X

ಗೃಹ ಇಲಾಖೆಗೆ ಶಾಕ್ ನೀಡಿದ ಬಿಎಸ್‍ವೈ..! ಕಾನೂನು ಸುವ್ಯವಸ್ಥೆಗೆ ಭರ್ಜರಿ ಸರ್ಜರಿ..! ಮೊದಲ ದಿನವೇ ಆಟ ಶುರು..! 

ಕಳೆದ ಐದು ವರ್ಷಗಳಿಂದ ರಾಜ್ಯದಲ್ಲಿ ರಾವಣನ ಆಡಳಿತವನ್ನು ನಡೆಸುತ್ತಿದ್ದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಇದೀಗ ಅಂತ್ಯವಾಗಿದೆ. ಅಹಂಕಾರ, ಹಿಂದೂ ಕಾರ್ಯಕರ್ತರ ಕೊಲೆ ಹಾಗೂ ದೇವಾಲಯಗಳ ಮೇಲೆ ದಾಳಿ ಸಹಿತ ಅನೇಕ ನಾಡ ವಿರೋಧಿ ಚಟುವಟಿಕೆಗಳನ್ನು ನಡೆಸುತ್ತಿದ್ದ ಮಾಜಿ ಕಾಂಗ್ರೆಸ್ ಸರ್ಕಾರ ಇದೀಗ ಪತನವಾಗಿದೆ. ನಾಡಿನ ಮತದಾರ ಪ್ರಭುಗಳು ಭಾರತೀಯ ಜನತಾ ಪಕ್ಷಕ್ಕೆ “ಯೂ ಆರ್ ದ ಬೆಸ್ಟ್” ಎಂದಿದ್ದಾರೆ.

ಕಾಂಗ್ರೆಸ್ ಸರ್ಕಾರದಿಂದ ಅತ್ಯಂತ ಹೆಚ್ಚಿನ ತೊಂದರೆಯನ್ನು ಅನುಭವಿಸಿದ್ದು ಹಿಂದೂ ಸಂಘಟನೆಯ ಕಾರ್ಯಕರ್ತರು. ಈ ಕಾರಣದಿಂದಲೇ ಈ ಬಾರಿ ಸಂಘಟನೆಗಳು ಯಾವುದೆಂದೂ ನೋಡದೆ ಭಾರತೀಯ ಜನತಾ ಪಕ್ಷದ ಪರವಾಗಿ ಬೀದಿಗಳಿದು ಪ್ರಚಾರಕ್ಕಿಳಿದಿದ್ದವು. ಹೀಗಾಗಿ ಭಾರತೀಯ ಜನತಾ ಪಕ್ಷ ಅಭೂತ ಪೂರ್ವ ಜಯವನ್ನು ಕಂಡಿತ್ತು.

ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ರಾಜ್ಯದಲ್ಲಿ ಗೃಹ ಇಲಾಖೆಯಿಂದ ಕಾನೂನು ಸುವ್ಯವಸ್ಥೆ ಹಾಳಾಗಿದ್ದು ಹೊಸ ವಿಚಾರವೇನಲ್ಲ. ಪೊಲೀಸರನ್ನು ದುರ್ಬಳಕೆ ಮಾಡಿಕೊಂಡು ಹಿಂದೂ ಸಂಘಟನೆಗಳನ್ನು ಹಾಗೂ ಬಲಪಂಥೀಯರನ್ನು ಹತ್ತಿಕ್ಕುವ ಕೆಲಸಗಳನ್ನು ಮಾಡಿತ್ತು ಕಾಂಗ್ರೆಸ್ ಸರ್ಕಾರ. ಆದರೆ ಇದೀಗ ಅದಕ್ಕೆ ಮುಕ್ತಿ ಸಿಕ್ಕಿದೆ. ಸರ್ಕಾರ ಭಾರತೀಯ ಜನತಾ ಪಕ್ಷದ ತೆಕ್ಕೆಗೆ ಬಿದ್ದಿದೆ.

ಮೊದಲ ದಿನವೇ ಗೃಹ ಇಲಾಖೆಗೆ ಶಾಕ್..!

ಭಾರತೀಯ ಜನತಾ ಪಕ್ಷ ಅಧಿಕಾರಕ್ಕೆ  ಬಂದು ಮುಖ್ಯಮಂತ್ರಿಯಾಗಿ ಬಿಎಸ್ ಯಡಿಯೂರಪ್ಪನವರು ಮುಖ್ಯಮಂತ್ರಿಯಾದೊಡನೆ ಗೃಹ ಇಲಾಖೆಗೆ ಶಾಕ್ ನೀಡಿದ್ದಾರೆ. ರಾಜ್ಯದಲ್ಲಿ ಕಾರ್ಯ ನಿರ್ವಹಿಸುತ್ತಿದ್ದ 4 ಮಂದಿ ಐಪಿಎಸ್ ಅಧಿಕಾರಿಗಳನ್ನು ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪನವರು ಎತ್ತಂಗಡಿ ಮಾಡಿದ್ದಾರೆ. ಈ ಮೂಲಕ ತನ್ನ ಅಧಿಕಾರದ ಮೊದಲ ದಿನವೇ ಕಾನೂನು ಸುವ್ಯವಸ್ಥೆಗೆ ಅತಿದೊಡ್ಡ ಸರ್ಜರಿ ಮಾಡಲು ಹೊರಟಿದ್ದಾರೆ.

ಗುಪ್ತದಳದ ಡಿಐಜಿ ಆಗಿದ್ದಂತಹಾ ಸಂದೀಪ್ ಪಾಟೀಲ್, ಬೆಂಗಳೂರು ಕೇಂದ್ರ ವಿಭಾಗದ ಡಿಸಿಪಿ ಡಿ.ದೇವರಾಜ್,ಬೆಂಗಳೂರು ಈಶಾನ್ಯ ವಿಭಾಗದ ಡಿಸಿಪಿ ಎಸ್.ಗಿರೀಶ್,ಗುಪ್ತದಳದ ಎಡಿಜಿಪಿ ಆಗಿದ್ದ ಅಮರ್ ಕುಮಾರ್ ಪಾಂಡೆಯವರನ್ನು ಎತ್ತಂಗಡಿ ಮಾಡಿದ್ದಾರೆ.

ಅಧಿಕಾರ ವಹಿಸಿಕೊಂಡು ಒಂದು ದಿನದ ಒಳಗಾಗಿ 4 ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡುವ ಮೂಲಕ ಇದು ಹೊಸ ಸರ್ಕಾರ, ಇನ್ನು ಮುಂದೆ ಕಾನೂನು ಸುವ್ಯಸ್ಥೆ ಉತ್ತಮ ಧಿಕ್ಸೂಚಿಯಂತೆಯೇ ಇರಬೇಕು ಎಂಬ ಸ್ಪಷ್ಟ ಸಂದೇಶವನ್ನು ಸಾರಿದ್ದಾರೆ.

ಈ ಮಧ್ಯೆ ಮತ್ತೊಂದು ಧೃಷ್ಟಿಯನ್ನು ಕಾಂಗ್ರೆಸ್ ನಾಯಕರು ತಮ್ಮ ಶಾಸಕರನ್ನು ಕೂಡಿಟ್ಟಿದ್ದ ಬಿಡದಿಯ ರಾಮ ನಗರದ ಬಳಿ ಇರುವ ಈಗಲ್ಟನ್ ರೆಸಾರ್ಟ್‍ಗೆ ನೀಡಿದ್ದ ಭದ್ರತೆಯನ್ನು ವಾಪಾಸು ಪಡೆದಿದ್ದಾರೆ. ತಮ್ಮ ಶಾಸಕರ ಭದ್ರತೆಗೆಂದು ನೀಡಿದ್ದ 80ಕ್ಕೂ ಅಧಿಕ ಪೊಲೀಸರನ್ನು ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ವಾಪಾಸು ಕರೆಸಿಕೊಂಡಿದ್ದಾರೆ. ಈ ಮೂಲಕ ಕಾಂಗ್ರೆಸ್ ಆಟ ಇನ್ನು ಮುಂದೆ ನಡೆಯೋದಿಲ್ಲ ಎಂಬುವುದನ್ನು ಸಾಭೀತುಪಡಿಸಿದ್ದಾರೆ.

ಒಟ್ಟಾರೆ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಒಂದೇ ಒಂದು ದಿನದ ಒಳಗಾಗಿ ರೈತರ ಸಾಲ ಮನ್ನಾ ಹಾಗೂ ಐಪಿಎಸ್ ಅಧಿಕಾರಿಗಳ ವರ್ಗಾವಣೆಯಂತಹ ಮಹತ್ವದ ನಿರ್ಧಾರವನ್ನು ಕೈಗೊಂಡಿರುವ ಬಿಎಸ್ ಯಡಿಯೂರಪ್ಪನವರು ಮುಂದಿನ ದಿನಗಳಲ್ಲಿ ಉತ್ತಮ ಸರ್ಕಾರದ ಆಶಾವಾದವನ್ನು ಜನತೆಯ ಮುಂದೆ ಇಟ್ಟಿದ್ದಾರೆ.

-ಸುನಿಲ್ ಪಣಪಿಲ

Editor Postcard Kannada:
Related Post