X

ಮೋದಿ ಕೈಯಲ್ಲಿ ಭಾರತ ಸುರಕ್ಷಿತಾನಾ?: ಈ ಕುರಿತು ಬಿಲ್ ಗೇಟ್ಸ್ ಹೇಳಿದ್ದೇನು?

ಪ್ರಧಾನಿ ಮೋದಿ ಅವರು ಈ ದೇಶದ ಆಡಳಿತ ಚುಕ್ಕಾಣಿ ಹಿಡಿದ ಬಳಿಕ, ಈ ದೇಶಕ್ಕೆ ಯಾವುದೇ ರೀತಿಯ ಸವಾಲು ಎದುರಾಗಿ ಅದನ್ನು ಅತ್ಯಂತ ಚಾಕಚಕ್ಯತೆಯಿಂದ ಪರಿಹರಿಸಿಕೊಂಡು ಬಂದಿದ್ದಾರೆ. ಆ ಮೂಲಕ ವಿಶ್ವದ ಹಲವು ರಾಷ್ಟ್ರಗಳಿಗೆ ಭಾರತವನ್ನು ಮಾದರಿ ಎಂಬಂತೆ ರೂಪಿಸಿದ್ದಾರೆ.

ಸವಾಲುಗಳನ್ನು ಸಮರ್ಥವಾಗಿ ಜಯಿಸುತ್ತಿರುವ ಭಾರತದ ಬಗ್ಗೆ ಮೈಕ್ರೋಸಾಫ್ಟ್ ಸಹ ಸಂಸ್ಥಾಪಕ, ಬಿಲ್ ಮತ್ತು ಮೆಲಿಂಡಾ ಗೇಟ್ಸ್ ಫೌಂಡೇಶನ್ಸ್‌ನ ಸಹ ಅಧ್ಯಕ್ಷ ಬಿಲ್ ಗೇಟ್ಸ್ ತಮ್ಮ ಬ್ಲಾಗ್ ‘ಗೇಟ್ಸ್ ನೋಟ್ಸ್’ ನಲ್ಲಿ ಬರೆದುಕೊಂಡಿದ್ದು, ಭಾರತವು ಭವಿಷ್ಯದ ಭರವಸೆಗಳನ್ನು ನೀಡುತ್ತದೆ. ಜೊತೆಗೆ ಜಗತ್ತು ಅನೇಕ ಬಿಕ್ಕಟ್ಟುಗಳನ್ನು ಎದುರಿಸುತ್ತಿರುವಾಗಲೂ ಭಾರತ ದೊಡ್ಡ ಸಮಸ್ಯೆಗಳನ್ನು ಸಹ ಒಂದೇ ಬಾರಿಗೆ ಪರಿಹರಿಸಬಹುದು ಎಂಬುದನ್ನು ಸಾಧಿಸಿ ತೋರಿಸಿದೆ ಎಂದು ಹೇಳಿದ್ದಾರೆ.

ಸರಿಯಾದ ಆವಿಷ್ಕಾರಗಳನ್ನು ನಡೆಸುವುದು ಮತ್ತು ಮಾರಣಾಂತಿಕ ಕಾಯಿಲೆಗಳ ವಿರುದ್ಧ ಹೋರಾಡುವುದು, ಈ ಎರಡನ್ನೂ ಪ್ರಪಂಚ ಏಕಕಾಲಕ್ಕೆ ಪರಿಹರಿಸಬಹುದು ಎಂಬುದನ್ನು ನಾನು ನಂಬಿದ್ದೆ. ಆದರೆ, ಈ ಎರಡನ್ನೂ ಏಕಕಾಲಕ್ಕೆ ಪರಿಹರಿಸಲು ಹಣವಿಲ್ಲ ಅಥವಾ ಸಮಯವಿಲ್ಲ ಎಂಬುದನ್ನು ಕೇಳಿ ಆಶ್ಚರ್ಯವಾಯಿತು. ಆದರೆ ಭಾರತ ಮಾತ್ರ ಈ ಕಾರಣವನ್ನು ಸುಳ್ಳಾಗಿಸಿತು. ಇದಕ್ಕೆ ಭಾರತ ಸಾಧಿಸಿರುವ ಗಮನಾರ್ಹ ಪ್ರಗತಿಗಿಂತ ಉತ್ತಮ ಸಾಕ್ಷಿ ಬೇರಿಲ್ಲ ಎಂದು ಅವರು ಪ್ರಶಂಸಿಸಿದ್ದಾರೆ.

ಒಟ್ಟಿನಲ್ಲಿ ಭಾರತವು ಭವಿಷ್ಯದ ಭರವಸೆಯನ್ನು ನೀಡುತ್ತದೆ. ಭಾರತವು ಇನ್ನೂ ದೊಡ್ಡ ದೊಡ್ಡ ಸವಾಲುಗಳನ್ನು ನಿಙಾಯಿಸಬಲ್ಲದು. ಭಾರತವು ಪೊಲಿಯೋ ನಿರ್ಮೂಲನೆ, ಏಡ್ಸ್, ಬಡತನ, ಶಿಶುಗಳ‌ ಮರಣ ಪ್ರಮಾಣವನ್ನು ಸಹ ಕಡಿಮೆ ಮಾಡಿದೆ. ಆರ್ಥಿಕ ಮತ್ತು ನೈರ್ಮಲ್ಯ ಸೇವೆಗಳಿಗೂ ಪ್ರವೇಶಾತಿಯನ್ನು ಏರಿಸಿಕೊಂಡಿದೆ ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಭಾರತವು ಲಸಿಕೆ ವಿತರಣೆಗೆ ಸಂಬಂಧಿಸಿದಂತೆಯೂ ದೊಡ್ಡ ಪ್ರಮಾಣದ ವಿತರಣಾ ವ್ಯವಸ್ಥೆಯನ್ನು ರಚಿಸಲು ತಜ್ಞರ ಜೊತೆ ಕೈ ಜೋಡಿಸಿಕೊಂಡು ಕೆಲಸ ಮಾಡಿದೆ. ಕೃಷಿ, ಆಹಾರ ವಿತರಣೆ, ಕೈಗಾರಿಕೆ, ಉದ್ಯೋಗ ಕ್ಷೇತ್ರಗಳಲ್ಲಿಯೂ ಪ್ರಗತಿಯಲ್ಲಿದೆ ಎಂದು ಅವರು ಭಾರತಕ್ಕೆ ಪ್ರಶಂಸೆಗಳನ್ನು ತಿಳಿಸಿದ್ದಾರೆ.

ಒಟ್ಟಿನಲ್ಲಿ ಭಾರತದಲ್ಲಿ ಏನು ಪ್ರಗತಿಯಾಗಿದೆ, ಅಭಿವೃದ್ಧಿ ಕನಸಿನ ಮಾತು, ನಿರುದ್ಯೋಗ ಸಮಸ್ಯೆ ಹೆಚ್ಚಾಗಿದೆ, ಭಾರತ ಸಮಸ್ಯೆಗಳ ಆಗರ ಎಂದು ಅಬ್ಬರಿಸಿ ಬೊಬ್ಬಿರಿದು ಗಂಜಿ ಗಿಟೇಟಿಸಿಕೊಳ್ಳುವವರಿಗೆ ಬಿಲ್ ಗೇಟ್ಸ್ ಅವರ ಈ ಮಾತು ಛಾಟಿಯೇಟು ನೀಡಿದಂತಿದೆ.

Post Card Balaga:
Related Post