X

ಬ್ರೇಕಿಂಗ್! ಧರಂ ಸಿಂಗ್ ಸಾಯಲು ಕುಮಾರ ಸ್ವಾಮಿ ಕಾರಣ..! ಸ್ಪೋಟಕ ಮಾಹಿತಿ ಬಿಚ್ಚಿಟ್ಟ ಯಡಿಯೂರಪ್ಪ..!

ವಿಧಾನ ಸಭೆಯ ಮೊದಲ ಪ್ರವೇಶವಾದ ಇಂದು ವಾದ ವಿವಾದಗಳ ಸುರಿಮಳೆಯೇ ನಡೆದಿತ್ತು. ಮಾಜಿ ಮುಖ್ಯಮಂತ್ರಿ ಹಾಗೂ ವಿಧಾನ ಸಭಾ ವಿರೋಧ ಪಕ್ಷದ ನಾಯಕ ಬಿಎಸ್ ಯಡಿಯೂರಪ್ಪನವರು ಇಂದು ಕಾಂಗ್ರೆಸ್ ಹಾಗೂ ಜನತಾ ದಳದ ಅಪವಿತ್ರ ಮೈತ್ರಿ ಬಗ್ಗೆ ಆಕ್ರೋಶವನ್ನೇ ನಡೆಸಿದ್ದರು. ಇಂದು ಅಕ್ಷರಶಃ ವಿಧಾನ ಸಭೆಯಲ್ಲಿ ಆಡಳಿತ ಪಕ್ಷಗಳಿಗೆ ವಿರೋಧ ಪಕ್ಷದ ಬಿಸಿ ಮುಟ್ಟಿದೆ. 

ಇಂದು ತನ್ನ ಮೊದಲ ಅಬ್ಬರದ ಭಾಷಣವನ್ನು ಮಾಡಿದ ಬಿಎಸ್ ಯಡಿಯೂರಪ್ಪನವರು ಕಾಂಗ್ರೆಸ್ ಪಕ್ಷವನ್ನು ಬಿಟ್ಟು ಜನತಾ ದಳವನ್ನೇ ಟಾರ್ಗೆಟ್ ಮಾಡುತ್ತಿದ್ದರು. ಕಾಂಗ್ರೆಸ್ ಬಗೆಗಿನ ಮಮಕಾರವನ್ನು ಭಾರತೀಯ ಜನತಾ ಪಕ್ಷ ಮುಂದುವರೆಸಿದೆ. ಕೇವಲ ಜನತಾ ದಳ ಹಾಗೂ ಕುಮಾರ ಸ್ವಾಮಿಯವರನ್ನೇ ಟಾರ್ಗೇಟ್ ಮಾಡಿದ ಯಡಿಯೂರಪ್ಪನವರು “ಸರ್ಕಾರ ಕಿತ್ತೊಗೆಯುವ ತನಕ ವಿರಮಿಸೋದಿಲ್ಲ” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಧರಂ ಸಿಂಗ್ ಸಾಯಲು ಕುಮಾರ ಸ್ವಾಮಿ ಕಾರಣ..!

ಇಂದು ಅಬ್ಬರದ ಭಾಷಣ ಮಾಡುತ್ತಲೇ ಇದ್ದಂತಹ ಮಾಜಿ ಮುಖ್ಯಮಂತ್ರಿ ಹಾಗೂ ವಿಧಾನ ಸಭಾ ವಿರೋಧ ಪಕ್ಷದ ನಾಯಕ ಬಿಎಸ್ ಯಡಿಯೂರಪ್ಪನವರು ಒಂದು ಸ್ಪೋಟಕ ಮಾಹಿತಿಯನ್ನು ವಿಧಾನ ಸಭೆಯಲ್ಲಿ ಬಿಚ್ಚಿಟ್ಟರು. ಮಾಜಿ ಮುಖ್ಯಮಂತ್ರಿ ಹಾಗೂ ಕಾಂಗ್ರೆಸ್ ನಾಯಕ ದಿ.ಧರಂ ಸಿಂಗ್ ಮೃತಪಡಲು ಇದೇ ಕುಮಾರ ಸ್ವಾಮಿಯೇ ಕಾರಣ ಎಂದು ಹೇಳಿದ್ದಾರೆ. ಯಡಿಯೂರಪ್ಪನವರ ಈ ಮಾತನ್ನು ಕೇಳಿದ ವಿಧಾನ ಸಭೆಯೇ ಒಮ್ಮೆ ದಂಗಾಗಿ ಹೋಗಿತ್ತು.

“ಮಾಜಿ ಮುಖ್ಯಮಂತ್ರಿ ಧರಂ ಸಿಂಗ್ ಓರ್ವ ಸಹಾನುಭೂತಿವುಳ್ಳ ನಾಯಕರಾಗಿದ್ದರು. ಆದರೆ ಕುಮಾರ ಸ್ವಾಮಿಯವರು ಅವರಿಗೆ ಧರಂ ಸಿಂಗ್ ಅವರನ್ನು ರಾಜಕೀಯವಾಗಿ ಹೇಗೆ ಮುಗಿಸುವುದು ಎಂಬುವುದೇ ಚಿಂತೆಯಾಗಿತ್ತು. ಅವರು ಬದುಕಿದಷ್ಟು ದಿನವೂ ಧರಂ ಸಿಂಗ್ ಗೆ ಕುಮಾರ ಸ್ವಾಮಿ ಹಿಂಸೆಯನ್ನು ನೀಡುತ್ತಿದ್ದರು. ನಯವಾಗಿ ನಡೆದುಕೊಳ್ಳುತ್ತಲೇ ಧರಂ ಸಿಂಗ್ ಅವರ ಬೆನ್ನಿಗೆ ಚೂರಿ ಹಾಕಿದ್ದು ಕುಮಾರ ಸ್ವಾಮಿ. ಕುಮಾರ ಸ್ವಾಮಿಯೋರ್ವ ಅಪ್ಪಟ ನಯವಂಚಕ. ಕುಮಾರ ಸ್ವಾಮಿಯ ನಯವಂಚನೆಯಿಂದ ಧರಂ ಸಿಂಗ್ ಅವರು ಕೊರಗಿ ಕೊರಗಿ ಮೃತಪಟ್ಟಿದ್ದಾರೆ” ಎಂದು ಯಡಿಯೂರಪ್ಪ ಗುಡುಗಿದ್ದಾರೆ.

ಅಪ್ಪ ಮಕ್ಕಳ ಪಕ್ಷವನ್ನು ನಿರ್ಣಾಮ ಮಾಡುತ್ತೇನೆ-ಬಿಎಸ್‍ವೈ..!

ನನ್ನ ಹೋರಾಟ ಯಾವುದೇ ಕಾರಣಕ್ಕೂ ಕಾಂಗ್ರೆಸ್ ಪಕ್ಷದ ವಿರುದ್ಧವಲ್ಲ. ನಮ್ಮ ಹೋರಾಟ ಭ್ರಷ್ಟಾಚಾರದಿಂದ ಕುಣಿದು ಕುಪ್ಪಳಿಸುತ್ತಿರುವ ಅಪ್ಪ ಮಕ್ಕಳ ಅಹಂಕಾರದ ವಿರುದ್ಧ. ಅಧಿಕಾರದ ದಾಹವಿರುವ ಅಪ್ಪ ಮಕ್ಕಳ ಪಕ್ಷವನ್ನು  ನಿರ್ಣಾಮ ಮಾಡುವುದೇ ನನ್ನ ಗುರಿ. ಜನತೆ ನಮ್ಮ ಪಕ್ಷಕ್ಕೆ ಮಣ್ಣನೆ ನೀಡಿದ್ದು. ಜನತಾ ಫಲಿತಾಂಶದ ವಿರುದ್ಧ ನೀವು ಸರ್ಕಾರ ರಚಿಸಿದ್ದೀರಾ. ಕಾಂಗ್ರೆಸ್ ಪಕ್ಷವನ್ನು ನಾವು ನಿರ್ಣಾಮ ಮಾಡಬೇಕೆಂದಿಲ್ಲ. ದೇವೇಗೌಡ ಕುಮಾರ ಸ್ವಾಮಿ ಸಹಿತ ಅಪ್ಪ ಮಕ್ಕಳೇ ಕಾಂಗ್ರೆಸ್ ಪಕ್ಷವನ್ನು ನಿರ್ಣಾಮ ಮಾಡುತ್ತಾರೆ ನೋಡುತ್ತಿರಿ” ಎಂದು ಅಬ್ಬರಿಸಿದ್ದರು.

ಕುಮಾರ ಸ್ವಾಮಿ ಓರ್ವ ಊಸರವಳ್ಳಿ. ಊಸರವಳ್ಳಿಯಾದರೂ ಒಮ್ಮೆ ಮಾತ್ರ ಬಣ್ಣ ಬದಲಾಯಿಸುತ್ತದೆ. ಆದರೆ ಕುಮಾರ ಸ್ವಾಮಿ ಹೆಜ್ಜೆ ಹೆಜ್ಜೆಗೂ ಬಣ್ಣ ಬದಲಾಯಿಸುತ್ತಲೇ ಇರುತ್ತಾರೆ. ಇದು ಅವರ ಹವ್ಯಾಸ ಎಂದು ಮುಖ್ಯಮಂತ್ರಿ ಕುಮಾರ ಸ್ವಾಮಿಯವರ ಕಾಲೆಳೆದಿದ್ದಾರೆ. 

ಒಟ್ಟಾರೆ ಇಂದಿನ ವಿಧಾನ ಸಭೆಯಲ್ಲಿ ಯಡಿಯೂರಪ್ಪನವರ ಆರ್ಭಟಕ್ಕೆ ಆಡಳಿತ ಪಕ್ಷ ಮಖಾಡೆ ಮಲಗುವಂತಾಗಿದೆ. ಈ ಮೂಲಕ ಮುಂದಿದೆ ಮಾರಿ ಹಬ್ಬ ಎಂಬ ಎಚ್ಚರಿಕೆಯನ್ನು ನೀಡಿದ್ದಾರೆ.

-ಸುನಿಲ್ ಪಣಪಿಲ

Editor Postcard Kannada:
Related Post