X

ಈ ಬಾರಿ ರೆಡ್ಡಿ ವರ್ಸಸ್ ರೆಡ್ಡಿ ಕದನ!! ಸತತ ಆರು ಬಾರಿ ಗೆದ್ದ ಕೈ ಶಾಸಕ ರಾಮಲಿಂಗಾ ರೆಡ್ಡಿಯ ಭದ್ರಕೋಟೆಯನ್ನು ಛಿದ್ರ ಛಿದ್ರ ಮಾಡುವರೆ ಬಿಜೆಪಿಯ ಯುವ ನಾಯಕ ರೆಡ್ಡಿಗಾರು ಲಲೇಶ್?

ಈ ಬಾರಿ ಭಾಜಪದಲ್ಲಿ ಎಲ್ಲಿ ನೋಡಿದರಲ್ಲಿ ಯುವ ನಾಯಕರದೆ ಕಲರವ!! ಕಾಂಗ್ರೆಸಿನ ಹಳೆ ಹುಲಿಗಳೆದುರು ಅವರದೆ ಭದ್ರ ಕೋಟೆಯಲ್ಲಿ ತೊಡೆ ತಟ್ಟಿ ನಿಂತಿವೆ ಭಾಜಪದ ಯುವಾ ಹುಲಿಗಳು. ರಾಜ್ಯ ರಾಜಕಾರಣದಲ್ಲಿ ಇದೀಗ ತಾನೆ ಪುಟ್ಟ ಪುಟ್ಟ ಹೆಜ್ಜೆ ಇಡುತ್ತಿರುವ ಲಲೇಶ್ ರೆಡ್ಡಿ ಎಂಬ ಮರಿ ಹುಲಿಯು ಕಾಂಗ್ರೆಸ್ಸಿನ ಆರು ಬಾರಿ ಶಾಸಕ ಮತ್ತು ಗೃಹ ಸಚಿವರಾದಂತಹ ರಾಮಲಿಂಗಾ ರೆಡ್ದಿಯೆದುರು ಸ್ಪರ್ಧಿಸಿ ಬೆಂಗಳೂರಿನ ಬಿಟಿಎಮ್ ಲೇಔಟಿನಲ್ಲಿ ಕೇಸರಿ ಧ್ವಜವನ್ನು ಹಾರಿಸಲು ಸಜ್ಜಾಗಿ ನಿಂತಿದ್ದಾರೆ!! ಈ ಬಾರಿ ರೆಡ್ಡಿ ವರ್ಸಸ್ ರೆಡ್ಡಿ ಸರ್ಕಸ್ ಆಗುವುದು ನಿಶ್ಚಿತ!!

ಸತತ ಆರು ಬಾರಿ ಜಯಗಳಿಸಿ ಆಡಳಿತದ ಸವಿ ಉಂಡ ರಾಮಲಿಂಗಾ ರೆಡ್ಡಿ ಇದೀಗ ಏಳನೆ ಬಾರಿ ಶಾಸಕನಾಗಲು ಹವಣಿಸುತ್ತಿದ್ದಾರೆ. ಆದರೆ ಅವರ ಗೆಲುವಿನ ಕನಸಿಗೆ ತಡೆಒಡ್ದುತ್ತಿದ್ದಾರೆ ಭಾಜಪದ ಯುವ ನಾಯಕ ಲಲೇಶ್ ರೆಡ್ಡಿ. ಬೆಂಗಳೂರಿನ ಬಿಟಿಎಮ್ ಚುನಾವಣಾ ಕ್ಷೇತ್ರದಲ್ಲಿ ಮನೆ ಮನೆಗೆ ಪಾದಯಾತ್ರೆ ಮಾಡಿ ಜನರ ಮನೆ-ಮನ ತಲುಪಿದ ಲಲೇಶ್ ಮೇಲೆ ಜನರು ಭಾರೀ ಪ್ರೀತಿ ತೋರಿಸುತ್ತಿದ್ದಾರೆ. ಬಿಟಿಎಮ್ ಲೇಔಟಿನ ಅಭಿವೃದ್ದಿಯ ಬಗ್ಗೆ ಸ್ಪಷ್ಟ ಮತ್ತು ನಿರ್ದಿಷ್ಟ ಗುರಿ ಹೊಂದಿರುವ ಲಲೇಶ್ ಅಧಿಕಾರಕ್ಕೆ ಬಂದ ಕೂಡಲೆ ಪ್ರವಾಹ ಸ್ಥಿತಿಸ್ಥಾಪಕತ್ವಕ್ಕೆ ವೈಜ್ಞಾನಿಕ ಯೋಜನೆ ತಯಾರಿಸುವ ಭರವಸೆ ನೀಡಿದ್ದಾರೆ.

ಅದೆ ರೀತಿ ರಾಜ ಕಾಲುವೆಗಳನ್ನು ತೆರವುಗೊಳಿಸಿ ಪುನಃಸ್ಥಾಪನೆ ಮಾಡಿ ಸ್ವಚ್ಛತೆಗೆ ಆದ್ಯತೆ ನೀಡುವುದಾಗಿಯೂ ಹೇಳಿದ್ದಾರೆ. ಜೊತೆಗೆ ನೀರಿನ ಬವಣೆ ನೀಗಲು ಮಳೆ ನೀರಿನ ಕೊಯ್ಲು ಮಾಡಲು ಬೇಕಾದ ಉಪಕ್ರಮಗಳನ್ನು ತೆಗೆದುಕೊಳ್ಳುವುದಾಗಿಯೂ ಆಶ್ವಾಸನೆ ನೀಡಿದ್ದಾರೆ. ಬೆಂಗಳೂರಿನ ಅಪ್ಪಟ ಕೃಷಿಕ ಪರಿವಾರದಿಂದ ಬಂದಂತಹ ಲಲೇಶ್ ರೆಡ್ಡಿಯ ತಾತ-ಮುತ್ತಾಂದಿರು ಸಮಾಜ ಸೇವಾ ಕಾರ್ಯದಲ್ಲಿ ನಿರತರಾಗಿದ್ದವರು. ತಮ್ಮ ಮನೆಯ ಹಿರಿ ಜೀವಗಳಂತೆಯೆ ಅತಿ ಕಿರಿಯ ವಯಸ್ಸಿಗೆ ಸಮಾಜ ಸೇವೆಗೆ ಧುಮುಕಿದ ಲಲೇಶ್ ಸಿವಿಲ್ ಇಂಜಿನಿಯರಿಂಗ್ನಲ್ಲಿ ಬ್ಯಾಚುಲರ್ ಪದವಿ ಮತ್ತು MBA ಯಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದಾರೆ.

ರಾಮಲಿಂಗಾ ರೆಡ್ಡಿಯವರು ಸಾರಿಗೆ ಮತ್ತು ಗೃಹ ಸಚಿವಾಯದಂತಹ ಮಹತ್ವಪೂರ್ಣ ಮಂತ್ರಾಲಯಗಳನ್ನು ಹೊಂದಿದ್ದ ಮೇಲೆಯೂ ತನ್ನ ಸ್ವ ಕ್ಷೇತ್ರಕ್ಕೆ ಯಾವುದೆ ಕೊಡುಗೆ ನೀಡಿಲ್ಲ, ರಾಜಕಾಲುವೆಗಳ ಸಮರ್ಪಕ ನಿರ್ವಹಣೆ ಇಲ್ಲದೆ ಮಳೆ ಬಂದರೆ ಹಲವಾರು ಜಾಗಗಳಲ್ಲಿ ನೆರೆಯ ಸ್ಥಿತಿ ಉತ್ಪನ್ನವಾಗುತ್ತದೆ. ಜನರಿಗೆ ಕುಡಿಯುವ ನೀರಿನ ವ್ಯವಸ್ಥೆಯಾಗಲಿ, ಒಳ್ಳೆಯ ರಸ್ತೆಗಳಾಗಲಿ ಇಲ್ಲ. ರಾಮಲಿಂಗಾ ರೆಡ್ಡಿಯ ನಿರ್ಲಕ್ಷದಿಂದಾಗಿ ಈ ಭಾಗದ ಅಭಿವೃದ್ದಿ ಆಗಿಲ್ಲ ಹಾಗಾಗಿ ಜನರು ಬೇಸತ್ತಿದ್ದಾರೆ ಎನ್ನುತ್ತಾರೆ ಲಲೇಶ್. ತಾನು ಅಧಿಕಾರಕ್ಕೆ ಬಂದರೆ ಜನರಿಗೆ ಬೇಕಾದ ಎಲ್ಲಾ ಮೂಲ ಸೌಕರ್ಯಗಳನ್ನು ಒದಗಿಸುತ್ತೇನೆ ಎನ್ನುವ ಭರವಸೆಯನ್ನೂ ನೀಡುತ್ತಾರೆ.

ಸ್ವತಃ ಕೃಷಿ ಪರಿವಾರದಿಂದ ಬಂದಿರುವುದರಿಂದಾಗಿ ಲಲೇಶ್ ಗೆ ಕೃಷಿಕರ ಬವಣೆ ಗೊತ್ತಿದೆ. ಕೃಷಿಯ ಬಗ್ಗೆ ತಮ್ಮ ಜ್ಞಾನ ಮತ್ತು ಆಧುನಿಕ ಕೃಷಿ ತಂತ್ರಜ್ಞಾನವನ್ನು ರೈತರ ಜೊತೆ ಹಂಚಿಕೊಳ್ಳುವ ಮೂಲಕ ಹಲವಾರು ರೈತರಿಗೆ ಸಹಾಯ ಮಾಡಿದ್ದಾರೆ. ಸರ್ವ ಧರ್ಮವನ್ನು ಗೌರವಿಸುವ ಇವರು ವಿವಿಧ ಧಾರ್ಮಿಕ ಸಂಸ್ಥೆಗಳಿಗೆ ಬೆಂಬಲವನ್ನು ನೀಡುವ ಮೂಲಕ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ. ಕರ್ನಾಟಕದ “ರೈತ ಮೋರ್ಚಾ”ದ ಖಜಾಂಜಿಯಾಗಿರುವ ಲಲೇಶ್ “ಜೈ ಕಿಸಾನ್ ಜೈ ಜವಾನ್ ಜೈ ವಿಜ್ಞಾನ್” ಎನ್ನುವ ಮನೋಭಾವದವರಾಗಿದ್ದಾರೆ. ಏಡ್ಸ್ ಉನ್ಮೂಲನೆ, ಅನಾಥಾಶ್ರಮ, ವೃದ್ಧಾಶ್ರಮ, ದಿವ್ಯಾಂಗ ಜನರ ಕಲ್ಯಾಣಕ್ಕಾಗಿ ಅನವರತ ದುಡಿಯುತ್ತಿದ್ದಾರೆ. ಸಣ್ಣ ಪ್ರಮಾಣದ ವ್ಯವಹಾರ, ಕೃಷಿ ಮತ್ತು ನಿರ್ಮಾಣ ಕ್ಷೇತ್ರದಲ್ಲಿ ಸ್ವಯಂ-ಉದ್ಯೋಗಕ್ಕಾಗಿ ಯುವಕರನ್ನು ಹುರಿದುಂಬಿಸಿ ಅವರು ಸ್ವಾವಲಂಬಿಗಳಾಗುವಂತೆ ಮಾಡಿದ್ದಾರೆ.

ಮನುಷ್ಯರಂತೆಯೆ ಪ್ರಾಣಿಗಳ ಮೇಲೂ ವಿಶೇಷ ಕಾಳಜಿ ಹೊಂದಿರುವ ಲಲೇಶ್ ಪ್ರಾಣಿಗಳಿಗಾಗಿ ವಿಶೇಷ ಯೋಜನೆ ತಯಾರಿಸುವಲ್ಲಿ ಕಾರ್ಯಗತರಾಗಿದ್ದಾರೆ. ಜನಾರ್ಧನ ರೆಡ್ಡಿಯವರ ಸೋದರಳಿಯ ಲಲೇಶ್ ರೆಡ್ಡಿ ಕರ್ನಾಟಕ ರಾಜಕಾರಣದಲ್ಲಿ ಭರವಸೆಯ ಯುವಾ ನಾಯಕನಾಗಿ ಹೊರ ಹೊಮ್ಮುತ್ತಿದ್ದಾರೆ. ಮಕ್ಕಳು ಮರಿ, ಯುವಕ- ಮುದುಕರೆನ್ನದೆ ಎಲ್ಲರ ಅಹವಾಲನ್ನು ಆಲಿಸುವ ಲಲೇಶ್ ಈಗ ಬಿಟಿಎಮ್ ಲೇ ಔಟಿನಲ್ಲಿ ಜನರ ಮನಸ್ಸನ್ನು ಕೊಳ್ಳೆ ಹೊಡೆದಿದ್ದಾರೆ. ತಾನು ಹೋದಲೆಲ್ಲಾ ತನ್ನನ್ನು ಆತ್ಮೀಯತೆಯಿಂದ ಬರಮಾಡಿಕೊಳ್ಳುವ ಜನರನ್ನು ಕಂಡು ಅವರು ಗದ್ಗತಿರಾಗಿದ್ದಾರೆ. ಹಾಗೂ ತನ್ನ ಜೊತೆ ಹಗಲಿರುಳು ದುಡಿಯುತ್ತಿರುವ ತನ್ನ ಪಕ್ಷದ ಕಾರ್ಯಕರ್ತರನ್ನೂ ಸ್ಮರಿಸುತ್ತಾ ಅವರಿಗೆ ಅಭಿನಂದನೆಯನ್ನೂ ಸಲ್ಲಿಸುತ್ತಾರೆ. ಇಂತಹ ಸಹೃದಯ ಮತ್ತು ದೂರದರ್ಶಿತ್ವ ಉಳ್ಳ ಯುವ ನಾಯಕ ಹಲವಾರು ತರುಣ-ತರುಣಿಯರಿಗೆ ಆದರ್ಶ ಪ್ರಾಯರಾಗಿದ್ದಾರೆ.

ಭಾಜಪ-ಆರ್.ಎಸ್.ಎಸ್ ನವರು ಉಗ್ರರು, ಭಾಜಪದ ನಾಯಕರು ISIS ಉಗ್ರರಂತಾಡುತ್ತಾರೆ, ಕರ್ನಾಟಕ ಜಿಹಾದಿಗಳ ಅಡ್ಡಾ ಎಂದು ಭಾಜಪ-ಆರ್.ಎಸ್.ಎಸ್ ವಿರುದ್ದ ನಾಲಿಗೆ ಹರಿಬಿಟ್ಟು, ಹಿಂದೂ ಕಾರ್ಯಕರ್ತರ ಕಗ್ಗೊಲೆ ನಡೆದಾಗಲೂ ಕಣ್ಣು ಮುಚ್ಚಿ ಕುಳಿತ, ಅಲ್ಪ ಸಂಖ್ಯಾತರ ಮೇಲೆ ಇರುವ ಕೇಸುಗಳನ್ನು ಹಿಂದೆಗೆದುಕೊಳ್ಳುವಂತೆ ಆದೇಶ ನೀಡಿದ ಗೃಹ ಸಚಿವ ರಾಮಲಿಂಗಾ ರೆಡ್ಡಿಯಂತಹ ವಿಭಜನಕಾರಿ, ಅಭಿವೃದ್ದಿವಿರೋಧಿ ನಾಯಕರನ್ನು ಕಿತ್ತೊಗೆಯಲು ಇದು ಸಕಾಲ. ಸಬ್ ಕಾ ಸಾಥ್ ಸಬ್ ಕಾ ವಿಕಾಸ್ ಬೇಕಾದರೆ ಭಾಜಪದ ಯುವ ನಾಯಕ ಲಲೇಶ್ ರೆಡ್ಡಿಯನ್ನು ಬೆಂಬಲಿಸಿ. ಕರ್ನಾಟಕದಲ್ಲಿ ಕೇಸರಿ ಧ್ವಜ ಹಾರಡುವಂತೆ ಮಾಡಿ. ರಾಜ್ಯದ ಮತದಾರರೆ ಅಭಿವೃದ್ದಿ ಬೇಕೆ? ಹಾಗಾದರೆ ಸರ್ಕಾರ ಬದಲಿಸಿ…..

-ಶಾರ್ವರಿ

Editor Postcard Kannada:
Related Post