X

ಗೋಹತ್ಯೆ ಬೆಂಬಲಿಸಿದವರೇ ಗೋವನ್ನು ಪೂಜಿಸಿದರು: ಎಚ್ಚರ, ಇದು ಚುನಾವಣಾ ಗಿಮಿಕ್

ಬೇರೆ ದಿನಗಳಲ್ಲಿ ಹಿಂದೂಗಳ ವಿರುದ್ಧವೇ ಪ್ರಹಾರ ನಡೆಸುವ ಕಾಂಗ್ರೆಸ್, ಚುನಾವಣೆ ಬಂದಾಗ ಮಾತ್ರ ಹಿಂದೂಗಳನ್ನು ನಂಬಿಸಿ, ಮೋಸ ಮಾಡಲು ಬೇಕಾದ ದಾರಿಗಳನ್ನು ಹುಡುಕಿಕೊಳ್ಳುತ್ತದೆ. ಅಯ್ಯೋ, ಇವರು ಬಿಜೆಪಿ ಬೆಂಬಲಿಗರು. ಕಾಂಗ್ರೆಸ್ ವಿರುದ್ಧ ಸುಳ್ಳು ಆಪಾದನೆಗಳನ್ನು ಮಾಡುತ್ತಿದ್ದಾರೆ. ಕಾಂಗ್ರೆಸ್ ದೂಷಣೆಯೇ ಇವರ ಕಾಯಕ ಎಂದು ತಿಳಿದುಕೊಳ್ಳಬೇಡಿ. ಯಾಕೆಂದರೆ ಕಾಂಗ್ರೆಸಿಗರ ಇಂತಹ ನೀತಿಗೆ ಸರಿಯಾದ ಸಾಕ್ಷಿಯೂ ಇಲ್ಲಿದೆ.

ಅಂದ ಹಾಗೆ ಹಿಂದೂಗಳು ಹೊಸ ವರುಷ ಎಂದೇ ನಂಬುವ ಯುಗಾದಿ ಹಬ್ಬ ಮೊನ್ನೆಯಷ್ಟೇ ಬಹಳ ವಿಜೃಂಭಣೆಯಿಂದ ಇಡೀ ದೇಶದ ಎಲ್ಲೆಡೆ ನಡೆದಿದೆ. ಕಾಂಗ್ರೆಸಿಗರು ಸಹ ಇದನ್ನು ಆಚರಣೆ ಮಾಡಿದ್ದಾರೆ. ಅಯ್ಯೋ ಹಬ್ಬ ಅಂದ ಮೇಲೆ ಎಲ್ಲರೂ ಆಚರಿಸುತ್ತಾರೆ. ಅದರಲ್ಲಿ ವಿಶೇಷ ಏನಿದೆ? ಎಂದು ಹೇಳುತ್ತಿದ್ದೀರಾ. ವಿಶೇಷ ಇದೆ. ಯುಗಾದಿ ಹಬ್ಬವನ್ನು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಅವರ ಮನೆಯಲ್ಲಿಯೂ ಆಚರಣೆ ಮಾಡಿರುವುದಾಗಿ ಅವರೇ ತಿಳಿಸಿದ್ದಾರೆ.

ಅವರು ಹಬ್ಬ ಆಚರಣೆ ಮಾಡುವ ಬಗ್ಗೆ ನಮ್ಮ ತಕರಾರಲ್ಲ. ಆದರೆ ಅವರ ಇಬ್ಬಗೆ ನೀತಿಯ ಬಗ್ಗೆ ನಮ್ಮ ವಿರೋಧ. ಅವರೇ ಹೇಳಿರುವಂತೆ ‘ಯುಗಾದಿ ಹಬ್ಬದ ಹಿನ್ನೆಲೆಯಲ್ಲಿ ಇಂದು ನಮ್ಮ ನಿವಾಸದಲ್ಲಿ ಗೋ ಪೂಜೆಯನ್ನು ನೆರವೇರಿಸಲಾಯಿತು. ಹಿಂದೂ ಧರ್ಮದಲ್ಲಿ ಗೋ ಪೂಜೆ ಸರ್ವ ಶ್ರೇಷ್ಠವಾಗಿದ್ದು, ನಾಡಿಗೆ ಸಕಲ ಸನ್ಮಂಗಳವಾಗಲಿ ಎಂದು ಗೋ ಮಾತೆಯನ್ನು ಪ್ರಾರ್ಥಿಸಿದೆ’ ಎಂದಿದ್ದಾರೆ.

ಇದೇ ಕಾಂಗ್ರೆಸ್ ಬಿಜೆಪಿ ಸರ್ಕಾರ ಜಾರಿಗೆ ತಂದ ಗೋ ಹತ್ಯೆ ನಿಷೇಧ ಕಾಯ್ದೆಯನ್ನು ವಿರೋಧಿಸಿತ್ತು. ಇದೇ ಡಿ ಕಿ ಶಿವಕುಮಾರ್ ಅವರು ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಗೋ ಹತ್ಯೆ ನಿಷೇಧ ಕಾಯ್ದೆಯನ್ನು ರದ್ದು ಮಾಡುವುದಾಗಿಯೂ ಈ ಹಿಂದೆ ಹೇಳಿದ್ದರು. ಬಿಜೆಪಿ ಗೋವನ್ನು ದೇವ ರೆಂದು, ಶ್ರೇಷ್ಠವೆಂದು ಪೂಜಿಸುವವರ ಭಾವನೆಗೆ ಬೆಲೆ ಕೊಟ್ಟು ಗೋ ಹತ್ಯೆ ನಿಷೇಧ ಕಾಯ್ದೆ ಜಾರಿಗೆ ತಂದಿದ್ದರೆ, ಕಾಂಗ್ರೆಸ್ ಅಲ್ಪಸಂಖ್ಯಾತರನ್ನು ಓಲೈಕೆ ಮಾಡಲು ಈ ಕಾಯ್ದೆಯನ್ನು ರದ್ದು ಮಾಡುವುದಾಗಿ ತಿಳಿಸಿತ್ತು ಎಂಬುದನ್ನು ನಾವು ಮತ್ತೊಮ್ಮೆ ನೆನಪಿಸಿಕೊಳ್ಳಬೇಕು.

ಅದೇ ಡಿ ಕೆ ಶಿವಕುಮಾರ್ ಈಗ ಗೋವಿಗೆ ಪೂಜೆ ಸಲ್ಲಿಸಿರುವುದು, ಹಿಂದೂ ಧರ್ಮದ ಆಚರಣೆಯ ಬಗ್ಗೆ, ಗೋವಿನ ಶ್ರೇಷ್ಠತೆಯ ಬಗ್ಗೆ ಮಾತನಾಡಿರುವುದು ಹಿಂದೂಗಳ ಓಲೈಕೆಗಲ್ಲದೆ ಮತ್ತೇನಕ್ಕೆ ಎನ್ನುವುದು ಸಾರ್ವಜನಿಕರ ಪ್ರಶ್ನೆ. ಚುನಾವಣಾ ಸಮಯದಲ್ಲಿ ಗೋವಿನ ಬಗ್ಗೆ ಪ್ರೀತಿ ಹುಟ್ಟಿರುವ ಡಿಕೆಶಿ ಅವರದ್ದು ಇಬ್ಬಗೆ ನೀತಿಯಲ್ಲದೆ ಮತ್ತೇನು. ಇದು ಜನರನ್ನು ಹಾದಿ ತಪ್ಪಿಸುವ ಹುನ್ನಾರವಲ್ಲವೆ? ಎನ್ನುವುದಕ್ಕೆ ಅವರೇ ಉತ್ತರಿಸಬೇಕಿದೆ.

Post Card Balaga:
Related Post