X

ಸುಪ್ರೀಮ್ ಕೋರ್ಟ್ ಖಾಸಗಿತನದ ಮೂಲಭೂತ ಹಕ್ಕನ್ನು ಎತ್ತಿ ಹಿಡಿಯುವುದೇ?! ಆಧಾರ್ ಅತಂತ್ರವಾಗುವುದೇ?!

ಖಾಸಗಿತನ ಮೂಲಭೂತ ಹಕ್ಕು ಎಂದು ಸುಪ್ರೀಂ ಕೋರ್ಟ್ ಸಾಂವಿಧಾನಿಕ ಮಹತ್ವದ ತೀರ್ಪು ನೀಡಿದೆ. ಆಧಾರ್ ಕಾರ್ಡ್ ಕಡ್ಡಾಯದ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್ ಈ ತೀರ್ಪು ನೀಡಿದ್ದು, ಆಧಾರ್ ಕಾರ್ಡ್ ಮಾನ್ಯತೆ ಅತಂತ್ರ ಸ್ಥಿತಿಗೆ ತಲುಪಿದೆ.
ಖಾಸಗಿತನ ವ್ಯಕ್ತಿಯ ಸಂವಿಧಾನದತ್ತ ಮೂಲಭೂತ ಹಕ್ಕು ಎಂದು ಸುಪ್ರೀಂ ಕೋರ್ಟ್ ಪ್ರತಿಪಾದಿಸಿದೆ. 
ಖಾಸಗಿತನ ಪ್ರಕೃತಿಯ ನಿಮಯ ಎಂಬಂತೆ ಸುಪ್ರೀಂ ಕೋರ್ಟ್ ಸಾರಿದೆ. ನಂದನ್ ನಿಲೇಕಣೆ ಅವರ ಯೋಜನೆಯಾಗಿದ್ದ ಆಧಾರ್, ನಿಲೇಕಣಿ ಇನ್ಫೋಸಿಸ್ ಬಿಟ್ಟ ನಂತರ ಅವರು ಕೇಂದ್ರದಲ್ಲಿ ಮಹತ್ವದ ಸ್ಥಾನ ಪಡೆದು ಆಧಾರ್ ಜಾರಿಗೆ ಭಾರೀ ಪ್ರಯತ್ನ ನಡೆಸಿದ್ದರು. 
ಆದರೆ ಇದೇ ಆಧಾರ್ ಕುರಿತು ಹಿರಿಯ ನ್ಯಾಯವಾದಿ ಕೆ.ಎಸ್. ಪುಟ್ಟಸ್ವಾಮಯ್ಯ ಅವರು ಆಧಾರ್ ಯೋಜನೆಯನ್ನು ಕೈಬಿಡುವಂತೆ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು. ಇವರ ದೂರನ್ನು ಆಲಿಸಿದ ಕೋರ್ಟ್ ಅವರ ಪರವಾಗಿ ತೀರ್ಪು ನೀಡಿದ್ದು, ಪುಟ್ಟ ಸ್ವಾಮಯ್ಯ ಇದೀಗ ಜಯದ ನಗೆ ಬೀರಿದ್ದಾರೆ.
ಮಹತ್ವದ ಸಂದರ್ಭಗಳಲ್ಲಿ ನಂದನ್ ನೀಲೇಕಣಿ ಅವರು ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಸ್ಪಷ್ಟ ಅಭಿಪ್ರಾಯವನ್ನು ಬಹಿರಂಗ ಪಡಿಸುತ್ತಿದ್ದರು. ಆದರೆ ಇದೀಗ ತೀರ್ಪು ಬಂದಿದ್ದರೂ ನೀಲೇಕಣಿ ಮೌನಕ್ಕೆ ಶರಣಾಗಿದ್ದಾರೆ.
ಮುಖ್ಯ ನ್ಯಾಯಮೂರ್ತಿ ಜೆ.ಎಸ್ ಖೇಹರ್  ನೇತೃತ್ವದ ಒಂಬತ್ತು ಸದಸ್ಯರ ಸಾಂವಿಧಾನಿಕ ಪೀಠವು ಈ ಪ್ರಕರಣದ ತೀರ್ಪು ಪ್ರಕಟಿಸಿದೆ. ಮೂರು ವಾರಗಳ ಅವಧಿಯಲ್ಲಿ ಆರು ದಿನಗಳ ಸುದೀರ್ಘ ವಿಚಾರಣೆ ನಡೆಸಿದ್ದ ಪೀಠ ಆಗಸ್ಟ್ 2ರಂದು ಪೂರ್ಣಗೊಳಿಸಿದ್ದು, ತೀರ್ಪು ಕಾಯ್ದಿರಿಸಿತ್ತು. ಸಿಜೆಐ ಖೇಹರ್ ಜತೆಗೆ ನ್ಯಾಯಮೂರ್ತಿಗಳಾದ ಜೆ. ಚೆಲಮೇಶ್ವರ್, ಎಸ್.ಎ.ಬಾಬ್ಡೆ, ಆರ್.ಕೆ. ಅಗರ್ವಾಲ್, ಆರ್.ಎಫ್. ನಾರಿಮನ್, ಎ.ಎಂ.ಸಪ್ರೆ, ಡಿ.ವೈ. ಚಂದ್ರಚೂಡ್, ಎಸ್.ಕೆ. ಕೌಲ್ ಮತ್ತು ಎಸ್. ಅಬ್ದುಲ್ ನಜೀರ್ ನ್ಯಾಯಪೀಠದ ಇತರೆ ಸದಸ್ಯರಾಗಿದ್ದರು.
ಭಾರತೀಯ ವಿಶಿಷ್ಟವಾದ ಗುರುತಿನ ಪ್ರಾಧಿಕಾರ ಭಾರತೀಯ ನಿವಾಸಿಗಳಿಗೆಲ್ಲಾ 12 ಅಂಕಗಳ ಸಂಖ್ಯೆಯುಳ್ಳ `ಗುರುತಿನ-ಪತ್ರ’ ನೀಡುವ ಯೋಜನೆ  ಇದಾಗಿದೆ. ಇದನ್ನು ಏಪ್ರಿಲ್ 26, 2010 ರಂದು ರೂಪಿಸಲಾಗಿತ್ತು.
ಪ್ರತಿಯೊಬ್ಬ ಭಾರತೀಯನ ಎಲ್ಲಾ ಹತ್ತು ಬೆರಳುಗಳ ಬೆರಳಚ್ಚುಗಳನ್ನು ಪಡೆಯಲಾಗುತ್ತದೆ. ಬಳಿಕ ಕಣ್ಣಿನ ಸ್ಕ್ಯಾನಿಂಗ್’ ಮಾಡಲಾಗುತ್ತದೆ.  ಇದಾದ ಬಳಿಕ ಪ್ರತಿಯೊಬ್ಬರನ್ನೂ ಹದಿನಾರು ಅಂಕೆಗಳ ಒಂದು ಸಂಖ್ಯೆ ಮೂಲಕ ಗುರುತಿಸಲಾಗುವಂತೆ ವ್ಯವಸ್ಥೆ ಮಾಡಲಾಗುತ್ತದೆ.  ಭಾರತದ ಪ್ರತಿಯೊಬ್ಬ ನಾಗರಿಕನೂ ಆಧಾರ್ ಹೊಂದುವುದು ಕಡ್ಡಾಯ ಎಂದು ತೀರ್ಮಾನಿಸಲಾಗಿತ್ತು. ಅಲ್ಲದೆ  ಇದನ್ನು ಪ್ರತಿಯೊಂದು ಕಡೆಗಳಲ್ಲಿ ದಾಖಲೆ ಎಂಬಂತೆ ಕೊಡಲು ತೀರ್ಮಾನಿಸಲಾಗಿತ್ತು. 
ಆದರೆ ಆಧಾರ್‍ನಲ್ಲಿ ವ್ಯಕ್ತಿಯ ಖಾಸಗಿತನ ಬಯಲಾಗುವುದರಿಂದ ಈ ಬಗ್ಗೆ ಸಾಕಷ್ಟು ಚರ್ಚೆ ನಡೆದು, ಪ್ರಕರಣ ಸುಪ್ರೀಂ ಮೆಟ್ಟಿಲೇರಿತ್ತು. ಇದೀಗ ಸುಪ್ರೀಂ ಕೋರ್ಟ್ ಆಧಾರ್ ಕುರಿತು ಖಾಸಗಿ ಹಕ್ಕಿನ ಬಗ್ಗೆ ಪ್ರತಿಪಾದಿಸಿ ತೀರ್ಪು ನೀಡುವುದರಿಂದ ಆಧಾರ್ ಕಾರ್ಡ್ ಗೊಂದಲಕ್ಕೆ ಸಿಲುಕಿದೆ.  ಆಧಾರ್ ಅನ್ನು ಪ್ಯಾನ್ ಕಾರ್ಡ್‍ಗೆ ಜೋಡಿಸುವುದು ಕಡ್ಡಾಯಗೊಳಿಸಿತ್ತು. 
ದೇಶದ ಭದ್ರತೆಯನ್ನು ಕಾಯ್ದುಕೊಳ್ಳುವ ಸಲುವಾಗಿ ಆಧಾರ್ ಆರಂಭಿಸಲಾಗಿತ್ತು. ಅಕ್ರಮ ವಲಸೆಗಾರರಿಂದ, ಭಯೋತ್ಪಾದಕರಿಂದ ದೇಶವನ್ನು ರಕ್ಷಿಸಲು ಆಧಾರ್ ಯೋಜನೆ ಜಾರಿಗೊಳಿಸಲಾಗಿತ್ತು. ಆದರೆ ಅದೇ ಆಧಾರ್‍ನಲ್ಲಿ ಖಾಸಗಿತನ ಬಯಲಾದ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿದೆ.
-ಗಿರೀಶ್
Editor Postcard Kannada:
Related Post