X

ಮಹಾ ಮೈತ್ರಿ ಮುರಿಯಲು ಮೋದಿ-ಷಾ ಸಜ್ಜು..! ಧರ್ಮ ಯುದ್ಧಕ್ಕೆ ಮುಂದಾದರೇ ನಮೋ..?

ಬಿಜೆಪಿಯನ್ನು ಅಧಿಕಾರದಿಂದ ಕೆಳಗಿಳಿಸಬೇಕು ಎಂಬ ಒಂದೇ ಒಂದು ಕಾರಣಕ್ಕೆ ಬದ್ಧ ವೈರಿಗಳಾಗಿದ್ದ ಜೆಡಿಎಸ್‌ ಮತ್ತು ಕಾಂಗ್ರೆಸ್ ಒಂದಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರ ಜನಪ್ರಿಯತೆ ದಿನೇ ದಿನೇ ಹೆಚ್ಚುತ್ತಿದ್ದು, ವಿರೋಧಿ ಬಣಗಳು ಯಾವುದೇ ಕಸರತ್ತು ನಡೆಸಿದರು ಬಿಜೆಪಿಯನ್ನು ಸೋಲಿಸಲು ಸಾಧ್ಯವಾಗುತ್ತಿಲ್ಲ. ಆದ್ದರಿಂದಲೇ ಬಿಜೆಪಿಯನ್ನು ಹೊರತು ಪಡಿಸಿ ಉಳಿದ ಎಲ್ಲಾ ಪಕ್ಷಗಳು ಒಂದಾಗಿ ಭಾರತೀಯ ಜನತಾ ಪಕ್ಷದ ವಿರುದ್ಧ ತೊಡೆತಟ್ಟಿದ್ದಾರೆ. ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಅತ್ಯಂತ ಹೀನಾಯವಾಗಿ ಸೋಲು ಕಂಡ ಕಾಂಗ್ರೆಸ್ ಮತ್ತು ಜೆಡಿಎಸ್‌ ಕೇವಲ ಅಧಿಕಾರದ ಆಸೆಗಾಗಿ ಮೈತ್ರಿ ಮಾಡಿಕೊಂಡು ಬಿಜೆಪಿಯನ್ನು ಅಧಿಕಾರದಿಂದ ಕೆಳಗಿಳಿಸಿದೆ. ರಾಜ್ಯದಲ್ಲಿ ನಡೆದ ಈ ಪ್ರಕ್ರಿಯೆಯನ್ನು ಗಂಭೀರವಾಗಿ ಪರಿಗಣಿಸಿದ ಬಿಜೆಪಿ ರಾಷ್ಟ್ರೀಯ ನಾಯಕರು ಸದ್ಯದಲ್ಲೇ ಹೊಸ ಬಾಣವೊಂದನ್ನು ಹೂಡಲಿದ್ದಾರೆ.!

ಲೋಕಸಭಾ ಚುನಾವಣೆಗೂ ಪರಿಣಾಮ ಬೀರುವ ಸಾಧ್ಯತೆ..!

ರಾಜ್ಯದಲ್ಲಿ ನಡೆದ ಅಪವಿತ್ರ ಮೈತ್ರಿ , ಮುಂದಿನ ವರ್ಷ ನಡೆಯುವ ಲೋಕಸಭಾ ಚುನಾವಣೆಗೂ ಪರಿಣಾಮ ಬೀರುವ ಮುನ್ಸೂಚನೆ ದೊರಕಿದ್ದು, ಬಿಜೆಪಿ ಇದನ್ನು ಗಂಭೀರವಾಗಿ ತೆಗೆದುಕೊಂಡು ಕರ್ನಾಟಕದಿಂದಲೇ ರಣಕಹಳೆ ಮೊಳಗಿಸಲು ಸಜ್ಜಾಗಿದೆ. ಕಾಂಗ್ರೆಸ್ ಮತ್ತು ಜೆಡಿಎಸ್‌‌ನ ಮಹಾ ಮೈತ್ರಿಯನ್ನು ಹೇಗಾದರೂ ಮುರಿಯಲೇಬೇಕು ಎಂದು ಪ್ಲಾನ್ ಹಾಕಿರುವ ಬಿಜೆಪಿ ಚಾಣಕ್ಯ ಅಮಿತ್ ಷಾ ಹಾಗೂ ಪ್ರಧಾನಿ ಮೋದೀಜೀ ಸದ್ಯದಲ್ಲೇ ಮೈತ್ರಿ ಸರಕಾರಕ್ಕೆ ಶಾಕ್ ನೀಡಲಿದ್ದಾರೆ. ಯಾಕೆಂದರೆ ಇದೇ ರೀತಿ ಮುಂದುವರಿದರೆ, ದೇಶಾದ್ಯಂತ ಎನ್‌ಡಿ‌ಎ ಏಕಾಂಗಿಯಾಗಿ ಉಳಿದು , ಮತ್ತೆಲ್ಲಾ ಪಕ್ಷಗಳು ಒಂದಾಗುವ ಸಾಧ್ಯತೆ ಹೆಚ್ಚಿದೆ. ಆದ್ದರಿಂದ ರಾಜ್ಯದಿಂದಲೇ ಮೈತ್ರಿ ಸರಕಾರಕ್ಕೆ ಏಟು ನೀಡಲು ಸಜ್ಜಾದ ಬಿಜೆಪಿ, ಕಾಂಗ್ರೆಸ್ ಮತ್ತು ಜೆಡಿಎಸ್‌ ಸರಕಾರವನ್ನು ಕಿತ್ತೊಗೆಯಲು ತಯಾರಿ ನಡೆಸಿದ್ದಾರೆ.!

ಅಷ್ಟೇ ಅಲ್ಲದೆ ಲೋಕಸಭಾ ಚುನಾವಣೆಗೂ ಮೊದಲು ಈ ವರ್ಷದ ಕೊನೆಯಲ್ಲಿ ನಡೆಯಲಿರುವ ರಾಜಸ್ಥಾನ, ಮಧ್ಯಪ್ರದೇಶ ಮತ್ತು ಛತ್ತೀಸ್‌ಗಡ ವಿಧಾನಸಭಾ ಚುನಾವಣೆ ಅತ್ಯಂತ ಮಹತ್ವದ್ದಾಗಿದ್ದು, ಬಿಜೆಪಿಯ ಪಾಲಿಗೆ ಸವಾಲಾಗಿದೆ. ಯಾಕೆಂದರೆ ಈ ಮೂರು ರಾಜ್ಯಗಳು ಅತೀ ಹೆಚ್ಚು ಲೋಕಸಭಾ ಸ್ಥಾನಗಳನ್ನು ಹೊಂದಿದ್ದು, ಈ ಚುನಾವಣೆಯ ಬೆನ್ನಲ್ಲೇ ಲೋಕಸಭಾ ಚುನಾವಣೆ ನಡೆಯಲಿದೆ. ಆದ್ದರಿಂದ ಈ ಮೂರು ರಾಜ್ಯಗಳಲ್ಲೂ ಬಿಜೆಪಿ ಈಗಿನಿಂದಲೇ ತಯಾರಿ ಆರಂಭಿಸಿದೆ. ಇಲ್ಲೂ ಕಾಂಗ್ರೆಸ್ ಮೈತ್ರಿ ಮಾಡಿಕೊಂಡು ಚುನಾವಣೆ ಎದುರಿಸುತ್ತದೆಯೋ ಅಥವಾ ಒಬ್ಬಂಟಿಯಾಗಿ ಕಣಕ್ಕಿಳಿಯುತ್ತದೆಯೋ ಎಂಬುದು ಇನ್ನೂ ತಿಳಿದಿಲ್ಲ. ಆದರೆ ಬಿಜೆಪಿ ಮಾತ್ರ ಎಲ್ಲದಕ್ಕೂ ಈಗಿಂದಲೇ ಸಿದ್ದತೆ ನಡೆಸುತ್ತಿದ್ದು ಚುನಾವಣೆಯನ್ನು ಎದುರು ನೋಡುತ್ತಿದೆ.!

ಹಿಂದುತ್ವದ ವಿಚಾರಕ್ಕೆ ಹೆಚ್ಚು ಒತ್ತು..!

ಬಿಜೆಪಿ ಎಂದರೆ ಅದು ಕೇವಲ ಹಿಂದೂಗಳಿಗೆ ಎಂಬ ವದಂತಿಯನ್ನು ಕಾಂಗ್ರೆಸ್ ಈ ಹಿಂದಿನಿಂದಲೂ ಹರಡುತ್ತಲೇ ಬಂದಿದೆ. ಆದರೆ ಬಿಜೆಪಿ ಹಿಂದುತ್ವದ ಜೊತೆಗೆ ಅಭಿವೃದ್ಧಿಯನ್ನು ಗುರಿಯನ್ನಾಗಿಸಿಕೊಂಡು ಸಾಗುತ್ತಿದ್ದು, ಇಡೀ ದೇಶದಲ್ಲೇ ಹೊಸ ಕ್ರಾಂತಿ ಸೃಷ್ಟಿಸಲು ಮೋದಿ ಸರಕಾರ ಸಜ್ಜಾಗಿದೆ. ಕರ್ನಾಟಕದಲ್ಲಿ ಹಿಂದುತ್ವದ ಅಜೆಂಡಾವನ್ನೇ ಎತ್ತಿ ಹಿಡಿದು ಚುನಾವಣೆಯಲ್ಲಿ ಕಣಕ್ಕಿಳಿದ ಬಿಜೆಪಿ ಅತೀ ದೊಡ್ಡ ಪಕ್ಷವಾಗಿ ಹೊರಹೊಮ್ಮಿತ್ತು. ಆದರೂ ಬಹುಮತ ಸಾಧಿಸಲಾಗದೆ ಅಧಿಕಾರ ಕೈತಪ್ಪಿ ಹೋಗಿದೆ. ಆದರೆ ಬಿಜೆಪಿ ಯಾವುದಕ್ಕೂ ಧೃತಿಗೆಡದೆ ಮುಂದಿನ ದಿನಗಳಲ್ಲಿ ಯಾವ ರೀತಿಯಲ್ಲಿ ಚುನಾವಣೆ ಎದುರಿಸಬಹುದು ಎಂಬ ಲೆಕ್ಕಾಚಾರ ಈಗಲೇ ಹಾಕುತ್ತಿದ್ದು, ಮುಂದಿನ ಲೋಕಸಭಾ ಚುನಾವಣೆಯಲ್ಲಿ ಹಿಂದುತ್ವವೇ ಮೂಲ ಮಂತ್ರವಾಗುವುದರಲ್ಲಿ ಯಾವುದೇ ಸಂಶಯವಿಲ್ಲ..!

ಸ್ವತಃ ಪ್ರಧಾನಿ ನರೇಂದ್ರ ಮೋದೀಜೀ ಅವರೇ ಹಿಂದುತ್ವದ ವಿಚಾರಕ್ಕೆ ಹೆಚ್ಚು ಒತ್ತು ನೀಡುತ್ತಿದ್ದು, ರಾಷ್ಟ್ರೀಯ ಸ್ವಯಂ ಸೇವಕ ಸಂಘವೂ ಇದೇ ವಿಚಾರಕ್ಕೆ ಭಾರತೀಯ ಜನತಾ ಪಕ್ಷಕ್ಕೆ ಒತ್ತಡ ಹೇರುತ್ತಿದೆ. ಆದ್ದರಿಂದ ಸಂಘಪರಿವಾರವನ್ನು ವಿರೋಧಿಸಿ ಬಿಜೆಪಿ ಮುಂದುವರಿಯಲು ಸಾಧ್ಯವಾಗದೇ ಇರುವುದರಿಂದ ಮುಂದಿನ ಲೋಕಸಭಾ ಚುನಾವಣೆಯಲ್ಲೂ ಹಿಂದುತ್ವವೇ ಮೂಲ ಮಂತ್ರವಾಗುವುದರಲ್ಲಿ ಸಂಶಯವಿಲ್ಲ..!

ಆದ್ದರಿಂದ ರಾಜ್ಯದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್‌ ಮಾಡಿಕೊಂಡ ಮೈತ್ರಿಯ ಮೇಲೆ ಕಣ್ಣಿಟ್ಟಿರುವ ಮೋದಿ – ಷಾ ಭಾರೀ ತಂತ್ರ ರೂಪಿಸಿ ಮೈತ್ರಿಯನ್ನು ಭಂಗ ಮಾಡಲು ತಯಾರಿ ನಡೆಸುತ್ತಿದ್ದಾರೆ. ಇತ್ತ ರಾಜ್ಯದಲ್ಲೂ ಮೈತ್ರಿ ಸರಕಾರದಲ್ಲಿ ಶಾಸಕರ ಭಿನ್ನಾಭಿಪ್ರಾಯ ದಿನೇ ದಿನೇ ಹೆಚ್ಚುತ್ತಿದ್ದು ಯಾವ ರೀತಿಯಲ್ಲಿ ಸರಕಾರ ಮುಂದುವರಿಸುತ್ತಾರೆ ಎಂಬುದು ಕಾದು ನೋಡಬೇಕು..!

–ಅರ್ಜುನ್

Editor Postcard Kannada:
Related Post