X

ಜಗತ್ತಿನಿಂದ ಭಯೋತ್ಪಾದನೆಯನ್ನು ಒಂದೇ ಏಟಿಗೆ ಕಿತ್ತೆಸೆಯಲು ತಯಾರಾದ “ಮೋದಿ ಅಸ್ತ್ರ”!

ಭಯೋತ್ಪಾದನೆ ನಿಗ್ರಹ ಹಣಕಾಸು ಸಂಬಂಧಿತ ಮೂರನೇ ‘ನೋ ಮನಿ ಫಾರ್ ಟೆರರ್’ (ಎನ್‌ಎಂ‌ಎಫ್‌ಟಿ) ಸಮ್ಮೇಳನವನ್ನು ವಿಶ್ವ ನಾಯಕ, ಪ್ರಧಾನಿ ನರೇಂದ್ರ ಮೋದಿ ಅವರು ನವೆಂಬರ್ 18 ರಂದು ಉದ್ಘಾಟಿಸಿ, ಮಾತನಾಡಲಿದ್ದಾರೆ.

ಈ ಎರಡು ದಿನಗಳ ಸಮ್ಮೇಳನ‌ವು ನವದೆಹಲಿ‌ಯಲ್ಲಿ ನಡೆಯಲಿದೆ.

ಇದು ಭಯೋತ್ಪಾದನೆ ನಿಗ್ರಹ‌ದ ಮೇಲೆ ಪ್ರಸ್ತುತ ಅಂತರಾಷ್ಟ್ರೀಯ ಆಡಳಿತದ ಪರಿಣಾಮ, ಹಾಗೆಯೇ ಸೃಷ್ಟಿ‌ಯಾಗುತ್ತಿರುವ ಸವಾಲು‌ಗಳನ್ನು ಸಮರ್ಥವಾಗಿ ನಿಭಾಯಿಸಲು ಅಗತ್ಯ ಕ್ರಮಗಳ ಬಗ್ಗೆ ಚರ್ಚಿಸಲು ಭಾಗವಹಿಸುವ ದೇಶಗಳು ಮತ್ತು ಸಂಸ್ಥೆ‌ಗಳಿಗೆ ಅವಕಾಶ‌ವನ್ನು ನೀಡಲಿದೆ ಎಂದು ಪ್ರಧಾನಿ‌ಗಳ ಕಚೇರಿ ತನ್ನ ಪ್ರಕಟಣೆ‌ಯಲ್ಲಿ ತಿಳಿಸಿದೆ.

ಈ ಹಿಂದೆ ಪ್ಯಾರಿಸ್‌ನಲ್ಲಿ 2018 ರಲ್ಲಿ ಮತ್ತು ಮೆಲ್ಬೋರ್ನ್‌ನಲ್ಲಿ 2019 ರಲ್ಲಿ ನಡೆದ ಸಮ್ಮೇಳನಗಳ ಲಾಭ ಮತ್ತು ಅದರಿಂದ ಕಲಿತ ಪಾಠಗಳ ಬಗೆಗೂ ಇದು ಗಮನ ಹರಿಸಲಿದೆ. ಹಾಗೆಯೇ ಉಗ್ರಗಾಮಿ‌ಗಳಿಗೆ ಆರ್ಥಿಕ ಸಹಕಾರ ನಿರಾಕರಣೆ ಮತ್ತು ಕಾರ್ಯನಿರ್ವಹಣಾ ವ್ಯಾಪ್ತಿಗೆ ಅನುಮತಿಸುವ ನ್ಯಾಯ ವ್ಯಾಪ್ತಿ ಪ್ರವೇಶ‌ವನ್ನು ನೀಡಲು ವಿಶ್ವ ಮಟ್ಟದ ಸಹಕಾರ ಹೆಚ್ಚಿಸುವ ನಿಟ್ಟಿನಲ್ಲಿ‌ಯೂ ಈ ಸಮ್ಮೇಳನ ಪ್ರಾಮುಖ್ಯತೆ ಪಡೆಯಲಿದೆ.

ವಿಶ್ವ‌ದ ಸುಮಾರು 450 ಪ್ರತಿನಿಧಿಗಳು ಈ ಸಮ್ಮೇಳನದಲ್ಲಿ ಭಾಗಿಗಳಾಗಲಿದ್ದಾರೆ.

Post Card Balaga:
Related Post