X

ರಾಕಿಂಗ್ ಸ್ಟಾರ್ ಯಶ್, ಕಿಚ್ಚ ಸುದೀಪ್ ಮಧ್ಯೆ ಬಿಗ್ ಪೊಲಿಟಿಕಲ್ ಫೈಟ್!! ರಾಕ್ ಆಗುತ್ತಾರಾ ರಾಮುಲು..?

ರಾಜ್ಯದಲ್ಲಿ ಚುನಾವಣಾ ಕಾರ್ಯ ರಂಗೇರುತ್ತಿದ್ದು ಈಗಾಗಲೇ 22 ರಾಜ್ಯಗಳಲ್ಲಿ ಗೆದ್ದಿರುವ ಬಿಜೆಪಿ ಕರ್ನಾಟಕದಲ್ಲೂ ತಾನೇ ಗೆಲುವಿನ ಗದ್ದುಗೆಯನ್ನು ಏರಬೇಕು ಎಂದು ಪಣತೊಟ್ಟು ನಿಂತಿದೆ!! ಈಗಾಗಲೇ ಬಾದಾಮಿ ಕ್ಷೇತ್ರದಲ್ಲಿ ಶ್ರೀರಾಮುಲು ಸ್ಪರ್ಧಿಸುತ್ತಿದ್ದು ಕಾಂಗ್ರೆಸ್‍ನಿಂದ ಸಿಎಂ ಸಿದ್ದರಾಮಯ್ಯನವರು ಕಣಕ್ಕಿಳಿದ್ದು ಇದೀಗ ಇಡೀ ರಾಜ್ಯದ ಕಣ್ಣು ಬಾದಾಮಿ ಹಾಗೂ ಮೊಳಕಾಲ್ಮೂರು ವಿಧಾನಸಭಾ ಕ್ಷೇತ್ರದ ಮೇಲಿದೆ!! ಇದಾಗಲೇ ಸಿಎಂ ಸಿದ್ದರಾಮಯ್ಯನವರಿಗೆ ಶ್ರೀರಾಮುಲು ಬಾದಾಮಿಯಲ್ಲಿ ಸ್ಪರ್ಧಿಸುತ್ತಿರುವ ವಿಚಾರ ಕೇಳುತ್ತಿದ್ದಂತೆಯೇ ನಡುಕ ಶುರುವಾಗಿದೆ!! ಅದಲ್ಲದೆ ಚುನಾವಣಾ ಪ್ರಚಾರಕ್ಕೆ ಹೋದಲ್ಲೆಲ್ಲಾ ಕಾಂಗ್ರೆಸ್ ತೀವ್ರ ಮುಖಭಂಗಕ್ಕೀಡಾಗುತ್ತಿದೆ!! ಮೇ 12ರಂದು ನಡೆಯಲಿರುವ ರಾಜ್ಯ ವಿಧಾನಸಭೆ ಚುನಾವಣೆ ಈಗಾಗಲೇ ಹಲವು ವಿಚಾರಗಳಿಂದ ಗಮನ ಸೆಳೆದಿದ್ದು, ಬಾದಾಮಿ ಕ್ಷೇತ್ರವು ಹೈವೋಲ್ಟೇಜ್ ಕ್ಷೇತ್ರವಾಗಿ ಪರಿಣಮಿಸಿದೆ. ಸ್ಟಾರ್‍ಗಳು ಅಖಾಡಕ್ಕಿಳಿದು ವಿವಿಧ ಅಭ್ಯರ್ಥಿಗಳ ಪರ ಪ್ರಚಾರ ನಡೆಸುತ್ತಿದ್ದಾರೆ!!

ಶ್ರೀರಾಮುಲು ಪರ  ಬಾದಮಿಯಲ್ಲೂ ಪ್ರಚಾರಕ್ಕಿಳಿದ ನಟ ಯಶ್!!

ಸದ್ಯಕ್ಕೆ ಎಲ್ಲೆಲ್ಲೂ ಚರ್ಚೆಗೆ ಗ್ರಾಸವಾಗಿರುವ ಕರ್ನಾಟಕ ರಾಜ್ಯ ವಿಧಾನಸಭಾ ಚುನಾವಣೆಗೆ ಇನ್ನೇನು ಕೆಲವೇ ದಿನಗಳಷ್ಟೇ ಬಾಕಿ ಇದ್ದು ಉಳಿದಿದ್ದು ರಾಜಕೀಯ ವಲಯದಲ್ಲಿ ಬಿರುಸಿನ ವಾತವರಣ ಸೃಷ್ಟಿಯಾಗಿದೆ!! ಆದರೆ ಈ ಬಾರಿ ಚಿತ್ರರಂಗದಲ್ಲಿಯೂ ಚುನಾವಣಾ ಪ್ರಭಾವ ಕೂಡಾ ಬಲು ಜೋರಾಗಿದ್ದು ಈ ಬಾರಿ ಮೊಳಕಾಲ್ಮೂರು ಹಾಗೂ ಬಾದಾಮಿ ಕ್ಷೇತ್ರದಲ್ಲಿ ಶ್ರೀರಾಮುಲು ಪರ ಚಿತ್ರನಟ ಯಶ್ ಅಖಾಡಕ್ಕೆ ಧುಮುಕ್ಕಿದ್ದಾರೆ!! ಮುಖ್ಯಮಂತ್ರಿ ಸಿದ್ದರಾಮಯ್ಯನವರ ವಿರುದ್ಧ ಕಣಕ್ಕಿಳಿದಿರುವ ಬಳ್ಳಾರಿ ದೊರೆ ಶ್ರೀರಾಮುಲು , ಹೇಗಾದರೂ ಮಾಡಿ ಸಿದ್ದರಾಮಯ್ಯನವರನ್ನು ಸೋಲಿಸಲೇಬೇಕು ಎಂಬ ಹಠಕ್ಕೆ ಬಿದ್ದಿದ್ದಾರೆ. ಆದ್ದರಿಂದಲೇ ಅದಕ್ಕೆ ಬೇಕಾದ ಎಲ್ಲಾ ರೀತಿಯ ತಯಾರಿ ನಡೆಸಿದ್ದು, ಇದೀಗ ಸ್ಟಾರ್ ಕ್ಯಾಂಪೇನರ್ ಆಗಿ ರಾಕಿಂಗ್ ಸ್ಟಾರ್ ಯಶ್ ಅವರನ್ನೇ ತಮ್ಮ ಜೊತೆ ಸೇರಿಸಿಕೊಂಡಿದ್ದಾರೆ. ಯಶ್ ಕನ್ನಡ ಚಿತ್ರರಂಗದ ಬಹು ಬೇಡಿಕೆಯ ನಟ, ಅಷ್ಟೇ ಅಲ್ಲದೆ ರಾಜ್ಯದಲ್ಲಿ ಅಪಾರ ಅಭಿಮಾನಿಗಳನ್ನು ಹೊಂದಿರುವ ಕಾರಣದಿಂದಾಗಿ ಈ ಹಿಂದೆಯೇ ಅನೇಕ ರಾಜಕೀಯ ನಾಯಕರುಗಳು ಯಶ್ ಅವರನ್ನು ತಮಗೆ ಬೆಂಬಲ ಸೂಚಿಸುವಂತೆ ಕೇಳಿಕೊಂಡಿದ್ದರು. ಅದರಂತೆ ಇಂದು ಮೊಳಕಾಲ್ಮೂರಿನಲ್ಲಿ ಯಶ್ ಪ್ರಚಾರ ಮಾಡಿದ್ದು ಬಾದಾಮಿಯಲ್ಲಿ ಶ್ರೀಪಾಮುಲು ಪರ ಮೇ 7ರಂದು ಪ್ರಚಾರ ಮಾಡಲಿದ್ದಾರೆ!!

ಸುದೀಪ್‍ಗೆ ಭಾರೀ ಮುಖಭಂಗ!!

ಈಗಾಗಲೇ ಬಾದಾಮಿ ಕ್ಷೇತ್ರದಲ್ಲಿ ಸ್ಪರ್ದಿಸಲಿರುವ ಶ್ರೀರಾಮುಲು ವಿರುದ್ಧ ಸ್ಪರ್ಧಿಸಲಿರುವ ಸಿದ್ದರಾಮಯ್ಯ ಪ್ರಚಾರಕ್ಕೆ ಸುದೀಪ್ ಹೆಸರು ಕೇಳುತ್ತಲೇ ಬಾದಾಮಿ ಕ್ಷೇತ್ರದ ಜನತೆ ಗುಡುಗಿದ್ದು ಸಾಮಾಜಿಕ ಜಾಲತಾಣದಲ್ಲಿ ಸುದೀಪ್‍ಗೆ ಭಾರೀ ಮುಖಭಂಗವಾಗಿದೆ ಎನ್ನಲಾಗಿದೆ!! ಮೇ 7ರಂದು ಬಾದಾಮಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪರ ನಟ ಸುದೀಪ್ ಪ್ರಚಾರ ನಡೆಸುವ ಹಿನ್ನೆಲೆಯಲ್ಲಿ `ಗೋ ಬ್ಯಾಕ್ ಸುದೀಪ್’ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಆಗ್ರಹ ಕೇಳಿಬಂದಿದೆ. ಇನ್ನು ಬಿಜೆಪಿ ಅಭ್ಯರ್ಥಿ ಶ್ರೀರಾಮುಲು ಪರ ರಾಕಿಂಗ್ ಸ್ಟಾರ್ ಯಶ್ ಪ್ರಚಾರ ಕಾರ್ಯ ಕೈಗೊಳ್ಳಲಿದ್ದು, ಮೇ 7ರಂದು ಬಾದಾಮಿಯಲ್ಲಿ ಇಬ್ಬರೂ ನಟರೂ ರೋಡ್ ಶೋ ನಡೆಸಲಿದ್ದಾರೆ!! ಆದರೆ ಈಗಾಗಲೇ ಸಿಎಂ ಪರ ಪ್ರಚಾರ ಮಾಡಲು ಸುದೀಪ್ ತಯಾರಾಗಿದ್ದರೂ ಅಲ್ಲಿನ ಜನತೆ ಮಾತ್ರ ಸುದೀಪ್ ವಿರುದ್ಧ ಕಿಡಿಕಾರಿದ್ದಾರೆ!!

ಸಿಎಂ ಪರ ಪ್ರಚಾರಕ್ಕೆ ಬಿತ್ತು ಬ್ರೇಕ್!! “ಗೋ ಬ್ಯಾಕ್ ಸುದೀಪ್” ಎಂದ ಜನತೆ!!

ಸಿಎಂ ಸಿದ್ದರಾಮಯ್ಯರವರ ಪರ ಸುದೀಪ್ ಪ್ರಚಾರ ಮಾಡುತ್ತಾರೆ ಎಂಬ ಸುದ್ದಿ ತಿಳಿಯುತ್ತಿದ್ದಂತೆಯೇ ಈಗಾಗಲೇ ಸಾಮಾಜಿಕ ಜಾಲತಾಣದಲ್ಲಿ ಗೋ ಬ್ಯಾಕ್ ಸುದೀಪ್ ಎಂಬ ಆಗ್ರಹದೊಂದಿಗೆ ಬಾದಾಮಿ ಕ್ಷೇತ್ರದ ಜನತೆ ಈಗಾಗಲೇ ಆಕ್ರೋಶ ವ್ಯಕ್ತಪಡಿಸಿದ್ದಾರೆ!! ಸಿಎಂ ಪರ ಸುದೀಪ್ ಪ್ರಚಾರಕ್ಕೆ ಬಂದರೆ ಹುಷಾರ್ ಎಂದು ಕ್ರಾಂತಿವೀರ ಲಕ್ಷ್ಮಣ ಸಂಘಟನೆ ಕಿಡಿಕಾರಿದ್ದಾರೆ!! ಹೀಗಾಗಿ ಈ ಬಾರಿ ಬಾದಾಮಿಯಲ್ಲೂ ಸಿಎಂ ಸೋಲು ಖಚಿತ ಎಂಬ ಮಾತು ಅಲ್ಲಲ್ಲಿ ಕೇಳಿ ಬರುತ್ತಿದೆ!!

ಈ ಮೊದಲು ಕೂಡಾ ವಾಲ್ಮೀಕಿ ಸಮುದಾಯದ ಮುಖಂಡರ ಓಲೈಕೆಗಾಗಿ ಸಿಎಂ ಪರ ಸತೀಶ್ ಜಾರಕಿಹೊಳಿ ಅವರನ್ನು ನಿಯೋಜಿಸಿದ್ದರು. ಆದರೆ, ಮತಯಾಚನೆ ವೇಳೆಯೇ ಸತೀಶ್ ಜಾರಕಿಹೊಳೆಗೆ ವಾಲ್ಮಿಕಿ ಸಮುದಾಯ ಛೀಮಾರಿ ಹಾಕಿ ಕಳುಹಿಸಿದ್ದರು!! ಬಾದಾಮಿಯಲ್ಲಿ ವಾಲ್ಮೀಕಿ ಸಮುದಾಯದ ಮತಗಳು ಹೆಚ್ಚಿನ ಸಂಖ್ಯೆಯಲ್ಲಿದ್ದು, ಆ ಮತಗಳನ್ನೂ ಪಡೆಯುವ ಮೂಲಕ ಜಯ ಸಾಧಿಸಲು ಕಾಂಗ್ರೆಸ್ ಮತ್ತು ಸಿದ್ದರಾಮಯ್ಯ ಪ್ರಯತ್ನ ನಡೆಸಿದ್ದರು!! ಆದರೆ, ವಾಲ್ಮೀಕಿ ಸಮುದಾಯದ ನಾಯಕ ಶ್ರೀರಾಮುಲು ಅವರನ್ನೇ ಬಿಜೆಪಿ ಕಣಕ್ಕಿಳಿಸಿರುವುದರಿಂದ ಕಾಂಗ್ರೆಸ್ ಲೆಕ್ಕಾಚಾರ ತಲೆಕೆಳಗಾಗುವಂತೆ ಮಾಡಿದೆ. ಹೀಗಾಗಿಯೇ ಸಮುದಾಯವನ್ನು ತನ್ನತ್ತ ಸೆಳೆದುಕೊಳ್ಳಲು ಅದೇ ಸಮುದಾಯದ ಕಾಂಗ್ರೆಸ್ ನಾಯಕ ಸತೀಶ್ ಜಾರಕಿಹೊಳಿ ಅವರನ್ನು ಸಿಎಂ ಬಾದಾಮಿಗೆ ನಿಯೋಜಿಸಿದ್ದರು. ಆದರೆ ವಾಲ್ಮೀಕಿ ಸಮುದಾಯದ ಸ್ಥಳೀಯ ನಾಯಕರು ಸತೀಶ್ ಜಾರಕಿಹೊಳಿ ಅವರ ಮಾತಿಗೆ ಮನ್ನಣೆ ನೀಡದೆ ನಾವು ಮಾತ್ರ ಸಿದ್ದರಾಮಯ್ಯನವರನ್ನು ಯಾವ ಕಾರಣಕ್ಕೂ ಗೆಲ್ಲಿಸಲ್ಲ.. ಶ್ರೀರಾಮುಲುರವರನ್ನು ಮಾತ್ರ ಗೆಲ್ಲಿಸೋದು ಎಂದು ಛೀಮಾರಿ ಹಾಕಿ ಕಳುಹಿಸಿದ್ದರು!!

ಸಿಎಂ ಪರ ಸ್ಫರ್ದಿಸಲ್ಲ ಎಂದ ಸುದೀಪ್

ನಟ ಕಿಚ್ಚ ಸುದೀಪ್ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮೇಲೆ ಅಭಿಮಾನದಿಂದ ಚಾಮುಂಡೇಶ್ವರಿಯಲ್ಲಿ ಪ್ರಚಾರ ನಡೆಸಲಿದ್ದಾರೆ ಆದರೆ ಬಾದಾಮಿಯಲ್ಲಿ ಪ್ರಚಾರ ನಡೆಸುವುದಿಲ್ಲ ಎಂದಿದ್ದಾರೆ. ಸಿಎಂ ಸಿದ್ದರಾಮಯ್ಯ ಅವರು ನನಗೆ ಬಹಳ ಆತ್ಮೀಯರು, ಅವರು ಸಿಎಂ ಆಗುವ ಮುನ್ನ ನಮ್ಮೊಂದಿಗೆ ಹೇಗಿದ್ದರೋ ಈಗಲೂ ಹಾಗೇ ಇದ್ದಾರೆ. ಅವರ ಪರ ಚಾಮುಂಡೇಶ್ವರಿಯಲ್ಲಿ ಪ್ರಚಾರ ಮಾಡುತ್ತೇನೆ ಎಂದಿದ್ದಾರೆ. ನಾನು ನಟ, ನಟನಾಗಿಯೇ ಇರುತ್ತೇನೆ. ಯಾವುದೇ ಪಕ್ಷದ ಪರ ಇಲ್ಲ. ಕೇವಲ ಅಭಿಮಾನದಿಂದ ಪ್ರಚಾರ ಮಾಡುತ್ತಿದ್ದೇನೆ ಎಂದು ಸುದೀಪ್ ಹೇಳಿದ್ದಾರೆ. ತನ್ನದೇ ವಾಲ್ಮೀಕಿ ಸಮುದಾಯದ ನಾಯಕರಾದ ಶ್ರೀರಾಮುಲು ಅವರು ಬಾದಾಮಿಯಲ್ಲಿ ಸ್ಪರ್ಧಿಸುತ್ತಿರುವ ಕಾರಣ ಶ್ರೀರಾಮುಲು ಅವರು ಅಲ್ಲಿ ಸಿಎಂ ಪರ ಪ್ರಚಾರ ಮಾಡುವುದಿಲ್ಲ ಎಂದು ತಿಳಿದು ಬಂದಿದೆ. ಸುರಪುರ ಬಿಜೆಪಿ ಶಾಸಕ ರಾಜು ಗೌಡ ಅವರ ಪರವೂ ಸುದೀಪ್ ಪ್ರಚಾರ ನಡೆಸಲಿದ್ದಾರೆ.

ಪ್ರತೀ ಬಾರಿಯೂ ಸಿಎಂ ಸಿದ್ದರಾಮಯ್ಯನವರಿಗೆ ಯಾರೆಲ್ಲ ಇವರ ಪರ ಪ್ರಚಾರಕ್ಕೆ ಹೋಗುತ್ತಾರೋ ಅಲ್ಲೆಲ್ಲಾ ಅವರಿಗೆ ಜನತೆ ಛಿಮಾರಿ ಹಾಕಿಯೇ ಕಳುಹಿಸುತ್ತಾರೆ !! ಒಟ್ಟಿನಲ್ಲಿ ಸಿಎಂ ಸಿದ್ದರಾಮಯ್ಯನವರಿಗೆ ಬಾದಾಮಿಯಲ್ಲಿ ಶ್ರೀರಾಮುಲುರವರ ಮಹತ್ವ ಎಷ್ಟಿದೆ ಎಂಬುವುದು ಈಗಾಗಲೇ ಅರ್ಥವಾಗಿರಬಹುದು!! ಅದಲ್ಲದೆ ಸಿದ್ದರಾಮಯ್ಯನವರಿಗೆ ಸೋಲು ಖಚಿತ ಎಂಬುವುದು ಈಗಾಗಲೇ ತಿಳಿದಿರಬಹುದು!!

source: vijayavani

  • ಪವಿತ್ರ
Editor Postcard Kannada:
Related Post