X

ಕೇಂದ್ರದ ಮಹತ್ವದ ಯೋಜನೆಯೊಂದಕ್ಕೆ WHO ಮೆಚ್ಚುಗೆ

ಹರ್ ಘರ್ ಜಲ್ ಜೀವನ್ ಮಿಷನ್ ಎಂಬ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆಗೆ ಎಲ್ಲೆಡೆಯಿಂದ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ.

ವಿಶ್ವ ಆರೋಗ್ಯ ಸಂಸ್ಥೆ (WHO) ಸಹ ‘ಸಾರ್ವಜನಿಕ ಆರೋಗ್ಯ ಮತ್ತು ಹಣಕಾಸಿನ ಉಳಿತಾಯದ ಮೇಲೆ ಈ ಹರ್ ಘರ್ ಜಲ್ ಯೋಜನೆಯು ಗಮನಾರ್ಹವಾದ ಪರಿಣಾಮವನ್ನು ಬೀರಿದೆ’ ಎಂಬುದಾಗಿ ತಿಳಿಸಿದೆ.

ಭಾರತದ ಎಲ್ಲಾ ಮನೆಗಳಿಗೆ ಶುದ್ಧ ಮತ್ತು ಸುರಕ್ಷಿತ ಕುಡಿಯುವ ನೀರನ್ನು ಒದಗಿಸುವ ಸದುದ್ದೇಶದಿಂದ ಈ ಯೋಜನೆಯನ್ನು ಜಾರಿಗೆ ತರಲಾಗಿದೆ. ಹರ್ ಘರ್ ಜಲ್ ಕಾರ್ಯಕ್ರಮದ ವರದಿಯ ಪ್ರಕಾರ, ದೇಶದ ಎಲ್ಲಾ ಮನೆಗಳಿಗೆ ಸುರಕ್ಷಿತವಾಗಿ ನಿರ್ವಹಿಸಲಾದ ಕುಡಿಯುವ ನೀರನ್ನು ಖಾತ್ರಿಪಡಿಸಿಕೊಳ್ಳುವುದರಿಂದ, ಅತಿಸಾರ ರೋಗದಿಂದ ಉಂಟಾಗುವ ಸುಮಾರು ನಾಲ್ಕು ಲಕ್ಷ ಸಾವುಗಳನ್ನು ತಪ್ಪಿಸಬಹುದು. ಹಾಗೆಯೇ ಈ ಕಾಯಿಲೆಗೆ ಸಂಬಂಧಿಸಿದ ಸುಮಾರು ೧೪ ಲಕ್ಷ ಅಂಗವೈಕಲ್ಯಗಳನ್ನು ತಪ್ಪಿಸಿ, ಆಯಸ್ಸು ಹೆಚ್ಚಿಸಿಕೊಳ್ಳಬಹುದು. ಈ ಯೋಜನೆ ಸುಮಾರು ೧೦೧ ಶತಕೋಟಿ ಯುಎಸ್ ಡಾಲರ್ಗಳಷ್ಟು ಅಂದಾಜು ವೆಚ್ಚದ ಉಳಿತಾಯಕ್ಕೂ ಕಾರಣವಾಗಿದೆ ಎಂದು ತಿಳಿಸಿದೆ.

ಈ ಯೋಜನೆಯ ವರದಿಯು ಅತಿಸಾರ ರೋಗಗಳ ಮೇಲೆ ಕೇಂದ್ರೀಕೃತವಾಗಿದೆ. ನೀರು, ಸ್ವಚ್ಛತೆ, ನೈರ್ಮಲ್ಯ ಸಮಸ್ಯೆಗಳಿಗೆ ಸಂಬಂಧಿಸಿದಂತೆ ಒಟ್ಟಾರೆಯಾಗಿ ರೋಗದ ಹೊರೆಗೆ ಗಮನಾರ್ಹವಾದ ಮುಕ್ತಿಯನ್ನು ಈ ಯೋಜನೆ ನೀಡುತ್ತದೆ.

Post Card Balaga:
Related Post