X

ಪರಮಾಣು ಸಿದ್ಧಾಂತವನ್ನು ಕಂಡುಹಿಡಿದದ್ದು ಅಮೇರಿಕಾವೂ ಅಲ್ಲ, ರಶ್ಯಾವೂ ಅಲ್ಲ! ಬದಲಾಗಿ, 2500 ವರ್ಷಗಳ ಹಿಂದಿದ್ದ ನಮ್ಮದೇ ದೇಶದ ಮಹರ್ಷಿ! ಯಾರು ಗೊತ್ತೇ?!

ನಮ್ಮ ಭಾರತದ ದುರಂತವೇನು ಗೊತ್ತಾ?! ನಮ್ಮ ಇತಿಹಾಸವನ್ನು ಮರೆತು ಹೋಗುವುದು! ವೈಭವೋಪೇತ ಭಾರತದ ಬಗ್ಗೆ ನಮಗಿವತ್ತು ಅರಿವಿಲ್ಲ! ನಮ್ಮದೇ ಪೂರ್ವಜರಾಗಿದ್ದ ಸಾಧು ಮಹರ್ಷಿಗಳ ಸಾಧನೆಗಳ ಬಗ್ಗೆ ನಮಗೆ ಅರಿವೇ ಇಲ್ಲ! ಹುಟ್ಟಿನಿಂದಲೇ, ಪಾಶ್ಚಿಮಾತ್ಯ ಸಂಸ್ಕೃತಿಯನ್ನು ಅಳವಡಿಸಿಕೊಂಡು ‘ಮಮ್ಮಿ’ ಎಂದು ಕರೆದುಬಿಡುವ ನಮಗೆ ಉಹೂಂ! ಪ್ರಾಚೀನ ಭಾರತದ ಸಾಧನೆಗಳ ಬಗ್ಗೆ ಹೇಗೆ ತಿಳಿದೀತು ಹೇಳಿ?!

ಅದಕ್ಕೇ! ಇವತ್ತು ನಮಗೆ ಇತಿಹಾಸದ ಅರಿವಿಲ್ಲ! ಅಂಕಗಳಿಗೋಸ್ಕರ ಅನಿವಾರ್ಯವಾಗಿ ಇವತ್ತಿನ ಪೀಳಿಗೆಗೆ ಕೇವಲ ಸುಳ್ಳುಗಳನ್ನೇ ತುಂಬುತ್ತೇವಲ್ಲ?! ಅದನ್ನೇ ನಂಬಿಕೊಂಡವರು, ಶಾಶ್ವತವಾಗಿ ಪಾಶ್ಚಿಮಾತ್ಯ ದೇಶಗಳ ಗುಲಾಮರಾಗಿ ಹೋಗುತ್ತಾರೆ! ಸಂಸ್ಕೃತಿಯ ಜೊತೆ ಜೊತೆಗೆ ಸ್ವಾಭಿಮಾನವನ್ನೂ ಮರೆತು ಬಿಡುವ ನಾವುಗಳು ‘ಪರಮಾಣು ಸಿದ್ಧಾಂತ’ವನ್ನು ಆವಿಷ್ಕರಿಸಿದವರಾರು ಎಂದರೆ, ‘ಜಾನ್ ಡಾಲ್ಟನ್’ ಎಂಬ ಉತ್ತರ!! 1766 – 1844 ರಲ್ಲಷ್ಟೇ ಬದುಕಿದ್ದ ಪಾಶ್ಚಿಮಾತ್ಯ ವಿಜ್ಞಾನಿಯೊಬ್ಬ ನಮಗೆ ನಮ್ಮ ಭಾರತಕ್ಕಿಂತ ಹಳೆಯ ಆತ್ಮ ಎಂದೆನಿಸತೊಡಗುತ್ತದೆ! ಅಲ್ಲಿಯೇ, ಪಾಶ್ಚಿಮಾತ್ಯ ರಾಷ್ಟ್ರಗಳ ಆರಾಧನೆ ಪ್ರಾರಂಭವಾಗಿ ಹೋಗುತ್ತದೆ!

ಜಾನ್ ಡಾಲ್ಟನ್ ಗೆ ಇವತ್ತು ಪರಮಾಣು ಸಿದ್ಧಾಂತದ ಪಿತಾಮಹ ಎಂಬ ಬಿರುದನ್ನು ನೀಡಿದ್ದಾರೆ! ಆದರೆ, ಜಾನ್ ಡಾಲ್ಟನ್ ‘ಪರಮಾಣು’ ಎನ್ನುವುದಕ್ಕಿಂತ ಮುಂಚೆಯೇ 2500 ವರುಷಗಳ ಹಿಂದೆ ಭಾರತದ ಸಾಧುವೊಬ್ಬರು ಪರಮಾಣು ಸಿದ್ಧಾಂತವನ್ನು ಸಂಪೂರ್ಣವಾಗಿ ಆವಿಷ್ಕರಿಸಿಬಿಟ್ಟಿದ್ದರು! ಆಶ್ಚರ್ಯವಾಗುತ್ತದಲ್ಲವಾ?!

ಆಚಾರ್ಯ ಕಣಾದ! ಪ್ರಾಚೀನ ಭಾರತದ ವಿಜ್ಞಾನ ಕ್ಷೇತ್ರದಲ್ಲಿನ ಧ್ರುವತಾರೆ!!

ಪ್ರಭಾಸ್ ಕ್ಷೇತ್ರ, ಅಂದರೆ ಇವತ್ತಿನ ಗುಜರಾತ್ ನಲ್ಲಿ 600 BC ನಲ್ಲಿ ಹುಟ್ಟಿದ ಆಚಾರ್ಯ ಕಣಾದರ ನಿಜ ನಾಮಧೇಯ ಆಚಾರ್ಯ ಕಶ್ಯಪ!

ಕಶ್ಯಪ ಕಣಾದನಾಗಿದ್ದೇ ರೋಚಕ !!

ಅದೊಮ್ಮೆ ಕಶ್ಯಪರು ತನ್ನ ತಂದೆಯ ಜೊತೆ ಪ್ರಯಾಗಕ್ಕೆ ಪ್ರಯಾಣ ಮಾಡುವಾಗ, ಭಕ್ತಾದಿಗಳು ರಸ್ತೆಗಳನ್ನೆಲ್ಲ ಹೂವಿನಿಂದ, ಮತ್ತು ಅಕ್ಕಿ ಕಾಳುಗಳಿಂದ ಹಾಸಿದ್ದರು! ಕಶ್ಯರಿಗೆ ಆ ಚಿಕ್ಕ ಚಿಕ್ಕ ಅಕ್ಕಿ ಕಾಳುಗಳ ಮೇಲೆ ಕುತೂಹಲ ಹುಟ್ಟಿತು! ಎಲ್ಲರೂ, ಭಗವಂತನ ಆರತಿಯಲ್ಲಿ ಮುಳುಗಿದ್ದರೆ, ಕಶ್ಯಪ ಅಕ್ಕಿ ಕಾಳುಗಳನ್ನು ಹೆಕ್ಕುತ್ತ ನಡೆದರು! ನೆರೆದಿದ್ದವರಿಗೆ ಆಶ್ಚರ್ಯ!

ಕಶ್ಯಪರು ನುಡಿಯುತ್ತಾರೆ! ” ಈ ಒಂದು ಅಕ್ಕಿ ಕಾಳು ನಮಗೆ ಬೆಲೆಯಿಲ್ಲವೆನ್ನಿಸಬಹುದು. ಆದರೆ, ನೂರಾರು ಅಕ್ಕಿ ಕಾಳುಗಳು ಒಬ್ಬ ವ್ಯಕ್ತಿಯ ಒಂದು ಹೊತ್ತಿನ ಊಟಕ್ಕಾಗುವಷ್ಟು ಬೆಲೆಬಾಳುತ್ತದೆ! ಅಥವಾ, ಒಂದು ಕುಟುಂಬಕ್ಕಾಗುವಷ್ಟು! ಒಂದು ಇಡೀ ಜಗತ್ತಿಗಾಗುವಷ್ಟು! ಒಂದು ಇಡೀ ಮನುಕುಲಕ್ಕಾಗುವಷ್ಟು ಬೆಲೆಬಾಳುತ್ತದೆ! ಆದ್ದರಿಂದ, ಈ ಒಂದು ಅಕ್ಕಿ ಕಾಳೂ ಸಹ ಜಗತ್ತಿನ ಅತಿ ಬೆಲೆಬಾಳುವಂತಹದ್ದು!”

ಚಕಿತಗೊಂಡ ಭಕ್ತರು ‘ಉಘೇ’ ಎನ್ನುತ್ತಾರೆ! ‘ಕಣಾದ’ ಎಂದು ಕರೆಯಲು ತೊಡಗುತ್ತಾರೆ! ‘ಕಣ’ ಎಂದರೆ ಸಂಸ್ಕೃತದಲ್ಲಿ ‘ಒಂದು ಚಿಕ್ಕ ವಸ್ತು’!

ಅಲ್ಲಿಂದ, ಕಣಾದರು ತಮ್ಮ ಬುದ್ಧಿಗೆ ನಿಲುಕಿದಂತಹದ್ದನ್ನು ಬರೆಯಲು ಪ್ರಾರಂಭಿಸುತ್ತಾರೆ! ಅಧ್ಯಯನಕ್ಕಿಳಿಯುತ್ತಾರೆ.. ಪೃಕೃತಿಯೇ ಗುರುವಾಗಿ ಹೋಗುತ್ತದೆ! ಜೊತೆ ಜೊತೆಗೆ ತನ್ನ ಜ್ಞಾನವನ್ನು ಬೇರೆಯವರಿಗೂ ಅರಿಕೆ ಮಾಡಲು ಪ್ರಾರಂಭಿಸಿದಾಗ, ‘ಆಚಾರ್ಯ (ಅಧ್ಯಾಪಕ)’ ರಾಗಿ, ‘ಆಚಾರ್ಯ ಕಣಾದ’ ನೆನಿಸಿಕೊಳ್ಳುತ್ತಾರೆ!

ಕಣಾದರ ಕಣ್ಣಲ್ಲಿ ಕಣ!

ಕಣಾದರು ಕೈಯ್ಯಲ್ಲಿ ಒಂದಷ್ಟು ಆಹಾರವಸ್ತುಗಳನ್ನಿಟ್ಟುಕೊಂಡು ಕತ್ತರಿಸುತ್ತ ಹೋಗುತ್ತಾರೆ. ತೀರಾ ಚಿಕ್ಕದಾದ ತುಂಡೊಂದನ್ನು ಇನ್ನು ಭಾಗಿಸಲು
ಸಾಧ್ಯವೇ ಇಲ್ಲವೆಂದಾಗ, ಅದನ್ನು ‘ಪರಮಾಣು’ ಎಂದು ಕರೆದರು. ಅಂದರೆ, ತೀರಾ ಚಿಕ್ಕದಾದ ವಸ್ತು ‘ಕಣ’ ಎಂದಾದರೆ, ಯಾವ ಕಣವನ್ನು ಭಾಗಿಸಲು ಸಾಧ್ಯವಿಲ್ಲವೋ, ಅದು ಪರಮಾಣು!

ಆಚಾರ್ಯ ಕಣಾದರು ಯೋಚನೆಗಿಳಿಯುತ್ತಾರೆ! ಪೃಕೃತಿಯಲ್ಲಿ ಮಾನವರ ಗ್ರಹಿಕೆಗೆ ಸಿಗಲಾರದಂತಹ ಎಷ್ಟು ಅಣುಗಳಿರಬಹುದು?! ಎಷ್ಟು
ಪರಮಾಣುಗಳಿರಬಹುದು?! ‘ಹಾ! ಪರಮಾಣುಗಳು ಮಾನವರ ಬರಿಗಣ್ಣಿಗೆ ಕಾಣಲಾರದೆಂಬ ಸಿದ್ಧಾಂತವನ್ನು ಮಂಡಿಸಿದರು! ಹೇಗೆ ಅಣುವೊಂದು ವಿಧವಾದ ಅಣುಗಳಿಂದ ಸೃಷ್ಟಿಯಾಗಿರುತ್ತದೆಯೋ, ಅದೇ ರೀತಿ ಪರಮಾಣುವೂ! ಅಂದರೆ, ಒಂದು ಪರಮಾಣು ಇನ್ನೊಂದು ಪರಮಾಣುವಿನ ಜೊತೆ ಸೇರುತ್ತದೆಯೆಂದಾಯಿತು! ಅಕಸ್ಮಾತ್, ಎರಡು ಪರಮಾಣುಗಳು ಒಂದೇ ವರ್ಗದ ಪದಾರ್ಥಕ್ಕೆ ಸೇರಿದ್ದರೆ ಅದು ‘ದ್ವಿಣುಕ್ಯ’ (Binary molecule)… ಈ ದ್ವಿಣುಕ್ಯವೊಂದು ಎರಡು ಪರಮಾಣುಗಳ ಕೆಲವು ಗುಣಗಳನ್ನು ಹೊಂದಿರುತ್ತದೆ!

ಆಚಾರ್ಯರು ಭೌತಿಕ ಪದಾರ್ಥದ ಅಧ್ಯಯನಕ್ಕಿಳಿಯುತ್ತಾರೆ! ಹಾ! ಒಂದು ವಸ್ತು ಒಂದೇ ಗುಣವುಳ್ಳ ಅಣುವಿನಿಂದ ಸೃಷ್ಟಿ ಹೊಂದಲು ಸಾಧ್ಯವಿಲ್ಲ. ಅಂದರೆ, ವಿಧವಾದ ಪರಮಾಣುಗಳಿಂದ ಒಂದು ಭೌತಿಕ ಪದಾರ್ಥದ ಸೃಷ್ಟಿಯಾಗುತ್ತದೆ! ಅದೇ ರೀತಿ, ವಿಧವಾದ ಅಣುಗಳನ್ನು ಸೇರಿಸಿದರೆ ರಾಸಾಯನಿಕ ಕ್ರಿಯೆಯೊಂದರ ಮೂಲಕ ವಿಧವಾದ ವಸ್ತುಗಳ ಸೃಷ್ಡಿಯಾಗುತ್ತದೆ! ಎರಡು ಅಣುಗಳು.ಸೇರುವಾಗ ಶಾಖ ಉತ್ಪತ್ತಿಯಾಗುತ್ತದೆ. ತನ್ಮೂಲಕ ರಾಸಾಯನಿಕ ಕ್ರಿಯೆ! ತನ್ಮೂಲಕ ಹೊಸದೊಂದು ಸೃಷ್ಟಿ! ಹೇಗೆ, ಒಂದು ಹಣ್ಣಿನ ಬೀಜವನ್ನು ಮಣ್ಣಿನೊಳ ಹುದುಗಿಸಿಡುತ್ತೇವೆಯೋ, ಅದು ಮೊಳಕೆಯೊಡೆಯುತ್ತದೆ. ಮತ್ತೆ ಹೊಸತೊಂದು ಸೃಷ್ಟಿಯಾಗುತ್ತದೆ!

ಇಂತಹ ತೆರನಾದ ವಿಚಾರಗಳು ಅವರನ್ನು ಅಣುವಿನ ಪ್ರಪಂಚಕ್ಕೆ ತೆರೆಯುತ್ತ ಹೋದವು! ಅವರ ಮುಖ್ಯ ಭೂಮಿಕೆ ‘ರಸವಾದ’, ಅಂದರೆ ರಸವಿದ್ಯೆಯ ಒಂದು ಭಾಗ! ತನ್ನ ದೇಹವನ್ನೂ ಪ್ರಯೋಗಾಲಯವನ್ನಾಗಿಸಿಕೊಂಡ ಆಚಾರ್ಯರು, ‘ಪ್ರತಿಯೊಂದು ಜೀವಿಯೂ ಸಹ ಐದು ತೆರನಾದ ಅಂಶಗಳಿಂದ ನಿರ್ಮಾಣವಾಗಿರುತ್ತದೆ! ‘ಜಲ, ವಾಯು, ಭೂಮಿ, ಅಗ್ನಿ ಮತ್ತು ಆಕಾಶ ಗಳೆಂಬ ಪಂಚಭೂತಗಳಿಂದ ಮಾಡಲ್ಪಟ್ಟಿರುತ್ತದೆ! ತರಕಾರಿಗಳು ಕೇವಲ ನೀರಿನಿಂದ, ಕ್ರಿಮಿ ಕೀಟಗಳು ಅಗ್ನಿ ಮತ್ತು ಜಲದಿಂದ, ಪಕ್ಷಿಗಳು ಅಗ್ನಿ, ಜಲ, ಭೂಮಿ ಮತ್ತು ವಾಯುವಿನಿಂದ ಮತ್ತು, ಪ್ರತಿ ಜೀವಿರಾಶಿಗಳಲ್ಲಿ ಉತ್ತಮ ಸೃಷ್ಟಿಯಾದ ಮಾನವ.. ಪಂಚಭೂತಗಳಿಂದ! (The sense of discrimination (Time , space and mind ) are one.) ಅದಲ್ಲದೇ, ಒಂದು ವಸ್ತುವು ಭೂಮಿಯತ್ತ ಆಕರ್ಷಿತವಾಗುವುದು ‘ಗುರುತ್ವ’ ದಿಂದ! ” ಎಂದು ಪೃಕ್ರತಿಯ ವ್ಯಾಖ್ಯಾನಕ್ಕಿಳಿದರು!

ಅದೇ ರೀತಿ, ಈ ಜಗತ್ತು ಎಂಬುವುದೊಂದಿದೆಯಲ್ಲವಾ?! ಅದು ಏಳು ಅಂಶಗಳ ಮಿಶ್ರಣವೆಂದ ಆಚಾರ್ಯ ಕಣಾದರು, ವಿಭಾಗಿಸತೊಡಗಿದರು!

ದ್ರವ್ಯಮ್ (matter)
ಗುಣ (quality)
ಕರ್ಮ (action)
ಸಾಮಾನ್ಯ (general species)
ವಿಶೇಷ (unique trait )
ಸಮಾವಯ (Inherent or integrated part of the whole)
ಅಭವ (non – existence)

ಅದೇ ರೀತಿ, ದ್ರವ್ಯವನ್ನು ಒಂಭತ್ತು ಉಪಭಾಗಗಳನ್ನಾಗಿಸಿದರು!

ಪೃಥ್ವಿ (Earth)
ಜಲ (Water)
ತೇಜ (Light)
ವಾಯು (Gas)
ಆಕಾಶ (Ether)
ದಿಕ ( Direction / Space Dimension)
ಕಾಲ (Time)
ಮನಸ್ (Mind)
ಆತ್ಮ (Soul)

ಆಚಾರ್ಯ ಕಣಾದರು ಬದುಕು ಮತ್ತು ಸಾವನ್ನೂ ಸಹ ಇದೇ ಪರಮಾಣು ಸಿದ್ಧಾಂತಕ್ಕನುಗುಣವಾಗಿ ಅರ್ಥೈಸಿದರು! “ಬದುಕೆಂದರೆ ವ್ಯವಸ್ಥಿತವಾದ ಅಣು
– ಪರಮಾಣುಗಳ ರೂಪ! ಸಾವೆಂದರೆ.. ಅವ್ಯವಸ್ಥಿತವಾದದ್ದು!” ವ್ಹಾ! ವೈರಾಗ್ಯವೆಂಬುದನ್ನು ಸಾಧಿಸಲು ಮತ್ತದೇ ಜಗತ್ತಿನ ವಿಸ್ಮಯಗಳು ಸಹಕರಿಸುತ್ತವೆಂಬುದೂ ಸಾಬೀತಾಯಿತು!

ತನ್ನದಷ್ಟೂ ಜ್ಞಾನವನ್ನು ಮುಂದಿನ ಪೀಳಿಗೆಗೆ ನೀಡಲು, ವೈಶೇಷಿಕ ತತ್ವ ಗುರುಕುಲವನ್ನು ಸ್ಥಾಪಿಸಿದರು! ಪೃಕೃತಿಯ ವಿಸ್ಮಯಗಳ ಬಗ್ಗೆ , ತತ್ವ ಗಳ
ಬಗ್ಗೆ ಭೋಧಿಸುತ್ತಾ, ಭಾರತೀಯ ವಿಜ್ಞಾನ ಪ್ರಪಂಚಕ್ಕೆ ‘ವೈಶೇಷಿಕ ದರ್ಶನ” ವೆಂಬ ಗ್ರಂಥವನ್ನೂ ಕೊಡುಗೆಯಾಗಿ ನೀಡಿದರು! ಜಗತ್ತಿನಲ್ಲಿಯೇ ಮೊದಲ ಬಾರಿ ಪರಮಾಣು ಸಿದ್ಧಾಂತವನ್ನು ಅನ್ವೇಷಿಸಿದ್ದಕ್ಕಾಗಿ, ‘ಪರಮಾಣು ಸಿದ್ಧಾಂತದ ಪಿತಾಮಹ’ನೆಂದು ಗೌರವದಿಂದ ಕರೆಸಿಕೊಂಡರು!

ನಿಮಗೆ ಅಚ್ಚರಿಯಾಗಬಹುದೇನೋ! ಪಶ್ಚಿಮ ರಾಷ್ಟ್ರಗಳಲ್ಲಿ, ಪರಮಾಣು ಸಿದ್ಧಾಂತದ ಬಗ್ಗೆ ಮೊದಲು ಅಧ್ಯಯನ ಪ್ರಾರಂಭವಾಗಿದ್ದು 500BC ಸಮಯದ ಇವತ್ತಿನ ಗ್ರೀಕ್ ಭಾಗದಲ್ಲಾದರೂ ಸಹ, ಹಿಂದೆ ಭಾರತದ ಭಾಗವಾಗಿತ್ತು ಗ್ರೀಕ್ ಎಂಬುದಕ್ಕೆ ಸಾಕ್ಷಿಗಳು ಸಿಕ್ಕಿವೆ. ಅಲ್ಲಿನ, ಪ್ರಾಚೀನ ವಿಶ್ವ ವಿದ್ಯಾನಿಲಯದ ಹೆಸರು ಇವತ್ತಿಗೂ ಸಂಸ್ಕೃತದ ಹೆಸರನ್ನೊಳಗೊಂಡಿದೆ!

ಎ.ಎಲ್.ಭಾಷಮ್ (Australian Indologist), ” ಪ್ರಾಚೀನ ಭಾರತೀಯರು ಭೌತಿಕ ರಚನೆಯ ಅದ್ಭುತ ಕಾಲ್ಪನಿಕ ವಿವರಣೆಯನ್ನು ಹೊಂದಿದ್ದರಲ್ಲದೇ,
ಆಧುನಿಕ ಭೌತಶಾಸ್ತ್ರದ ಅವಿಷ್ಕಾರ ಮಾಡುತ್ತ ಸಾಬೀತುಪಡಿಸುತ್ತ ಹೋದರು” ಎಂದು ಅಭಿಪ್ರಾಯಿಸುತ್ತಾರೆ!

ವಾಸ್ತವವಿಷ್ಟೇ! ಅಕಸ್ಮಾತ್.. ಕಣಾದರ ಸೂತ್ರಗಳನ್ನೇನಾದರೂ ಅಧ್ಯಯನ ಮಾಡುತ್ತ ಹೋದರೆ.. ಇವತ್ತಿನ ಪರಮಾಣು ಸಿದ್ಧಾಂತಗಳಿಗಿಂತ ಕಣಾದರ ಸಿದ್ಧಾಂತಗಳು ಮುಂದುವರೆದುದಾಗಿತ್ತೆಂಬುದರಲ್ಲಿ ಸಂಶಯವಿರಲಾರದಷ್ಟೇ!

ಇಂತಹ ಅದೆಷ್ಟೋ ವಿಜ್ಞಾನದ ಆವಿಷ್ಕಾರಗಳು ಹುಟ್ಡಿದ್ದು ಭಾರತದಲ್ಲೆಂಬುದನ್ನು ಮರೆತ ನಾವು ಪಶ್ಚಾತ್ತಾಪಿಸಬೇಕಿದೆಯಷ್ಟೇ! ಇವತ್ತಿಗೂ ಸಹ, ಇನ್ನೂ ಪಾಶ್ಚಿಮಾತ್ಯರ ಬೌದ್ಧಿಕ ಗುಲಾಮರಾಗೇ ಉಳಿದಿರುವ ನಾವು ಮುಂದಿನ ಪೀಳಿಗೆಯನ್ನೂ ಗುಲಾಮರಾಗಿಸಿಬಿಡುವುದು ನಿಜಕ್ಕೂ ದುರಂತ!

– ತಪಸ್ವಿ

Editor Postcard Kannada:
Related Post