X

ಸಿಎಂ ಸ್ಥಾನಕ್ಕೆ ಬಿಎಸ್‍ವೈ ರಾಜೀನಾಮೆ… ಕೊನೆಗೂ ಗೆದ್ದ ಅಧರ್ಮ, ಮಖಾಡೆ ಮಲಗಿದ ಧರ್ಮ..!

ವರ್ಕೌಟ್ ಆಯ್ತು ಶಕುನಿ ತಂತ್ರ, ನಡೆಯಲೇ ಇಲ್ಲ ಜನತಾ ತೀರ್ಪು, ರಾಜ್ಯ ರಾಜಕೀಯದಲ್ಲಿ ಭಾರೀ ಹೈಡ್ರಾಮ. ಹೌದು, ರಾಜ್ಯದ ಜನತೆ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರದ ಆಡಳಿತದಿಂದ ಬೇಸತ್ತು ರೋಸಿ ಹೋಗಿ ಸರ್ಕಾರವನ್ನು ಬದಲಾಯಿಸಿ ಭಾರತೀಯ ಜನತಾ ಪಕ್ಷದ ಪರವಾಗಿ ಮತಚಲಯಿಸಿ ಅಧಿಕಾರದ ಸನಿಹಕ್ಕೆ ತಂದಿರಿಸಿದ್ದರು.

ಕಾಂಗ್ರೆಸ್ ಪಕ್ಷವನ್ನು ಮಖಾಡೆ ಮಲಗಿಸಿ ಕೇವಲ 78 ಸ್ಥಾನಗಳನ್ನು ಹಾಗೂ ಜನತಾ ದಳಕ್ಕೆ ಕೇವಲ 39 ಸ್ಥಾನಗಳನ್ನು ನೀಡಿ ಜನತೆ ಅವರನ್ನು ತಿರಸ್ಕರಿಸಿದ್ದರು. ಆದರೆ ನಂತರ ನಡೆದದ್ದೇ ಬೇರೆ. ಕಾಂಗ್ರೆಸ್ ಹಾಗೂ ಜನತಾ ದಳ ಮೈತ್ರಿ ಮಾಡಿಕೊಂಡು ಜನತೆ ನೀಡಿದ್ದ ತೀರ್ಪಿನ ವಿರುದ್ಧವೇ ನಿಂತಿದ್ದರು. ಪರಿಣಾಮ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಕೇವಲ 55 ಗಂಟೆಯಲ್ಲೇ ಬಿಎಸ್ ಯಡಿಯೂರಪ್ಪ ರಾಜೀನಾಮೆ ನೀಡಿದ್ದಾರೆ.

ಇಂದು ಬಹುಮತ ಸಾಭೀತಿಗೆ ಸುಪ್ರೀಂ ಕೋರ್ಟ್ ಗಡುವು ನೀಡಿತ್ತು. ಅಂತೆಯೇ ಇಂದು ವಿಧಾನ ಸಭೆಯಲ್ಲಿ ವಿಶ್ವಾಸ ಮತ ಯಾಚನೆಗೆ ನಿರ್ಧರಿಸಲಾಗಿತ್ತು. ಆದರೆ ಬಹುಮತದ ಕೊರತೆಯಿಂದ ವಿಶ್ವಾಸ ಮತ ಸಾಭೀತು ಪಡಿಸದೆನೇ ಮುಖ್ಯಮಂತ್ರಿ ಯಡಿಯೂರಪ್ಪ ರಾಜೀನಾಮೆ ಘೋಷಣೆ ಮಾಡಿ ನಿರ್ಗಮಿಸಿದ್ದಾರೆ.

ರಾಜೀನಾಮೆ ಘೋಷಣೆ ಮಾಡಿದ ಕೂಡಲೇ ವಿಧಾನ ಸಭೆಯಿಂದ ಹೊರನಡೆದ ಯಡಿಯೂರಪ್ಪ ಹಾಗೂ ಭಾರತೀಯ ಜನತಾ ಪಕ್ಷದ ಶಾಸಕರು ರಾಜ್ಯಪಾಲರೆಡೆಗೆ ರಾಜೀನಾಮೆ ಸಲ್ಲಿಸಲು ತೆರಳಿದ್ದಾರೆ. ಈ ಮೂಲಕ 55 ಗಂಟೆಗಳ ತಮ್ಮ ಮುಖ್ಯಮಂತ್ರಿ ಅವಧಿಯನ್ನು ಮುಕ್ತಾಯಗೊಳಿಸಿದ್ದಾರೆ.

ಜನತೆ 104 ಸ್ಥಾನಗಳನ್ನು ಭಾರತೀಯ ಜನತಾ ಪಕ್ಷಕ್ಕೆ ನೀಡಿದ್ದರೂ ಕಾಂಗ್ರೆಸ್ ಹಾಗೂ ಜೆಡಿಎಸ್ ಮೈತ್ರಿ ಜನತೆಯ ನಿರ್ಧಾರದ ವಿರುದ್ದ ಅಧಿಕಾರವನ್ನು ಸ್ಥಾಪಿಸಲು ಮುಂದಾಗಿದೆ. ಮಾನಗೆಟ್ಟ ಕುಮಾರ ಸ್ವಾಮಿ ಅಧಿಕಾರದ ಆಸೆಗಾಗಿ ಕಾಂಗ್ರೆಸ್ ಪಕ್ಷದ ಜೊತೆಗೆ ಅಕ್ರಮ ಸಂಬಂಧ ಬೆಳೆಸಲು ಮುಂದಾಗಿದ್ದು, ರಾಜ್ಯ ಕಂಡ ಅತ್ಯಂತ ವಚನ ಭ್ರಷ್ಟ ರಾಜಕೀಯ ನಾಯಕ ಎಂಬ ಅಪಕೀರ್ತಿಗೆ ಪಾತ್ರವಾಗಿದ್ದಾನೆ.

ಧರ್ಮ ಹಾಗು ಅಧರ್ಮದ ಯುದ್ಧದಲ್ಲಿ ಇದೀಗ ಅಧರ್ಮ ತಾಂಡವವಾಡುತ್ತಿದೆ. ಆದರೆ ಒಂದಂತೂ ಸತ್ಯ, ಧರ್ಮ ಯಾವತ್ತಿದ್ದರೂ ಗೆದ್ದೇ ಗೆದ್ದೇ ಗೆಲ್ಲುತ್ತದೆ. ಅಂದು ವಾಜಪೇಯಿ ಅವರೂ ಕೂಡಾ ವಿಶ್ವಾಸ ಮತ ಸಾಭೀತುಪಡಿಸಲಾಗದೆ ರಾಜೀನಾಮೆ ನೀಡಿ ಹೊರ ನಡೆದಿದ್ದರು. ಅಂತೆಯೇ ಇದೀಗ ಬಿಎಸ್ ಯಡಿಯೂರಪ್ಪನವರೂ ರಾಜೀನಾಮೆ ನೀಡಿ ಹೊರನಡೆದಿದ್ದು ಮತ್ತೆ ಭಾರತೀಯ ಜನತಾ ಪಕ್ಷವನ್ನು ಅಧಿಕಾರಕ್ಕೆ ತಂದೇ ತೀರುತ್ತೇವೆ ಎಂಬ ಘೋಷಣೆಯನ್ನು ಮೊಳಗಿಸಿದ್ದಾರೆ.

-ಸುನಿಲ್ ಪಣಪಿಲ

Editor Postcard Kannada:
Related Post