X

ಭಾರತದ ಕಾರ್ಯಾಂಗದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಖಾಸಗಿ ವಲಯದ ಉದ್ಯೋಗಿಗಳಿಗೆ ಸರ್ಕಾರಿ ಸಚಿವಾಲಯದ ಬಾಗಿಲು ತೆರೆದು ಇತಿಹಾಸ ಸೃಷ್ಟಿಸಿದ ಮೋದಿ ಸರಕಾರ!!

ಮೋದೀಜೀ ಒಂದು ಸ್ವಲ್ಪವೂ ಸಮಯವನ್ನು ಹಾಳು ಮಾಡದೆ ಪ್ರತೀ ವಿಚಾರವನ್ನೂ ತಲೆಯಲ್ಲಿಟ್ಟುಕೊಂಡು ದೇಶದ ಪ್ರಗತಿಯತ್ತ ಯಾವಾಗಲೂ ಚಿಂತಿಸುತ್ತಿರುತ್ತಾರೆ!! ಮೋದೀಜೀ ಅಧಿಕಾರದ ಗದ್ದುಗೆಯನ್ನು ಏರಿದಾಗಿನಿಂದ ದೇಶದ ಅಭಿವೃದ್ಧಿಯ ಪಥ ಸಾಗುತ್ತನೇ ಇದೆ!! ನರೇಂದ್ರ ಮೋದಿಯವರ ರಾಜತಾಂತ್ರಿಕ ಯಶಸ್ಸಿಗೆ ಹೊಟ್ಟೆಕಿಚ್ಚು ಪಟ್ಟುಕೊಳ್ಳುವ ಅದೆಷ್ಟೋ ಬುದ್ದಿಜೀವಿಗಳು ನರೇಂದ್ರ ಮೋದಿ ದೇಶಕ್ಕೋಸ್ಕರ, ದೇಶದ ಜನರ ಸುಭಿಕ್ಷೆಗೋಸ್ಕರ ಅದೇನೇನು ಮಾಡಿದರು ಎಂದು ತಿಳಿದರೆ ಒಳಿತು!! ಆದರೆ ಸಣ್ಣ ಸಣ್ಣ ವಿಚಾರಗಳಲ್ಲೂ ಹುಳುಕನ್ನು ತೆಗೆದು ಅದನ್ನೇ ಬೊಬ್ಬಿಡುವ ಕಾಂಗ್ರೆಸ್ಸಿಗರಿಗೆ ನರೇಂದ್ರ ಮೋದಿ ಸರಕಾರದ ಪ್ರತೀಯೊಂದು ಸಾಧನೆಯು ವಿರೋಧಿಗಳ ಮುಖಕ್ಕೆ ಹೊಡೆದಂತೆ ಆಗಿದೆ!! ಆದರೆ ನರೇಂದ್ರ ಮೋದಿಯವರು ದೇಶದಲ್ಲಿ ಉದ್ಯೋಗ ಸೃಷ್ಟಿಯಲ್ಲಿ ಅದೇನೂ ಕ್ರಮ ಕೈಗೊಂಡಿಲ್ಲ ಎಂದು ಬೊಬ್ಬಿರುವವರಿಗೆ ಮೋದಿ ಸರ್ಕಾರದ ಸಾಧನೆ ಗರ ಬಡಿಯುವಂತೆ ಮಾಡುತ್ತೆ!! ಭಾರತದಲ್ಲಿ ಉದ್ಯೋಗ ಸೃಷ್ಟಿಯಾಗುತ್ತಿಲ್ಲ ಎಂದು ಮೋದಿ ಸರ್ಕಾರದ ವಿರುದ್ಧ ಆರೋಪ ಕೇಳಿ ಬರುತ್ತಿರುವ ನಡುವೆಯೇ ಅದೆಷ್ಟೋ ಲಕ್ಷಗಟ್ಟಲೆ ಜನರಿಗೆ ಉದ್ಯೋಗವನ್ನು ನೀಡಿ ಮೋದಿ ಸರಕಾರ ಶಬ್ಬಾಶ್ ಎನಿಸಿಕೊಂಡಿದೆ!! ಇದೀಗ ಮೋದಿ ಸರಕಾರ ಮತ್ತೊಂದು ಮಹತ್ವದ ಹೆಜ್ಜೆಯನ್ನಿಟ್ಟಿದೆ!!

ಖಾಸಗಿ ವಲಯದ ಉದ್ಯೋಗಿಗಳಿಗೆ ಸರ್ಕಾರಿ ಕೆಲಸಕ್ಕೆ ಕೇಂದ್ರದಿಂದ ಆಹ್ವಾನ!!

ಇದೀಗ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಮಹತ್ವದ ನಿರ್ಧಾರವನ್ನು ಕೈಗೊಂಡಿದೆ. ಖಾಸಗಿ ವಲಯದಲ್ಲಿ ಕೆಲಸ ಮಾಡಿದ ಪ್ರತಿಭಾವಂತರನ್ನು ಸರ್ಕಾರಿ ಕೆಲಸಕ್ಕೆ ಕರೆತರುವ ಕೆಲಸಕ್ಕೆ ಕೈ ಹಾಕಿದ್ದು, ತನ್ನ `ಪಾಶ್ರ್ವ ಪ್ರವೇಶ’ ಯೋಜನೆಯಲ್ಲಿ ಅಧಿಸೂಚನೆ ಹೊರಡಿಸಿದೆ. ಈ ಮೂಲಕ ಕೇವಲ ಐಎಎಸ್ ಅಧಿಕಾರಿಗಳಿಗೆ ಮಾತ್ರ ಸೀಮಿತವಾಗಿದ್ದ ವಿವಿಧ ಸಚಿವಾಲಯಗಳಲ್ಲಿನ 10 ಜಂಟಿ ಕಾರ್ಯದರ್ಶಿಗಳ ಹುದ್ದೆಗೆ ಅರ್ಜಿ ಆಹ್ವಾನಿಸಿದೆ.

ಭಾರತದ ಕಾರ್ಯಾಂಗದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಕೇಂದ್ರ ಸರ್ಕಾರದ ಜಂಟಿ ಕಾರ್ಯದರ್ಶಿ ಹುದ್ದೆಗಳಿಗೆ ಖಾಸಗಿ, ವಾಣಿಜ್ಯೋದ್ಯಮ, ಅಂತಾರಾಷ್ಟ್ರೀಯ ಸಂಸ್ಥೆಗಳಲ್ಲಿ ಕೆಲಸ ಮಾಡುತ್ತಿರುವವರನ್ನು ನೇಮಕ ಮಾಡಲು ತೀರ್ಮಾನಿಸಿದ್ದು, ಕೇಂದ್ರ ಸರ್ಕಾರದ ಆಡಳಿತ ಮತ್ತು ತರಬೇತಿ ಇಲಾಖೆ ಅಧಿಸೂಚನೆ ಹೊರಡಿಸಿದೆ. ಕಂದಾಯ, ನಾಗರಿಕ ವಿಮಾನಯಾನ, ಹಣಕಾಸು ಇಲಾಖೆ, ಆರ್ಥಿಕ ವ್ಯವಹಾರಗಳ ಸಚಿವಾಲಯ ಮತ್ತು ವಾಣಿಜ್ಯ ಇಲಾಖೆಯ ಜಂಟಿ ಕಾರ್ಯದರ್ಶಿ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.

ಅಧಿಸೂಚನೆಯಂತೆ ಜುಲೈ 1ಕ್ಕೆ ಅನ್ವಯವಾಗುವಂತೆ 40 ವರ್ಷದ ಯಾವುದಾದರೂ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಪದವಿ ಪಡೆದವರು ಅರ್ಜಿ ಸಲ್ಲಿಸಬಹುದು. ಉನ್ನತ ಶಿಕ್ಷಣವನ್ನು ಪರಿಗಣಿಸಲಾಗುವುದು. ಆಯ್ಕೆಯಾಗುವವರನ್ನು 3 ವರ್ಷಗಳ ಕಾಟ್ರ್ಯಾಕ್ಟ್ ಮೇಲೆ ನೇಮಿಸಿಕೊಳ್ಳಲಾಗುತ್ತದೆ. ಅಥವಾ 5 ವರ್ಷಗಳವರೆಗೆ ವಿಸ್ತರಿಸಬಹುದು. ಆಯ್ಕೆಯಾದವರಿಗೆ ತಿಂಗಳಿಗೆ 1.44 ಲಕ್ಷ ರೂ.ಗಳಿಂದ 2.18 ಲಕ್ಷ ವೇತನ ನೀಡಲಾಗುತ್ತದೆ. ಇದಲ್ಲದೆ ಕೇಂದ್ರ ಸರ್ಕಾರದ ನೌಕರರಿಗೆ ಸಮಾನವಾಗಿ ಇತರೆ ವೆಚ್ಚಗಳು ಮತ್ತು ಸೌಲಭ್ಯಗಳನ್ನು ಸಹ ಒದಗಿಸಲಾಗುತ್ತದೆ ಎಂದು ಹೇಳಿದೆ.

ನರೇಂದ್ರ ಮೋದಿ ಸರ್ಕಾರ ಮಾಡಿರುವ ಸಾಧನೆಗಳ ಪಟ್ಟಿಗಳನ್ನು ಮಾಡುತ್ತಾ ಹೋದರೆ ಇಷ್ಟು ವರ್ಷ ಕಾಂಗ್ರೆಸ್ ಸರ್ಕಾರ ಮಾಡದೇ ಇರುವಂತಹ ಅದೆಷ್ಟೋ ಕೆಲಸಗಳನ್ನು ನರೇಂದ್ರ ಮೋದಿ ಸರ್ಕಾರವು ಮಾಡಿದೆ ಎಂದರೆ ಇದಕ್ಕಿಂತಲೂ ದೊಡ್ಡ ಹೆಮ್ಮೆಯ ವಿಚಾರ ಮತ್ತೊಂದಿದೆಯೇ? ಭಾರತ ಬಡ ರಾಷ್ಟ್ರ ಎಂದು ಭಾರತದ ಸ್ನೇಹ ಬಯಸಲು ಹಿಂದೆ ಸರಿಯುತ್ತಿದ್ದ ರಾಷ್ಟ್ರಗಳೆಲ್ಲವೂ ನರೇಂದ್ರ ಮೋದಿಯವರ ರಾಜತಾಂತ್ರಿಕತೆಯ ನೈಪುಣ್ಯತೆಗೆ ತಲೆಬಾಗಿ, ಇಂದು ಭಾರತದೊಂದಿಗೆ ಸ್ನೇಹ ಬೆಳೆಸಲು ಕ್ಯೂ ನಿಲ್ಲುತ್ತೇ ಎಂದರೆ ನರೇಂದ್ರ ಮೋದಿಗೆ ಸರಿಸಾಟಿಯಾದ ಪ್ರಧಾನಿ ಇರಲು ಸಾಧ್ಯವೇ ಇಲ್ಲ ಎಂದನಿಸುತ್ತೆ!! ಇದೀಗ ಕೇಂದ್ರ ಸರಕಾರದ ಈ ನಿರ್ಧಾರದಿಂದ ಖಾಸಗಿ ವಲಯಯದ ಉದ್ಯೋಗಿಗಳಿಗೆ ಸಂತಸ ಮೂಡುವಂತೆ ಮಾಡಿದ್ದಾರೆ!!

source: vijayavani.net

  • ಪವಿತ್ರ
Editor Postcard Kannada:
Related Post