X

ಮತ್ತೆ ಅಮೇರಿಕಾಕ್ಕೆ ಸೆಡ್ಡು ಹೊಡೆದ ಭಾರತ!! ರಷ್ಯಾದಿಂದ ಎಸ್- 400 ಕ್ಷಿಪಣಿ ಖರೀದಿಗೆ ಮುಂದಾದ ಕೇಂದ್ರ!! ಮೋದಿಯ ನಡೆ ಟ್ರಂಪ್‍ಗೂ ತಳಮಳ!!

ಪ್ರಧಾನಿ ನರೇಂದ್ರ ಮೋದಿ ಅಧಿಕಾರ ವಹಿಸಿದ ಬಳಿಕ ಇಡೀ ವಿಶ್ವವೇ ಭಾರತದತ್ತ ಮುಖ ಮಾಡಿ ನಿಲ್ಲುವ ಹಾಗೆ ಹಾಗಿದೆ!! ಯಾಕೆಂದರೆ ಮೋದಿಜೀಯ ಆಡಳಿತ ವೈಖರಿಯೇ ಹಾಗಿದೆ!! ಯಾವ ಮಿತ್ರ ರಾಷ್ಟ್ರವಾಗಲಿ ಶತ್ರು ರಾಷ್ಟ್ರವಾಗಲೀ ಭಾರತಕ್ಕೆ ತೊಂದರೆ ಕೊಡುತ್ತಿದ್ದಾರೆ ಎಂದು ತಿಳಿದರೆ ಸಾಕು ಅವರನ್ನು ಯಾವ ಕಾರಣಕ್ಕೂ ಮೋದಿಜೀ ಕ್ಷಮಿಸುವುದೇ ಇಲ್ಲ!! ಮೊದಲು ಯುಪಿಎ ಸರಕಾರ ಅಧಿಕಾರದಲ್ಲಿದ್ದ ಸಮಯದಲ್ಲಿ ಭಾರತವನ್ನು ಕಂಡರೆ ಬೇರೆ ದೇಶಗಳಿಗೆ ಅಷ್ಟಕಷ್ಟೇ.. ಇತ್ತು!! ಯಾಕೆಂದರೆ ಯುಪಿಎ ಸರಕಾರ ಆಡಳಿತ ಅಷ್ಟರ ಮಟ್ಟಿಗೆ ಇತ್ತು ಎಂಬುವುದು ಇದರಲ್ಲಿ ತಿಳಿಯುತ್ತದೆ!! ಆದರೆ ಈಗ ಭಾರತವನ್ನು ಎಲ್ಲಾ ರಾಷ್ಟ್ರಗಳು ಅತೀ ಗೌರವದಿಂದ ಕಾಣುತ್ತಿದೆ ಅದಕ್ಕೆ ಕಾರಣ ಮೋದಿಜೀ.. ಅಮೇರಿಕಾದ ಜೊತೆ ಮೋದಿಜೀ ಒಳ್ಳೆಯ ಸಂಬಂಧವನ್ನೇ ಬೆಳೆಸಿಕೊಂಡಿದ್ದರು.. ಆದರೆ ಇತ್ತೀಚೆಗೆ ಅಮೇರಿಕಾದ ಕೆಲವೊಂದು ನಡೆ ಭಾರತಕ್ಕೆ ವಿರೋಧವಾಗಲು ಶುರುವಾಗಿದೆ!! ಈಗಾಗಲೇ ಭಾರತದ ವ್ಯಾಪಾರ ಯುದ್ಧದಲ್ಲಿ ಅಮೇರಿಕಾಕ್ಕೆ ಸರಿಯಾಗಿಯೇ ಸೆಡ್ಡು ಹೊಡೆದಿತ್ತು!! ಇದೀಗ ಅಮೇರಿಕಾದ ವಿರೋಧದ ನಡುವೆಯೂ ಇಸ್ರೇಲ್‍ನೊಂದಿಗೆ ಕ್ಷಿಪಣಿ ಖರೀದಿಗೆ ಮುಂದಾದ ಭಾರತ ಅಮೇರಿಕಾವನ್ನು ಪತರುಗುಟ್ಟುವಂತೆ ಮಾಡಿದೆ!!

ವಿಶ್ವದ ದೊಡ್ಡಣ್ಣನಿಗೆ ಸೆಡ್ಡು ಹೊಡೆದ ಭಾರತ!!

ಈಗಾಗಲೇ ಪ್ರಧಾನಿ ನರೇಂದ್ರ ಮೋದಿಯವರು ವಿದೇಶಿ ಪ್ರವಾಸ ಮಾಡುತ್ತಾರೆ ಎಂದು ಜರಿಯುತ್ತಿರುವ ಕೆಲವು ವಿರೋಧಿಗಳು ಇಲ್ಲಿ ಗಮನಿಸಬೇಕಾದ ಅಂಶವೆಂದರೆ ಮೋದೀ ಏನಾದರೂ ವಿದೇಶಿ ಪ್ರವಾಸ ಹೋಗಿಲ್ಲವೆಂದರೆ ಇಸ್ರೇಲ್‍ನಂತಹ ರಾಷ್ಟ್ರದೊಂದಿಗೆ ಸಂಬಂಧ ಬೆಳೆಸಿಕೊಳ್ಳದಿದ್ದರೆ ಭಾರತದಲ್ಲಿ ನಾವು ಇಂದು ಸುಖವಾಗಿ ಜೀವನ ನಡೆಸಲು ಸಾಧ್ಯವಿರುತ್ತಿರಲಿಲ್ಲ!!

ಭಾರತಕ್ಕೆ ಏನೇ ತೊಂದರೆ ಆದರೂ ಮೊದಲು ಸಹಾಯಕ್ಕೆ ಧಾವಿಸುವುದೇ ಇದೇ ಇಸ್ರೇಲ್ ದೇಶ!! ಹಿಂದೆ ವಿದೇಶಿಯರು ದಾಳಿ ಮಾಡಿ, ಇಸ್ರೇಲಿಗರನ್ನು ಅಲ್ಲಿಂದ ಓಡಿಸಿದಾಗ, ಜಗತ್ತಿನ ಯಾವ ರಾಷ್ಟ್ರಗಳೂ ಇಸ್ರೇಲಿಗರಿಗೆ ಜಾಗ ಕೊಟ್ಟಿರಲಿಲ್ಲ. ಆಗ ಭಾರತವೇ ಇಸ್ರೇಲಿಗರ ನೆರವಿಗೆ ಬಂದು ಭಾರತದಲ್ಲಿರುವಂತೆ ಮಾಡಿತ್ತು. ಹೀಗಾಗಿಯೇ ಇಸ್ರೇಲಿಗರು ಭಾರತವನ್ನು ತಮ್ಮ ಮಾತೃಭೂಮಿ ಮತ್ತು ಇಸ್ರೇಲನ್ನು ಧರ್ಮಭೂಮಿ ಎಂದು ಕರೆಯುತ್ತಾರೆ. ಇದೀಗ ಇಸ್ರೇಲ್‍ನೊಂದಿಗೆ ಒಪ್ಪಂದವನ್ನು ಮಾಡಿಕೊಂಡು ಶತ್ರು ರಾಷ್ಟ್ರದ ಸೊಕ್ಕು ಮುರಿಯಲು ಭಾರತ ಮುಂದಾಗಿದ್ದು ಇದಕ್ಕೆ ಈಗಾಗಲೇ ಇಸ್ರೇಲ್ ಸಾಥ್ ನೀಡಿದ್ದು ಮತ್ತೆ ಇಸ್ರೇಲ್‍ನೊಂದಿಗೆ ಒಪ್ಪಂದವನ್ನು ಮಾಡಲು ಮೋದಿ ಸರಕಾರ ಮುಂದಾಗಿದೆ!!

ವಿಶ್ವದ ಎದುರು ಭಾರತದ ದಿಟ್ಟ ನಿಲುವು ಮತ್ತೊಮ್ಮೆ ಸಾಬೀತಾಗಿದೆ!! ಮೋದಿ ತಮ್ಮ ದೇಶಕ್ಕೆ ಸ್ಪಲ್ಪ ತೊಂದರೆಯಾದರೂ ಸುಮ್ಮನೆ ಇರಲ್ಲ ಎನ್ನುವುದಕ್ಕೆ ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ!! ವಿಶ್ವದ ದೊಡ್ಡಣ್ಣ ಅಮೆರಿಕಕ್ಕೆ ಭಾರತ ಸೆಡ್ಡು ಹೊಡೆದಿದೆ. ಅಮೆರಿಕದ ವಿರೋಧ ಹಾಗೂ ನಿರ್ಬಂಧ ವಿಧಿಸುವ ಎಚ್ಚರಿಕೆಯನ್ನು ಧಿಕ್ಕರಿಸಿ ಭಾರತ ರಷ್ಯಾದಿಂದ ಉನ್ನತ ತಂತ್ರಜ್ಞಾನ ಹೊಂದಿರುವ ಐದು ಎಸ್ -400 ವಾಯು ರಕ್ಷಣಾ ಕ್ಷಿಪಣಿಗಳನ್ನು ಖರೀದಿಸಲು ಮುಂದಾಗಿದೆ. 39 ಸಾವಿರ ಕೋಟಿ ಮೌಲ್ಯದ ಬೃಹತ್ ಒಪ್ಪಂದಕ್ಕೆ ರಕ್ಷಣಾ ಸಚಿವಾಲಯ ಒಪ್ಪಿಗೆ ಸೂಚಿಸಿದೆ. ಈ ಮೂಲಕ ಅಮೆರಿಕದ ವಿರೋಧಕ್ಕೆ ಭಾರತ ಸೊಪ್ಪು ಹಾಕದೇ ದಿಟ್ಟ ನಿಲುವು ವ್ಯಕ್ತಪಡಿಸಿದೆ.

ಇತ್ತೀಚೆಗೆ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ನೇತೃತ್ವದಲ್ಲಿ ನಡೆದ ರಕ್ಷಣಾ ಸ್ವಾಧೀನ ಮಂಡಳಿ ಸಭೆಯಲ್ಲಿ ಈ ನಿರ್ಧಾರಕ್ಕೆ ಒಪ್ಪಿಗೆ ನೀಡಲಾಗಿತ್ತು!! ರಷ್ಯಾದೊಂದಿಗಿನ ಮಾತುಕತೆ ವೇಳೆ ಒಪ್ಪಂದಂತೆ ಸಣ್ಣ ವ್ಯತ್ಯಾಸಗಳಿಗೂ ಒಪ್ಪಿಗೆ ದೊರೆತಿದೆ. ಇದೀಗ ಹಣಕಾಸು ಸಚಿವಾಲಯ ಮತ್ತು ಪ್ರಧಾನಿ ನೇತೃತ್ವದ ಭದ್ರತಾ ಕ್ಯಾಬಿನೆಟ್ ಸಮಿತಿಯಲ್ಲಿ ಒಪ್ಪಿಗೆ ದೊರೆಯಬೇಕಿದೆ.

ಗೋವಾದಲ್ಲಿ 2016ರ ಅಕ್ಟೋಬರ್ ನಲ್ಲಿ ನಡೆದ ಶೃಂಗಸಭೆಯಲ್ಲಿ ಮೋದಿ ಪುಟಿನ್ ಮಧ್ಯೆ ನಡೆದ ಮಾತುಕತೆ ವೇಳೆ ಎಸ್ 400 ಕ್ಷಿಪಣಿ ವ್ಯವಸ್ಥೆಗೆ ಎರಡು ದೇಶಗಳ ಒಪ್ಪಿಗೆ ಸಿಕ್ಕಿತ್ತು. 2018ರ ಅಕ್ಟೋಬರ್ ನಲ್ಲಿ ಮೋದಿ ಪುಟಿನ್ ಮಧ್ಯೆ ಶೃಂಗಸಭೆ ನಡೆಯಲಿದ್ದು, ಈ ವೇಳೆ ಇದಕ್ಕೆ ಅಂತಿಮ ಸ್ಪರ್ಷ ದೊರೆಯಲಿದೆ. ಈ ಒಪ್ಪಂದಕ್ಕೆ ಅಮೆರಿಕ ಖ್ಯಾತೆ ತೆಗೆದಿತ್ತು. ರಷ್ಯಾದಿಂದ ಶಸ್ತ್ರಾಸ್ತ್ರ ಖರೀದಿಸುವ ರಾಷ್ಟ್ರಗಳ ವಿರುದ್ಧ ಅಮೆರಿಕ ಹಲವು ನಿರ್ಬಂಧ ವಿಧಿಸುವ ಕಾನೂನಿಗೆ ತಿದ್ದುಪಡಿ ಮಾಡಿದೆ. ಎಸ್ 400 ವಾಯು ರಕ್ಷಣಾ ಕ್ಷಿಪಣಿಯಿಂದ ಭಾರತೀಯ ವಾಯು ಸೇನೆಗೆ ಭಾರಿ ಬಲ ಬರಲಿದೆ.

ಅದಲ್ಲದೆ ಈ ಮೊದಲು ಕೂಡಾ ಅಮೇರಿಕಾಕ್ಕೆ ಭಾರತ ಸೆಡ್ಡು ಹೊಡೆದಿತ್ತು!! ಟ್ರಂಪ್ ನ ಸುಂಕ ಹೆಚ್ಚಳದ ಬೆದರಿಕೆಯ ಹಿನ್ನೆಲೆಯಲ್ಲಿ ಚೀನಾ ಈಗಾಗಲೇ ತಾನು ಅಮೇರಿಕಾಕ್ಕೆ ಇದಿರೇಟು ನೀಡಲು ಹಿಂಜರಿಯುವುದಿಲ್ಲ ಎಂದು ಹೇಳಿಕೊಂಡಿತ್ತು!! ಆದರೆ ಭಾರತ ಬರಿ ಬಾಯಿ ಮಾತಿನಲ್ಲಿ ಹೇಳದೆ, ಯುರೋಪಿಯನ್ ಒಕ್ಕೂಟಗಳ ನಡೆಯಂತೆಯೆ ವ್ಯಾಪಾರ ಯುದ್ದದಲ್ಲಿ ಅಮೇರಿಕಾಕ್ಕೆ ಈಗಾಗಲೇ ಬಲವಾದ ಏಟು ನೀಡಿದೆ!! ಟ್ರಂಪ್ ಆಡಳಿತದ ಮೇಲೆ ಪ್ರತೀಕಾರ ಹೇರುವಂತೆ ಅಮೇರಿಕಾದ ನೀತಿಯ ವಿರುದ್ದ ಪ್ರತಿಭಟನೆಯಲ್ಲಿ ಭಾರತವು 29 ವಸ್ತುಗಳ ಮೇಲಿನ ಆಮದು ಸುಂಕವನ್ನು ಏರಿಸಿತ್ತು!! ದೊಡ್ಡಣ್ಣನ ಧಿಮಾಕಿಗೆ ಭಾರತ ಬಲವಾದ ಛಾಟಿ ಏಟು ಬೀಸಿದೆ. ಅಮೇರಿಕಾದ ಬರೋಬ್ಬರಿ 29 ವಸ್ತುಗಳ ಆಮದು ಸುಂಕವನ್ನು ಏರಿಸಿ ಜಗತ್ತಿಗೆ ತಾನು ಯಾರ ಬೆದರಿಕೆಗೂ ಜಗ್ಗುವುದಿಲ್ಲ ಎನ್ನುವ ಸಂದೇಶವನ್ನು ಮೋದಿ ಸರಕಾರ ಈಗಾಗಲೇ ಸಾರಿತ್ತು!!

ಇದೀಗ ಇಸ್ರೇಲ್‍ನಿಂದ ಭಾರತ ಆಮದು ಮಾಡಿಕೊಳ್ಳುವ ಎಸ್ -400 ವಾಯು ರಕ್ಷಣಾ ಕ್ಷಿಪಣಿಗಳ ಖರೀದಿಗೆ ಅಮೇರಿಕಾ ಭಾರೀ ವಿರೋಧ ವ್ಯಕ್ತಪಡಿಸಿದರೂ ಮೊದಿಜೀ ಕ್ಯಾರೇ ಎನ್ನದೆ ಅಮೇರಿಕಾಕ್ಕೆ ಸೆಡ್ಡು ಹೊಡೆಯಲು ಮುಂದಾಗಿದ್ದಾರೆ!!

  • ಪವಿತ್ರ
Editor Postcard Kannada:
Related Post