X

ಪಿಎಫ್‌ಐ ಮೂಲಕ್ಕೆ ಬೆಂಕಿ ಇಟ್ಟ ಎನ್‌ಐಎ: ಶಾಶ್ವತವಾಗಿ ಮುಚ್ಚಿತು ಪಿಎಫ್‌ಐ ಸಂಘಟನೆಯ ಮೂಲಸ್ಥಾನ!

ದಕ್ಷಿಣ ಕನ್ನಡದ ಬೆಳ್ಳಾರೆಯಲ್ಲಿ ಹಿಂದೂ ಯುವಕ ಪ್ರವೀಣ್ ನೆಟ್ಟಾರ್ ಅವರನ್ನು ಜಿಹಾದಿ ರಾಕ್ಷಸರು ಹತ್ಯೆಗೈದ ವಿಚಾರ ಇಡೀ ದೇಶವನ್ನೇ ಬೆಚ್ಚಿ ಬೀಳಿಸಿತ್ತು. ಈ ಪ್ರಕರಣವನ್ನು ಕೈಗೆತ್ತಿಕೊಂಡ ಎನ್‌ಐಎ ಈ ವರೆಗೆ ಜಿಹಾದಿಗಳಿಗೆ ಸಂಬಂಧಿಸಿದಂತೆ ಹೆಚ್ಚು ಬೀಳುವ ಸಂಗತಿಗಳನ್ನು ಬಹಿರಂಗಗೊಳಿಸುತ್ತಲೇ ಬಂದಿದೆ. ಎನ್‌ಐಎ ನಿನ್ನೆ ಸಹ ಒಂದು ಸ್ಪೋಟಕ ಅಂಶವನ್ನು ಬಯಲಿಗೆಳೆಯುವ ಮೂಲಕ ಜಿಹಾದಿ ನಾಮರ್ಧರಿಗೆ ಮತ್ತೊಂದು ಶಾಕ್ ನೀಡಿದೆ.

ನಿಷೇಧಿತ ಸಂಘಟನೆ ಪಿಎಫ್‌ಐಗೆ ಅಕ್ರಮ ಚಟುವಟಿಕೆಗಳನ್ನು, ಭಯೋತ್ಪಾದಕ ಕೃತ್ಯಗಳಿಗೆ ಯೋಜನೆ ರೂಪಿಸಲು, ಸಭೆ ನಡೆಸಲು ಅವಕಾಶ ನೀಡಿದ ಆರೋಪದಲ್ಲಿ ದಕ್ಷಿಣ ಕನ್ನಡದ ತೂಕ ಸಮೀಪದ ಮಿತ್ತೂರಿನಲ್ಲಿರುವ ಪ್ರೀಡಂ ಕಮ್ಯೂನಿಟಿ ಹಾಲ್‌ಗೆ ಬೀಗ ಜಡಿದು, ಎನ್ಐಎ ಸ್ವಾಧೀನಕ್ಕೆ ತೆಗೆದುಕೊಂಡಿದೆ. ಈ ಹಾಲ್ನಲ್ಲಿ ಅನಧಿಕೃತವಾಗಿ ಶಸ್ತ್ರಾಸ್ತ್ರ ತರಬೇತಿ ಸಹ ನೀಡಲಾಗುತ್ತಿತ್ತು ಎನ್ನುವ ಆತಂಕಕಾರಿ ಸಂಗತಿಯೊಂದನ್ನು ಸಹ ಎನ್ಐಎ ಬಹಿರಂಗಪಡಿಸಿದೆ.

ಈ ಸಭಾಂಗಣವನ್ನು ಮದುವೆ ಇನ್ನಿತರ ಕಾರ್ಯಕ್ರಮಗಳಿಗೆ ಅಧಿಕೃತವಾಗಿ ನೀಡಲಾಗುತ್ತಿತ್ತು. ಆದರೆ ಅನಧಿಕೃತವಾಗಿ ಇಲ್ಲಿ ಭಯೋತ್ಪಾದಕ ಚಟುವಟಿಕೆಗಳಿಗೆ ತರಬೇತಿ ನೀಡಲಾಗುತ್ತಿತ್ತು. ಕಾನೂನು ಬಾಹಿರವಾಗಿ ಇಲ್ಲಿ ಶಸ್ತ್ರಾಸ್ತ್ರಗಳ ಬಳಕೆ ಅನಧಿಕೃತವಾಗಿ ನಡೆಯುತ್ತಿದ್ದ ಬಗ್ಗೆ ತನಿಖಾ ಸಂದರ್ಭದಲ್ಲಿ ದೃಢಪಟ್ಟ ಹಿನ್ನೆಲೆಯಲ್ಲಿ ಈ ಸಭಾಂಗಣವನ್ನು ಸಂಸ್ಥೆ ವಶಕ್ಕೆ ಪಡೆದುಕೊಂಡಿದೆ.

ಒಟ್ಟಿನಲ್ಲಿ ಪ್ರವೀಣ್ ನೆಟ್ಟಾರು ಹತ್ಯೆ ಬಳಿಕ ದಕ್ಷಿಣ ಕನ್ನಡದಲ್ಲಿ ಭಯೋತ್ಪಾದಕ ಚಟುವಟಿಕೆಗಳ ಮೇಲೆ, ಭಯೋತ್ಪಾದಕರ ವಿರುದ್ಧ ತನಿಖಾ ಸಂಸ್ಥೆ ಹದ್ದಿನ ಕಣ್ಣಿಟ್ಟಿದ್ದು, ಉಗ್ರರನ್ನು, ಅವರಿಗೆ ಬೆಂಬಲ ನೀಡುವವರನ್ನು ಪತ್ತೆ ಹಚ್ಚುವ ಮೂಲಕ ಶಾಕ್ ನೀಡುತ್ತಲೇ ಇದೆ.

Post Card Balaga:
Related Post