X

ಗ್ರಾಮೀಣ ಪ್ರದೇಶಗಳಿಗೆ ಇಸ್ರೋ ನೀಡಿದೆ ಗುಡ್ ನ್ಯೂಸ್!! ಡಿಜಿಟಲ್ ಇಂಡಿಯಾದ ಮೂಲಕ ಮತ್ತೆ ಅಚ್ಛೇ ದಿನ್!!

ಭಾರತಕ್ಕೆ ವಿಶ್ವದಲ್ಲೇ ಒಂದು ಅತ್ಯುತ್ತಮ ಸ್ಥಾನಮಾನವನ್ನು ಕಲ್ಪಿಸುವ ಸಲುವಾಗಿ ನರೇಂದ್ರ ಮೋದಿ ಸರ್ಕಾರವು ಭಾರತದ ನಾಗರಿಕರನ್ನು, ಮಹಿಳೆಯರನ್ನು ಸಬಲೀಕರಣಗೊಳಿಸಿ, ಗ್ರಾಮೀಣ ಭಾರತವನ್ನು ಸಂಪೂರ್ಣ ಡಿಜಿಟಲ್ ಭಾರತವನ್ನಾಗಿ ಮಾಡಲು “ಡಿಜಿಟಲ್ ಇಂಡಿಯಾ” ಯೋಜನೆಯನ್ನು ಜಾರಿಗೆ ತಂದಿರುವ ವಿಚಾರ ತಿಳಿದೇ ಇದೆ. ಹಾಗಾಗಿ ಇದೀಗ ಗ್ರಾಮೀಣ ಭಾರತವನ್ನು ಸಂಪೂರ್ಣ ಡಿಜಿಟಲ್ ಭಾರತವನ್ನಾಗಿ ಮಾಡುವ ಉದ್ದೇಶದಿಂದ ಇಸ್ರೋ ಗ್ರಾಮೀಣ ಪ್ರದೇಶಗಳಿಗೆ ಶುಭ ಸುದ್ದಿಯೊಂದನ್ನು ನೀಡಿದೆ.

ಹೌದು… ಡಿಜಿಟಲ್ ಇಂಡಿಯಾ ಯೋಜನೆಯಡಿ ಗ್ರಾಮೀಣ ಭಾಗದ ಇಂಟರ್ನೆಟ್ ಸಂಪರ್ಕವನ್ನು ಉತ್ತೇಜಿಸಲು ಭಾರತೀಯ ಬಾಹ್ಯಾಕಾಶ ಸಂಸ್ಥೆ (ಇಸ್ರೋ) 4 ಸ್ಯಾಟಲೈಟ್ ಗಳನ್ನು ಉಡಾವಣೆಗೊಳಿಸಲು ಸಜ್ಜಾಗಿದ್ದು, ಗ್ರಾಮೀಣ ಜನತೆಯ ಮೊಗದಲ್ಲಿ ಸಂತಸ ಮನೆ ಮಾಡುವಂತೆ ಮಾಡಿದೆ. ಅಷ್ಟೇ ಅಲ್ಲದೇ ಭಾರತ ದೇಶಕ್ಕೆ ವಿಶ್ವದಲ್ಲೇ ಒಂದು ಅತ್ಯುತ್ತಮ ಸ್ಥಾನಮಾನ ದೊರಕಿಸಿ ಕೊಡಲಿದೆಯಲ್ಲದೇ ಈ ಮೂಲಕ ನರೇಂದ್ರ ಮೋದಿಯವರ ರಾಜತಾಂತ್ರಿಕತೆಯ ಯಶಸ್ಸಿಗೆ ಮತ್ತೊಂದು ಗರಿ ಬಂದಂತಾಗಿದೆ.

ಈಗಾಗಲೇ ದೇಶದ 5 ಕೋಟಿ ಗ್ರಾಮೀಣ ಭಾರತೀಯರಿಗೆ 5 ಲಕ್ಷ ವೈಫೈ ವ್ಯವಸ್ಥೆಗಳನ್ನು ದೊರಕಿಸಿಕೊಡಲಾಗುವುದು ಎಂದು ಕೇಂದ್ರ ಬಜೆಟ್ ಮಂಡನೆಯ ವೇಳೆ ಅರುಣ್ ಜೇಟ್ಲಿ ಘೋಷಿಸಿರುವ ವಿಚಾರ ತಿಳಿದೇ ಇದೆ!! ಹಾಗಾಗಿ ಗ್ರಾಮೀಣ ಭಾಗದ ಅಂತರ್ಜಾಲ ಸಂಪರ್ಕವನ್ನು ಉತ್ತೇಜಿಸಲು 4 ಸ್ಯಾಟಲೈಟ್ ಗಳನ್ನು ಉಡಾವಣೆಗೊಳಿಸಲು ಇಸ್ರೋ ಸಜ್ಜಾಗಿರುವ ಬಗ್ಗೆ ಇಸ್ರೋ ಮುಖ್ಯಸ್ಥ ಕೆ.ಶಿವನ್ ಮಾಹಿತಿ ನೀಡಿದ್ದಾರೆ.

ಬಿಸಿ ಬಲೂನ್ (ಏರೋಸ್ಟಾಟ್ಸ್)ಗಳನ್ನು ಬಳಸಿ ಗುಡ್ಡಗಾಡು ಹಾಗೂ ಗ್ರಾಮೀಣ ಭಾಗದ ಪ್ರದೇಶಗಳಲ್ಲಿ ವೈಫೈ ಸೇವೆ ಒದಗಿಸಿದ ಜಾರ್ಖಂಡ್ ಸರಕಾರ!!

ಇತ್ತೀಚೆಗಷ್ಟೇ ಗುಡ್ಡಗಾಡು ಹಾಗೂ ಗ್ರಾಮೀಣ ಭಾಗದ ಪ್ರದೇಶಗಳಲ್ಲಿ ವೈಫೈ ಸೇವೆ ಒದಗಿಸಲು ಬಿಸಿ ಬಲೂನ್ (ಏರೋಸ್ಟಾಟ್ಸ್)ಗಳನ್ನು ಬಳಸಲು ಜಾರ್ಖಂಡ್ ಸರಕಾರ ಹೊಸ ಉಪಾಯ ಹುಡುಕಿತ್ತು. ಅಷ್ಟೇ ಅಲ್ಲದೇ ಪ್ರಾಯೋಗಿಕವಾಗಿ ಈ ಯೋಜನೆ ಜಾರಿಗೊಂಡಿದ್ದು, ಉತ್ತರಾಖಂಡದ ಮುಖ್ಯಮಂತ್ರಿ ತ್ರಿವೇಂದ್ರ ಸಿಂಗ್ ರಾವತ್ ಚಾಲನೆ ನೀಡಿದ್ದರು!! ದಾರದ ನಿಯಂತ್ರಣ ಹೊಂದಿರುವ ಹೈಡ್ರೋಜನ್ ತುಂಬಿದ ಬಲೂನ್‍ನಲ್ಲಿ ಕ್ಯಾಮೆರಾ, ಇಂಟರ್‍ನೆಟ್ ವೈಫೈ ಮಾಡೆಮ್ ಹಾಗೂ ಟ್ರಾನ್ಸ್‍ರಿಸೀವರ್ ಉಪಕರಣಗಳನ್ನು ಅಳವಡಿಸಿ, ವೈಫೈ ಸೇವೆ ನೀಡಲು ಈ ಯೋಜನೆ ರೂಪಿಸಲಾಗಿದೆ.

6 ಮೀಟರ್ ಉದ್ದದ ಬಲೂನ್ 14 ದಿನಗಳ ವರೆಗೆ ಗಾಳಿಯಲ್ಲಿ ತೇಲಾಡಲು ಅರ್ಹವಾಗಿದ್ದು, 7.5 ಕಿ.ಮೀ ವ್ಯಾಪ್ತಿಯಲ್ಲಿ ಇಂಟರ್ನೆಟ್ ಸೇವೆ ಒದಗಿಸಲು ಸಾಧ್ಯವಾಗಲಿದೆಯಲ್ಲದೇ ಇದನ್ನು 5 ಎಂಬಿಪಿಎಸ್ ಸ್ಪೀಡ್‍ನಲ್ಲಿ ಬ್ರೌಸಿಂಗ್ ಮಾಡಬಹುದಾಗಿದೆ. ಆರಂಭದಲ್ಲಿ ಉಚಿತ ವೈಫೈ ಸೇವೆ ಒದಗಿಸಲು ತೀರ್ಮಾನಿಸಲಾಗಿದ್ದು, ಪಾಸ್‍ವರ್ಡ್ ಇಲ್ಲದೆ, ವೈಫೈ ಲಾಗ್ ಇನ್ ಆಗಬಹುದು ಎಂದು ಯೋಜನೆಯ ಮುಖ್ಯಸ್ಥ ಹಾಗೂ ಮಾಹಿತಿ ತಂತ್ರಜ್ಞಾನ ಅಭಿವೃದ್ಧಿ ಸಂಸ್ಥೆ(ಐಟಿಡಿಎ) ನಿರ್ದೇಶಕ ಅಮಿತ್ ಸಿನ್ಹಾ ತಿಳಿಸಿದ್ದರು. ಆದರೆ ಇದೀಗ ಗ್ರಾಮೀಣ ಭಾಗಕ್ಕೂ ಇಂಟರ್ನೆಟ್ ಸಂಪರ್ಕವನ್ನು ಉತ್ತೇಜಿಸುವ ಸಲುವಾಗಿ ಭಾರತೀಯ ಬಾಹ್ಯಾಕಾಶ ಸಂಸ್ಥೆ (ಇಸ್ರೋ) 4 ಸ್ಯಾಟಲೈಟ್ ಗಳನ್ನು ಉಡಾವಣೆಗೊಳಿಸಲು ಸಜ್ಜಾಗಿದೆ.

ಕೇಂದ್ರ ನೀಡಿರುವ 10,400 ಕೋಟಿ ರೂಪಾಯಿ ಯಿಂದ 10 ಸಾವಿರಕ್ಕೂ ಅಧಿಕ ಉದ್ಯೋಗ ಸೃಷ್ಟಿ!!

ಹೌದು.. ‘ಚಂದ್ರಯಾನ 2’ ಮಿಶನ್ ಕೂಡ ಟ್ರ್ಯಾಕ್ ನಲ್ಲಿದ್ದು, ಈ ವರ್ಷದ ಅಂತ್ಯದೊಳಗೆ ಉಡಾವಣೆಗೊಳ್ಳುವ ನಿರೀಕ್ಷೆ ಇದೆ. ಪ್ರಸ್ತುತ ಜಿಸ್ಯಾಟ್ 20 ಮತ್ತು ಜಿಸ್ಯಾಟ್ 11 ಉಡಾವಣೆಗೆ ಸಿದ್ದಗೊಳ್ಳುತ್ತಿದೆ ಎಂದು ಇಸ್ರೋ ಮುಖ್ಯಸ್ಥ ಕೆ.ಶಿವನ್ ಹೇಳಿದ್ದಾರೆ. ಅಲ್ಲದೇ, ಇತ್ತೀಚೆಗೆ ಕೇಂದ್ರ ನೀಡಿರುವ 10,400 ಕೋಟಿ ರೂಪಾಯಿ ಬಜೆಟ್ ಫಂಡ್ ಇಸ್ರೋಗೆ ಸ್ಥಳೀಯ ಆರ್ಥಿಕತೆ ಮತ್ತು 10 ಸಾವಿರಕ್ಕೂ ಅಧಿಕ ಉದ್ಯೋಗ ಸೃಷ್ಟಿಗೆ ಸಹಾಯಕವಾಗಿದೆ ಎಂದು ಅವರು ಅಭಿಪ್ರಾಯ ಪಟ್ಟಿದ್ದಾರೆ.

ಇನ್ನು, ತಮ್ಮ ಸಂಸ್ಥೆ 30 ದೇಶೀಯ ಮತ್ತು 10 ಹೈಎಂಡ್ ಜಿ ಎಸ್ ಎಲ್ ವಿ ರಾಕೆಟ್ ಗಳನ್ನು ಮುಂದಿನ ನಾಲ್ಕು ವರ್ಷದೊಳಗೆ ಉತ್ಪಾದಿಸಲಿದೆ ಎಂದಿರುವ ಇಸ್ರೋ ಮುಖ್ಯಸ್ಥ ಕೆ. ಶಿವನ್, ಸ್ಯಾಟಲೈಟ್ ಮಾಹಿತಿಗಳನ್ನು ಟ್ಯಾಪ್ ಮಾಡುವ ಪರಿಕರಗಳ 700 ಯುನಿಟ್ ಗಳು ಸಿದ್ದಗೊಂಡಿದೆ ಎಂದು ಹೇಳಿದ್ದಾರೆ. ಇದರಲ್ಲಿ 500ರನ್ನು ಕೇರಳದ ಮೀನುಗಾರರಿಗೆ, 200ನ್ನು ತಮಿಳುನಾಡಿನ ಮೀನುಗಾರರಿಗೆ ನೀಡಲಾಗುತ್ತದೆ ಎಂದಿದ್ದಾರೆ.

ಒಟ್ಟಿನಲ್ಲಿ ಗ್ರಾಮೀಣ ಭಾಗದ ಜನತೆಗೆ ಸುಲಭವಾಗಿ ಇಂಟರ್ನೆಟ್ ಸೌಕರ್ಯ ಒದಗಿಸುವ ಸಲುವಾಗಿ ಇಸ್ರೋ 4 ಸ್ಯಾಟಲೈಟ್ ಗಳನ್ನು ಉಡಾವಣೆಗೊಳಿಸಲು ಸಜ್ಜಾಗಿದ್ದು, ಈ ಮೂಲಕ ಭಾರತ ದೇಶಕ್ಕೆ ವಿಶ್ವದಲ್ಲೇ ಅತ್ಯುತ್ತಮ ಸ್ಥಾನಮಾನ ಕಲ್ಪಿಸಿ ಕೊಡುವಲ್ಲಿ ಇದು ನೆರವಾಗಲಿದೆ.

ಮೂಲ:
https://www.hindustantimes.com/india-news/isro-to-launch-more-satellites-to-boost-rural-internet-connectivity-under-digital-india-project/story-kPYg0pDxGwtc50OgtDo25L.html

– ಅಲೋಖಾ

Editor Postcard Kannada:
Related Post