X

ಸತ್ತೇ ಹೋಗುತ್ತೇನೆ ಎಂದ ಸಿಎಂ ಕುಮಾರಸ್ವಾಮಿ.! ಟ್ವಿಟ್ಟರ್ ನಲ್ಲಿ ಕಾಲೆಳೆದ ಕರ್ನಾಟಕ ಫೈರ್ ಬ್ರಾಂಡ್..!

ಇತ್ತೀಚಿನ ದಿನಗಳಲ್ಲಿ ಟ್ವಿಟ್ಟರ್ ವಾರ್ ಬಹಳ ಜೋರಾಗಿಯೇ ನಡೆಯುತ್ತಿದೆ. ಯಾವುದೇ ಪ್ರತಿಕ್ರಿಯೆಯೂ ತತ್‌ಕ್ಷಣ ನೀಡಲು ಸುಲಭವಾಗಿ ಇರುವ ಮಾರ್ಗವೇ ಟ್ವಿಟ್ಟರ್. ಆದ್ದರಿಂದಲೇ ದಿನದಿಂದ ದಿನಕ್ಕೆ ಟ್ವಿಟ್ಟರ್ ವಾರ್ ಹೆಚ್ಚಾಗುತ್ತಿದೆ. ಇದೀಗ ರಾಜ್ಯ ನಾಯಕರ ಮಧ್ಯೆ ನಡೆದ ಟ್ವಿಟ್ ವಾರ್ ಭಾರೀ ಸದ್ದು ಮಾಡಿದೆ. ಯಾಕೆಂದರೆ ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ‘ಫಿಟ್‌ನೆಸ್ ಚಾಲೆಂಜ್’ ಬಗ್ಗೆ ಒಂದು ವಿಡಿಯೋ ಹಾಕಿದ್ದು, ಇಡೀ ದೇಶಾದ್ಯಂತ ಸಖತ್ ವೈರಲ್ ಆಗುತ್ತಿದೆ.‌ ನರೇಂದ್ರ ಮೋದಿಯವರು ತಾವು ಮಾಡಿದ ವಿಡಿಯೋ ವನ್ನು ಕರ್ನಾಟಕ ಮುಖ್ಯಮಂತ್ರಿ ಕುಮಾರಸ್ವಾಮಿ ಅವರಿಗೆ ಟ್ಯಾಗ್ ಮಾಡಿ ಚಾಲೆಂಜ್ ಸ್ವೀಕರಿಸುವಂತೆ ಹೇಳಿಕೊಂಡಿದ್ದರು. ಆದರೆ ಕುಮಾರಸ್ವಾಮಿ ಅವರು , ನಾನು ಮೋದಿಯವರಿಗಿಂತ ಫಿಟ್ ಆಗಿದ್ದೇನೆ, ನನ್ನ ಆರೋಗ್ಯದ ಬಗ್ಗೆ ಕಾಳಜಿ ವಹಿಸಿಕೊಂಡಿದ್ದಕ್ಕೆ ಧನ್ಯವಾದ ಹೇಳಿಕೊಂಡಿದ್ದರು. ಆದರೆ ಇದೀಗ ಈ ವಿಚಾರವಾಗಿಯೇ ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಕಾಲೆಳೆದ ಕರ್ನಾಟಕ ಫೈರ್ ಬ್ರಾಂಡ್, ಬಿಜೆಪಿ ಕೇಂದ್ರ ಸಚಿವರೂ ಆಗಿರುವಂತಹ ಅನಂತ್ ಕುಮಾರ್ ಹೆಗ್ಡೆ, ಟ್ವಿಟ್ಟರ್ ನಲ್ಲಿ ಮುಖ್ಯಮಂತ್ರಿಗಳ ವಿರುದ್ಧ ಟೀಕಾಪ್ರಹಾರವನ್ನೇ ಮಾಡಿದ್ದಾರೆ.!

ಅಧಿಕಾರ ಸಿಗದೇ ಹೋದರೆ ಸತ್ತೇ ಹೋಗುತ್ತೇನೆ..!

ಕುಮಾರಸ್ವಾಮಿ ಅವರು ಚುನಾವಣೆಗೂ ಮೊದಲು ಅಧಿಕಾರ ಅಧಿಕಾರ ಎಂದು ಬೊಬ್ಬೆ ಇಡುತ್ತಿದ್ದವರು. ಯಾಕೆಂದರೆ ಕುಮಾರಸ್ವಾಮಿ ಅವರು ಹೇಳಿಕೊಂಡಿರುವ ಪ್ರಕಾರ, ಚುನಾವಣೆಯಲ್ಲಿ ನನ್ನನ್ನು ಗೆಲ್ಲಿಸದೇ ಹೋದಲ್ಲಿ ನಾನು ಸತ್ತೇ ಹೋಗುತ್ತೇನೆ ಎಂದು ಗೋಳಾಡಿಕೊಂಡಿದ್ದರು.‌ ಕೇವಲ ಅಧಿಕಾರದ ಆಸೆಗಾಗಿ ಜನರ ಎದುರು ಕಣ್ಣೀರಿಟ್ಟು ಅತ್ತು ಗೋಳಾಡಿಕೊಂಡು ಕನಿಕರ ಹುಟ್ಟುವಂತೆ ಮಾಡಿದ್ದರು. ಆದರೂ ಚುನಾವಣೆಯಲ್ಲಿ ಹೀನಾಯವಾಗಿ ಸೋಲು ಕಂಡ ಜೆಡಿಎಸ್ , ಕಾಂಗ್ರೆಸ್ ಜೊತೆ ಮೈತ್ರಿ ಮಾಡಿಕೊಂಡು ಇದೀಗ ಸರಕಾರ ರಚಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆದರೆ ನರೇಂದ್ರ ಮೋದಿಯವರು ನೀಡಿರುವ ಫಿಟ್‌ನೆಸ್ ಚಾಲೆಂಜ್ ಬಗ್ಗೆ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಪ್ರಧಾನಿಗೆ ಟಾಂಗ್ ನೀಡಿದ್ದರು. ಆದರೆ ಇದೀಗ ಈ ಬಗ್ಗೆ ಟ್ವಿಟ್ಟರ್ ನಲ್ಲಿ ಕುಮಾರಸ್ವಾಮಿ ಅವರ ಕಾಲೆಳೆದ ಅನಂತ್ ಕುಮಾರ್ ಹೆಗ್ಡೆ, ಚುನಾವಣೆಗೂ ಮೊದಲು ಸತ್ತೇ ಹೋಗುತ್ತೇನೆ ಎಂದವರು ಇದೀಗ ತಾವು ಫಿಟ್ ಆಗಿದ್ದೇನೆ ಎಂದು ಹೇಳುತ್ತಿದ್ದಾರೆ. ಈ ರೀತಿ ಗೋಳಾಡಿಕೊಂಡು ಅಧಿಕಾರ ವಹಿಸಿಕೊಂಡು ಆಡಳಿತ ನಡೆಸುವುದಕ್ಕೆ ಯಾವುದೇ ಅರ್ಥವಿಲ್ಲ ಎಂದು ಟೀಕಿಸಿದ್ದಾರೆ.

ಕುಮಾರಸ್ವಾಮಿ ಅಪ್ರಬುದ್ಧ ಮುಖ್ಯಮಂತ್ರಿ..!

ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗಿರುವುದೇ ಒಂದು ವಿಸ್ಮಯ. ಯಾಕೆಂದರೆ ಅವರೊಬ್ಬ ಅಪ್ರಬುದ್ಧ ಮುಖ್ಯಮಂತ್ರಿ ಎಂದು ಟೀಕಿಸಿದ ಅನಂತ್ ಕುಮಾರ್ ಹೆಗ್ಡೆ, ಪ್ರಧಾನಿ ಮೋದಿಯವರು ಫಿಟ್‌ನೆಸ್ ಚಾಲೆಂಜ್ ಸರಿಯಾಗಿಯೇ ನೀಡಿದ್ದಾರೆ. ಆದರೆ ಕುಮಾರಸ್ವಾಮಿ ಅವರಿಗೆ ಇದು ತಿಳಿಯದೆ ಬಾಯಿಗೆ ಬಂದ ರೀತಿ ಹೇಳಿಕೆ ನೀಡಿದ್ದಾರೆ. ಆದ್ದರಿಂದಲೇ ಈ ರೀತಿ ನಡೆದುಕೊಂಡಿದ್ದಾರೆ ಎಂದು ಟ್ವಿಟ್ಟರ್ ನಲ್ಲಿ ಹಿಗ್ಗಾಮುಗ್ಗ ತರಾಟೆಗೆ ತೆಗೆದುಕೊಂಡ ಹೆಗ್ಡೆ ಟೀಕಾಪ್ರಹಾರವನ್ನೇ ನಡೆಸಿದ್ದಾರೆ.

ಆದ್ದರಿಂದ ಕುಮಾರಸ್ವಾಮಿ ಅವರು ಪ್ರಧಾನಿಗೆ ಟಾಂಗ್ ನೀಡಿದರೆ, ಇತ್ತ ಹೆಗ್ಡೆ ಸಿಎಂ ಕುಮಾರಸ್ವಾಮಿ ಅವರನ್ನೇ ಟೀಕೆಗೆ ಬಳಸಿಕೊಂಡಿದ್ದಾರೆ. ಅನಂತ್ ಕುಮಾರ್ ಹೆಗ್ಡೆ ಮಾಡಿರುವ ಟ್ವೀಟ್ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ..!

–ಅರ್ಜುನ್

Editor Postcard Kannada:
Related Post