X

ಯೋಗಿ ಆದಿತ್ಯನಾಥ್ ಯಾಕೆ ಅಖಿಲೇಶ್ ಯಾದವ್ ಭಾವಚಿತ್ರವಿರುವ ಒಂದು ಲಕ್ಷ ಸ್ಕೂಲ್ ಬ್ಯಾಗ್ ಗಳನ್ನು ಮಕ್ಕಳಿಗೆ ಹಂಚಿದರೆನ್ನುವುದು ತಿಳಿದರೆ, ನೀವಿನ್ನೂ ಯೋಗಿಯವರನ್ನು ಗೌರವಿಸುತ್ತೀರಿ!!!!

ಬೇರೆ ಯಾರೇ ಆಗಿದ್ದರು ಅದನ್ನು ತಿಪ್ಪೆಗೆಸೆಯುತ್ತಿದ್ದರು ಆದರೆ ಯೋಗಿ ಆದಿತ್ಯನಾಥ್ ಹಾಗೆ ಮಾಡಲಿಲ್ಲ…!
ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಬಗ್ಗೆ ಇಲ್ಲಸಲ್ಲದ ಸುಳ್ಳು ಆರೋಪಗಳ ಮೂಲಕ ಅಣಕಿಸಲಾಗುತ್ತದೆ. ಕಾವಿಧಾರಿಯೊಬ್ಬ ಮುಖ್ಯಮಂತ್ರಿ ಪದವಿಗೇರಿರುವುದು ಕೆಲವರಿಗೆ ಅರಗಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಅಖಿಲೇಶ್ ಯಾದವ್ ಸರಕಾರದ ದುರಾಡಳಿತದಿಂದ ಬೇಸತ್ತ ಜನ ಅವರಿಗೆ ತಕ್ಕ ಪಾಠ ಕಲಿಸಿದ್ದಾರೆ. ಇಂದು ಮುಖ್ಯಮಂತ್ರಿಯಾಗಿ ಯೋಗೀಜಿ ಅವರಿಡುವ ಪ್ರತಿಯೊಂದು ಹೆಜ್ಜೆಯೂ ವಿರೋಧಿಗಳ ಬಾಯಿಯನ್ನು ಮುಚ್ಚಿಸುತ್ತದೆ. 
ಯೋಗೀಜಿ ಅಧಿಕಾರ ವಹಿಸುವ ಮುನ್ನ ಅಧಿಕಾರದಲ್ಲಿದ್ದುದು ಸಮಾಜವಾದಿ ಪಕ್ಷ. ಅಖಿಲೇಶ್ ಯಾದವ್ ಅಲ್ಲಿನ ಮುಖ್ಯಮಂತ್ರಿಯಾಗಿದ್ದರು. ಅಖಿಲೇಶ್ ಶಾಲಾ ಮಕ್ಕಳಿಗೆ ಉಚಿತ ಪುಸ್ತಕ, ಶಾಲಾ ಬ್ಯಾಗ್ ಕೊಡಲಾರಂಭಿಸಿದ್ದರು. ಆದರೆ ಶಾಲಾ ಮಕ್ಕಳಿಗೆ ನೀಡುವ ಬ್ಯಾಗ್ ಹಿಂದೆ ತನ್ನ ಹಾಗೂ ತನ್ನ ಅಪ್ಪ ಮುಲಾಯಂ ಸಿಂಗ್ ಯಾದವ್ ಅವರ ಭಾವಚಿತ್ರ  ಮತ್ತು ಪಕ್ಷದ ಚಿನ್ಹೆಯನ್ನು ಅಚ್ಚೊತ್ತಿದ್ದ. ಸರಕಾರದ ಖಜಾನೆಯ ಹಣದಲ್ಲಿ ಕೊಡುವ ಪುಸ್ತಕದಲ್ಲಿ ತಮ್ಮ ಭಾವಚಿತ್ರವನ್ನು ಅಂಟಿಸುವ ಮೂಲಕ ದ್ರೋಹ ಎಸಗಿದ್ದರು. ಮುಂದಿನ ಬಾರಿ ಚುನಾವಣೆ ನಡೆದಾಗ ಓಟುಗಳೆಲ್ಲಾ ತಮಗೆ ಬೀಳಲಿ ಎಂಬ ಉದ್ದೇಶದಿಂದ ಈ ಕೆಲಸ ಮಾಡಿದ್ದರು. ಆದರೆ ಅಪ್ಪ-ಮಗನ ಯಾವುದೇ ಗಿಮಿಕ್‍ಗಳು ವರ್ಕೌಟ್ ಆಗದೆ ಜನರು ಭಾರತೀಯ ಜನತಾ ಪಕ್ಷವನ್ನು ಗೆಲ್ಲಿಸಿದರು. 
ಯೋಗಿ ಆದಿತ್ಯನಾಥ್ ಪಕ್ಕಾ ಕೋಮುವಾದಿ, ಕ್ರಿಮಿನಲ್ ಎಂದೆಲ್ಲಾ ಸಾಕಷ್ಟು ಮಂದಿ ಟೀಕಿಸಿದ್ದಾರೆ. ಈತ ಮುಖ್ಯಮಂತ್ರಿಯಾದ ಬಳಿಕ ರಾಜ್ಯದಲ್ಲಿ ಕೋಮುಗಲಭೆ ಹೆಚ್ಚಾಗುತ್ತದೆ ಎಂದೆಲ್ಲಾ ಟೀಕೆ ಮಾಡಿದ್ದರು. ಆದರೆ ಈ ಟೀಕೆಗಳಿಗೆ ಯೋಗೀಜಿ ತನ್ನ ಕಾರ್ಯದಿಂದಲೇ ಉತ್ತರ ನೀಡಿದ್ದಾರೆ. ಅಖಿಲೇಶ್ ಯಾದವ್ ಮಕ್ಕಳಿಗೆ ಸರಕಾರದ ವತಿಯಿಂದ ನೀಡುವ ಶಾಲಾ ಬ್ಯಾಗ್ ಹಿಂಬದಿ ತನ್ನ ಹಾಗೂ ತನ್ನ ಅಪ್ಪ ಮುಲಯಂ ಸಿಂಗ್ ಯಾದವ್‍ನ ಚಿತ್ರ ಅಂಟಿಸಿ ಇಂಥದ್ದೇ ಬ್ಯಾಗ್‍ಗಳನ್ನು ಮಕ್ಕಳಿಗೆಲ್ಲಾ ವಿತರಿಸಿದ್ದರು.  ಈ ನಡುವೆ ಬರೋಬ್ಬರಿ 35,000 ಚೀಲಗಳು ಉಳಿದಿದ್ದವು. ಆದರೆ ಅಖಿಲೇಶ್ ಪಕ್ಷ ನೆಲಕಚ್ಚಿ ಹೀನಾಯವಾಗಿ ಸೋತಿತು, ಬಿಜೆಪಿ ಗೆದ್ದಿತು. ಯೋಗೀಜಿ ಮುಖ್ಯಮಂತ್ರಿ ಗದ್ದುಗೆಗೆ ಏರಿದ್ದೂ ಆಯ್ತು. ಬ್ಯಾಗ್‍ಗಳೆಲ್ಲಾ ಅನಾಥವಾಗಿ ಉಳಿದುಕೊಂಡವು.
ಯೋಗಿ ಆದಿತ್ಯನಾಥ್‍ಜೀ ಕೂಡಾ ಈ ಬಾರಿ ಮಕ್ಕಳಿಗೆ ಉಚಿತ ಪುಸ್ತಕ, ಶಾಲಾ ಬ್ಯಾಗ್, ಸಮವಸ್ತ್ರ ಕೊಡುವ ನಿರ್ಧಾರಕ್ಕೆ ಬಂದರು. ಉತ್ತರ ಪ್ರದೇಶದ ಶಿಕ್ಷಣ ಇಲಾಖೆ ರಾಜ್ಯದ 23 ಜಿಲ್ಲೆಗಳ ಸುಮಾರು 1,00,000ಕ್ಕಿಂತಲೂ ಅಧಿಕ ಮಕ್ಕಳಿಗೆ ಪುಸ್ತಕ, ಸಮವಸ್ತ್ರ, ಶಾಲಾ ಬ್ಯಾಗ್ ಅವಶ್ಯಕತೆ ಇದೆ ಎಂದು ಸರಕಾರಕ್ಕೆ ತಿಳಿಸಿತು. ಅಲ್ಲದೆ ಕಳೆದ ಬಾರಿ 35 ಸಾವಿರಕ್ಕೂ ಅಧಿಕ ಶಾಲಾ ಬ್ಯಾಗ್‍ಗಳು ಉಳಿದಿವೆ ಎಂದು ತಿಳಿಸಿತು. ಪರಿಶೀಲನೆ ಮಾಡಿದಾಗ ಉಳಿದಿರುವ ಬ್ಯಾಗ್‍ಗಳಲ್ಲಿ ಅಖಿಲೇಶ್-ಮುಲಯಂ ಸಿಂಗ್ ಫೋಟೋ, ಪಕ್ಷದ ಚಿಹ್ನೆ ಇದೆ. 
ಬೇರೆ ಯಾರೆ ಮುಖ್ಯಮಂತ್ರಿಯಾಗಿದ್ದರೂ, ಬೇರೆ ಪಕ್ಷದವರ ಭಾವಚಿತ್ರ, ಚಿನ್ಹೆ ಇರುವ ಬ್ಯಾಗ್‍ಗಳನ್ನು ಮಕ್ಕಳಿಗೆ ವಿತರಿಸುವ ಬದಲು ತಿಪ್ಪೆಗೆಸೆದಿರುತ್ತಿದ್ದರು. ಇಂಥದೊಂದು ಬ್ಯಾಗ್ ವಿಚಾರದಲ್ಲಿ ಇಶ್ಯೂ ಮಾಡಿಕೊಂಡು ದೊಡ್ಡ ರಾಜಕೀಯ ದೊಂಬರಾಟ ಮಾಡುತ್ತಿದ್ದರು.  ಆದರೆ ಯೋಗಿ ಆದಿತ್ಯನಾಥ್ ಜೀ ಹಾಗೆ ಮಾಡಲಿಲ್ಲ. ಸರಕಾರಿ ಖಜಾನೆಯ ಹಣ ಪೋಲಾಗುವುದನ್ನು ತಪ್ಪಿಸಲು ಯಾವುದೇ ಸೈದ್ಧಾಂತಿಕ ನಿಲುವಿಗೆ ಸಿಲುಕದೆ ಮಕ್ಕಳಿಗೆ ಮೊದಲು ಉಳಿದಿದ್ದ ಪುಸ್ತಕಗಳನ್ನು ವಿತರಿಸಿ ಮಾದರಿಯಾದರು. 
ಯೋಗೀಜಿ ಪಕ್ಕಾ ಕೋಮುವಾದಿಯಾಗಿದ್ದರೆ ಈ ರೀತಿ ಮಾಡುತ್ತಿದ್ದರೇ ಎಂದು ಯಾರೂ ಕೂಡಾ ಪ್ರಶ್ನಿಸುತ್ತಿಲ್ಲ. ಯೋಗೀಜಿಯ ಕೆಲಸವನ್ನು ಯಾರೊಬ್ಬನೂ ಹೊಗಳಲಿಲ್ಲ. ಅಲ್ಲದೆ ಅಖಿಲೇಶ್ ಯಾದವ್ ಖಜಾನೆಯ ಹಣದಿಂದ ತನ್ನ ಭಾವಚಿತ್ರ ಹಾಕಿರುವುದು ಯಾರಿಗೂ ತಪ್ಪೆಂದು ಅನಿಸಲೇ ಇಲ್ಲ. ಯೋಗೀಜಿ ಮಾತ್ರ ಮಕ್ಕಳ ವಿದ್ಯಾಭ್ಯಾಸಕ್ಕೆ ಯಾವುದೇ ತೊಂದರೆಯಾಗಬಾರದು, ಸರಕಾರಿ ಖಜಾನೆಯ ಹಣ ಪೋಲಾಗಬಾರದು ಎಂದು ತ್ವರತಿತವಾಗಿ ಪುಸ್ತಕ ವಿತರಿಸುವ ಕೆಲಸದಲ್ಲಿ ನಿರತರಾದರು. ಹಾಗೆ ನೋಡಿದರೆ ಯೋಗಿಗೂ ತನ್ನ ಮತ್ತು ತನ್ನ ಪಕ್ಷದ ಚಿನ್ಹೆಯನ್ನು ಬಳಸಬಹುದಿತ್ತು. ಆದರೆ ಯೋಗೀಜಿ ಹಾಗೆ ಮಾಡದೆ ದೊಡ್ಡತನ ಮೆರೆದರು.
ಯೋಗೀ ಆದಿತ್ಯನಾಥ್ ಜೀ ಅವರ ಆಡಳಿತದಿಂದ ಉತ್ತರ ಪ್ರದೇಶ ಇಂದು ನೆಮ್ಮದಿಯ ವಾತಾವರಣದಲ್ಲಿ ಜೀವನ ನಡೆಸುತ್ತಿದೆ. ಉತ್ತರಪ್ರದೇಶದಲ್ಲಿ ಅಸ್ತಿತ್ವವನ್ನೇ ಕಳೆದುಕೊಂಡಿದ್ದ ಬಿಜೆಪಿ ಪ್ರಚಂಡ ಮತಗಳಿಂದ ಗೆದ್ದಿರುವುದನ್ನು ಐತಿಹಾಸಿಕ ವಿಜಯ ಎಂದೇ ಬಣ್ಣಿಸಲಾಗುತ್ತದೆ. ಅಖಿಲೇಶ್ ಯಾದವ್ ಸರಕಾರದ ದುರಾಡಳಿತದಿಂದ ಬೇಸತ್ತ ಜನರು ಇಂದು ಯೋಗೀಜಿಯ ಸರಕಾರದಿಂದಾಗಿ ನೆಮ್ಮದಿಯಿಂದ ಬದುಕುತ್ತಿದ್ದಾರೆ. ಇಂದು ಈ ಭಾಗದಲ್ಲಿ ಸಾಕಷ್ಟು ದೊಂಬಿ, ಗಲಾಟೆ ನಿಯಂತ್ರಣಕ್ಕೆ ಬಂದಿದೆ. ಪುಂಡರು ಪೋಕರಿಗಳು ಇರುತ್ತಿದ್ದ ಉತ್ತರಪ್ರದೇಶ ಇಂದು ಶಾಂತವಾಗಿದೆ.
 
ಚೇಕಿತಾನ
Editor Postcard Kannada:
Related Post