X

ಇಡೀ ನಾಡು ನವರಾತ್ರಿಯ ಸಡಗರದಲ್ಲಿ ಚಾಮುಂಡಿ ದೇವತೆಯನ್ನ ಪೂಜಿಸುತ್ತಿದ್ದರೆ ಇತ್ತ ಕುಮಾರಸ್ವಾಮಿಯ ಅಭಿಮಾನಿಗಳು ಮಾತ್ರ ಹೆಣ್ಣಿನ ಚಾರಿತ್ರ್ಯಹರಣ ಮಾಡುವಲ್ಲಿ ನಿರತರಾಗಿದ್ದರು!!!!

ಪ್ರಜಾಪ್ರಭುತ್ವದಲ್ಲಿ ರಾಜಕೀಯ ನಾಯಕರನ್ನ ಪ್ರಶ್ನಿಸುವದು ತಪ್ಪೇ? ಹಾಗೆ ಪ್ರಶ್ನೆ ಮಾಡಿದ್ದ ಯುವತಿಯ ಚಾರಿತ್ರ್ಯ ಹರಣಕ್ಕೆ ಮುಂದಾದ ಕುಮಾರಸ್ವಾಮಿ
ಬೆಂಬಲಿಗರು!!!

ಅಮಿತ್ ಶಾಹ್ ಹೇಳಿಕೆಯೊಂದನ್ನ ತಿರುಚಿ ಅದರಿಂದ ಕನ್ನಡಿಗರನ್ನ ಕೆರಳಿಸಲು ಜೆ.ಡಿ.ಎಸ್ ಒಂದು ಕುತಂತ್ರವನ್ನ ಮಾಡಿತ್ತು.

ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾಹ್ ಒಂದು ಹೇಳಿಕೆಯನ್ನು ನೀಡಿದ್ದರು. ನವೆಂಬರ್ 2 ರಂದು ಎಲ್ಲ ಬಿಜೆಪಿ ಕಾರ್ಯಕರ್ತರ ಮನೆಯ ಮೇಲೂ ಬಿಜೆಪಿ ಧ್ವಜವನ್ನ ಹಾರಿಸಿ ಎಂಬುದು ಅಮಿತ್ ಶಾಹ್ ರವರ ಕರೆಯಾಗಿತ್ತು.

ಆದರೆ ಕಾಂಗ್ರೆಸ್ ಹಾಗು ಜೆಡಿಎಸ್ ಸೋಶಿಯಲ್ ಮೀಡಿಯಾ ಕಾರ್ಯಕರ್ತರು ಅಮಿತ್ ಶಾಹ್ ಹೇಳಿಕೆಯನ್ನು ತಿರುಚಿ
“ನವೆಂಬರ್ 1 ಕರ್ನಾಟಕ ರಾಜ್ಯೋತ್ಸವದಂದು ಕನ್ನಡ ಬಾವುಟದ ಬದಲಿಗೆ ಬಿಜೆಪಿ ಧ್ವಜ ಹಾರಿಸಿ ಎಂಬ ಕರೆ ನೀಡಿದ್ದಾರೆ, ಅಮಿತ್ ಶಾಹ್ ಕನ್ನಡ ವಿರೋಧಿ”
ಎಂಬಿತ್ಯಾದಿ ಸುಳ್ಳು ಪ್ರಚಾರ ಸೋಶಿಯಲ್ ಮೀಡಿಯಾನಲ್ಲಿ ವೈರಲ್ ಆಗಿತ್ತು.

ಇದಾದ ಬಳಿಕ ಬಿಜೆಪಿ ಇದರ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿ ಕಂಪ್ಲೇಂಟ್ ಕೂಡ ದಾಖಲಿಸಿತ್ತು.

ಇದರ ಮಧ್ಯೆ ಯುವತಿಯೋರ್ವಳು ಮೊನ್ನೆ ಕುಮಾರಸ್ವಾಮಿಯವರ ಕನ್ನಡ ಪ್ರೇಮವನ್ನು ಪ್ರಶ್ನಿಸಿ ಅವರಿಗೆ ಕೆಲ ಪ್ರಶ್ನೆಗಳನ್ನ ಕೇಳಿದ್ದಳು.

ಆಕೆಯ ವಿಡಿಯೋ ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ ಕೂಡ ಆಗಿತ್ತು. ಹಲವರು ಆಕೆಯ ಗಟ್ಟಿತನವನ್ನ ಹೊಗಳಿದ್ದರು.

ಆದರೆ ಪ್ರಜಾಪ್ರಭುತ್ವದಲ್ಲಿ ರಾಜಕೀಯ ನಾಯಕರಿಗೆ ಜನಸಾಮಾನ್ಯರು ಪ್ರಶ್ನೆ ಮಾಡಲೇಬಾರದೆ? ಅದರಲ್ಲೂ ಹೆಣ್ಣುಮಗಳೊಬ್ಬಳು ಸಮಾಜದ ಬಗ್ಗೆ ರಾಜಕೀಯ ನಾಯಕರ ಬಗ್ಗೆ ತುಟಿ ಬಿಚ್ಚಲೇಬಾರದೆ?

Watch here!!!

ಹೌದು ಅಂತಾರೆ ರಾಜಕೀಯ ನಾಯಕರ ಚೇಲಾಗಳು!!!!

ಕುಮಾರಸ್ವಾಮಿಯವರನ್ನ ಪ್ರಶ್ನಿಸಿದ್ದ ಆ ಯುವತಿಯ ಮೇಲೆ ಸೋಶಿಯಲ್ ಮೀಡಿಯಾಗಳಲ್ಲಿ ಮುಗಿಬಿದ್ದ ಚೇಲಾಗಳು ಯುವತಿಯ ಚಾರಿತ್ರ್ಯ ಹರಣ ಮಾಡಿ
ಬಾಯಿಗೆ ಬಂದಂತೆ ಕಮೆಂಟುಗಳನ್ನ ಹಾಕಿ ವಿಕೃತಿ ಮೆರೆದಿದ್ದಾರೆ.

ಆಕೆಯನ್ನ ಅವಾಚ್ಯ ಶಬ್ದಗಳಿಂದ ನಿಂದಿಸಿ,

“ಬೇಕಾದರೆ ಕುಮಾರಸ್ವಾಮಿಯವರ ಮುಂದಿನ ಚಿತ್ರಗಳ ಐಟಂ ಸಾಂಗ್’ಗಳಿಗೆ ನಿನ್ನನ್ನೇ ಆಯ್ಕೆ ಮಾಡಿಕೊಳ್ತೇವೆ ಡೋಂಟ್ ವರಿ”

“ನೀನೂ ಒಬ್ಬಳು ಹೆಣ್ಣಾ? ನೀನು ನಮ್ಮ ಕುಮಾರಣ್ಣನ ಕನ್ನಡಪ್ರೇಮದ ಬಗ್ಗೆ ಪ್ರಶ್ನೆ ಮಾಡುವ ಮುನ್ನ ಮೊದಲು ಸೀರೆ ಉಟ್ಟುಕೊಳ್ಳೋದನ್ನ ಕಲಿ ನಂತರ ಕನ್ನಡದ ಬಗ್ಗೆ ಮಾತಾಡು”

“ನೋಡೋಕೆ 16-18 ವಯಸ್ಸಿನ ಹುಡುಗಿ ಅನ್ನಸ್ತೀಯ ದೇವೇಗೌಡರು ಹಾಲು ಕುಡಿದಷ್ಟು ನೀನು ನೀರು ಕುಡಿದಿಲ್ಲ”

“ನಿನ್ನಂಥವಳಿಂದ ಕುಮಾರಣ್ಣ ಕನ್ನಡಪ್ರೇಮದ ಬಗ್ಗೆ ತಿಳಿದುಕೊಳ್ಳುವ ಅವಶ್ಯಕತೆಯಿಲ್ಲ”

ಹಾಗು ಇದರ ಜೊತೆ ಜೊತೆಗೆ ಆಕೆಯ ಚಾರಿತ್ರ್ಯಹರಣ ಮಾಡುವ ಇನ್ನು ಹಲವಾರು ಆಕ್ಷೇಪಾರ್ಹ ಕಮೆಂಟ್’ಗಳು ಆಕೆಯ ವಿರುದ್ಧ ಕುಮಾರಸ್ವಾಮಿಯ ಬೆಂಬಲಿಗರು ಮಾಡಿದ್ದಾರೆ.

 

ಭಾರತ ದೇಶದಲ್ಲಿ ಅದರಲ್ಲೂ ಕರ್ನಾಟಕದಲ್ಲಿ ಹೆಣ್ಣಿಗೆ ನಾವು ಕೊಟ್ಟಿರುವ ಸ್ಥಾನ ಎಂತಹುದು? ನಾಡಿನ ಸರ್ವಶಕ್ತ ದೇವತೆ, ಅಧಿದೇವತೆ ಚಾಮುಂಡಿಯನ್ನ ಪೂಜಿಸುವ ಈ ನಾಡಿನಲ್ಲಿ ಹೆಣ್ಣಿಗೆ ಈ ರೀತಿಯ ಅಪಮಾನ ಸಹಿಸಲು ಸಾಧ್ಯವೇ? ಇಡೀ ನಾಡು ನವರಾತ್ರಿಯ ಸಡಗರದಲ್ಲಿ ಚಾಮುಂಡಿ ದೇವತೆಯನ್ನ ಪೂಜಿಸುತ್ತಿದ್ದರೆ ಇತ್ತ ಕುಮಾರಸ್ವಾಮಿಯ ಅಭಿಮಾನಿಗಳು ಮಾತ್ರ ಹೆಣ್ಣಿನ ಚಾರಿತ್ರ್ಯಹರಣ ಮಾಡಲು ಮುಂದಾಗಿದ್ದಾರೆಂದರೆ ಇದಕ್ಕಿಂತ ನಾಚಿಕೆಗೇಡಿನ ಸಂಗತಿ ಕನ್ನಡಿಗರಿಗೆ ಮತ್ತೊಂದಿಲ್ಲ.

ಬರಿ ಕಮೆಂಟ್’ಗಳನ್ನಷ್ಟೇ ಹಾಕಿ ಚಾರಿತ್ರ್ಯವಧೆ ಮಾಡಲು ಯತ್ನಿಸದೆ ಇನ್ನೊಂದು ಹೆಜ್ಜೆ ಮುಂದು ಹೋಗಿ ಯಾವುದೋ ಯುವತಿ ಕುಡಿದು ರೋಡಿನಲ್ಲಿ ಒದ್ದಾಡುತ್ತಿರೋ ವಿಡಿಯೋವನ್ನ ಕುಮಾರಸ್ವಾಮಿಯವರನ್ನ ಪ್ರಶ್ನಿಸಿದ್ದ ಯುವತಿಗೆ ಲಿಂಕ್ ಮಾಡಿ “ಗಂಜಿ ಕೇಂದ್ರದ ಗಾಂಜಾ ಗಿರಾಕಿಗಳೆಲ್ಲ ಕುಮಾರಣ್ಣರ ಕನ್ನಡಪ್ರೇಮ ಪ್ರಶ್ನೆ ಮಾಡುವ ಹಾಗಾದ್ರು, ಇದು ಬಿಜೆಪಿ ಭಕ್ತರ ಕಥೆ”ಎನ್ನುವ ಅತ್ಯಂತ ಹೇಯ ಭಾಷೆಯಲ್ಲಿ ಯುವತಿಯನ್ನ ಟ್ರಾಲ್ ಮಾಡಿ ಆಕೆಯ ಚಾರಿತ್ರ್ಯವಧೆಯನ್ನೂ ಜೆಡಿಎಸ್ ಅಭಿಮಾನಿಗಳು ಹಾಗು ಕುಮಾರಸ್ವಾಮಿ ಹೆಸರ ಮೇಲಿರೋ ಫೇಸ್ಬುಕ್ ಪೇಜುಗಳಲ್ಲಿ ಹಾಕಿಕೊಂಡು ವಿಕೃತಿ ಮೆರೆದಿದ್ದಾರೆ.

ಜೆಡಿಎಸ್ ರವರ ವಿಕೃತಿ ಯನ್ನು ನೋಡಬೇಕಾದರೆ ಇಲ್ಲಿ ಒತ್ತಿ!

ಹಾಗಾದರೆ ಒಬ್ಬ ಹೆಣ್ಣು ಸಮಾಜದ ಓರೆಕೋರೆಗಳನ್ನ, ರಾಜಕೀಯ ನಾಯಕರ ಢೋಂಗಿತನವನ್ನ ಪ್ರಶ್ನೆ ಮಾಡಲೇಬಾರದಾ?

ಹೆಣ್ಣು ಅಂದ ಮಾತ್ರಕ್ಕೆ ಆಕೆ ಮನೆಯಲ್ಲಿಯೇ ಇರಬೇಕು ಸಮಾಜದ ಉಸಾಬರಿ ಅವಳಿಗ್ಯಾಕೆ ಬೇಕು ಅಂತ ಅವಳನ್ನು ದಿಗ್ಬಂಧನ ಹಾಕಬೇಕೆ?

ನಮ್ಮ ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಪ್ರತಿಯೊಬ್ಬರಿಗೂ ಅಭಿವ್ಯಕ್ತಿ ಸ್ವಾತಂತ್ರ್ಯ ಅನ್ನೋದು ಇದೆ, ಆದರೆ ಕುಮಾರಸ್ವಾಮಿಯವರ ಬೆಂಬಲಿಗರಿಗೆ ಇದು ತಿಳಿದಿಲ್ಲ ಅನಿಸುತ್ತೆ. ಅಭಿವ್ಯಕ್ತಿ ಸ್ವಾತಂತ್ರ್ಯ ಅನ್ನೋದು ಕೇವಲ ಜೆಡಿಎಸ್ ನವರಿಗೆ ಮಾತ್ರವಿದೆ ಅಂದುಕೊಂಡಿದ್ದಾರೇನೋ.

ಮೊನ್ನೆ ಗೌರಿ ಲಂಕೇಶರ ಹತ್ಯೆಯಾದಾಗ ಟೌನ್ ಹಾಲ್ ನ ಮುಂದೆ, ರಾಜ್ಯಾದ್ಯಂತ ಆಕೆಯ ಹತ್ಯೆಯ ಬಗ್ಗೆ ಧರಣಿ ನಡೆಸಿದ್ದ ಪ್ರಗತಿಪರರು ಹೇಳಿದ್ದ ಮಾತುಗಳೇನು? “ತನ್ನ ಲೇಖನಿ ಮೂಲಕ ಸಮಾಜ ಸುಧಾರಣೆ ಮಾಡಲು ಹೊರಟಿದ್ದ ಒಬ್ಬ ದಿಟ್ಟ ಮಹಿಳೆಯನ್ನು ಕೊಂದಿದ್ದು ಪ್ರಜಾಪ್ರಭುತ್ವದಲ್ಲಿ ಒಬ್ಬ ಹೆಣ್ಣಿನ
ಧ್ವನಿಯನ್ನ ಅಡಿಗಿಸಲು ಸಂಚು ನಡೆದಿದೆ” ಅನ್ನೋದಾಗಿತ್ತು.

ಹಾಗಾದರೆ ಇಂದು ಕುಮಾರಸ್ವಾಮಿಯವರನ್ನ ಪ್ರಶ್ನಿಸಿದ ಆ ಯುವತಿಗೆ ಕುಮಾರಸ್ವಾಮಿಯವರ ಬೆಂಬಲಿಗರಿಂದ ಬರುತ್ತಿರೋ ಬೆದರಿಕೆ ಕಮೆಂಟ್’ಗಳು, ಚಾರಿತ್ರ್ಯವಧೆ ಬಗ್ಗೆ ನಮ್ಮ ಸಮಾಜದ ಬುದ್ಧಿಜೀವಿ, ಪ್ರಗತಿಪರ, ವಿಚಾರವಾದಿಗಳು ಏನಂತಾರೆ?

ಅಥವ ಇದು ನಮಗೆ ಔಟ್ ಆಫ್ ಸೆಲೆಬಸ್ ಅಂತ ಬಾಯಿ ಮುಚ್ಚಿಕುಳಿತುಕೊಳ್ಳುತ್ತಾರ ಎಂಬ ಅವರ hypocrisy ಯನ್ನ ಕಾದು ನೋಡಬೇಕು.

ಕುಮಾರಸ್ವಾಮಿ ಪತ್ನಿಯು ರಾಜಕೀಯದಲ್ಲಿದ್ದಾರೆ, ರೇವಣ್ಣನವರ ಪತ್ನಿಯು ರಾಜಕೀಯಕ್ಕೆ ಇಳಿಯಲು ಅಣಿಯಾಗಿದ್ದಾರೆ. ಕುಟುಂಬವೇ ರಾಜಕೀಯದಲ್ಲಿ ಸಕ್ರೀಯರಾಗಲು ಹೊರಟಿರುವಾಗ ಈ ಕುಟುಂಬದ ರಾಜಕೀಯ ಬೆಂಬಲಿಗರು ಕನಿಷ್ಠ ಪಕ್ಷ ಅನಿತಾ ಕುಮಾರಸ್ವಾಮಿಯವರ ಮುಖವನ್ನು ನೋಡಿಯಾದರೂ ಆ ಯುವತಿಯ ಬಗ್ಗೆ ಸ್ವಲ್ಪ ಯೋಚಿಸಿ ಕಾಮೆಂಟ್ ಮಾಡುವ ಪರಿಜ್ಞಾನ ಹೊಂದಿರಬೇಕಾಗಿತ್ತಲ್ಲವೇ?

ಮುಂದೆ ಯಾವ ಮುಖ ಇಟ್ಟುಕೊಂಡು ಕುಮಾರಸ್ವಾಮಿಯವರು ಕ್ಯಾಂಪೇನ್ ಮಾಡಬಹುದು? ಮಹಿಳೆಯರ ಅಭ್ಯುದಯಕ್ಕೆ ನಾವು ಹಾಗೇ ಮಾಡ್ತೇವೆ ಹೀಗೆ ಮಾಡ್ತೇವೆ ಅಂತ ಹೇಳಿಕೆಗಳನ್ನ ಹೇಗೆ ಕೊಡುತ್ತಾರೆ? ಸ್ವತಃ ತಮ್ಮ ಪಕ್ಷದ ಕಾರ್ಯಕರ್ತರೇ ಒಂದು ಹೆಣ್ಣಿನ ಬಗ್ಗೆ ಹೀಗೆ ವರ್ತಿಸುತ್ತಿರುವಾಗ ಕುಯಮಾರಸ್ವಾಮಿಯವರು ತಮ್ಮ ಬೆಂಬಲಿಗರಿಗೆ ಹೀಗೆಲ್ಲ ಮಾಡಿದರೆ ಹುಷಾರ್ ಅಂತ ಕನಿಷ್ಠಪಕ್ಷ ತಾಕೀತಾದರೂ ಮಾಡುತ್ತಾರಾ ಕಾದು ನೋಡಬೇಕು.

ಒಟ್ಟಿನಲ್ಲಿ ಕರ್ನಾಟಕದ ರಾಜಕೀಯ ಆರೋಪ ಪ್ರತ್ಯಾರೋಪ ಮಾಡುವುದರಲ್ಲಿಯೇ ವ್ಯಸ್ಥವಾಗಿರದೆ ಒಂದು ಹೆಜ್ಜೆ ಮುಂದೆ ಹೋಗಿ ಹೆಣ್ಣಿನ ಮಾನದ
ಬಗ್ಗೆಯೂ ಬಾಯಿಗೆ ಬಂದಂತೆ ಮಾತನಾಡುತ್ತಿರುವುದು ನಾಡಿನ ಮರ್ಯಾದೆಗೆ ಧಕ್ಕೆ ತಂದಂತಿದೆ.

ಇದು ಜೆಡಿಎಸ್ ಕಾರ್ಯಕರ್ತರ ಕಥೆಯಾದರೆ ಕಾಂಗ್ರೆಸ್ಸಿನ ನಾಯಕರಾದಿಯಾಗಿ ಅವರ ಕಾರ್ಯಕರ್ತರು ಶೋಭಾ ಕರಂದ್ಲಾಜೆಯವರ ಚಾರಿತ್ರ್ಯವಧೆಗೂ ಈ ಹಿಂದೆ ಮುಂದಾಗಿದ್ದೂ ನಮ್ಮ ಕಣ್ಣಮುಂದೆಯೇ ಇದೆ.

ಒಂದು ಕನ್ನಡತಿಯ ಚಾರಿತ್ರ್ಯ ವಧೆ ಮಾಡಿದರೆ ಯಾವ ರೀತಿ ಕಾನೂನಿನಲ್ಲಿ ಶಿಕ್ಷೆ ಇದೆ ಎಂಬುದು ಗೊತ್ತಿಲ್ಲವೇನೋ! ಆಕೆಗೆ ಅಭಿವ್ಯಕ್ತಿ ಸ್ವಾತಂತ್ರ್ಯವೇ ಇಲ್ಲವೇ?! ಜೆಡಿಎಸ್ ಸಾಮ್ರಾಜ್ಯದಲ್ಲಿ ಹೆಣ್ಣಿಗೊಂದು ಮರ್ಯಾದೆ ಕೊಡುವ ಸಂಸ್ಕಾರವಿಲ್ಲದಿರುವ ಇವರಿಗೆ ತಾಯಿ ಚಾಮುಂಡೇಶ್ವರಿಯನ್ನು ಆರಾಧಿಸುವ ಕರ್ನಾಟಕದ ಜನ ಅಧಿಕಾರ ಕೊಟ್ಟರೆ ಆ ತಾಯಿಯೂ ಮೆಚ್ಚಲಾರಳು ಬಿಡಿ!

ಈಕೆಯ ಬಗ್ಗೆ ಆರಕ್ಷಕ ಠಾಣೆಯಲ್ಲಿ ದೂರನ್ನು ದಾಖಲಿಸಿರುವ ಜೆಡಿಎಸ್ ಗೆ ಅಕಸ್ಮಾತ್ ಜೆಡಿಎಸ್ ಈಕೆಗೆ ವೀಡೀಯೋಗೆ ಇನ್ಯಾರದೋ ಲಿಂಕ್ ಮಾಡಿ ಅಪಪ್ರಚಾರ ಮಾಡಿದ್ದನ್ನೇನಾದರೂ ದಾಖಲಿಸಿ ದೂರು ಕೊಟ್ಟರೆ ಏನಾದೀತು ಎಂಬ ಅರಿವಿದೆಯೇ?! ತನ್ನ ಕಾರ್ಯಕರ್ತರ ಅಸಭ್ಯ ವರ್ತನೆಗೆ ಕುಮಾರಸ್ವಾಮಿ ಬೆಲೆ ತೆರಬೇಕಾಗುತ್ತದೆ. ಆ ಕನ್ನಡತಿಗೆ ಈಗಾಗಲೇ ಬಹಿರಂಗವಾಗಿಯೇ ಬೆದರಿಕೆ ಹಾಕಿರುವ ಕುಮಾರಸ್ವಾಮಿ ಬೆಂಬಲಿಗರು ಇನ್ನಾದರೂ ಸುಮ್ಮನಿದ್ದರೆ ಚಾಮುಂಡೇಶ್ವರಿಗೆ ಬೆಲೆ ಕೊಟ್ಟ ಹಾಗೆ! ಅಕಸ್ಮಾತ್ ಆ ಹೆಣ್ಣು ಮಗಳ ಬದುಕಿಗೇನಾದರೂ ತೊಂದರೆಯಾದರೆ ಅದಕ್ಕೆ ನೇರ ಹೊಣೆ ಜೆಡಿಎಸ್ ಆಗುತ್ತದೆಂಬುದು ನೆನಪಿರಲಿ.

ರಾಜ್ಯದ ಜನ ಇವುಗಳನ್ನೆಲ್ಲ ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ.ಮುಂಬರುವ ಚುನಾವಣೆಯಲ್ಲಿ ಯಾರಿಗೆ ಯಾವ ಸ್ಥಾನದಲ್ಲಿಡಬೇಕು ಅನ್ನೋದನ್ನ ಜನ ತೀರ್ಮಾನಿಸುತ್ತಾರೆ ಅನ್ನೋ ಕನಿಷ್ಠ ಪರಿಜ್ಞಾನವೂ ರಾಜಕೀಯ ನಾಯಕರ ಚೇಲಾಗಳಿಗೆ ಅರ್ಥವಾಗದಿರಿವುದು ತಮ್ಮ ಪಕ್ಷದ ಅವನತಿಗೆ ತಾವೇ ಕಾರಣರಾಗುವುದು ಕಟ್ಟಿಟ್ಟ ಬುತ್ತಿಯೇ.

– Vinod Hindu Nationalist

Editor Postcard Kannada:
Related Post