X

ನರೇಂದ್ರ ಮೋದಿಯವರ ಜಿಎಸ್ ಟಿ ಜಾರಿಯನ್ನು ವಿರೋಧಿಸಿದವರಿಗೆ ಕೇಂದ್ರ ಹಣಕಾಸು ಸಚಿವಾಲಯ ನೀಡಿದೆ ಶಾಕಿಂಗ್ ನ್ಯೂಸ್!!

ಪ್ರಧಾನಿ ನರೇಂದ್ರ ಮೋದಿಯವರು ಜಾರಿಗೆ ತಂದಂತಹ ನೋಟು ನಿಷೇಧ, ಜಿಎಸ್ ಟಿ ಜಾರಿ, ತ್ರಿವಳಿ ತಲಾಖ್ ರದ್ದು ಮಸೂದೆ, ಪಾಕಿಸ್ತಾನದ ಮೇಲೆ ಸರ್ಜಿಕಲ್ ದಾಳಿ ಹೀಗೆ ಯಾವುದೇ ಪ್ರಮುಖ ನಿರ್ಧಾರ ಕೈಗೊಂಡರೂ ಕೂಡ ಸುಖಾಸುಮ್ಮನೆ ವಿರೋಧಿಸುತ್ತಲೇ ಬರುತ್ತಿರುವ ವಿರೋಧಿಗಳಿಗೆ ಇದೀಗ ಶಾಕಿಂಗ್ ಸುದ್ದಿಯೊಂದು ಕಾದಿದೆ!!

ಕೇಂದ್ರ ಸರ್ಕಾರ ಭ್ರಷ್ಟಾಚಾರ ತೊಲಗಿಸಲು ಹಾಗೂ ತೆರಿಗೆ ಪದ್ಧತಿ ಸುಧಾರಣೆ ಮಾಡಲು ನೋಟುನಿಷೇಧ ಹಾಗೂ ಸರಕು ಮತ್ತು ಸೇವಾ ತೆರಿಗೆ (ಜಿಎಸ್ ಟಿ ) ಜಾರಿಗೊಳಿಸಿದಾಗಲಂತೂ ಈ ಮೋದಿ ವಿರೋಧಿ ಪಡೆ ಆರ್ಥಿಕ ತಜ್ಞರಂತೆ, ಭಾರತದ ಆರ್ಥಿಕತೆ ಕುಸಿಯುತ್ತದೆ, ಜಿಡಿಪಿ ದರ ಕುಸಿಯುತ್ತಿದೆ, ಮೋದಿ ಅವರು ದೇಶದ ವಿತ್ತೀಯ ವ್ಯವಸ್ಥೆಯನ್ನೇ ಬುಡಮೇಲು ಮಾಡಿದರು ಎಂದು ಬೊಬ್ಬೆ ಹಾಕಿ ಮೋದಿಯವರ ಈ ಕ್ರಮವನ್ನು ತೀವ್ರವಾಗಿ ವಿರೋಧಿಸಿದ್ದ ವಿಚಾರ ಗೊತ್ತೇ ಇದೆ!!

ಆದರೆ ಭಾರತದ ನೋಟು ನಿಷೇಧ ಹಾಗೂ ಜಿಎಸ್ ಟಿ ದೇಶದ ಆರ್ಥಿಕತೆ ಮೇಲೆ ಸಕಾರಾತ್ಮಕ ಪರಿಣಾಮ ಬೀರುತ್ತಿದೆ ಎಂದು ಗೊತ್ತಾದಾಗ ಆ ಬಗ್ಗೆ ತುಟಿಕ್ ಪಿಟಿಕ್ ಎನ್ನಲೇ ಇಲ್ಲ!! ಅಷ್ಟೇ ಯಾಕೆ?? ಆರ್ಥಿಕತೆಯಲ್ಲಿ ಭಾರತ ಬ್ರಿಟನ್ ಆರ್ಥಿಕತೆಯನ್ನು ಸರಿಗಟ್ಟಿದ್ದು, 2018ರ ವೇಳೆಗೆ ಶೇಕಡಾ 7.3ರಷ್ಟು ಮತ್ತು 2019ರಲ್ಲಿ ಶೇಕಡಾ 7.5ರಷ್ಟು ಆರ್ಥಿಕ ಬೆಳವಣಿಗೆ ಕಾಣುವ ನಿರೀಕ್ಷೆ ಇದೆ ಎಂದು ವಿಶ್ವಬ್ಯಾಂಕ್ ಹೇಳಿದೆ. ಹಾಗಾಗಿ ಭಾರತದ ಚೇತರಿಕೆಯಿಂದಾಗಿ ದಕ್ಷಿಣ ಏಷ್ಯಾದ ಆರ್ಥಿಕತೆ ಮೇಲಕ್ಕೇರಲಿದೆ ಎಂದರೆ ಇದಲ್ಲವೇ ಅಚ್ಛೇ ದಿನ್!!

ಹೌದು… ನೋಟು ನಿಷೇಧ, ಜಿಎಸ್ ಟಿ ಜಾರಿಯಿಂದಾಗಿ ಭಾರತದ ಜಿಡಿಪಿ ಕುಸಿದೆ ಎಂದು ಹೇಳುತ್ತಿದ್ದವರ ಬಾಯಿ ನರೇಂದ್ರ ಮೋದಿ ಸರ್ಕಾರವು ಬೀಗ ಜಡಿದೇ ಬಿಟ್ಟರು!! ಅದಕ್ಕೆ ಸಾಕ್ಷಿ ಎನ್ನುವಂತೆ ಇದುವರೆಗೆ ಇದ್ದ ಭಾರತದ ಜಿಡಿಪಿ ಶೇ.6.5 ರಿಂದ ಶೇ.7.2ನ್ನು ತಲುಪುವ ಮೂಲಕ ದೇಶದ ಅಭಿವೃದ್ಧಿಯ ದಿಕ್ಕನ್ನೇ ಇದು ಬದಲಾಯಿಸಿ ಬಿಟ್ಟಿತ್ತು!! ಆದರೆ ಇದೀಗ ಸರ್ಕಾರ 2017-18ರಲ್ಲಿ ಜಿಎಸ್ ಟಿ ಯಿಂದ 7.41 ಲಕ್ಷ ಕೋಟಿ ರೂಪಾಯಿ ಗಳನ್ನು ಸಂಗ್ರಹಿಸಿದೆ ಎಂದು ಕೇಂದ್ರ ಹಣಕಾಸು ಸಚಿವಾಲಯ ಹೇಳಿದೆ.

ಹಣಕಾಸು ಮತ್ತು ಸೇವೆಗಳ ಚಟುವಟಿಕೆ ವೃದ್ಧಿಗೆ ಹಾಗೂ ದೇಶದ ಒಟ್ಟಾರೆ ಆರ್ಥಿಕ ಅಭಿವೃದ್ಧಿಗೆ ಪೂರಕವಾಗಿ ಪರೋಕ್ಷ ತೆರಿಗೆ ಪದ್ಧತಿಯಲ್ಲಿ ಸುಧಾರಣೆ ತರುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಮತ್ತು ರಾಜ್ಯಗಳ ಹಣಕಾಸು ಸಚಿವರುಗಳ ಸಮಿತಿ ಕಳೆದ ಕೆಲವು ವರ್ಷಗಳಿಂದ ಸಾಕಷ್ಟು ಶ್ರಮಿಸಿದೆ. ಅಷ್ಟೇ ಅಲ್ಲದೆ ನಿರಂತರ ಚರ್ಚೆ, ತಜ್ಞರ ಅಭಿಪ್ರಾಯ, ಅನುಭವಿಗಳ ಸಲಹೆ, ಶಿಫಾರಸುಗಳನ್ನು ಅನುಸರಿಸಿ ದೇಶದ ವಾಣಿಜ್ಯ ಲೋಕದ ತೆರಿಗೆ ಕ್ರಮದಲ್ಲಿ ಸುಧಾರಣೆಗೆ ನಡೆದಿರುವ ಪ್ರಯತ್ನ ನಿಜಕ್ಕೂ ಕೂಡ ಅಚ್ಚರಿ ತರಿಸುವಂತಹದ್ದೇ ಆಗಿದೆ!!

ದೇಶದಲ್ಲಿ ಜಿಎಸ್ ಟಿ ಕಾಯ್ದೆ ಜಾರಿಯಾದ ನಂತರ ವರ್ತಕರು ನಿಧಾನವಾಗಿ ಹೊಸ ತೆರಿಗೆ ವ್ಯವಸ್ಥೆಗೆ ಹೊಂದಿಕೊಳ್ಳುತ್ತಿದ್ದಾರೆ. ಅಲ್ಲದೇ, ವ್ಯಾಪಾರ-ವಹಿವಾಟಿನಲ್ಲಿ ಒಂದು ಹಂತದ ಸ್ಥಿರತೆ ಕಂಡುಬರುತ್ತಿದೆ. ಈ ನಡುವೆ ಜಿಎಸ್ ಟಿ ಮಂಡಳಿಯು ಹತ್ತಾರು ಬಾರಿ ಸಭೆ ಸೇರಿ ಅನೇಕ ನಿರ್ಣಯಗಳನ್ನು ತೆಗೆದುಕೊಂಡಿದ್ದು, ಜಿಎಸ್ ಟಿ ವ್ಯವಸ್ಥೆಯನ್ನು ಪರಿಣಾಮಕಾರಿ, ಸರಳ ಮತ್ತು ವರ್ತಕ ಸ್ನೇಹಿ ಮಾಡುವ ದಿಸೆಯಲ್ಲಿ ಹಲವಾರು ಬದಲಾವಣೆ ಮಾಡಲಾಗಿದೆ. ಹಾಗಾಗಿ ಇದೀಗ ನರೇಂದ್ರ ಮೋದಿಯವರು ಜಾರಿಗೊಳಿಸಿರುವ ಜಿಎಸ್ ಟಿ ಕ್ರಮದಿಂದಾಗಿ 7.41 ಲಕ್ಷ ಕೋಟಿ ರೂಪಾಯಿ ಸಂಗ್ರಹವಾಗಿದ್ದು, ಜಿಎಸ್ ಟಿ ವಿರೋಧಿಸುತ್ತಿದ್ದವರಿಗೆ ಇದೀಗ ಆಘಾತವಾಗಿದ್ದಂತೂ ಅಕ್ಷರಶಃ ನಿಜ.

ಸರ್ಕಾರ ಕಳೆದ ವರ್ಷ ಜು.1ರಿಂದ ದೇಶದಲ್ಲಿ ಜಿಎಸ್ ಟಿ ಜಾರಿಗೆ ತಂದಿದ್ದು, 2017-18ರಲ್ಲಿ ಜಿಎಸ್ ಟಿ ಅಡಿ ಒಟ್ಟು ಕಂದಾಯಕವಾಗಿ 2017ರ ಆಗಸ್ಟ್‍ನಿಂದ ಮಾರ್ಚ್ 2018ರ ವರೆಗಿನ ಅವಧಿಯಲ್ಲಿ 7.19 ಲಕ್ಷ ಕೋಟಿ ರೂಪಾಯಿ ಸಂಗ್ರಹಿಸಲಾಗಿದೆ. ಆದರೆ ತಾತ್ಕಾಲಿಕ ಅಂಕಿ ಅಂಶಗಳ ಪ್ರಕಾರ ಇದು 7.41 ಲಕ್ಷ ಕೋಟಿ ರೂಪಾಯಿ ಆಗಿದೆ ಎಂದು ಹಣಕಾಸು ಸಚಿವಾಲಯ ಟ್ವೀಟ್ ಮಾಡಿದೆ.

ಒಟ್ಟಿನಲ್ಲಿ ರಾಜ್ಯಗಳು ವಿವಿಧ ತೆರಿಗೆಗಳನ್ನು ವಿಧಿಸುವ ಬಹು ತೆರಿಗೆ ಪದ್ಧತಿಯನ್ನು ರದ್ದುಪಡಿಸಿ ದೇಶದಾದ್ಯಂತ ಏಕರೂಪದ ತೆರಿಗೆ ವ್ಯವಸ್ಥೆ ಜಾರಿಗೆ ತರುವ ನಿಟ್ಟಿನಲ್ಲಿ ನರೇಂದ್ರ ಮೋದಿ ಸರ್ಕಾರವು ಜಿಎಸ್ ಟಿ ಯನ್ನು ಜಾರಿಗೊಳಿಸಿರುವ ವಿಚಾರ ಗೊತ್ತೇ ಇದೆ!! ಹಾಗಾಗಿ ಇಡೀ ದೇಶದಲ್ಲಿ ಒಂದೇ ರೀತಿಯ ಅರ್ಥವ್ಯವಸ್ಥೆ ರೂಪಿಸುವುದು ಮಾತ್ರವಲ್ಲದೇ ಒಂದು ದೇಶ, ಒಂದು ತೆರಿಗೆ ಎನ್ನುವ ಧ್ಯೇಯದೊಂದಿಗೆ ದೇಶವನ್ನು ಅಭಿವೃದ್ಧಿ ಪಥದತ್ತ ಮುನ್ನಡೆಸುತ್ತಿದೆ ಎಂದರೆ ಅದು ನಿಜಕ್ಕೂ ಕೂಡ ಹೆಮ್ಮೆಯ ವಿಚಾರವೇ ಆಗಿದೆ!!

ಮೂಲ: https://www.udayavani.com/kannada/news/national-news/289310/govt-collects-rs-7-41-lakh-cr-from-gst-in-fy18

– ಅಲೋಖಾ

Editor Postcard Kannada:
Related Post