X

ಐದು ವರ್ಷದಲ್ಲಿ ಸಿದ್ಧರಾಮಯ್ಯ ನೇತೃತ್ವದ ಕಾಂಗ್ರೆಸ್ ಪಕ್ಷದ ಈ ಭಾಗ್ಯಗಳನ್ನು ನಾವೆಂದಿಗೂ ಮರೆಯುವುದುಂಟೇ?! ಛೇ.. ಛೇ… ಆಗದು ಆಗದು!!

ರಾಜ್ಯದಲ್ಲಿ ಇನ್ನೇನು ಚುನಾವಣೆ ಬಂದೇ ಬಿಡುತ್ತದೆ! ಮೇ ೧೨ ಕ್ಕೆ ನಡೆಯುವ ಚುನಾವಣೆಗೆ ಈಗಾಗಲೇ ಹಲವು ಗೊಂದಲಗಳು, ಗದ್ದಲಗಳು, ನೀತಿ ಸಂಹಿತೆಯನ್ನು ಉಲ್ಲಂಘಿಸಿಯೇ ತೀರುತ್ತೇವೆಂದು ಹೊರಟಿರುವ ಒಂದಷ್ಟು ರಾಜಕೀಯ ಪಕ್ಷಗಳ ನಾಯಕರು! ಜೊತೆ ಜೊತೆಗೇ, ನಾಯಕರ ಅಭಿಯಾನಗಳು! ಕಾರ್ಯಕರ್ತರ ಪ್ರಚಾರ!! ಇಷ್ಟೆಲ್ಲವೂ ಸೇರಿ ಏನೋ ಒಂದು ಒತ್ತಡ ಪ್ರಾರಂಭವಾಗಿರುವುದಂತೂ ಸತ್ಯ ರಾಜ್ಯದಲ್ಲಿ ಎಂಬುದು ನಿಧಾನವಾಗಿ ಅರಿವಾಗುತ್ತಿದೆ!

ನೋಡಿ! ನಾವು ಯಾವತ್ತೂ ಸಹ ಯಾವುದೇ ಒಂದು ಪಕ್ಷವನ್ನು ಸುಖಾ ಸುಮ್ಮನೇ ವಿರೋಧಿಸಿಲ್ಲ! ಬದಲಾಗಿ, ಅದೆಷ್ಟೋ ಅಂಕಿ ಅಂಶಗಳ ನಂತರ, ಅಭಿವೃದ್ಧಿಯ ನೆಪದಲ್ಲಿ ಕೋಟಿ ಲೂಟಿ ಹೊಡೆದವರನ್ನೆಲ್ಲ ಲೆಕ್ಕ ಇಟ್ಟುಕೊ‌ಂಡೇ ಮಾತನಾಡತೊಡಗಿದ್ದೇವೆ! ಯಾಕೆಂದರೆ, ನಮಗೆ ಭವಿಷ್ಯದ ಬಗ್ಗೆ ಆಲೋಚನೆಯಿದೆ!! ಅದರಲ್ಲಿಯೂ, ಇವತ್ತಿನ ಪ್ರಸ್ತುತ ಕಾಂಗ್ರೆಸ್ ಸರಕಾರದ ಕೈಯ್ಯಲ್ಲೇನಾದರೂ ಅಧಿಕಾರ ಕೊಟ್ಟರೆ ಮುಂದಿನ ಐದು ವರುಷಗಳಲ್ಲಿ ಏನಾಗಲಿದೆ ಕರ್ನಾಟಕ ಎಂಬ ಸ್ಪಷ್ಟ ಅರಿವಿದೆ!

ಅದಕ್ಕೇ ನೋಡಿ! ನಾವು ಮತ್ತೆ ಮತ್ತೆ ಮಾತನಾಡುತ್ತಿದ್ದೇವೆ! ನಾವು ಮತ್ತೆ ಮತ್ತೆ ನೆನಪಿಸುತ್ತಿದ್ದೇವೆ! ಮತ್ತೆ ಮತ್ತೆ ನಾವು ಸಮಾಜಕ್ಕೋಸ್ಕರವೇ ತಲೆ ಬಾಗುತ್ತಿದ್ದೇವೆ!! ಅದರಲ್ಲಿಯೂ, ನಾವು ಇವತ್ತಿನವರೆಗೂ ಕಾಂಗ್ರೆಸ್ ಸರಕಾರದಡಿಯಲ್ಲಿ ಅನುಭವಿಸಿದ ಪ್ರತೀ ಕಷ್ಟಗಳನ್ನು, ನರಕ ಯಾತನೆಗಳನ್ನು ಅನುಭವಿಸಿದೆವಲ್ಲ?! ಹೆತ್ತ ತಾಯ ಒಡಲು ಹತ್ತಿ ಉರಿದದ್ದನ್ನೆಲ್ಲ ಅದ್ಹೇಗೆ ಮರೆಯಲು ಸಾಧ್ಯ ಹೇಳಿ?! ಸಾಧ್ಯವೇ ಇಲ್ಲ! ಅದಕ್ಕೇ, ಮತ್ತೆ ಮತ್ತೆ ಹೇಳುತ್ತಿದ್ದೇವೆ! ಯೆಸ್! ನಾವು ಮರೆತಿಲ್ಲ!!

ನೋಡಿ! ಗೋ ಹತ್ಯೆ ನಿಷೇಧ ಕಾಯ್ದೆಯನ್ನು ಹಿಂಪಡೆದಿದ್ದನ್ನು, ಮಧ್ಯ ರಸ್ತೆಯಲ್ಲಿ ಗೋಮಾಂಸವನ್ನಿಟ್ಟದ್ದನ್ನು ನಾವು ಮರೆತಿಲ್ಲ!!

ಗೋ ಕಳ್ಳ‌ ಕಬೀರನಿಗೆ 15 ಲಕ್ಷ ಪರಿಹಾರ ನಿಡಿದ್ದನ್ನು, ಕಸಾಯಿಖಾನೆಗೆ ಅಧಿಕೃತವಾಗಿ ಸರಕಾರದಿಂದ ಪರವಾನಗಿ ನೀಡಿದ್ದನ್ನು, ತನ್ಮೂಲಕ ಹಿಂದೂಗಳ ಅಸ್ತಿತ್ವಕ್ಕೆ ಕೊಡಲಿಯೇಟು ಕೊಟ್ಟಿದ್ದನ್ನು ನಾವು ಮರೆತಿಲ್ಲ!!

ಅಲ್ಪಸಂಖ್ಯಾತರ ವೋಟ್ ಬ್ಯಾಂಕಿಗಾಗಿ ಪಿಎಫ್ಐ ಭಯೋತ್ಪಾದಕರ ವಿರುದ್ಧ ನೂರಾರು ಪ್ರಕರಣಗಳನ್ನು ಖುಲಾಸೆ ಮಾಡಿದ್ದನ್ನಾಗಲಿ, ಅಮಾಯಕ ಮುಸಲ್ಮಾನರು ಎಂದು ಅದೆಷ್ಟೋ ಪ್ರಕರಣಗಳನ್ನು ಖುಲಾಸೆ ಮಾಡಿದ್ದನ್ನು, ಪ್ರತೀ ಬಾರಿಯೂ ಆರೋಪಿ ಮುಸಲ್ಮಾನ ಎಂದಾಗ ಗೃಹ ಮಂತ್ರಿಯಾದಿಯಾಗಿ, ಪ್ರತಿಯೊಬ್ಬ ಕಾಂಗ್ರೆಸ್ ನಾಯಕ ಸಮರ್ಥಿಸಿದ್ದನ್ನು ನಾವು ಮರೆತಿಲ್ಲ!!

ಜಾತಿ ಆಧಾರಿತ ಶೈಕ್ಷಣಿಕ ಪ್ರವಾಸ ಮಾಡಿಸಿ ವಿಧ್ಯಾರ್ಥಿಗಳಲ್ಲಿ ಜಾತಿಯ ವಿಷ ಬೀಜ ಬಿತ್ತಿದ್ದನ್ನು, ಅಷ್ಟಾಗಿಯೂ ಸಂಘವನ್ನು ಕೋಮು ಸೌಹಾರ್ದತೆ ಹಾಳು ಗೆಡವುತ್ತಿದೆ ಎಂದು ಸುಖಾ ಸುಮ್ಮನೆ ಒದರಿದ್ದನ್ನು ನಾವು ಮರೆತಿಲ್ಲ!!

ಗೋ ಮಾಂಸ ಭಕ್ಷಣೆ ಮಾಡುತ್ತೇನೆ ಎಂದು ಹೇಳಿರುವುದನ್ನು, ಪ್ರಶ್ನಿಸಿದ್ದಕ್ಕೆ ಕೇಳೋದಕ್ಕೆ ನೀವ್ಯಾರು ಎಂದು ತಿರುಗಿ ಪ್ರಶ್ನಿಸಿದ್ದನ್ನು, ಏನಿವಾಗ ಎಂಬ ಅಹಂಕಾರದ ಮಾತುಗಳನ್ನು ನಾವು.. ನಾವು ಮರೆತಿಲ್ಲ!!

ರಾಜ್ಯದಲ್ಲಿ ಮಕ್ಕಳಾದಿಯಾಗಿ ಮಹಿಳೆಯರ ಮೇಲೆ ನಡೆದ ಅತ್ಯಚಾರಗಳನ್ನು, ಸಾವಿರಗಟ್ಟಲೇ ಅತ್ಯಾಚಾರದ ಸಂಖ್ಯೆ ದಾಟಿದ್ದನ್ನು, ಕೆಲ ಅತ್ಯಾಚಾರಕ್ಕೆ ಆತ್ಮಹತ್ಯೆಯ ಪಟ್ಟ ಕಟ್ಟಿದ್ದನ್ನು, ಇನ್ನೊಂದಷ್ಟನ್ನು ಮುಚ್ಚಿ ಹಾಕಿದ್ದನ್ನು,.. ನಾವು ಮರೆತಿಲ್ಲ!!

ತೀರ್ಥಹಳ್ಳಿಯ ನಂದಿತಾಳ ಅತ್ಯಾಚಾರ ಮತ್ತು ಕೊಲೆಯನ್ನು ಮುಚ್ಚಿಹಾಕಿ, ತಿರುಗಿ ಬಿದ್ದು ಪ್ರಶ್ನಿಸಿದರೆಂಬ ಕಾರಣಕ್ಕೆ, ನಂದಿತಳ ತಂದೆಯ ಅಂಗಡಿಗೆ ಬೆಂಕಿ ಹಚ್ಚಿದ್ದನ್ನು ನಾವು ಮರೆಯಲು ಸಾಧ್ಯವೇ?! ಅವತ್ತು ನಮ್ಮೊಡಲು ಉರಿದು ಬರಿದಾಗಿತ್ತು!!

ಮೇಟಿಯಂತಹ ಅತ್ಯಾಚಾರಿ ಶಾಸಕನಿಗೆ ಕ್ಲೀನ್ ಚೀಟ್ ಕೊಟ್ಟಿದ್ದನ್ನು ನಾವು ಮರೆತಿಲ್ಲ!! ನೀರು ಕೇಳಿ ಬೆಂಗಳೂರಿಗೆ ಬಂದ ಬಯಲುಸೀಮೆ ರೈತರ ಮೇಲೆ ನಡೆಸಿದ ಹಲ್ಲೆಗಳನ್ನು, ಲಾಠಿ ಚಾರ್ಜುಗಳ ಆದೇಶಗಳನ್ನು ನಾವು ಮರೆತಿಲ್ಲ!

ಮಹಾದಾಯಿ ಹೋರಾಟಗಾರರ ಮನೆಗಳಿಗೆ ನುಗ್ಗಿ ಹಲ್ಲೆ ಮಾಡುವುದರ ಜೊತೆಗೆ ಸುಳ್ಳು ಪ್ರಕರಣಗಳನ್ನು ದಾಖಲಿಸಿದ್ದನ್ನು, ರಾಜಕೀಯ ದುರುದ್ದೇಶಗಳಿಗೆ ಗೋವಾ ಸರಕಾರದ ಜೊತೆ ನಟೆಸಿದ ಕಣ್ಣಾ ಮುಚ್ಚಾಲೆಗಳನ್ನು, ರೈತರು ಸತ್ತರೂ ಸರಿಯೇ! ಈ ವಿವಾದ ಮಾತ್ರ ಹಸಿಯಾಗಿಯೇ ಉಳಿಯಬೇಕೆಂದು ನೀವು ಮಾಡಿದ ಕುತಂತ್ರಗಳನ್ನು, ಪ್ರಾಮಾಣಿಕತೆಯಿಂದ ಕೆಲಸ ಮಾಡ ಹೊರಟ ಬಿಜೆಪಿ ಯವರ ಮೇಲೆ ಜನಬಲ ವನ್ನು ಉಪಯೋಗಿಸಿ ಗೂಬೆ ಕೂರಿಸಿದ್ದನ್ನು ನಾವು ಮರೆತಿಲ್ಲ!

3600 ರೈತರು ಸಾಲದ ಸುಳಿಗೆ ಸಿಲುಕಿ ಆತ್ಮಹತ್ಯೆ ಮಾಡಿಕೊಂಡಿದ್ದನ್ನು, ಅವರ ಸಾವಿನ ಮೇಲೆ ನಡೆದ ರಾಜಕೀಯ ಸುಳ್ಳು ಸಂತಾಪಗಳನ್ನು, ನಾವು ಮರೆತಿಲ್ಲ!!

ಆತ್ಮಹತ್ಯೆ ಮಾಡಿಕೊಂಡ ರೈತರು ಕುಡಿದು ಸತ್ತಿರಬೇಕು‌ ಅಥವಾ ಇನ್ನೇನೊ ಕಾರಣಕ್ಕಾಗಿ ಸತ್ತಿರಬೇಕು‌ ಎಂದು ಮಡಿಕೇರಿಯಲ್ಲಿ ಹೇಳಿದ್ದನ್ನಾಗಲಿ, ರೈತರ ಸಾವಿಗೆ ಕನಿಷ್ಟ ಸಂತಾಪವನ್ನೂ ತೋರದೇ ಮತ್ತೊಂದಿಷ್ಟು ನರಕ ಯಾತನೆಯನ್ನು ಸೃಷ್ಟಿಸಿದ್ದನ್ನು ನಾವು ಮರೆತಿಲ್ಲ!!

ಡಿ.ಕೆ ರವಿ, ಮಲ್ಲಿಕಾರ್ಜುನ ಬಂಡೆ, ಗಣಪತಿ ಅವರ ಸಾವಿಗೆ ಕಾರಣವಾದ ರಾಜ್ಯ ಸಚೀವ ಯಾರೆಂಬುದನ್ನು ಮರೆತಿಲ್ಲ! ಹೇಗೆಲ್ಲ, ಒಬ್ಬ ಎ೧ ಆರೋಪಿಯನ್ನು ಸಮರ್ಥಿಸಿಕೊಳ್ಳಕಾಯಿತೆಂಬುದನ್ನು ನಾವು ಮರೆತಿಲ್ಲ! ಹೇಗೆ ಪ್ರತಿಯೊಬ್ಬರ ಸಾವಿಗೆ ಅವರ ಚಾರಿತ್ರ್ಯವನ್ನೇ ಪ್ರಶ್ನಿಸಲಾಯಿತು ಎಂಬುದನ್ನಂತೂ ನಾವು ಮರೆಯಲು ಸಾಧ್ಯವೇ ಇಲ್ಲ ಬಿಡಿ!!

ಲೋಕಾಯುಕ್ತವನ್ನು ಎಸಿಬಿ ಎಂದು ಬದಲಾಯಿಸಿ ‌ತನ್ನ ಭ್ರಷ್ಟಾಚಾರಕ್ಕೆ ಉಪಯೋಗಿಸಿಕೊಂಡಿದ್ದನ್ನು, ಅದೆಷ್ಟೋ ಹಗರಣಗಳನ್ನು ಹೇಳ ಹೆಸರಿಲ್ಲದಂತೆ ಮಾಡಿದ್ದನ್ನು, ಎಸಿಬಿಯನ್ನು ಉಪಯೋಗಿಸಿಕೊಂಡೇ ಸಚಿವರ ಪ್ರಕರಣಗಳಿಗೆ ಇತಿಶ್ರೀ ಹಾಡಿದ್ದನ್ನು ನಾವು ಮರೆತಿಲ್ಲ!!

ರಾಜ್ಯದ ದಕ್ಷ ಅಧಿಕಾರಿಗಳಿಗೆ ಕಿರುಕುಳದ ಜೊತೆಗೆ ವರ್ಗಾವಣೆ ಭಾಗ್ಯವನ್ನು ನೀಡಿದ್ದನ್ನು, ಮಹಿಳೆಯೆ!ನ ಕನಿಷ್ಟ ಸೌಜನ್ಯವನ್ನೂ ತೋರದೇ ಹರಿ ಹಾಯ್ದಿದ್ದನ್ನು ನಾವು ಮರೆತಿಲ್ಲ!

ಅನ್ನಭಾಗ್ಯದ ಆಹಾರದಲ್ಲಿ ಕಳಪೆ ಗುಣಮಟ್ಟದ ಆಹಾರ ಸಾಮಗ್ರಿಗಳನ್ನು ವಿತರಣೆ ಮಾಡಿದ್ದನ್ನು, ಕ್ಯಾಂಟೀನ್ ನ ನೆಪದಲ್ಲಿ ತೀರಾ ಹದಗೆಟ್ಟ ಪ್ರದೇಶದಲ್ಲಿ ಆಹಾರ ತಯಾರಿಸಿದ್ದನ್ನು, ಜನರಿಗೆ ಆಟೋವಾಲಾಗಳಿಗೆ ಮೋಸ ಮಾಡಿದ್ದನ್ನು ನಾವು ಮರೆತಿಲ್ಲ!!

ಕಲ್ಲಡ್ಕ ಶಾಲೆಯ ಮಕ್ಕಳ ಅನ್ನದಾಸೋಹ ಕಸಿದುಕೊಂಡಿದ್ದನ್ನು, ಕನ್ನಡ ಕನ್ನಡ ಎಂದು ಕನ್ನಡ ಶಾಲೆಯ ಮಕ್ಕಳಿಗೇ ದ್ರೋಹ ಬಗೆದಿದ್ದನ್ನು, ಹಿಂದುಳಿದ ವರ್ಗದವರ ಉದ್ಧಾರ ಮಾಡುತ್ತೇವೆಂದು ಹೊರಟು ಬಹುತೇಕ ಹಿಂದುಳಿಸ ವರ್ಗದ ವಿದ್ಯಾರ್ಥಿಗಳಿರುವ ಶ್ರೀರಾಮ ಶಾಲೆಯ ಮಕ್ಕಳನ್ನು ಹಸಿವಿನಿಂದ ನರಳಿಸಿದ್ದನ್ನು ನಾವು ಮರೆಯಲು ಸಾಧ್ಯವೇ ಇಲ್ಲ!!

ಭ್ರಷ್ಟಾಚಾರಿ ಸಚಿವರಿಗೆ ಕ್ಲೀನ್ ಚೀಟ್ ಭಾಗ್ಯ ಕರುಣಿಸಿದ್ದನ್ನು, ವಿಧಾನ ಸೌಧದಲ್ಲಿ ಅಂತಹ ಸಚಿವರ ಸಮರ್ಥನೆ ನಡೆಸಿದ್ದನ್ನು, ಭ್ರಷ್ಟರನ್ನೇ ಮತ್ತೆ ಮತ್ತೆ ಓಲೈಸಿದ್ದನ್ನು ನಾವು ಮರೆತಿಲ್ಲ!!

ಅಲ್ಪಸಂಖ್ಯಾತ ಮುಸ್ಲಿಮರ ಉದ್ಧಾರಕ್ಕಾಗಿ ಹಿಂದು ದೇವಾಲಯಗಳ ಮುಜರಾಯಿ ಇಲಾಖೆಯ ಹಣ ವ್ಯಯಿಸಿದ್ದನ್ನು, ಶಾದಿ ಮಹಲ್ ಗಳನ್ನು ಕಟ್ಟಿಸಿದ್ದನ್ನು, ಅದೆಷ್ಟೋ ಚರ್ಚು ಮಸೀದಿಗಳ ಜೀರ್ಣೋದ್ಧಾರಕ್ಕೆ ನಮ್ಮ ದೇವಸ್ಥಾನದ ಹಣ ಬಳಸಿ, ಹಿಂದೂಗಳು ದೇವಸ್ಥಾನದ ಉದ್ಧಾರಕ್ಕೆ ಅನುದಾನ ಬೇಕೆಂದಾಗ ಬೆದರಿಸಿ ಅಟ್ಟಿದ್ದನ್ನು, ದತ್ತಿ ಇಲಾಖೆಗೆ ಸಂವಿಧಾನದ ಕಾನೂನಿನ ಹೊರತಾಗಿಯೂ ಅನ್ಯಕೋಮಿನವರನ್ನು ನೇಮಿಸಿದ್ದನ್ನು ನಾವು ಮರೆತಿಲ್ಲ ಸ್ವಾಮಿ!!

ಬೆಂಗಳೂರಿನ ಗುಂಡಿ ರಸ್ತೆಗೆ ಬಿದ್ದು ಪ್ರಾಣ ಕಳೆದುಕೊಂಡವರನ್ನು, ಕಂಡ ಕಂಡಲ್ಲಿ ಗುಂಡಿಗಳು ಕಾಣತೊಡಗಿದ್ದನ್ನು, ಬೆಂಗಳೂರೆಂಬುದು ಅಭಿವೃದ್ಧಿ ಕಾಣದೇ ಹೋದದ್ದನ್ನು, ಮಳೆ ಬಂದಾಗ ಸರಿಯಾದ ಚರಂಡಿ ವ್ಯವಸ್ಥೆಯಿಲ್ಲದೇ, ಜೊತೆಗೆ ನೊರೆ ಬಂದು ರಾಜಧಾನಿ ಎಂಬುದು ಖಾಯಿಲೆಧಾನಿಯಾಗಿ ಮಾರ್ಪಾಡು ಹೊಂದಿದ್ದನ್ನು ನಾವು ಮರೆತಿಲ್ಲ!!

ಅತಿವೃಷ್ಟಿಯಿಂದ ರಾಜಕಾಲುವೆಗಳಲ್ಲಿ ಸತ್ತು ಹೋದ ಜನರನ್ನು ನಾವು ಮರೆತಿಲ್ಲ! ಸರಿಯಾದ ಪರಿಹಾರವೂ ಸಿಗದೇ ಕುಟುಂಬಗಳು ಬೀದಿ ಪಾಲಾಗಿ ಹೋಗಿದ್ದನ್ನು ನಾವು ಮರೆತಿಲ್ಲ!

26 ಜನ ಸಂಘಪರಿವಾರದ ಕಾರ್ಯಕರ್ತರ ರಾಜಕೀಯ ಪ್ರೇರಿತ ಹತ್ಯೆಗಳನ್ನು, ತನಿಖೆಗಳನ್ನು ಬೇಕಾ ಬಿಟ್ಟಿ ಮಾಡಿದ್ದನ್ನು, ಸಾಕ್ಷಿಗಳನ್ನು ನಾಶಗೊಳಿಸಿದ್ದನ್ನು, ಹತ್ಯೆಯನ್ನು ಮತ್ತೆ ಮತ್ತೆ ಸಂಘದವರ ಮೇಲೆ ಹಾಕಿದ್ದನ್ನು, ಬಾಯಿಗೆ ಬಂದ ಹಾಗೆ ಸಂಘಿಗಳು ಉಗ್ರಗಾಮಿಗಳು ಎಂದು ಬಾಯಿ ಹರಿದುಕೊಂಡಿದ್ದನ್ನು, ಬಹಿರಂಗವಾಗಿಯೇ ಹಿಂದೂ ವಿರೋಧಿ ನಡೆಯನ್ನು ಪ್ರೋತ್ಸಾಹಿಸಿದ್ದನ್ನು ನಾವು ಮರೆತಿಲ್ಲ!!

ರಾಜ್ಯಸರ್ಕಾರದ ಮಂತ್ರಿಗಳ ಗೂಂಡಾಗಿರಿ, ಶಾಸಕರ ಗೂಂಡಾಗಿರಿ, ಶಾಸಕರ ಮಕ್ಕಳ ಗೂಂಡಾಗಿರಿ, ಶಾಸಕರ ಬೆಂಬಲಿಗರ ಗೂಂಡಾಗಿರಿಗಳನ್ನು,
ಮತ್ತೆ ಸಮರ್ಥಿಸಿಕೊಂಡ ಮುಖ್ಯಮಂತ್ರಿಯ ನಡೆಯನ್ನು, ಅಷ್ಟೆಲ್ಲ ಆದರೂ ಮತ್ತೆ ಅದೇ ಗೂಂಡಾ ಸಚಿವ ಶಾಸಕರಿಗೆಲ್ಲ ಟಿಕೇಟು ನೀಡುತ್ತಿರುವುದನ್ನು, ಸತ್ತೇ ಹೋಗುವಷ್ಟು ಗಂಭೀರವಾಗಿ ಗಾಯಗೊಂಡಿದ್ದರೂ ಸಹ ರಾಜಿಯಾಗಿ ಬಿಡಿ ಎಂದಿದ್ದನ್ನು ನಾವು ಮರೆತಿಲ್ಲ!!

ಪ್ರತ್ಯೇಕ ಧರ್ಮ ಎಂಬ ಹೆಸರಿನಲ್ಲಿ ಹಿಂದುಗಳನ್ನು ಒಡೆದಾಳಲು ಹೊರಟಿದ್ದನ್ನು ನಾವೆಂದಿಗಾದರೂ ಮರೆಯಲು ಸಾಧ್ಯವಿದೆಯೇ?! ಹಿಂದೂಗಳನ್ನು ಒಡೆಯಬೇಕೆಂಬ ಹುನ್ನಾರವೊಂದಕ್ಕೆ ಇಡೀ ಕರ್ನಾಟಕವನ್ನೇ ಕೋಮು ಗಲಭೆಯ ತುದಿಯಲ್ಲಿ ನಿಲ್ಲಿಸಿದ್ದನ್ನು ನಾವು ಮರೆಯುವುದಕ್ಕೆ ಎಂದೆಂದಿಗೂ ಸಾಧ್ಯವಿಲ್ಲ!!

ಸಹಸ್ರ ಕೋಟಿ ಭಕ್ತರನ್ನು ಹೊಂದಿರುವ ಧರ್ಮಸ್ಥಳ ಮಂಜುನಾಥ ಕ್ಷೇತ್ರಕ್ಕೆ ರಾಜ್ಯದ ಪ್ರತಿನಿಧಿಯಾದ ಮುಖ್ಯಮಂತ್ರಿಯವರು ಮಾಂಸ ತಿಂದು ಭೇಟಿ ಇತ್ತಿದ್ದನ್ನು ನಾವು ಮರೆಯಲು ಸಾಧ್ಯವೇ?! ಪ್ರಶ್ನಿಸಿದಾಗ ಯಾವ ದೇವರು ಮಾಂಸ ತಿನ್ನಬಾರದು ಎಂದಿದ್ದಾನೆ ಎಂದು ತಿರುಗಿ ಉದ್ಧಟವಾಗಿ ಪ್ರಶ್ನಿಸಿದ್ದನ್ನು ನಾವು ಮರೆಯಲು ಸಾಧ್ಯವಿದೆಯೇ?!

ಅವೆಲ್ಲವನ್ನೂ ಬಿಡಿ! ಕಳೆದ ಐದು ವರುಷಗಳಲ್ಲಿ ನಡೆದ ಹಗರಣಗಳು?! ಎಮ್ ಸ್ಯಾಂಡಿನಲ್ಲಿ ಸಾವಿರಾರು ಗಟ್ಟಲೇ ಕೊಳ್ಳೆ ಹೊಡೆದಿದ್ದು?! ಡಿನೋಟಿಫಿಕೇಶನ್ನುಗಳ ಹಗರಣಗಳು?! ಹಿಂದೂಗಳ ಧಾರ್ಮಿಕ ಭಾವನೆಗೆ ತಂದ ಧಕ್ಕೆಗಳು?! ಅಬ್ಬೋ! ಬಿಡಿ! ಸಾಧ್ಯವೇ ಇಲ್ಲ! ನಾವು ಮರೆಯುವುದೇ ಇಲ್ಲ!

ನೋಡಿ‌! ಹೇಳುತ್ತಲೇ ಹೋದರೆ ಬಹಳಷ್ಟಿದೆ! ಪಟ್ಟಿ ಮಾಡುತ್ತ ಕುಳಿತರೆ ಮುಗಿಯಲಾರದ ಕಥೆಯಾಗುತ್ತದೆ! ಅದಕ್ಕೇ, ಮತ ನೀಡುವ ಸಮಯದಲ್ಲಿ ಆಯ್ದು ಆಯ್ದು ನೆನಪಿಸುತ್ತಿರುವುದು! ಯಾಕೆಂದರೆ, ಮತ್ತೆ ಮತ್ತೆ ಕರ್ನಾಟಕವೆನ್ನುವುದು ಮರಣ ಮೃದಂಗಕ್ಕೆ ಸೋಲದಿರಲಿ ಎಂಬ ಆಶಯವೊಂದು ನಮಗುಳಿದಿದೆ ಅಷ್ಟೇ! ಮತ್ತೆ ಮತ್ತೆ ಕರ್ನಾಟಕದಲ್ಲಿ ಹಿಂದೂ ಕಾರ್ಯಕರ್ತರ ಹೆಣ ಬೀಳದಿರಲಿ ಎಂಬ ಘನ ಉದ್ದೇಶದಿಂದ!! ಮತ್ತೆ ಕರ್ನಾಟಕ ಅಭಿವೃದ್ಧಿಯಲ್ಲಿ ಹಿಂದೆ ಬೀಳದಿರಲಿ ಎಂಬ ಕಾರಣದಿಂದ!!

ಮತದಾರರು ದಯವಿಟ್ಟು ಸಹಕರಿಸಿ!


ತಪಸ್ವಿ

Editor Postcard Kannada:
Related Post