X

ಪಾಕ್ ಅಟ್ಟಹಾಸಕ್ಕೆ ಬ್ರೇಕ್ ಹಾಕಲು ಮುಂದಾದ ಕೇಂದ್ರ ಸರಕಾರ!! ರಂಜಾನ್ ನಿಮಿತ್ತ ಸ್ಥಗಿತವಾಗಿದ್ದ ಕಾರ್ಯಾಚರಣೆ ಶುರು!! ಇನ್ನಿದೆ ಅಸಲಿ ಆಟ…

ಈ ಪಾಪಿ ಪಾಕಿಸ್ಥಾನವನ್ನು ಭಾರತೀಯ ಸೈನಿಕರು ಕೆರಳಿಸದೇ ಇದ್ದರೂ ಮತ್ತೆ ಮತ್ತೆ ತನ್ನ ನರಿಬುದ್ಧಿಯನ್ನು ತೋರಿಸಿ ಭಾರತೀಯ ಯೋಧರನ್ನು ಕೆಣಕುತ್ತಿದ್ದಾರೆ! ಭಾರತೀಯರೇ ಹಾಗೆ… ತಾವು ಯಾರನ್ನು ಕೆರಳಿಸಲ್ಲ ಕೆರಳಿಸಿದರೆ ಮತ್ತೆ ಅವರಿಗೆ ಪತ್ಯುತ್ತರ ತೀರಿಸದೆ ಬಿಡಲ್ಲ!! ಮುಸ್ಲಿಮರ ಪವಿತ್ರ ಮಾಸವಾದ ರಂಜಾನ್ ನಿಮಿತ್ತ ಕಾಶ್ಮೀರದಲ್ಲಿ ಭಾರತೀಯ ಸೇನೆ ಕೈಗೊಳ್ಳುತ್ತಿದ್ದ ಕಾರ್ಯಾಚರಣೆಯನ್ನು ಕೇಂದ್ರ ಸರ್ಕಾರ ಹಿಂಪಡೆದಿತ್ತು. ಮುಸ್ಲಿಮರು ನೆಮ್ಮದಿಯಿಂದ ಹಬ್ಬ ಆಚರಿಸಲು ಅವಕಾಶ ನೀಡಿತ್ತು. ಆದರೆ ಪಾಕಿಸ್ತಾನ ಮಾತ್ರ ಭಾರತೀಯ ಯೋಧ ಔರಂಗಜೇಬನ್ನು ರಂಜಾನ್ ಸಮಯದಲ್ಲಿಯೇ ಅಪಹರಿಸಿ ಕೊಲೆ ಮಾಡಿತ್ತು!! ಇದಕ್ಕೆ ಇಡೀ ದೇಶವೇ ಆಕ್ರೋಶ ವ್ಯಕ್ತಪಡಿಸಿತ್ತು!! ಇದೀಗ ಹಿಂದೂಗಳಲ್ಲದೆ ಯೋಧರ ಸಾವಿಗೆ ಮುಸ್ಲಿಂರೂ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ!! ಇದಕ್ಕೆ ಪ್ರತೀಕಾರವನ್ನು ತೀರಿಸದೆ ಮಾತ್ರ ನಮ್ಮ ಭಾರತೀಯ ಸೇನೆ ಬಿಡುವವರಲ್ಲ!!

 

ಪಾಕ್ ಅಟ್ಟಹಾಸಕ್ಕೆ ಬ್ರೇಕ್ ಹಾಕಲು ಕೇಂದ್ರ ಸರಕಾರ!!

ಇದೀಗ ರಂಜಾನ್ ಮಾಸ ಮುಕ್ತಾಯವಾಗಿದ್ದು ಕೇಂದ್ರ ಸರ್ಕಾರ ರಂಜಾನ್ ನಿಮಿತ್ತ ಕಣಿವೆ ರಾಜ್ಯ ಜಮ್ಮು ಕಾಶ್ಮೀರದಲ್ಲಿ ಹೇರಿದ್ದ ಸೇನಾ ಕಾರ್ಯಾಚರಣೆ ಸ್ಥಗಿತದ ನಿರ್ಧಾರವನ್ನು ಹಿಂಪಡೆದಿದೆ. ಅಲ್ಲದೇ ಕಣಿವೆಯಲ್ಲಿ ಭಯೋತ್ಪಾದಕರ, ಪ್ರತ್ಯೇಕವಾದಿಗಳ, ಪಾಕಿ ಉಗ್ರ ಸೈನಿಕರ ಅಟ್ಟಹಾಸಕ್ಕೆ ಬ್ರೇಕ್ ಹಾಕಲು ಕೇಂದ್ರ ಸರ್ಕಾರ ದೃಢ ನಿರ್ಧಾರ ಕೈಗೊಂಡಿದೆ. ಕೇವಲ ಒಂದು ತಿಂಗಳು ಸೇನೆ ಕಾರ್ಯಾಚರಣೆ ಸ್ಥಗಿತಗೊಳಿಸಿದಕ್ಕೆ ಆಟಾಟೋಪ ನಡೆಸಿದವರ ವಿರುದ್ಧ ಇದೀಗ ರಕ್ಷಣಾ ಪಡೆಗಳು ತಿರುಗಿ ಬೀಳಲಿದ್ದು, ಆಪರೇಷನ್ ಆಲ್ ಔಟ್ ಆರಂಭಿಸುವ ಚಿಂತನೆ ಕೇಂದ್ರ ಸರ್ಕಾರ ನಡೆಸಿದೆ ಎನ್ನಲಾಗಿದೆ.

ಸೈನಿಕ ಕಾರ್ಯಾಚರಣೆ ಆರಂಭಿಸುವ ಕುರಿತು ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಟ್ವೀಟ್ ಮಾಡಿದ್ದು, ಕಣಿವೆಯನ್ನು ಭಯೋತ್ಪಾದಕ ಮುಕ್ತ ಮಾಡಲು ಸೈನಿಕ ಕಾರ್ಯಾಚರಣೆ ಆರಂಭಿಸಲಾಗುತ್ತಿದೆ. ಕೇಂದ್ರ ಸರ್ಕಾರ ಎಲ್ಲರಿಗೂ ನೆಮ್ಮದಿಯ ಜೀವನ ನೀಡಲು ಬಯಸುತ್ತಿದ್ದು, ಭಾರತದ ಸೌರ್ವಭೌಮತ್ವವನ್ನು ರಕ್ಷಿಸಲು ಸೈನ್ಯಕ್ಕೆ ಕಾರ್ಯಾಚರಣೆ ನಡೆಸಲು ಅಧಿಕಾರ ನೀಡಲಾಗುತ್ತಿದೆ. ಕಾಶ್ಮೀರದಲ್ಲಿ ಭಯೋತ್ಪಾದನೆ ನಿಯಂತ್ರಣದ ಕಾರ್ಯಾವನ್ನು ರಕ್ಷಣಾ ಪಡೆಗಳು ಮುಂದುವರಿಸಲಿವೆ ಎಂದು ರಾಜನಾಥ್ ಸಿಂಗ್ ಟ್ವೀಟ್ ಮಾಡಿದ್ದಾರೆ.

ಅದಲ್ಲದೆ ಯೋಧ ಔರಂಗಜೇಬನ್ನು ಅಪಹರಿಸಿ ಕೊಂದಿದ್ದಕ್ಕೆ ಈಗಾಗಲೇ ಸುದ್ದಿಗೋಷ್ಠಿಯಲ್ಲಿ ಮಾತನಾಡಿರುವ ಸೈಯದ್ ವಾಸಿಂ ರಿಜ್ವಿ `ಪ್ರತಿಭಟನೆಯಲ್ಲಿ ಭಾರತೀಯ ಯೋಧರ ಮಾರಣಾಂತಿಕ ಕೊಲೆಗಳನ್ನು ಖಂಡಿಸಲಾಗುವುದು ಮತ್ತು ಭಯೋತ್ಪಾದನೆಗೆ ಪ್ರೇರಣೆ ನೀಡುತ್ತಿರುವ ಪಾಕಿಸ್ತಾನದ ಧ್ವಜವನ್ನು ಸುಟ್ಟು ಆಕ್ರೋಶ ವ್ಯಕ್ತಪಡಿಸಲಾಗುವುದು ಎಂದು ತಿಳಿಸಿದ್ದಾರೆ!! ಷಿಯಾ ಕೇಂದ್ರೀಯ ಕಚೇರಿ ಬಳಿ ಷಿಯಾ ವಕ್ಫ್ ಬೋಡ್ರ್ನ ಎಲ್ಲ ಪದಾಧಿಕಾರಿಗಳು ಪ್ರತಿಭಟನೆಯಲ್ಲಿ ಭಾಗಿಯಾಗಲಿದ್ದಾರೆ. ದೇಶಕ್ಕಾಗಿ ಪ್ರಾಣ ನೀಡುವ ಯೋಧರಿಗಾಗಿ ಪ್ರತಿಭಟನೆ ನಡೆಸಿದ ನಂತರ ರಂಜಾನ್ ಆಚರಿಸಲಾಗುವುದು ಎಂದು ರಿಜ್ವಿ ತಿಳಿಸಿದ್ದಾರೆ. ಪಾಕ್‍ನ ಕಪಟ ನಾಟಕದ ಬಗ್ಗೆ ಈಗಾಗಲೇ ಭಾರತೀಯರ ಮುಸ್ಲಿಮರೂ ಖಂಡಿಸುತ್ತಿದ್ದದ್ದಾರೆ!!

ಪಾಕಿಸ್ತಾನ ಮೆರೆದಿರುವ ಕ್ರೌರ್ಯಕ್ಕೆ ಇಡೀ ದೇಶಾದ್ಯಂತ ವಿರೋಧ ವ್ಯಕ್ತವಾಗುತ್ತಿದೆ!! ಮಗನನ್ನು ಕಳೆದುಕೊಂಡಿರುವ ಹುತಾತ್ಮ ಔರಂಗಜೇಬನ ತಂದೆ ಕೂಡಾ ಕೇಂದ್ರ ಸರಕಾರಕ್ಕೆ 72 ಗಂಟೆಗಳ ಗಡುವು ನೀಡಿದ್ದಾರೆ. ಔರಂಗಜೇಬ್ ಕೇವಲ ನಮ್ಮ ಕುಟುಂಬಕ್ಕಾಗಿ ದುಡಿಯುತ್ತಿರಲಿಲ್ಲ, ಇಡೀ ದೇಶದ ರಕ್ಷಣೆಗಾಗಿ ಗಡಿಯಲ್ಲಿ ಕುಟುಂಬ ಎಲ್ಲಾ ಬಿಟ್ಟು ದೇಶದ್ರೋಹಿಗಳ ವಿರುದ್ಧ ಹೋರಾಡಿ ಇದೀಗ ಪಾಕಿಸ್ತಾನದ ಕ್ರೌರ್ಯಕ್ಕೆ ಬಲಿಯಾಗಿದ್ದಾನೆ. ನನ್ನ ಮಗನನ್ನು ಕೊಂದವರನ್ನು ಸರಕಾರ 72 ಗಂಟೆಗಳಲ್ಲಿ ಬಂಧಿಸಲೇಬೇಕು, ಇಲ್ಲವಾದಲ್ಲಿ ನಾನೇ ಈ ಬಗ್ಗೆ ದಿಟ್ಟ ನಿರ್ಧಾರ ತೆಗೆದುಕೊಳ್ಳುತ್ತೇನೆ ಎಂದು ಖಡಾಖಂಡಿತವಾಗಿ ಹೇಳಿದ್ದಾರೆ. ಹುತಾತ್ಮ ಔರಂಗಜೇಬ್ ತಂದೆ ಕೂಡ ಸೇನೆಯಲ್ಲಿ ಕರ್ತವ್ಯ ನಿರ್ವಹಿಸಿದ್ದು, ನಿವೃತ್ತಿ ಹೊಂದಿ ತನ್ನ ಮಗನನ್ನು ಸೇನೆಗೆ ಸೇರಿಸಿದ್ದರು. ಆದರೆ ಇದೀಗ ಮಗನನ್ನೂ ಕಳೆದುಕೊಂಡ ಆಕ್ರೋಶದಲ್ಲಿ ಪಾಕಿಸ್ತಾನದ ವಿರುದ್ಧ ಸಿಡಿದೆದ್ದಿದ್ದು, ಕೇಂದ್ರ ಸರಕಾರಕ್ಕೆ ಮನವಿ ಮಾಡಿದ್ದಾರೆ. ಒಂದು ವೇಳೆ ಭಾರತೀಯ ಸೈನಿಕರು ಇಡೀ ಪಾಕಿಸ್ತಾನವನ್ನು ಧ್ವಂಸ ಮಾಡಬೇಕು ಎಂದು ತೀರ್ಮಾಸಿದರೆ ಚಿಟಿಕೆ ಹೊಡೆಯುವಷ್ಟು ಹೊತ್ತಿಗೆ ಪಾಕಿಸ್ತಾನ ಧ್ವಂಸ ಮಾಡುವಷ್ಟು ಸಾಮಥ್ರ್ಯವಿದೆ!! ಈ ಬಾರಿ ಮಾತ್ರ ನಮ್ಮ ಭಾರತೀಯ ಸೇನೆ ಪಾಕಿಗಳಿಗೆ ತಕ್ಕ ಮದ್ದನ್ನು ಅರೆಯಲು ತಯಾರಾಗಿ ನಿಂತಿವೆ!!

  • ಪವಿತ್ರ
Editor Postcard Kannada:
Related Post