X

ಕಪ್ಪು ಪಟ್ಟಿ ಧರಿಸಿದ ಕಾಂಗ್ರೆಸ್ಸಿಗರಿಗೆ ನೇರ ವಾಗ್ದಾಳಿಗೈದ ಚಾಣಾಕ್ಯ!! ರಾಹುಲ್ ಗಾಂಧಿಗೆ ಭರ್ಜರಿ ಪ್ರಶ್ನೆಗಳನ್ನಿತ್ತ ಶಾ!!

ಅದ್ಯಾಕೋ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷರ ಟೈಮೇ ಸರಿ ಇಲ್ಲ ಅನ್ಸುತ್ತೆ. ಈ ಅಮಿತ್ ಶಾ ಎನ್ನುವ ವ್ಯಕ್ತಿ ಯಾವಾಗ ದೆಹಲಿಯ ಗದ್ದುಗೆಯೇರಿ ಕುಳಿತನೋ ಅಂದಿನಿಂದ ರಾಹುಲ್ ಗಾಂಧಿಗೆ ಮಾತ್ರವಲ್ಲ ಇಡೀ ನೆಹರು ಸಂತಾನಕ್ಕೇ ಭಯ ಅನ್ನೋದು ವ್ಯಾಪಿಸಿಬಿಟ್ಟಿದೆ. ಹೋದಲ್ಲೆಲ್ಲಾ ಕಾಂಗ್ರೆಸ್ ಪಕ್ಷವನ್ನು ಝಾಡಿಸಿ ಒದೆಯುವಂತಹ ಭಾರತೀಯ ಜನತಾ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ರಾಹುಲೂ ಗಾಂಧಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ. ನಯಾ ಪೈಸೆಯೂ ಅರ್ಹತೆ ಇಲ್ಲದಿದ್ದರೂ, ಕೇವಲ ನೆಹರೂ ಸಂತಾನದ ಕುಡಿ ಎಂದ ಮಾತ್ರಕ್ಕೆ ಆತನನ್ನು ಸುಖಾಸುಮ್ಮನೆ ವೈಭವೀಕರಿಸುವ ಗುಲಾಮರು ಈಗ ಶಾ ಅಬ್ಬರಕ್ಕೆ ಕೊಚ್ಚಿಕೊಂಡು ಹೋಗಿದ್ದಾರೆ.

ಎಲ್ಲಿ ಹೋದರೂ ಬೆಂಬಿಡದೆ ಕಾಡುತ್ತಿರುವ ಶಾ..!

ರಾಹುಲ್ ಗಾಂಧಿ ಕಾಂಗ್ರೆಸ್ಸಿನ ವಿಫಲ ನಾಯಕ ಅನ್ನೋದು ಗುಟ್ಟಾಗಿ ಉಳಿದಿಲ್ಲ. ಈ ವಿಫಲತೆಗೆ ಪ್ರಮುಖ ಕಾರಣವೇ ಅಮಿತ್ ಶಾ. ಮಹರಾಷ್ಟ್ರ, ಉತ್ತರ ಪ್ರದೇಶ, ರಾಜಸ್ತಾನ, ಗುಜರಾತ್ ಹೀಗೆ ರಾಹುಲ್ ಗಾಂಧಿ ಎಲ್ಲೇ ಹೋದರೂ ಅಮಿತ್ ಶಾ ಅವರನ್ನು ಬೆಂಬಿಡದೆ ಕಾಡುತ್ತಾರೆ.ಯಾವ ರಾಜ್ಯದಲ್ಲೂ ಕಾಂಗ್ರೆಸ್ಸಿನ ‘ರಾಗ’ ಹಾಡದಂತೆ ಮಾಡಿದ್ದಾರೆ ಅಮಿತ್ ಶಾ. ಅಮಿತ್ ಶಾ ಭಾರತೀಯ ಜನತಾ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾದ ನಂತರ ನಡೆದ ರಾಜ್ಯಗಳ ವಿಧಾನ ಸಭಾ ಚುನಾವಣೆಗಳಲ್ಲಿ ಬರೋಬ್ಬರಿ 19 ರಾಜ್ಯಗಳನ್ನು ತನ್ನ ತೆಕ್ಕೆಗೆ ತೆಗೆದುಕೊಂಡಿದ್ದಾರೆ.ಕೀಳು ಮಟ್ಟದ ರಾಜಕಾರಣ ಮಾಡದೆ, ಕೇವಲ ತಂತ್ರಗಾರಿಕೆಯಿಂದಲೇ ಅಷ್ಟೂ ಚುನಾವಣೆಗಳನ್ನು ಜಯಿಸಿ ದೇಶದೆಲ್ಲೆಡೆ ಕಮಲವನ್ನು ಅರಳಿಸುವಲ್ಲಿ ಸಧೃಡರಾಗಿದ್ದಾರೆ.

ರಾಹುಲ್ ಗಾಂಧಿಗೆ ಕರ್ನಾಟಕವೇ ಭಯ..!

ಸದ್ಯ ರಾಹುಲ್ ಗಾಂಧಿಗೆ ಕಾಡುತ್ತಿರುವ ಭಯವೊಂದೆ. ಅದು ಕರ್ನಾಟಕ. ರಾಜ್ಯದಲ್ಲಿ ಕಾಗ್ರೆಸ್ ಆಡಳಿತವಿದೆ. ಕಾಂಗ್ರೆಸ್ ಪಕ್ಷವೇ ಆಡಳಿತವಿರುವ ಈ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಸೋಲಬಾರದು ಎನ್ನುವ ಹಠ ರಾಹುಲ್ ಗಾಂಧಿಯದ್ದು. ಆದರೆ ಮೋದಿ ಶಾ ಜೋಡಿ ಉಳಿದೆಲ್ಲಾ ರಾಜ್ಯಗಳಲ್ಲಿ ಮೋಡಿ ಮಾಡಿದಂತೆ ಕರ್ನಾಟಕದಲ್ಲೂ ಮೋಡಿ ಮಾಡುತ್ತಾರೆ ಎಂಬ ಭಯ ರಾಹುಲ್ ಗಾಂಧಿಯನ್ನು ಆವರಿಸಿ ಬಿಟ್ಟಿದೆ. ಕಾಂಗ್ರೆಸ್ಸಿನ ರಾಷ್ಟ್ರೀಯ ಅಧ್ಯಕ್ಷನಾದ ನಂತರ ಮೊದಲ ಬಾರಿಗೆ ನಡೆಯುತ್ತಿರುವ ವಿಧಾನ ಸಭಾ ಚುನಾವಣಾ ಪ್ರಚಾರ ಕರ್ನಾಟಕ ವಿಧಾನ ಸಭಾ ಚುನಾವಣ ಪ್ರಚಾರ. ಹೀಗಾಗಿ ಎಡೆಬಿಡದೆ ಕ್ಯಾಂಪೇನ್ ಮಾಡಿ ಶತಾಯ ಗತಾಯ ಕಾಂಗ್ರೆಸ್ಸನ್ನು ಗೆಲ್ಲಿಸಲೇ ಬೇಕು ಎಂಬ ಹಠಕ್ಕೆ ಬಿದ್ದಿದ್ದಾರೆ. ಈ ಕಾರಣಕ್ಕಾಗಿ ಬಿಜೆಪಿ ನಾಯಕರ ಬಗ್ಗೆ ಮಾತನಾಡಿ ಪ್ರಚಾರ ಗಿಟ್ಟಿಸಿಕೊಳ್ಳುತ್ತಿದ್ದಾರೆ.

ಕಲಬುರ್ಗಿಯಲ್ಲಿ ಅಬ್ಬರಿಸಿದ ಚಾಣಾಕ್ಯ…

ನಿನ್ನೆ ಕರ್ನಾಟಕ ಪ್ರವಾಸದಲ್ಲಿದ್ದ ಭಾರತೀಯ ಜನತಾ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರು ಲಬುರ್ಗಿಯಲ್ಲಿ ನಡೆದಿದ್ದ ಭಾರತೀಯ ಜನತಾ ಪಕ್ಷದ ಬೃಹತ್ ಸಮಾವೇಶವನ್ನು ಉದ್ಧೇಶಿಸಿ ಮಾತನಾಡಿದ್ದರು. ಈ ಸಮಾವೇಶದಲ್ಲಿ ಕಾಂಗ್ರೆಸ್‍ನ ರಾಷ್ಟ್ರೀಯ ಅಧ್ಯಕ್ಷ ರಾಹುಲ್ ಗಾಂಧಿಗೆ ಪ್ರಶ್ನೆಗಳ ಮೇಲೆ ಪ್ರಶ್ನೆಗಳನ್ನಿಟ್ಟು ಅಬ್ಬರಿಸಿದ್ರು. ಶಾ ಅಬ್ಬರಕ್ಕೆ ರಾಹುಲ್ ಗಾಂಧಿಯ ಕರ್ನಾಟಕದ ಅಷ್ಟೂ ಸಮಾವೇಶಗಳೂ ಕೊಚ್ಚಿಕೊಂಡು ಹೋಗಿದ್ದವು. ಶಾ ರಾಹುಲ್ ಗಾಂಧಿಗೆ ಕೇಳಿದ ಪ್ರಶ್ನೆಗಳಿಗೆ ರಾಹುಲ್ ಗಾಂಧಿಯ ಬಳಿ ಖಂಡಿತವಾಗಿಯೂ ಉತ್ತರವಿಲ್ಲ.

ರಾಹುಲ್‍ಗೆ ಶಾ ಕೇಳಿದ ಪ್ರಶ್ನೆಗಳು…

“ಕಾಂಗ್ರೆಸ್‍ನ ರಾಷ್ಟ್ರೀಯ ಅಧ್ಯಕ್ಷನೆನಿಸಿಕೊಂಡಿರುವ ರಾಹುಲ್ ಗಾಂಧಿಯವರೇ ನಿಮಗೆ ನನ್ನ ನೇರ ಪ್ರಶ್ನೆಗಳು. ಹೋದಲ್ಲೆಲ್ಲಾ ದಲಿತರನ್ನು ತನ್ನ ಓಟ್ ಬ್ಯಾಂಕ್‍ಗಾಗಿ ಓಲೈಸಿಕೊಳ್ಳುತ್ತಿರುವ ನೀವು ಆ ಜಾತಿಗೆ ನಿಮ್ಮ ಪಕ್ಷದಿಂದ ಯಾವ ಕೊಡುಗೆಯನ್ನು ನೀಡಿದ್ದೀರಿ ಎಂಬುವುದನ್ನು ತಿಳಿಸುವಿರಾ? ಅಂಬೆಡ್ಕರ್ ಕಾಂಗ್ರೆಸ್ ನಾಯಕರು ಎಂದು ಪ್ರಚಾರ ಮಾಡಿಕೊಂಡು ದಲಿತರಿಂದ ಓಟ್ ಗಿಟ್ಟಿಸಿಕೊಳ್ಳುತ್ತೀರಾ.

ಆದರೆ ನಿಮ್ಮ ಅಷ್ಟೂ ವರ್ಷಗಳ ಸರ್ಕಾರಗಳ ಅವಧಿಯಲ್ಲಿ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೆಡ್ಕರ್ ಅವರಿಗೆ ಭಾರತ್ನ ರತ್ನವನ್ನು ಯಾಕೆ ನೀಡಲಿಲ್ಲ. ಅವರು ಮಾಡಿರುವ ಸಾಧನೆ ನಿಮ್ಮ ಪಕ್ಷಕ್ಕೆ ನಗಣ್ಯವಾಗಿ ಕಾಣಿಸಿತ್ತಾ? ಸ್ವಾತಂತ್ರ್ಯಕ್ಕಾಗಿ ಹೋರಾಟ ನಡೆಸಿ, ಅಸ್ಪ್ರಶ್ಯತೆ ನಿವಾರಣೆಗೆ ಹೋರಟ ನಡೆಸಿ ತಮ್ಮ ಜೀವನದುದ್ದಕ್ಕೂ ರಾಷ್ಟ್ರಕ್ಕಾಗಿ ಹೋರಾಡಿದ ಆ ಧೀಮಂತನ ಬಗ್ಗೆ ನಿಗ್ಯಾಕೆ ನೆನಪಾಗಲಿಲ್ಲ. ಈ ಪ್ರಶ್ನೆಗಳಿಗೆ ಉತ್ತರಿಸಿ. ನಂತರ ನಿಮ್ಮ ದಲಿತ ಓಟ್ ಬ್ಯಾಂಕ್‍ನ್ನು ಮುಂದುವರೆಸಿ.”

ಇದು ಭಾರತೀಯ ಜನತಾ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ರಾಹುಲ್ ಗಾಂಧಿಗೆ ಕೇಳಿದ ನೇರಾ ನೇರ ಪ್ರಶ್ನೆಗಳು. ಆದರೆ ಈ ಪ್ರಶ್ನೆಗಳಿಗೆ ಖಂಡಿತವಾಗಿಯೂ ರಾಹುಲ್ ಗಾಂಧಿಯವರ ಬಳಿಯಲ್ಲಿ ಉತ್ತರವಿಲ್ಲ. ಯಾಕೆಂದರೆ ಮೊದಲಾಗಿ ರಾಹುಲ್ ಗಾಂಧಿ ಎಂಬ ವಿಫಲ ನಾಯಕನಿಗೆ ಇತಿಹಾಸವೇ ಗೊತ್ತಿಲ್ಲ. ಸ್ವತಃ ಅಂಬೆಡ್ಕರ್ ಅವರ ಇತಿಹಾಸವೂ ಈತನಿಗೆ ಗೊತ್ತಿರಲಿಕ್ಕಿಲ್ಲ. ತನ್ನದೇ ಪಕ್ಷದ ಇತಿಹಾಸ ಗೊತ್ತಿಲ್ಲದ ಬುದ್ಧಿ ಇಲ್ಲದ ನಾಯಕ ಈ ರಾಹುಲ್ ಗಾಂಧಿ. ಹೀಗಾಗಿ ಖಂಡಿತವಾಗಿಯೂ ಆತನ ಬಳಿ ಅಮಿತ್ ಶಾ ಅವರ ಪ್ರಶ್ನೆಗಳಿಗೆ ಉತ್ತರವಿಲ್ಲ.

ಕಪ್ಪು ಪಟ್ಟಿ ಧರಿಸಿದ ಕಾಂಗ್ರೆಸ್ಸಿಗರು..!

ಇತ್ತೀಚೆಗೆ ರಾಹುಲ್ ಗಾಂಧಿ ಭಾಷಣದ ವೇಳೆ ಮೋದಿ ಮೋದಿ ಉಧ್ಘೋಷದಿಂದ ಕಾಂಗ್ರೆಸ್ ಕಾರ್ಯಕರ್ತರಿಗೆ ಭಾರೀ ಅವಮಾನವಾಗಿತ್ತು. ಇದರಿಂದ ಕಂಗೆಟ್ಟು ಹೋಗಿದ್ದ ಕಾಂಗ್ರೆಸ್ ನಾಯಕರು ಕೆಲ ಕಾರ್ಯಕರ್ತರನ್ನು ಛೂ ಬಿಟ್ಟು ಅಮಿತ್ ಶಾ ಅವರ ಭಾಷಣಕ್ಕೆ ಅಡ್ಡಿಪಡಿಸಲು ಹೇಳಿದ್ದರು. ಹೀಗಾಗಿ ಭಾರತೀಯ ಜನತಾ ಪಕ್ಷದ ಸಮಾವೇಶದಲ್ಲಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರು ಮಾತನಾಡುತ್ತಿರಬೇಕಾದರೆ ಕಾಂಗ್ರೆಸ್ ಕಾರ್ಯಕರ್ತರು ಕಪ್ಪು ಪಟ್ಟಿ ಧರಿಸಿ ಪ್ರತಿಭಟಿಸಿದ್ದರು.

ನೇರ ವಾಗ್ದಾಳಿ ನಡೆಸಿದ ಶಾ…

ಕಾಂಗ್ರೆಸ್ ಕಾರ್ಯಕರ್ತರ ಈ ಕೀಳು ಮನಸ್ಥಿತಿಗೆ ಶಾ ನೇರ ವಾಗ್ದಾಳಿ ನಡೆಸಿದ್ದರು. “ನೀವು ಏನೇ ಮಾಡಿದರೂ ನಮ್ಮನ್ನು ತಡೆಯಲು ಸಾಧ್ಯವಿಲ್ಲ. ನಾವು ಈಗಾಗಲೇ ಕರ್ನಾಟಕವನ್ನು ಗೆದ್ದು ಆಗಿದೆ. ಇನ್ನೇನಿದ್ದರೂ ಸರ್ಕಾರವನ್ನು ರಚಿಸಲು ಮಾತ್ರವೇ ಬಾಕಿ. ಎಷ್ಟೇ ಪ್ರಯತ್ನ ಪಟ್ಟರೂ ನಿಮ್ಮ ಕುತಂತ್ರಗಳು ಇಲ್ಲಿ ನಡೆಯೋದಿಲ್ಲ. ನೀವು ಹತಾಶ ಮನೋಭಾವನೆಯಿಂದ ಈ ರೀತಿ ವರ್ತಿಸುತ್ತಿದ್ದೀರಿ. ಅದು ವರ್ಕೌಟ್ ಆಗುತ್ತೆ ಎಂದು ನೀವು ತಿಳಿದುಕೊಂಡರೆ ಅದು ನಿಮ್ಮ ದಡ್ಡತನ. ಎಷ್ಟು ಬೇಕೋ ಅಷ್ಟು ಕಿರುಚಿಕೊಳ್ಳಿ. ಡೋಂಟ್ ಕೇರ್” ಎಂದು ಅಬ್ಬರಿಸಿಬಿಟ್ಟಿದ್ದರು. ಕಾಂಗ್ರೆಸ್ಸಿಗರ ಎದುರೇ ವಾಗ್ದಾಳಿ ನಡೆಸಿದ ಅಮಿತ್ ಶಾ ಕಾಂಗ್ರೆಸ್ ಕಾರ್ಯಕರ್ತರು ಬಾಯಿ ಮುಚ್ಚಿ ಕುಳಿತುಕೊಳ್ಳುವಂತೆ ತನ್ನ ಮಾತಿನ ಮರ್ಮವನ್ನು ತೋರಿಸಿಬಿಟ್ಟಿದ್ದರು.

ಒಟ್ಟಿನಲ್ಲಿ ಕಾಂಗ್ರೆಸ್ ನಾಯಕರ ಈ ಹತಾಶ ಮನೋಭಾವನೆ ಈಗ ಅದೇ ಪಕ್ಷಕ್ಕೆ ಮುಳುವಾಗಿದ್ದು ಭಾರತೀಯ ಜನತಾ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರ ಆರ್ಭಟಕ್ಕೆ ಆ ಪಕ್ಷ ಕೊಚ್ಚಿಕೊಂಡು ಹೋಗುವ ಎಲ್ಲಾ ಲಕ್ಷಣಗಳೂ ಗೋಚರಿಸುತ್ತಿದೆ. ರಾಹುಲ್ ಗಾಂಧಿ ಶಾ ಪ್ರಶ್ನೆಗೆ ಉತ್ತರಿಸುವುದು ಬಿಡಿ, ಅಂಬೆಡ್ಕರ್ ಅವರ ಬಗ್ಗೆ ಮಾತನಾಡಲೂ ನಯಾ ಪೈಸೆಯ ನೈತಿಕತೆ ಇಲ್ಲ ಅನ್ನೋದೂ ಅಷ್ಟೇ ಸತ್ಯ…

-ಸುನಿಲ್ ಪಣಪಿಲ

Editor Postcard Kannada:
Related Post