X

ಕರಾವಳಿಯಲ್ಲಿ ಅಬ್ಬರಿಸುತ್ತಿರುವ ತ್ರಿವಳಿ ರತ್ನಗಳು! ಚಾಣಾಕ್ಯ, ಫೈರ್ ಬ್ರಾಂಡ್,ಲೇಡಿ ಫೈರ್ ಬ್ರಾಂಡ್ ಅಬ್ಬರಕ್ಕೆ ಕೊಚ್ಚಿ ಹೋದ ಕಾಂಗ್ರೆಸ್..!

ಈವರೆಗೂ ಕರ್ನಾಟಕದಲ್ಲಿ ಅತಂತ್ರ ವಿಧಾನ ಸಭೆ ನಿರ್ಮಾಣವಾಗುತ್ತೆ ಎಂದೇ ಹೇಳಲಾಗುತ್ತಿತ್ತು. ಆದರೆ ಅದ್ಯಾವಾಗ ಪ್ರಧಾನಿ ನರೇಂದ್ರ ಮೋದಿ ಕರ್ನಾಟಕಕ್ಕೆ ಬಿಗ್ ಎಂಟ್ರಿ ಕೊಟ್ಟರೋ ಅಂದಿನಿಂದ ಸಮೀಕ್ಷೆಗಳ ಲೆಕ್ಕಾಚಾರವೇ ಉಲ್ಟಾಪಲ್ಟಾವಾಗಿದೆ. ಇದೀಗ ಸಮೀಕ್ಷಗಳೆಲ್ಲಾ ತಲೆ ಕೆಳಗಾಗಿ ಭಾರತೀಯ ಜನತಾ ಪಕ್ಷಕ್ಕೆ ಇದ್ದ ಸ್ಥಾನಗಳನ್ನು ಹೆಚ್ಚಿಸಿಕೊಂಡಿದೆ.

ಕರಾವಳಿಗೆ ಲಗ್ಗೆ ಇಟ್ಟ ಚಾಣಾಕ್ಯ…

ಒಂದು ಕಡೆ ಪ್ರಧಾನಿ ನರೇಂದ್ರ ಮೋದಿಯವರು ಪ್ರತಿ ಜಿಲ್ಲೆಯಲ್ಲೂ ತನ್ನ ಭಾಷಣದ ಮೂಲಕ ಲಕ್ಷಾಂತರ ಜನರನ್ನು ಭೇಟಿಯಾಗುತ್ತಿದ್ದರೆ ಮತ್ತೊಂದು ಕಡೆ ಭಾರತೀಯ ಜನತಾ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ರೋಡಿಗಿಳಿದು ಭರ್ಜರಿ ರೋಡ್ ಶೋ ನಡೆಸುತ್ತಿದ್ದಾರೆ. ರಾಜ್ಯದಲ್ಲಿ ಮೋದಿ ಅಲೆ ಬಿರುಗಾಳಿ ಬೀಸಿದಂಗೆ ಬೀಸುತ್ತಿದ್ದರೆ ಅದನ್ನೆಲ್ಲಾ ಮೋದಿಗೆ ಬಿಟ್ಟು ತಾನು ಬೇರೆಯೇ ತಂತ್ರಗಾರಿಕೆಯಲ್ಲಿ ಬ್ಯುಸಿಯಾಗಿದ್ದ ಅಮಿತ್ ಶಾ ಇದೀಗ ಮತ್ತೆ ಫೀಲ್ಡಿಗಿಳಿದಿದ್ದಾರೆ.

ಪ್ರಧಾನಿ ಮೋದಿ ತೆರಳಿ ಭಾಷಣ ಮಾಡಿದ್ದ ಕಡೆಗಳಿಗೆಲ್ಲ ಭೇಟಿ ನೀಡಿ ಪ್ರತಿ ವಿಧಾನ ಸಭಾ ಕ್ಷೇತ್ರವನ್ನೂ ಸುತ್ತಿ ಭರ್ಜರಿಯಾಗಿ ಮತಪ್ರಚಾರವನ್ನು ನಡೆಸುತ್ತಿದ್ದಾರೆ. ಮೊನ್ನೆ ತಾನೇ ಪ್ರಧಾನಿ ನರೇಂದ್ರ ಮೋದಿ ಮಂಗಳೂರಿನ ಕೇಂದ್ರ ಮೈದಾನದಲ್ಲಿ 2 ಲಕ್ಷಕ್ಕೂ ಅಧಿಕ ಮಂದಿಯನ್ನು ಉದ್ಧೇಶಿಸಿ ಮಾತನಾಡಿ ಹೊಸ ಇತಿಹಾಸವನ್ನು ಬರೆದಿದ್ದರು. ಇದೀಗ ನರೇಂದ್ರ ಮೋದಿ ಬೇರೆಡೆ ಪ್ರಚಾರ ನಡೆಸುತ್ತಿರುವಾಗ ಭಾರತೀಯ ಜನತಾ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ದಕ್ಷಿಣ ಕನ್ನಡ ಜಿಲ್ಲೆಯ ವಿಧಾನ ಸಭಾ ಕ್ಷೇತ್ರಗಳನ್ನು ಸುತ್ತಿ ಪ್ರಚಾರ ನಡೆಸುತ್ತಿದ್ದಾರೆ.

ಇಂದು ಮಂಗಳೂರಿನ ಉಳ್ಳಾಲ ವಿಧಾನ ಸಭಾ ಕ್ಷೇತ್ರದಲ್ಲಿ ರೋಡ್ ಶೋ ಮುಗಿಸಿ ಮಂಗಳೂರಿನ ಹೃದಯ ಭಾಗ ಮಂಗಳೂರು ದಕ್ಷಿಣ ವಿಧಾನ ಸಭಾ ಕ್ಷೇತ್ರದಲ್ಲಿ ಅಮಿತ್ ಶಾ ಮತ ಪ್ರಚಾರ ನಡೆಸಿದ್ದರು. ಮಂಗಳೂರು ದಕ್ಷಿಣ ವಿಧಾನ ಸಭಾ ಕ್ಷೇತ್ರದ ಭಾರತೀಯ ಜನತಾ ಪಕ್ಷದ ಅಭ್ಯರ್ಥಿ ಶ್ರೀ ವೇದವ್ಯಾಸ ಕಾಮತ್ ಪರ ಇಂದು ಮಂಗಳೂರಿನಲ್ಲಿ ಅಬ್ಬರದ ಪ್ರಚಾರವನ್ನೇ ನಡೆಸಿದ್ದಾರೆ. ಸಾವಿರಾರು ಸಂಖ್ಯೆಯಲ್ಲಿ ನೆರೆದಿದ್ದ ಜನರನ್ನು ಉದ್ಧೇಶಿಸಿ ಭಾಷಣ ಮಾಡಿರುವ ಅಮಿತ್ ಶಾ ನಗರದ ಪ್ರಮುಖ ರಸ್ತೆಗಳನ್ನು ಸಂಚರಿಸಿದ್ದಾರೆ.

ಈ ವೇಳೆ ಸಂಸದ ನಳಿನ್ ಕುಮಾರ್ ಕಟೀಲು ಹಾಗೂ ವಿಧಾನ ಪರಿಷತ್ ವಿಪಕ್ಷದ ಮುಖ್ಯ ಸಚೇತಕ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಮತ್ತು ಮಂಗಳೂರು ದಕ್ಷಿಣ ವಿಧಾನ ಸಭಾ ಕ್ಷೇತ್ರದ ಅಭ್ಯರ್ಥಿ ಶ್ರೀ ವೇದವ್ಯಾಸ ಕಾಮತ್ ಸಹಿತ ಅನೇಕ ಮುಖಂಡರುಗಳು ಉಪಸ್ಥಿತಿ ಇದ್ದರು.

ಕರಾವಳಿ ಅಬ್ಬರಿಸುತ್ತಿರುವ ಮತ್ತಿಬ್ಬರು ಫೈರ್ ಬ್ರಾಂಡ್‍ಗಳು..!

ಎಸ್… ಇದೀಗ ಕರಾವಳಿ ಸಂಪೂರ್ಣ ಕೇಸರಿಮಯವಾಗಿದೆ. ಯಾವ ವಿಧಾನ ಸಭಾ ಕ್ಷೇತ್ರ ನೋಡಿದರೂ ಕೇಸರಿ ರಂಗೇ ಎದ್ದು ಕಾಣುತ್ತಿದೆ. ಒಂದು ಕಡೆ ಭಾರತೀಯ ಜನತಾ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರು ಮಂಗಳೂರು ಹೃದಯ ಭಾಗದಲ್ಲಿ ಪ್ರಚಾರ ನಡೆಸುತ್ತಿದ್ದರೆ, ಮತ್ತೊಂದು ಕಡೆ ಬೆಳ್ತಂಗಡಿ ವಿಧಾನ ಸಭಾ ಕ್ಷೇತ್ರದಲ್ಲಿ ಕೇಂದ್ರ ಸಚಿವೆ ಸ್ಮøತಿ ಇರಾನಿ ಭರ್ಜರಿ ಪ್ರಚಾರ ನಡೆಸುತ್ತಿದ್ದಾರೆ. ಇನ್ನು ಜಿಲ್ಲೆಯ ಹೆಬ್ಬಾಗಿಲು ಸುಳ್ಯ ವಿಧಾನ ಸಾಭಾ ಕ್ಷೇತ್ರದಲ್ಲಿ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅಬ್ಬರದ ಪ್ರಚಾರ ನಡೆಸುತ್ತಿದ್ದಾರೆ.

ಒಟ್ಟಾರೆ ಈ ಬಾರಿ ಕರಾವಳಿಯಲ್ಲಿ ಭಾರತೀಯ ಜನತಾ ಪಕ್ಷವನ್ನು ಗೆಲ್ಲಿಸಿ ಕಮಲವನ್ನು ಅರಳಿಸಿಯೇ ಸಿದ್ದ ಎಂದು ಕಂಕಣ ತೊಟ್ಟಿರುವ ಬಿಜೆಪಿ ತನ್ನ ಬತ್ತಳಿಕೆಯಲ್ಲಿರುವ ಅತಿದೊಡ್ಡ ಅಸ್ತ್ರಗಳನ್ನೇ ಕಣಕ್ಕಿಳಿಸಿದೆ. ಮುಂದೆ ಮಂಗಳೂರಿನ ಉತ್ತರ ವಿಧಾನ ಸಭಾ ಕ್ಷೇತ್ರ ಹಾಗೂ ಬಂಟ್ವಾಳ ವಿಧಾನ ಸಭಾ ಕ್ಷೇತ್ರ ಗಳಲ್ಲಿ ಪ್ರಚಾರ ನಡೆಸಲಿದ್ದಾರೆ. ಮೂಡುಬಿದಿರೆ ಈ ಬಾರಿ ಬಿಜೆಪಿಯ ಪಾಲಿಗೆ ಅತ್ಯಂತ ನಂಬುಗೆಯ ವಿಧಾನ ಸಭಾ ಕ್ಷೇತ್ರವಾಗಿದ್ದು ಈ ಕ್ಷೇತ್ರದ ಬಗ್ಗೆ ಹೆಚ್ಚಾಗಿ ಗಮನ ಕೊಡಬೇಕಾದ ಅಗತ್ಯ ಇಲ್ಲ ಎಂಬ ಸೂಚನೆಯೂ ಇಲ್ಲ ಎನ್ನಲಾಗಿದೆ. ಅಂತೂ ಈ ಬಾರಿ ಜಿಲ್ಲೆಯಲ್ಲಿ 8ರಲ್ಲಿ 8ಕ್ಷೇತ್ರಗಳನ್ನು ಭಾರತೀಯ ಜನತಾ ಪಕ್ಷ ಗಳಿಸಿಕೊಳ್ಳುವುದರಲ್ಲಿ ಯಾವ ಸಂದೇಹವೂ ಇಲ್ಲ ಎಂದೆನ್ನಲಾಗುತ್ತಿದೆ.

-ಸುನಿಲ್ ಪಣಪಿಲ

Editor Postcard Kannada:
Related Post