X

ಬ್ರೇಕಿಂಗ್! ಮುಸ್ಲಿಮರ ವಿರುದ್ಧ ಸಿಡಿದೆದ್ದ ದೇವೇಗೌಡ..! ಮುಸ್ಲಿಮರಿಗೆ ಮಂತ್ರಿ ಕೊಡಲು ಗೌಡರು ಹಿಂದೇಟು ಹಾಕುತ್ತಿರುವುದು ಯಾಕೆ ಗೊತ್ತಾ..?

ಕರ್ನಾಟಕ ವಿಧಾನ ಸಭಾ ಚುನಾವಣೆಯಲ್ಲಿ ಜನತೆ ಜನತಾ ದಳವನ್ನು ಮಣ್ಣು ಮುಕ್ಕಿಸಿದ ವಿಚಾರ ಎಲ್ಲರಿಗೂ ಗೊತ್ತಿರುವ ಸಂಗತಿಯೇ. ನಾವು ಈ ಬಾರಿ ಕರ್ನಾಟಕದಲ್ಲಿ ಅಧಿಕಾರ ಹಿಡಿಯುತ್ತೇವೆ, ಮುಂದಿನ ಸರ್ಕಾರ ನಮ್ಮದೇ, ತನ್ನ ಮಗ ಕುಮಾರಸ್ವಾಮಿಯವರೇ ಮುಂದಿನ ಮುಖ್ಯಮಂತ್ರಿ ಹೇಳಿಕೊಂಡು ಬರುತ್ತಿದ್ದ ದೇವೇಗೌಡರಿಗೆ ಭಾರೀ ಮುಖಭಂಗವಾಗಿದ್ದು, ನಂತರ 3ನೇ ಸ್ಥಾನಕ್ಕೆ ಕುಸಿದಿದ್ದ ಪಕ್ಷದೊಂದಿಗೆ 2ನೇ ಸ್ಥಾನಕ್ಕೆ ಕುಸಿದ ಪಕ್ಷ ಮೈತ್ರಿ ಮಾಡಿಕೊಂಡು ಇದೀಗ ಅಸ್ತವ್ಯಸ್ತ ಸರ್ಕಾರ ನಡೆಸುತ್ತಿರುವುದು ಎಲ್ಲರಿಗೂ ಗೊತ್ತಿರುವಂತದ್ದೇ. ಆದರೆ ಇದೀಗ ಮಾಜಿ ಪ್ರಧಾನಿ ದೇವೇಗೌಡ, ಅವರ ಮಗ ಕುಮಾರ ಸ್ವಾಮಿ ಸಹಿತ ಜನತಾ ದಳದ ನಾಯಕರು ರಾಜ್ಯದ ಜನತೆಯನ್ನು ನಿಂದಿಸಲು ಆರಂಭಿಸಿದ್ದಾರೆ.

ಮುಸ್ಲಿಮರು ಕೈ ಕೊಟ್ಟಿದ್ದಾರೆ..!

ಇಂದು ಮಾಜಿ ಪ್ರಧಾನಿ ದೇವೇಗೌಡರು ಮುಸ್ಲಿಮರ ವಿರುದ್ಧ ಕಿಡಿಕಾರಿದ್ದಾರೆ. ತನ್ನ ಪಕ್ಷವನ್ನು ಮುಸ್ಲಿಮರು ತುಳಿದಿದ್ದಾರೆ. ಅವರು ನಮ್ಮ ಪಕ್ಷಕ್ಕೆ ಬೆಂಬಲವನ್ನೇ ನೀಡಿಲ್ಲ. ಇದು ನಮಗೆ ಅತೀವವಾದ ನೋವನ್ನು ತಂದಿಟ್ಟಿದೆ. ನಾವು ಮುಸಲ್ಮಾನರಿಗೆ ಅಷ್ಟೊಂದು ಸಹಕಾರ ಮಾಡಿದ್ದೇವೆ. ಭಾರತೀಯ ಜನತಾ ಪಕ್ಷದೊಂದಿಗೆ ಹೋಗೋದನ್ನು ತಡೆದಿದ್ದೇವೆ. ಆದರೆ ಇದೀಗ ಅದೇ ಮುಸ್ಲಿಮರು ನಮ್ಮ ಪಕ್ಷವನ್ನು ಕಡೆಗಣಿಸಿದ್ದಾರೆ” ಎಂದು ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ.

ಈ ಹಿನ್ನೆಲೆಯಲ್ಲಿ ಅಲ್ಪಸಂಖ್ಯಾತ ಕೋಟಾದಲ್ಲಿ ತನಗೆ ಮಂತ್ರಿ ಸ್ಥಾನ ಪಕ್ಕಾ ಎಂದು ಕನಸು ಕಾಣುತ್ತಿದ್ದ ಬಿಎಮ್ ಫಾರೂಕ್‍ಗೆ ಹಿನ್ನೆಡೆಯಾಗಿದೆ. ಚುನಾವಣೆ ಸಂದರ್ಭದಲ್ಲಿ ಜನತಾ ದಳ ಪಕ್ಷಕ್ಕಾಗಿ ಕೋಟ್ಯಾಂತರ ರೂಪಾಯಿಯಷ್ಟು ಖರ್ಚು ಮಾಡಿದ್ದ ಬಿಎಮ್ ಫಾರೂಕ್‍ಗೆ ಮುಸ್ಲಿಂ ಎನ್ನುವ ಕಾರಣಕ್ಕಾಗಿ ಮಂತ್ರಿ ಸ್ಥಾನ ಆಖತ್ರಿ ಎಂದೇ ಹೇಳಲಾಗುತ್ತಿತ್ತು. ಆದರೆ ಸ್ವತಃ ಮಾಜಿ ಪ್ರಧಾನಿ ಹಾಗೂ ಜನತಾ ದಳದ ರಾಷ್ಟ್ರೀಯ ಅಧ್ಯಕ್ಷ ಹೆಚ್.ಡಿ.ದೇವೇಗೌಡರೇ ಮುಸ್ಲಿಂರ ವಿರುದ್ಧ ತನ್ನ ಅಸಮಧಾನವನ್ನು ವ್ಯಕ್ತಪಡಿಸಿದ್ದು ಫಾರೂಕ್‍ಗೆ ಹಿನ್ನೆಡೆಯಾಗಿದೆ ಎನ್ನಲಾಗುತ್ತಿದೆ.

ಈ ಹಿಂದೆ ಮುಖ್ಯಮಂತ್ರಿ ಕುಮಾರ ಸ್ವಾಮಿ ತಾನು ಕಾಂಗ್ರೆಸ್ ಪಕ್ಷದ ಮುಲಾಜಿನಲ್ಲಿದ್ದೇನೆ, ರಾಜ್ಯದ 6.5 ಕೋಟಿ ಜನರ ಮುಲಾಜಿನಲ್ಲಿಲ್ಲ ಎಂದು ಬಹಿರಂಗವಾಗಿಯೇ ಹೇಳಿ ವಿವಾದ ಸೃಷ್ಟಿಸಿದ್ದರು. ಮಾತ್ರವಲ್ಲದೆ ಇದನ್ನು ಸ್ವತಃ ದೇವೇಗೌಡರೇ ಸಮರ್ಥಿಸಿಕೊಂಡಿದ್ದರು. ಹೌದು ನನ್ನ ಮಗ ಹೇಳಿದ್ದು ಸರಿಯಾಗಿಯೇ ಇದೆ. ರಾಜ್ಯದ ಜನತೆ ನಮಗೆ ಮೋಸ ಮಾಡಿದ್ದಾರೆ. ದೇವರ ದಯೆಯಿಂದ ನಾವು ಮುಖ್ಯಮಂತ್ರಿ ಆಗಿದ್ದೇವೆ. ಇದರಲ್ಲಿ ಜನತೆಯ ಕೊಡುಗೆಯೇನೂ ಇಲ್ಲ ಎಂದು ಹೇಳಿದ್ದರು.

ಒಟ್ಟಾರೆ ಚುನಾವಣೆಯ ನಂತರ ಒಂದಲ್ಲಾ ಒಂದು ಕಾರಣದಿಂದ ಜನತೆಯನ್ನು ದೂರುತ್ತಿದ್ದ ಜನತಾ ದಳದ ನಾಯಕರು ಹಾಗೂ ಮಾಜಿ ಪ್ರಧಾನಿ ದೇವೇಗೌಡರು ಇದೀಗ ಮುಸ್ಲಿಮರ ವಿರುದ್ಧ ಕೆಂಡ ಕಾರಿದ್ದಾರೆ.

-ಏಕಲವ್ಯ

Editor Postcard Kannada:
Related Post