X

ನಕ್ಸಲರ ಹತ್ಯೆಯ ಸಂಚಿನ ಬಳಿಕ ಮೋದಿ ಮನೆ ಮೇಲೆ ನಿಗೂಢ ಬಾಹ್ಯಾಕಾಶ ವಸ್ತು ಪತ್ತೆ!! 

ಪ್ರಧಾನಿ ನರೇಂದ್ರ ಮೋದಿಯವರ ಯಶಸ್ಸನ್ನು ಸಹಿಸಲಾಗದ ಅದೆಷ್ಟೋ ಮಂದಿ ಕಿಡಿಗೇಡಿಗಳು ಮೋದಿಯವರ ಹತ್ಯೆಯ ಸಂಚನ್ನು ರೂಪಿಸಿದ್ದ ವಿಚಾರ ತಿಳಿದೇ ಇದೆ!! ಅಷ್ಟೇ ಯಾಕೆ, ಇತ್ತೀಚೆಗಷ್ಟೇ ಪ್ರಧಾನಿ ಮೋದಿ ಅವರನ್ನು ಹತ್ಯೆಗೈಯಲು ನಕ್ಸಲರು ಸಂಚು ರೂಪಿಸಿದ್ದರು ಎಂಬ ಆಘಾತಕಾರಿ ಅಂಶಗಳು ವರದಿಯಾದ ಬೆನ್ನಲ್ಲೇ, ಇದೀಗ ಮತ್ತೊಂದು ಆಘಾತಕಾರಿ ವಿಚಾರವೊಂದು ಹೊರಬಿದ್ದಿದೆ.

ಪ್ರಧಾನ ಮಂತ್ರಿ ಮೋದಿಯವರನ್ನು ಶತಾಯ ಗತಾಯ ಮುಗಿಸಲೆಬೇಕೆಂದು ಪಣ ತೊಟ್ಟಿರುವ ಐಸಿಸ್ ಭಾರತದಲ್ಲಿ ತನ್ನ ಸ್ಲೀಪರ್ ಸೆಲ್ ಗಳನ್ನು ಸಕ್ರಿಯವಾಗಿಸಿವೆ ಎನ್ನುವ ವಿಚಾರ ಗೊತ್ತೇ ಇದೆ!! ಕೊಲ್ಲುವವನಿಗಿಂತ ಕಾಯುವವ ಮೇಲು ಎನ್ನುವ ಮಾತಿನಂತೆ ಮೋದಿಯವರ ಮೇಲಾಗಲಿದ್ದ ಅಪಾಯಗಳು ಭದ್ರತಾ ಸಿಬಂದಿಗಳ ಸಮಯ ಪ್ರಜ್ಞೆಯಿಂದ ತಪ್ಪಿ ಹೋಗಿವೆ. ಆದರೆ ಭಾರತದಲ್ಲಿ ಕಾಣದ “ಕೈ”ಗಳು ಐಸಿಸ್ ಉಗ್ರರಿಗೆ ತಮ್ಮ ಬೆಂಬಲವನ್ನು ನೀಡುತ್ತಿವೆ ಎನ್ನುವುದು ಗೊತ್ತಿರುವ ಸತ್ಯ. ಆದರೆ ಇದರ ಬೆನ್ನಲ್ಲೇ, ರಾಜಧಾನಿ ದೆಹಲಿಯಲ್ಲಿನ ಪ್ರಧಾನ ಮೋದಿಯವರ ಮನೆ ಮೇಲೆ ಇತ್ತೀಚೆಗಷ್ಟೇ ನಿಗೂಢ ವಸ್ತುವೊಂದು ಪತ್ತೆಯಾಗಿ ಮತ್ತಷ್ಟು ಆತಂಕ ಸೃಷ್ಟಿಸಿದ್ದ ಘಟನೆಯೊಂದು ಇದೀಗ ಬೆಳಕಿಗೆ ಬಂದಿದೆ.

ಹೌದು… ಪ್ರಧಾನಿ ನರೇಂದ್ರ ಮೋದಿ ಅವರ ಅಧಿಕೃತ ನಿವಾಸದ ಆಗಸದಲ್ಲಿ ಯುಎಫ್‍ಓ (ನಿಗೂಢ ಬಾಹ್ಯಾಕಾಶ ವಸ್ತು) ಪತ್ತೆಯಾದುದನ್ನು ಅನುಸರಿಸಿ ಭದ್ರತಾ ಪಡೆಗಳಲ್ಲಿ ದಿಗಿಲು ಉಂಟಾಗುವಂತೆ ಮಾಡಿದೆ!!

ಅಷ್ಟೇ ಅಲ್ಲದೇ ಇದನ್ನು ಕಂಡು ಭದ್ರತಾ ಪಡೆ ಸಿಬಂದಿಗಳು ಕಂಗಾಲಾಗಿ ಹೋಗಿದ್ದಲ್ಲದೇ, ಈ ನಿಗೂಢ ವಸ್ತುವಿನಿಂದ ಮೋದಿ ಮೇಲೆ ದಾಳಿಯಾದೀತೇ ಎಂಬ ಭಯ ಅವರನ್ನು ಕಾಡತೊಡಗಿತ್ತು. ಆದರೆ ಈ ಯುಎಫ್‍ಒ ಪತ್ತೆಯಾದ ಬೆನ್ನಲ್ಲೇ ಇಡೀ ಪ್ರದೇಶದಲ್ಲಿ ಹೈಅಲರ್ಟ್ ಘೋಷಿಸಿ, ತಪಾಸಣೆ ನಡೆಸಲಾಗಿದ್ದು, ಈ ವೇಳೆ ಯಾವುದೇ ಅಪಾಯಕಾರಿ ವಸ್ತುಗಳು ಕಂಡುಬಂದಿಲ್ಲ ಎಂದು ದೆಹಲಿ ಪೊಲೀಸ್ ಮೂಲಗಳು ತಿಳಿಸಿವೆ.

ಅಷ್ಟಕ್ಕೂ ಈ ಯುಎಫ್‍ಓ (ನಿಗೂಢ ಬಾಹ್ಯಾಕಾಶ ವಸ್ತು) ಪತ್ತೆಯಾಗಿದ್ದಾದರೂ ಹೇಗೆ ಗೊತ್ತೇ??

ಈಗಾಗಲೇ ಪ್ರಧಾನಿ ಮನೆ ಸುತ್ತಮುತ್ತಲಿನ 2 ಕಿಲೋ ಮೀಟರ್ ವ್ಯಾಪ್ತಿಯ ಪ್ರದೇಶವನ್ನು ಹಾರಾಟ ನಿಷಿದ್ಧ ವಲಯ ಎಂದು ಘೋಷಿಸಲಾಗಿದೆ. ಆದರೆ ಜೂನ್ 7ರಂದು ಸಂಜೆ 7.30ರ ವೇಳೆ ಮೋದಿ ಮನೆ ಮೇಲೆ ಯುಎಫ್‍ಒ ಹಾರಾಟ ಕಂಡುಬಂದಿತ್ತು. ಕೂಡಲೇ ಪ್ರಧಾನಿ ಭದ್ರತೆಯ ಉಸ್ತುವಾರಿ ಹೊತ್ತಿರುವ ಎಸ್ ಪಿ ಜಿ ಸಿಬ್ಬಂದಿ ದೆಹಲಿ ಪೊಲೀಸರಿಗೆ ಕರೆ ಮಾಡಿ ಮಾಹಿತಿ ನೀಡಿದ್ದರು. ಆದರೆ ಅವರು ಸ್ಥಳಕ್ಕೆ ಧಾವಿಸುವುದರ ಒಳಗೆ ಯುಎಫ್‍ಒ ನಾಪತ್ತೆಯಾಗಿತ್ತು.

ಆದರೂ ತಕ್ಷಣವೇ ಇಡೀ ಪ್ರದೇಶದಲ್ಲಿ ಹೈಅಲರ್ಟ್ ಘೋಷಿಸಿ, ಎನ್‍ಎಸ್‍ಜಿ, ಸಿಐಎಸ್‍ಎಫ್, ದೆಹಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿಗಮಕ್ಕೆ ಮಾಹಿತಿ ರವಾನಿಸಲಾಯ್ತು. ಮೋದಿ ನಿವಾಸದ ಸುತ್ತಮುತ್ತಲ ಪ್ರದೇಶಕ್ಕೆ ಹೆಚ್ಚಿನ ಪೊಲೀಸ್ ಪಡೆಯನ್ನು ರವಾನಿಸಲಾಯ್ತು. ನಂತರ ಇಡೀ ಪ್ರದೇಶವನ್ನು ತಪಾಸಣೆ ಮಾಡಿದ್ದು, ಈ ವೇಳೆ ಯಾವುದೇ ಅಪಾಯಕಾರಿ ವಸ್ತು ಕಂಡುಬರಲಿಲ್ಲ. ಬಳಿಕ ಅಧಿಕಾರಿಗಳು ನಿರುಮ್ಮಳರಾದರು ಎಂದು ಮೂಲಗಳು ತಿಳಿಸಿವೆ.

ಆದರೆ ಈ ಹಿಂದೆ 2017ರಲ್ಲೂ ಸಂಸತ್ ಆವರಣದ ಬಳಿ ಇಂಥದ್ದೇ ಯುಎಫ್‍ಒ ಪತ್ತೆಯಾಗುವ ಮೂಲಕ ಆತಂಕ ಸೃಷ್ಟಿಸಿದ್ದು, ಈ ಬಾರಿ ಪ್ರಧಾನಿ ಮೋದಿಯವರ ಅಧಿಕೃತ ನಿವಾಸದ ಮೇಲೆ ಕಾಣಿಸಿಕೊಂಡು ಮತ್ತೊಂದು ಬಾರಿ ಆತಂಕ ಉಂಟಾಗುವಂತೆ ಮಾಡಿದೆ. ಹಾಗಿದ್ದರೂ ಪ್ರಧಾನಿ ಮೋದಿ ನಿವಾಸದ ಆಗಸದಲ್ಲಿ ಯುಎಫ್‍ಓ ಪತ್ತೆಯಾಗಿದೆ ಎಂಬ ಸುದ್ದಿ ಹರಡುತ್ತಲೇ ಟ್ವಿಟರಾದಿಗಳು ತಮ್ಮ ಮನ ಬಂದ ರೀತಿಯ ಊಹಾಪೋಹಗಳನ್ನು ಟ್ವಿಟರ್‍ನಲ್ಲಿ ಹರಿಯಬಿಡತೊಡಗಿದರು. ಶಕುನ, ಅಪಶಕುನ ಮುಂತಾಗಿ ಹಲವು ಬಗೆಯ ಅಭಿಪ್ರಾಯಗಳು ಪುಂಖಾನುಪುಂಖವಾಗಿ ಟ್ವಿಟರ್‍ನಲ್ಲಿ ನೆರೆಯ ರೂಪದಲ್ಲಿ ಹರಿದು ಬಂದಿದೆ!!

ಇನ್ನು ಯುಎಫ್‍ಒ ಪತ್ತೆಯಾಗಿದ್ದನ್ನು ದೆಹಲಿ ಪೊಲೀಸರು ಖಚಿತಪಡಿಸಿದ್ದರೂ, ಸುರಕ್ಷತೆಯ ದೃಷ್ಟಿಯಿಂದ ಹೆಚ್ಚಿನ ಮಾಹಿತಿ ಬಹಿರಂಗಪಡಿಸಲು ನಿರಾಕರಿಸಿದ್ದಾರೆ ಎನ್ನಲಾಗಿದೆ. ಒಟ್ಟಿನಲ್ಲಿ ನರೇಂದ್ರ ಮೋದಿ ವಿರುದ್ಧ ಹತ್ಯೆಯ ಸಂಚು ರೂಪಿಸಿದ್ದ ವರದಿಗಳ ಬೆನ್ನಲ್ಲೇ ಈ ಯುಎಫ್‍ಒ (ಅನ್ ಐಡೆಂಡಿಫೈಡ್ ಫ್ಲೈಯಿಂಗ್ ಆಬ್ಜೆಕ್ಟ್ – ಗುರುತಿಸಲಾಗದ ಹಾರಾಡುತ್ತಿದ್ದ ವಸ್ತು) ಪತ್ತೆಯಾಗಿ ಭಾರೀ ಆತಂಕ ಸೃಷ್ಟಿಸಿದ್ದಂತೂ ಅಕ್ಷರಶಃ ನಿಜ.

ಮೂಲ:
https://www.hindustantimes.com/delhi-news/ufo-sighted-near-pm-modi-s-house-on-june-7-search-finds-nothing/story-EaVqjg5vbJYeJQoMmYQu5K.html

– ಅಲೋಖಾ

Editor Postcard Kannada:
Related Post