ ಎಂದು ಬಿಜೆಪಿ ತಿಳಿಸಿದೆ.

ಒಟ್ಟಿನಲ್ಲಿ ಭಾರತದ ಅನ್ನವನ್ನೇ ತಿಂದು, ಭಾರತಕ್ಕೆ ದ್ರೋಹ ಎಸಗುವ ಮೂಲಕ ಕಾಂಗ್ರೆಸ್ ಪಕ್ಷ, ರಾಹುಲ್ ಗಾಂಧಿ ತನ್ನ ಬುಡಕ್ಕೆಯೇ ಬೆಂಕಿ ಇಟ್ಟುಕೊಳ್ಳುತ್ತಿರುವುದು ದುರಂತ.

Post Card Balaga:
Related Post