X

ಕರ್ನಾಟಕದಲ್ಲಿ “ಈ ಬಾರಿ ಬಿಜೆಪಿ” ಏಕೆ ಬರಬೇಕು? ನಾನೇಕೆ ಭಾಜಪಕ್ಕೆ ಮತ ನೀಡಬೇಕು? ಹೀಗೆ ಕೇಳುವವರೆ ಒಮ್ಮೆ ಭಾಜಪ ಆಡಳಿತವಿರುವ ರಾಜ್ಯಗಳ ಅಭಿವೃದ್ದಿಯೆಡೆಗೆ ದೃಷ್ಟಿ ಹರಿಸಿ!

ಇನ್ನೇನು ಕೆಲವೇ ದಿನಗಳಲ್ಲಿ ಮೋದಿ ಸರಕಾರ ನಾಲ್ಕು ವರ್ಷಗಳನ್ನು ಯಶಸ್ವಿಯಾಗಿ ಪೂರೈಸಲಿದೆ. ಕಳೆದ ನಾಲ್ಕು ವರ್ಷಗಳಲ್ಲಿ ಸರಕಾರದ ಮೇಲೆ ಒಂದೇ ಒಂದು ಭ್ರಷ್ಟಾಚಾರದ ಆರೋಪವಿಲ್ಲ!! ದೇಶದ ಆರ್ಥಿಕತೆ ನಾಗಾಲೋಟದಿಂದ ಓಡುತ್ತಿದೆ ಮಾತ್ರವಲ್ಲ, ವಿಶ್ವ ಬ್ಯಾಂಕ್, ಮೂಡಿ, ವಿಶ್ವ ಸಂಸ್ಥೆಗಳೆಲ್ಲ ಭಾರತದಲ್ಲಾಗುತ್ತಿರುವ ಆರ್ಥಿಕ ಪ್ರಗತಿಯನ್ನು ಕಣ್ ಕಣ್ ಬಿಟ್ಟು ನೋಡುತ್ತಿವೆ. ಮೋದಿಯವರು ಕೇವಲ ನಾಲ್ಕೇ ವರ್ಷಗಳಲ್ಲಿ ಮಾಡಿದ ಸಾಧನೆ ನೋಡಿ ವಿಶ್ವ ನಾಯಕರೆಲ್ಲ “ಮೋದಿಗೆ ಜೈ” ಎನ್ನುತ್ತಿದ್ದಾರೆ.  ವಿಶ್ವ ಮಂಚದಲ್ಲಿ ಭಾರತದ ವರ್ಚಸ್ಸು ದಿನೇ ದಿನೇ ಹೆಚ್ಚುವುದನ್ನು ನೋಡಿ ಶತ್ರು ರಾಷ್ಟ್ರಗಳಾದ ಪಾಕಿಸ್ತಾನ ಮತ್ತು ಚೀನ ಕೈ ಕೈ ಹಿಸುಕಿಕೊಳ್ಳುತ್ತಿವೆ. ಇವೆಲ್ಲವೂ ಆದದ್ದು ಯಾರಿಂದ? ಒಬ್ಬ ವ್ಯಕ್ತಿ ನರೇಂದ್ರ ಮೋದಿಯಿಂದ!

ಯಾವುದೇ ಒಂದು ತಂಡ ಅತ್ಯುತ್ತಮ ಪ್ರದರ್ಶನ ನೀಡಬೇಕಾದರೆ ಅಲ್ಲಿ ಆ ತಂಡದ ಸಾಮೂಹಿಕ ಪ್ರದರ್ಶನ ಅತ್ಯುಚ್ಚವಾಗಿರಬೇಕಾಗುತ್ತದೆ. ತಂಡ ಗೆಲ್ಲಬೇಕಾದರೆ ತಂಡದ ನಾಯಕನ ದೂರದೃಷ್ಟಿ ಎಷ್ಟು ಮುಖ್ಯವೋ ಅಷ್ಟೇ ಮುಖ್ಯ ಪ್ರತಿ ಆಟಗಾರನ ವೈಯಕ್ತಿಕ ಪ್ರದರ್ಶನ. ಭಾರತದ ಮಟ್ಟಿಗೆ ಇದೀಗ ನಿಜವಾಗುತ್ತಿದೆ. ಭಾರತದ ಜಿಡಿಪಿ ನಾಗಾಲೋಟದಿಂದ ಓಡಿ ವಿಶ್ವದ ಆರ್ಥಿಕ ತಜ್ಞರೆಲ್ಲ ತಲೆಕೆರೆದುಕೊಳ್ಳುವಂತಾಗಿದೆ. ಇದಕ್ಕೆ ಕಾರಣ ಭಾರತದಲ್ಲಿ ಈಗ 20 “ಭಗವಾ ರಾಜ್ಯ”ಗಳಿವೆ. ಅಭಿವೃದ್ದಿಯನ್ನೇ ಮಂತ್ರವಾಗಿಸಿಕೊಂಡ ಈ ಭಗವಾ ರಾಜ್ಯಗಳು ತಮ್ಮ ರಾಜ್ಯಕ್ಕೆ ಉದ್ಯಮಗಳನ್ನು ಕರೆತರುವುದರಿಂದ ಹಿಡಿದು ಕೃಷಿ ಕೇತ್ರದವರೆಗೆ ವಿಶೇಷ ಕಾಳಜಿ ವಹಿಸುತ್ತಿವೆ. ಕೇಂದ್ರದ ಎಲ್ಲಾ ಯೋಜನೆಗಳನ್ನು ನಿಗದಿತ ಗಡುವಿನೊಳಗೆ ಪೂರ್ಣ ಗೊಳಿಸಲು ಟೊಂಕ ಕಟ್ಟಿ ನಿಂತಿವೆ.

ಕೇಂದ್ರ ಮತ್ತು ರಾಜ್ಯಗಳಲ್ಲಿ ಒಂದೇ ಸರಕಾರವಿರುವುದರಿಂದ ಅಭಿವೃದ್ದಿ ಕೆಲಸಗಳಿಗೆ ವೇಗ ದೊರಕುತ್ತದೆ. ಕೇಂದ್ರ ರಾಜ್ಯಕ್ಕೆ ಕೊಡುವ ಅನುದಾನಗಳನ್ನು ಸರಿಯಾಗಿ ವ್ಯಯಿಸಲಾಗುತ್ತದೆ. ಪೈಸೆ ಪೈಸೆಗೂ ಲೆಕ್ಕ ಕೇಳುವ ಮೋದಿಯಂತಹ ದೊಡ್ಡಣ್ಣನಿರುವಾಗ ರಾಜ್ಯಗಳು ಬೇಕಾ ಬಿಟ್ಟಿ ಖರ್ಚು ಮಾಡುವಂತಿಲ್ಲ. ಖರ್ಚಿನ ಬಾಬತ್ತನ್ನು ನಿಯಮಿತವಾಗಿ ತೋರಿಸಬೇಕಾಗುವುದರಿಂದ ಭ್ರಷ್ಟಾಚಾರ ಮಾಡುವಂತೆಯೇ ಇಲ್ಲ. ಇನ್ನು ಭಾಜಪಾ ಆಡಳಿತ ರಾಜ್ಯಗಳ ಮುಖ್ಯಮಂತ್ರಿಗಳೂ ಕೂಡಾ ತಮ್ಮ ರಾಜ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸುತ್ತಿದ್ದಾರೆ.

ಎಕೊನೊಮಿಕ್ ಟೈಮ್ಸ್ 2012 ರಲ್ಲಿ ನಡೆಸಿದ ಸರ್ವೆಯಲ್ಲಿ ಭಾಜಪಾ ಮತ್ತು ಕಾಂಗ್ರೆಸ್ ಶಾಸಿತ ರಾಜ್ಯಗಳ ಹೋಲಿಕೆ ನಡೆಸಿದಾಗ ಕಂಡು ಬಂದ ವಿಚಾರಗಳೆಂದರೆ:

ಜಿಡಿಪಿ ದರ : ಭಾರತ:  ಒಟ್ಟು 8% ಆದರೆ ಕಾಂಗ್ರೆಸ್ ರಾಜ್ಯಗಳದ್ದು 8.4% ಮತ್ತು ಭಾಜಪ ರಾಜ್ಯಗಳದ್ದು 8.5%

ಕೃಷಿ: ಭಾರತ: 2.5% ಕಾಂಗ್ರೆಸ್: 3.5% ಭಾಜಪ: 5.0%

ಫ್ಯಾಕ್ಟರಿ: ಭಾರತ: NA ಕಾಂಗ್ರೆಸ್: 7.0%  ಭಾಜಪ: 7.3%

ಅಪರಾಧ ಮತ್ತು ದಂಗೆ: ಭಾರತ: 3.9% ಕಾಂಗ್ರೆಸ್: 3.8% ಭಾಜಪ: 1.8%

ವಿದ್ಯುತ್, ಶಿಕ್ಷಣ, ಆರೋಗ್ಯ, ಸ್ವಚ್ಛತೆ ಎಲ್ಲಾ ವಿಷಯಗಳಲ್ಲೂ ಭಾಜಪ ಶಾಸಿತ ರಾಜ್ಯಗಳು ಟಾಪ್ ಮೂರು ಸ್ಥಾನಗಳಲ್ಲಿ ಇತ್ತು. ಇದು ನಾಲ್ಕು ವರ್ಷಗಳ ಹಿಂದಿನ ಮಾತು ಈಗ 20 ರಾಜ್ಯಗಳಲ್ಲಿ ಭಾಜಪ ಸರಕಾರ ಇರುವುದರಿಂದ ಅಭಿವೃದ್ದಿ ದರ ಇನ್ನೂ ಹೆಚ್ಚಾಗಿದೆ. ಇನ್ನು ಹಿಂದುತ್ವದ ವಿಷಯಕ್ಕೆ ಬಂದರೆ ಅಲ್ಲಿಯೂ ಈ ಎಲ್ಲಾ ರಾಜ್ಯಗಳು ನಂ1! ಮಧ್ಯಪ್ರದೇಶ, ಹರಿಯಾಣ ಮತ್ತು ಉತ್ತರ ಪ್ರದೇಶ ಸರಕಾರಗಳು ರಾಜ್ಯದ ಜೈಲುಗಳಲ್ಲಿ ಗೋ ಶಾಲೆ ಸ್ಥಾಪಿಸಲು ಅನುಮತಿ ನೀಡಿವೆ. ಸನಾತನ ಪರಂಪರೆಗೆ ಹಿಂದಿರುಗುತ್ತಿರುವ ಈ ರಾಜ್ಯಗಳಲ್ಲಿ “ಗುರುಕುಲ ಪದ್ದತಿ” ಯ ವಿಧ್ಯಾಭ್ಯಾಸ ನೀಡುಲು ಗುರುಕುಲಗಳನ್ನು ತೆರೆಯಲಾಗುತ್ತಿದೆ. ಪಾಕಿಸ್ತಾನದಿಂದ ನಿರ್ವಾಸಿತರಾಗಿ ಬಂದ ೫೧ ಹಿಂದೂ ಪರಿವಾರಗಳಿಗೆ ಮೊತ್ತ ಮೊದಲ ಬಾರಿಗೆ ಭಾರತದ ಪೌರತ್ವ ಕೊಟ್ಟದ್ದು ಛತ್ತೀಸ್ ಗಡದ ರಮಣ್ ಸಿಂಗ್ ಸರಕಾರ. ಹೆಣ್ಣು ಮಕ್ಕಳ ವಿದ್ಯಾಭ್ಯಾಸ ಮತ್ತು ಜಲ ಸಂಪನ್ಮೂಲಕ್ಕೆ ಒತ್ತು ಕೊಡುತ್ತಿರುವುದು ರಾಜಸ್ಥಾನದ ವಸುಂಧರಾ ಸರಕಾರ. ದೇಶದ ಅತಿ ದೊಡ್ಡ ಸೌರ ಘಟಕವಿರುವುದು ರಾಜಸ್ಥಾನದಲ್ಲಿ. ಇನ್ನು ಮೇಕ್ ಇನ್  ಇಂಡಿಯಾ ಸೆಂಟರ್, ಸ್ಕಿಲ್ ಡೆವೆಲಪ್ ಮೆಂಟ್ ಮುಂತಾದ ಯೋಜನೆಗಳಿಗೆ ವೇಗ ಕೊಡುತ್ತಿರುವುದು ಮಹಾರಾಷ್ಟ್ರದ ಫಡ್ನವೀಸ್ ಸರಕಾರ.

ಎಪ್ಪತ್ತು ವರ್ಷಗಳಿಂದ ಮಲತಾಯಿ ಧೋರಣೆಯಿಂದ ಹೈರಾಣಾಗಿದ್ದ ಪೂರ್ವೋತ್ತರ ರಾಜ್ಯಗಳು ಅಭಿವೃದ್ದಿಯ ಮುಖ ನೋಡುತ್ತಿರುವುದು ಭಾಜಪ ಸರಕಾರ ಬಂದ ಮೇಲೆಯೆ. ಅಸ್ಸಾಂ ಚಳುವಳಿಯಲ್ಲಿ ಮಡಿದವರಿಗೆ “ಶೃದ್ಧಾಂಜಲಿ ಅನುಷ್ಟಾನ” ನಡೆಸಿ ಅವರ ಪರಿವಾರದವರನ್ನು ಸನ್ಮಾನ ಮಾಡಿದ್ದು, ಕಾನೂನು ಬಾಹಿರವಾಗಿ ಅಸ್ಸಾಂನಲ್ಲಿ ನೆಲೆಸಿರುವ ರೋಹಿಂಗ್ಯಾಗಳನ್ನು ಹೊರದಬ್ಬಲು ಕಾನೂನು ರೂಪಿಸಿದ್ದು ಅಸ್ಸಾಂ ಸರಕಾರ. ಶಾಲಾ ಪಠ್ಯ ಪುಸ್ತಕಗಳಿಂದ ಕಮ್ಯುನಿಷ್ಟರ ಇತಿಹಾಸವನ್ನು ಕಿತ್ತೊಗೆಯುವ ನಿರ್ಧಾರ ತೆಗೆದು ಕೊಂಡಿದ್ದು ತ್ರಿಪುರಾ ಸರಕಾರ. ಕಳೆದ ನಾಲ್ಕು ವರ್ಷಗಳಲ್ಲಿ ಪೂರ್ವೋತ್ತರ ರಾಜ್ಯಗಳಲ್ಲಿ ರಸ್ತೆ, ವಿಮಾನ ನಿಲ್ದಾಣ ಮತ್ತು ರೈಲು ಮಾರ್ಗಗಳಿಗೆ ಅಧಿಕ ಪ್ರಾಮುಖ್ಯತೆ ಕೊಟ್ಟು ಭಾರತದ ಮುಖ್ಯ ಧಾರೆಗೆ ಏಳು ಸಹೋದರಿಯರನ್ನು ಸೇರಿಸುವ ಕಾರ್ಯ ಭರದಿಂದ ಸಾಗಿದ್ದರೆ ಅದಕ್ಕೆ ಕಾರಣ ಮೋದಿ ಸರಕಾರ.

ಟ್ರಾನ್ಸ್ಪೆರೆನ್ಸಿ ಇಂಟರ್ನ್ಯಾಷಲ್ ಸಂಸ್ಥೆಯ ಪ್ರಕಾರ ಕಳೆದ ನಾಲ್ಕು ವರ್ಷಗಳಲ್ಲಿ ಭಾರತದಲ್ಲಿ ಭ್ರಷ್ಟಾಚಾರ ಗಣನೀಯವಾಗಿ ಕಡಿಮೆಯಾಗಿದೆ. 2011 ರಲ್ಲಿ  ಸಾರ್ವಜನಿಕ  ವಲಯದ ಭ್ರಷ್ಟಾಚಾರದ ಪಟ್ಟಿಯ 180 ದೇಶಗಳಲ್ಲಿ ಭಾರತ 95 ನೇ ಸ್ಥಾನದಲ್ಲಿದ್ದರೆ 2017ರ ಹೊತ್ತಿಗೆ ಭ್ರಷ್ಟಾಚಾರ ಗಣನೀಯವಾಗಿ ಕಡಿಮೆಯಾಗಿ ಭಾರತದ  ಶ್ರೇಯಾಂಕವು 81 ನೇ ಸ್ಥಾನಕ್ಕೆ ಏರಿದೆ! ಭ್ರಷ್ಟಾಚಾರ ಕಡಿಮೆ ಆಗುತ್ತಾ ಹೋದಂತೆ ಅಭಿವೃದ್ದಿಯಲ್ಲಿ ಏರಿಕೆ ಆಗುತ್ತಾ ಹೋಗುತ್ತದೆ. ಮೋದಿಯವರ ಕನಸಿನ ಯೋಜನೆ ಡಿಜಿಟಲ್ ಇಂಡಿಯಾದಿಂದಾಗಿ ಸರಕಾರದ ಎಲ್ಲಾ ಕೆಲಸಗಳು ಪಾರದರ್ಶಕವಾಗಿ ಆನ್ ಲೈನ್ ನಲ್ಲಿ ನಡೆಯುತ್ತಿರುವುದರಿಂದ ಮಧ್ಯವರ್ತಿಗಳು ಕೋಟಿ ಕೋಟಿ ನುಂಗುವುದು ತಪ್ಪಿದೆ.

ಇನ್ನು ಕರ್ನಾಟಕಕ್ಕೆ ಬಂದರೆ, ಕಾಂಗ್ರೆಸಿನ ಆಡಳಿತದ ಕಳೆದ ಐದು ವರ್ಷಗಳಲ್ಲಿ ರಾಜ್ಯದ ಅಭಿವೃದ್ದಿ ಯಾವ ಮಟ್ಟದಲ್ಲಾಗಿದೆ ಎಂದು ಬಿಡಿಸಿ ಹೇಳಬೇಕಾಗಿಲ್ಲ. ಭಾಜಪದ ಕರ್ನಾಟಕದ ನಾಯಕತ್ವದಲ್ಲಿ ಹುಳುಕು ಕಾಣುವವರು ಮರೆತ ಒಂದು ವಿಚಾರವೆಂದರೆ ಹಿಂದಿನಂತೆ ಈ ಬಾರಿ ಬೇಕಾ ಬಿಟ್ಟಿ ನಿರ್ಣಯಗಳನ್ನು ತೆಗೆದುಕೊಳ್ಳುವಂತಿಲ್ಲ. ಕರ್ನಾಟಕ ಭಾಜಪ ನೇರವಾಗಿ ಕೇಂದ್ರ ಸರಕಾರದ ಸುಪರ್ದಿಯಲ್ಲೆ ಇರುವುದರಿಂದ ಅಭಿವೃದ್ದಿ ಶರ ವೇಗದಲ್ಲಿ ಸಾಗುವುದರಲ್ಲಿ ಸಂಶಯವೆ ಇಲ್ಲ. ವಂಶವಾದ, ಕೋಮುವಾದ, ಜಾತಿವಾದ, ಮಜಾವಾದ ಎಲ್ಲಾದಕ್ಕೂ ತಿಲಾಂಜಲಿ ಇಟ್ಟು ಕೇವಲ ವಿಕಾಸವಾದದ ಮೇಲೆ ಭರವಸೆ ಇಟ್ಟು ನೋಡಿ. ನಿಮ್ಮ ನಿರೀಕ್ಷೆ ಸುಳ್ಳಾಗಲು ಮೋದಿ ಖಂಡಿತಾ ಬಿಡುವುದಿಲ್ಲ. ನಂಬಿಕೆ ಇಡಿ. ಈ ಸರಿ ನಿಮ್ಮ ನಿರ್ಧಾರ ತಪ್ಪಾದರೆ ಮುಂದಿನ ಐದು ವರ್ಷ ನಿಮಗೆ “ನರಕ ದರ್ಶನ ಭಾಗ್ಯ” ನೆನಪಿಡಿ.

-ಶಾರ್ವರಿ

 

Editor Postcard Kannada:
Related Post