X

ಪಾಕಿಸ್ತಾನಕ್ಕೆ ನುಗ್ಗಿ ಹೋರಾಡಲೂ ಗೊತ್ತು.! ಭಾರತೀಯ ಸೇನೆಯ ಬಗ್ಗೆ ರಾಷ್ಟ್ರೀಯ ಸ್ವಯಂ ಸೇವಕ ಸಂಘ ಹೇಳಿದ್ದೇನು ಗೊತ್ತಾ..?

ಭಾರತೀಯ ಸೈನಿಕರ ಪರಾಕ್ರಮವನ್ನು ಹೆಚ್ಚು ವಿವರವಾಗಿ ಹೇಳುವ ಅವಶ್ಯಕತೆ ಇಲ್ಲ. ಯಾಕೆಂದರೆ ಇಡೀ ಜಗತ್ತಿಗೆ ಭಾರತೀಯ ಸೈನ್ಯದ ಶಕ್ತಿ ಪ್ರದರ್ಶನವಾಗಿದೆ. ಭಾರತೀಯ ಸೈನಿಕರ ಶಕ್ತಿ ಸಾಮಾರ್ಥ್ಯವನ್ನು ಪದೇ ಪದೇ ಪರೀಕ್ಷಿಸುತ್ತಿರುವ ಪಾಕಿಸ್ತಾನಕ್ಕೆ ಈಗಾಗಲೇ ತಕ್ಕ ಪಾಠ ಕಲಿಸಿದ ಭಾರತ, ಮತ್ತೆ ದೇಶಕ್ಕೆ ಆಪತ್ತು ಎದುರಾದರೆ ಇಡೀ ಪಾಕಿಸ್ತಾನವನ್ನೇ ಧ್ವಂಸಗೊಳಿಸುವ ಎಚ್ಚರಿಕೆಯನ್ನೂ ನೀಡಿದೆ. ಆದರೂ ನರಿ ಬುದ್ದಿ ಬಿಡದ ಪಾಕಿಸ್ತಾನ ಗಡಿಯಲ್ಲಿ ಪದೇ ಪದೇ ಕದನ ವಿರಾಮ ಉಲ್ಲಂಘನೆ ಮಾಡಿ ಉಪಟಳ ನೀಡುತ್ತಲೇ ಇದೆ. ಅದಕ್ಕಾಗಿಯೇ ಭಾರತೀಯ ಸೇನೆ ಕಳೆದ ಬಾರಿ ಪಾಕಿಸ್ತಾನದ ಗಡಿ ಪ್ರವೇಶಿಸಿ ಸರ್ಜಿಕಲ್ ಸ್ಟ್ರೈಕ್ ನಡೆಸುವ ಮೂಲಕ ಭಾರತದಲ್ಲಿ ಮಾತ್ರವಲ್ಲ ನಮ್ಮ ದೇಶಕ್ಕೆ ತೊಂದರೆಯಾದರೆ ಗಡಿ ದಾಟಿ ಶತ್ರು ರಾಷ್ಟ್ರಕ್ಕೆ ನುಗ್ಗಿ ಹೊಡೆಯಲೂ ಗೊತ್ತು ಎಂಬುವುದನ್ನು ಜಗತ್ತಿಗೆ ಪ್ರದರ್ಶಿಸಿದ್ದರು.

ಪಾಕಿಸ್ತಾನಿ ಸೈನಿಕರು ಮತ್ತು ಉಗ್ರರು ಗಡಿಯಲ್ಲಿ ನಡೆಸುತ್ತಿರುವ ದಾಳಿಯಲ್ಲಿ ಈಗಾಗಲೇ ಸಾಕಷ್ಟು ಭಾರತೀಯ ಸೈನಿಕರು ಪ್ರಾಣ ಕಳೆದುಕೊಂಡಿದ್ದು, ದೇಶಾದ್ಯಂತ ಪಾಕಿಸ್ತಾನದ ಈ ಕೃತ್ಯದ ಬಗ್ಗೆ ಆಕ್ರೋಶವೂ ವ್ಯಕ್ತವಾಗುತ್ತಿದೆ. ಆದರೆ ಇದೀಗ ರಾಷ್ಟ್ರೀಯ ಸ್ವಯಂ ಸೇವಕ ಸಂಘವು ಭಾರತೀಯ ಸೈನ್ಯದ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಿದ್ದು ಭಾರತೀಯ ಸೈನಿಕರನ್ನು ಪದೇ ಪದೇ ಕೆಣಕುತ್ತಿದ್ದರೆ ಲಾಹೋರ್ ಒಳಗೆ ನುಗ್ಗಿ ಪಾಕಿಸ್ತಾನವನ್ನು ಮಟ್ಟಹಾಕಲು ನಮ್ಮ ಸೈನಿಕರಿಗೆ ತಿಳಿದಿದೆ ಎಂದು ಪಾಕಿಸ್ತಾನಕ್ಕೆ ನೇರ ಎಚ್ಚರಿಕೆ ನೀಡಿದೆ.!

ನರೇಂದ್ರ ಮೋದಿಯವರು ಪ್ರಧಾನಿಯಾದ ಬಳಿಕ ಪಾಕಿಸ್ತಾನದ ಅಟ್ಟಹಾಸಕ್ಕೆ ಸಾಕಷ್ಟು ಪ್ರಮಾಣದಲ್ಲಿ ಬ್ರೇಕ್ ಹಾಕಲಾಗಿದ್ದು, ಸೇನೆಗೆ ಬೇಕಾದ ಆಧುನಿಕ ಶಸ್ತ್ರಾಸ್ತ್ರಗಳನ್ನು ಒದಗಿಸಿ ಸೈನಿಕರ ಕಾಳಜಿ ವಹಿಸಿಕೊಳ್ಳಲಾಗಿದೆ. ಪ್ರಧಾನಿ ಮೋದಿಯವರ ದಿಟ್ಟ ಕ್ರಮಕ್ಕೆ ಪಾಕಿಸ್ತಾನವೂ ಕಂಗಾಲಾಗಿದ್ದು ಸರ್ಜಿಕಲ್ ಸ್ಟ್ರೈಕ್‌ನಂತಹ ದಾಳಿಗೆ ಇಡೀ ಪಾಕಿಸ್ತಾನ ಅಕ್ಷರಶಃ ತತ್ತರಿಸಿದೆ. ಸೈನಿಕರೂ ಕೂಡ ಮೋದಿ ಪ್ರಧಾನಿಯಾದ ಬಳಿಕ ಸ್ವಾತಂತ್ರ್ಯವಾಗಿದ್ದು ಯಾವ ಒತ್ತಡಕ್ಕೂ ಮಣಿಯಬೇಕಾದ ಅವಶ್ಯಕತೆ ಇಲ್ಲ ಎಂಬುದು ಗೊತ್ತಾಗಿದೆ. ಇತ್ತ ಇದೀಗ ಭಾರತೀಯ ಸೈನಿಕರ ಬಗ್ಗೆ ಮಾತನಾಡಿದ ಆರ್‌ಎಸ್‌ಎಸ್ , ಪಾಕಿಸ್ತಾನ ಪದೇ ಪದೇ ಭಾರತೀಯ ಸೈನಿಕರ ತಾಳ್ಮೆ ಪರೀಕ್ಷಿಸಿದರೆ ಲಾಹೋರ್‌ಗೆ ನುಗ್ಗಿ ಕೂಡ ವಿರೋಧಿಗಳನ್ನು ಹೆಡೆಮುರಿಕಟ್ಟಲು ತಿಳಿದಿದೆ ಎಂದು ಹೇಳಿಕೊಂಡಿದೆ.!

ಅಗತ್ಯ ಬಿದ್ದರೆ ಮತ್ತೊಮ್ಮೆ ಗಡಿ ದಾಟಲು ಸಿದ್ಧ..!

ಭಾರತೀಯ ಸೇನೆಯ ವಾಯುನೆಲೆಯ ಮೇಲೆ ಉಗ್ರರು ನಡೆಸಿದ ದಾಳಿಯಿಂದ ಅನೇಕ ಸೈನಿಕರು ಪ್ರಾಣ ಕಳೆದುಕೊಂಡಿದ್ದರು. ಇದನ್ನೇ ಸವಾಲಾಗಿ ಸ್ವೀಕರಿಸಿದ ಭಾರತ ಯಾರೂ ಊಹಿಸದ ರೀತಿಯಲ್ಲಿ ಪಾಕಿಸ್ತಾನಕ್ಕೆ ನುಗ್ಗಿ ಅಲ್ಲಿನ ಉಗ್ರ ಅಡಗುತಾಣಗಳನ್ನು ಮತ್ತು ಅನೇಕ ಉಗ್ರರನ್ನು ನಿದ್ರೆಯಿಂದ ಚಿರನಿದ್ರೆಗೆ ಕಳುಹಿಸಿದ್ದರು. ಪಾಕಿಸ್ತಾನ ಕಣ್ಣು ಮುಚ್ಚಿ ಬಿಡುವುದರೊಳಗೆ ಅನೇಕ ಉಗ್ರರು ಸತ್ತು ಹೆಣವಾಗಿ ಬಿದ್ದಿದ್ದರು‌. ಇದು ಜಗತ್ತಿಗೆ ಭಾರತೀಯ ಸೇನೆಯ ಶಕ್ತಿ ಪ್ರದರ್ಶನವಾದ ದಿನ. ಯಾಕೆಂದರೆ ಭಾರತೀಯ ಸೇನೆ ಇಂತದ್ದೊಂದು ಪರಾಕ್ರಮ ಮೆರೆಯುತ್ತಾರೆ ಎಂಬುವುದನ್ನು ಯಾರೂ ಊಹಿಸಿರಲಿಲ್ಲ. ಆದರೆ ಮೋದಿ ಸರಕಾರದ ಪ್ಲಾನ್‌ನ ಪ್ರಕಾರ ನಮ್ಮ ಸೈನಿಕರು ಸದ್ದಿಲ್ಲದೆ ಪಾಕಿಸ್ತಾನಕ್ಕೆ ಬುದ್ದಿ ಕಲಿಸಿದ್ದರು. ಈ ಬಗ್ಗೆಯೂ ಕೆಲ ಎಡಪಂಥೀಯ ದೇಶದ್ರೋಹಿಗಳು ಭಾರತೀಯ ಸೈನಿಕರನ್ನೇ ಅನುಮಾನದ ದೃಷ್ಟಿಯಿಂದ ಕಂಡಿದ್ದು ಮಾತ್ರ ವಿಪಾರ್ಯಾಸವೇ ಸರಿ.!

ಆದರೆ ಇದೀಗ ಭಾರತೀಯ ಸೈನಿಕರನ್ನು ಹಾಡಿ ಹೊಗಳಿರುವ ಜಗತ್ತಿನಾದ್ಯಂತ ಬೆಳೆದು ನಿಂತಿರುವ ರಾಷ್ಟ್ರೀಯ ಸ್ವಯಂ ಸೇವಕ ಸಂಘಟನೆ , ಭಾರತೀಯ ಸೇನೆಗೆ ಅಗತ್ಯ ಬಿದ್ದರೆ ಪಾಕಿಸ್ತಾನದ ಲಾಹೋರ ಒಳಗೆ ನುಗ್ಗಿ ಕೂಡ ಹೋರಾಡಲು ಗೊತ್ತು ಎನ್ನುವ ಮೂಲಕ ಭಾರತೀಯ ಸೇನೆಯ ಪರಾಕ್ರಮವನ್ನು ಮತ್ತೊಮ್ಮೆ ನೆನಪಿಸಿಕೊಂಡಿದೆ. ಆ ಮೂಲಕ ಭಾರತೀಯ ಸೇನೆ ಯಾವ ಸಂದರ್ಭದಲ್ಲೂ ದೇಶ ರಕ್ಷಣೆಗೆ ಸಿದ್ಧವಿದೆ ಎಂದು ಆರ್‌ಎಸ್‌ಎಸ್ ಹೇಳಿಕೊಂಡಿದೆ.!

ಭಾರತೀಯ ಸೇನೆಯ ಕುರಿತು ಮಾತನಾಡಿರುವ ಆರ್‌ಎಸ್‌ಎಸ್ ಮುಖಂಡ ಇಂದ್ರೇಶ್ ಕುಮಾರ್ , ನಮ್ಮ ಸೈನಿಕರ ಬಗ್ಗೆ ಯಾರೂ ಹಗುರವಾಗಿ ಮಾತನಾಡುವ ಅಗತ್ಯವಿಲ್ಲ. ಯಾಕೆಂದರೆ ಈಗಾಗಲೇ ಪಾಕಿಸ್ತಾನದ ಮೇಲೆ ನಮ್ಮ ಸೈನ್ಯ ನಡೆಸಿರುವ ಸರ್ಜಿಕಲ್ ಸ್ಟ್ರೈಕ್ ಇಡೀ ಜಗತ್ತಿಗೆ ತಿಳಿದಿದೆ. ದೇಶಕ್ಕೆ ತೊಂದರೆಯಾದರೆ ಪಾಕಿಸ್ತಾನದ ಯಾವ ಮೂಲೆಗೂ ನುಗ್ಗಲು ನಮ್ಮ ಸೈನಿಕರು ತಯಾರಾಗಿದ್ದಾರೆ, ಅಂತಹ ಸಂದರ್ಭಕ್ಕೆ ಪಾಕಿಸ್ತಾನ ಅವಕಾಶ ಮಾಡದೇ ಇರುವುದೇ ಉತ್ತಮ, ಇಲ್ಲವಾದರೆ ಸಂಪೂರ್ಣ ಪಾಕಿಸ್ತಾನವನ್ನೇ ನಾಶ ಮಾಡಲು ನಮ್ಮ ಸೇನೆ ಸಜ್ಜಾಗಿದೆ ಎಂದು ನೇರವಾಗಿ ಪಾಕಿಸ್ತಾನದ ಮೇಲೆ ದಾಳಿ ನಡೆಸುವ ಮುನ್ಸೂಚನೆ ನೀಡಿದ್ದಾರೆ.!

ಜಮ್ಮು ಕಾಶ್ಮೀರದಲ್ಲಿ ಬಿಜೆಪಿ – ಪಿಡಿಪಿಯ ಮೈತ್ರಿ ಸರಕಾರದ ಸಂದರ್ಭದಲ್ಲಿ ಕೇಂದ್ರ ಸರಕಾರಕ್ಕೆ ಸರಿಯಾಗಿ ನಿರ್ಧಾರ ತೆಗೆದುಕೊಳ್ಳಲಾಗದೆ ಉಗ್ರ ಚಟುವಟಿಕೆಗಳನ್ನು ಹತ್ತಿಕ್ಕುವಲ್ಲಿ ವಿಳಂಬವಾಗಿತ್ತು. ಅದೇ ಕಾರಣಕ್ಕಾಗಿ ಬಿಜೆಪಿ ಮೈತ್ರಿಯಿಂದ ಹೊರ ಬಂದು ದಿಟ್ಟ ನಿರ್ಧಾರ ಕೈಗೊಂಡಿದೆ. ಆದ್ದರಿಂದ ಇನ್ನು ಮುಂದೆ ಕಾಶ್ಮೀರದಲ್ಲಿ ಯಾವುದೇ ಉಗ್ರರು ಬದುಕಲು ಸಾಧ್ಯವಿಲ್ಲ. ನಮ್ಮ ಸೈನಿಕರಿಗೂ ಕೇಂದ್ರ ಸರಕಾರ ಸಂಪೂರ್ಣ ಸಹಕಾರ ನೀಡುತ್ತಿದೆ. ಆದ್ದರಿಂದ ಪಾಕಿಸ್ತಾನ ಇನ್ನು ಮುಂದೆ ತನ್ನ ಬೇಳೆ ಬೇಯಿಸಲು ಪ್ರಯತ್ನಿಸಿದರೆ ಅದು ಮೂರ್ಖತನ ಎಂದಿದ್ದಾರೆ ಆರ್‌ಎಸ್‌ಎಸ್ ಮುಖಂಡ..!

–ಅರ್ಜುನ್

Editor Postcard Kannada:
Related Post