X

ಬ್ರೇಕಿಂಗ್! ಕಾಂಗ್ರೆಸ್‌‌ನಲ್ಲೇ ಭುಗಿಲೆದ್ದ ಭಿನ್ನಮತ.! ಸಚಿವ ಸ್ಥಾನಕ್ಕಾಗಿ ಮೈತ್ರಿ ಸರಕಾರದಲ್ಲಿ ಕಸರತ್ತು..!

ಕೇವಲ ಅಧಿಕಾರಕ್ಕಾಗಿಯೇ ಕಸರತ್ತು ನಡೆಸುತ್ತಿರುವ ಕಾಂಗ್ರೆಸ್ ಮತ್ತು ಜೆಡಿಎಸ್‌ ಇದೀಗ ಮೈತ್ರಿ ಮಾಡಿಕೊಂಡು ಸರಕಾರ ನಡೆಸುವ ಬದಲು ಸಚಿವ ಸ್ಥಾನಕ್ಕಾಗಿ ಕಿತ್ತಾಡಿಕೊಳ್ಳುತ್ತಿದ್ದಾರೆ. ಚುನಾವಣೆಯಲ್ಲಿ ಹೀನಾಯವಾಗಿ ಸೋಲನುಭವಿಸಿದ ಕಾಂಗ್ರೆಸ್ ಮತ್ತು ಜೆಡಿಎಸ್‌ ಇದೀಗ ಸಮ್ಮಿಶ್ರ ಸರಕಾರ ನಡೆಸುತ್ತಿದ್ದು, ಕುಮಾರಸ್ವಾಮಿ ಅವರು ಮುಖ್ಯಸ್ಥೆ ಇಷ್ಟು ದಿನವಾದರೂ ಕೂಡ ಇನ್ನೂ ಸಚಿವ ಸಂಪುಟ ರಚನೆಯಾಗದೆ , ಸಚಿವ ಸ್ಥಾನಕ್ಕಾಗಿ ಎರಡೂ ಪಕ್ಷಗಳ ಮುಖಂಡರು ಪೈಪೋಟಿ ನಡೆಸುತ್ತಿದ್ದಾರೆ. ಒಂದೆಡೆ ರೈತರ ಸಾಕ ಮನ್ನಾ ವಿಚಾರವಾಗಿ ರಾಜ್ಯದಲ್ಲಿ ಸರಕಾರದ ವಿರುದ್ಧ ಆಕ್ರೋಶ ವ್ಯಕ್ತವಾಗುತ್ತಿದ್ದರೆ, ಇತ್ತ ಕುಮಾರಸ್ವಾಮಿ ಅವರಿಗೆ ಸಚಿವ ಸಂಪುಟ ರಚನೆಯೇ ಒಂದು ದೊಡ್ಡ ತಲೆನೋವಾಗಿದೆ..!

ರಾಮಲಿಂಗಾರೆಡ್ಡಿಗೆ ಸಚಿವ ಸ್ಥಾನ ಸಿಗದಂತೆ ಪರಮೇಶ್ವರ್ ಗೇಮ್..!

ಈಗಾಗಲೇ ಜೆಡಿಎಸ್‌ ನಿಂದ ಕುಮಾರಸ್ವಾಮಿ ಮುಖ್ಯಮಂತ್ರಿ ಆದರೆ, ಇತ್ತ ಕಾಂಗ್ರೆಸ್ ನಿಂದ ಜಿ ಪರಮೇಶ್ವರ್ ಅವರು ಡಿಸಿಎಂ ಆಗಿ ಆಯ್ಕೆಯಾಗಿದ್ದಾರೆ. ಇದೀಗ ಸಚಿವ ಸಂಪುಟ ರಚನೆಗೆ ದಿನ ನಿಗಧಿಯಾಗಿದ್ದು, ಸಚಿವ ಸ್ಥಾನಕ್ಕಾಗಿ ಎರಡೂ ಪಕ್ಷಗಳ ಮುಖಂಡರ ಲಾಭಿ ಭಾರೀ ಜೋರಾಗಿಯೇ ನಡೆಯುತ್ತಿದೆ. ಕಾಂಗ್ರೆಸ್ ಶಾಸಕರ ಸಂಖ್ಯೆ ಹೆಚ್ಚಿರುವುದರಿಂದ ಮುಖ್ಯ ಖಾತೆಗಳು ಕಾಂಗ್ರೆಸ್ ಶಾಸಕರಿಗೆ ಸಿಗಬೇಕೆಂದು ಒತ್ತಡ ಹೇರುತ್ತಿದ್ದರೆ, ಇತ್ತ ಜೆಡಿಎಸ್‌ ಶಾಸಕರು ತಮ್ಮದೇ ಪಕ್ಷದ ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗಿರುವುದರಿಂದ ತಮಗೇ ಸಚಿವ ಸ್ಥಾನ ಸಿಗಬೇಕೆಂದು ಶಾಸಕರು ಮುಗಿಬೀಳುತ್ತಿದ್ದಾರೆ.

ಆದರೆ ಇವೆಲ್ಲದರ ಮಧ್ಯೆ ಇತ್ತ ಕಾಂಗ್ರೆಸ್‌ನಲ್ಲೇ ಭಿನ್ನಮತ ಸ್ಫೋಟಗೊಂಡಿದ್ದು, ಮಾಜಿ ಸಚಿವ ರಾಮಲಿಂಗಾರೆಡ್ಡಿ ಅವರಿಗೆ ಸಚಿವ ಸ್ಥಾನ ಸಿಗುವುದರ ವಿಚಾರ ತಿಳಿದು ಜಿ ಪರಮೇಶ್ವರ್ ಅವರು ಅಡ್ಡಗಾಲು ಹಾಕುತ್ತಿದ್ದಾರೆ ಎಂಬ ಅನುಮಾನ ವ್ಯಕ್ತವಾಗಿದೆ. ಯಾಕೆಂದರೆ ಜಯನಗರ ಕ್ಷೇತ್ರದಲ್ಲಿ ರಾಮಲಿಂಗಾರೆಡ್ಡಿ ಅವರ ಪುತ್ರಿ ಸೌಮ್ಯ ರೆಡ್ಡಿಗೆ ಟಿಕೆಟ್ ನೀಡಲಾಗಿತ್ತು. ಇದೀಗ ಸಚಿವ ಸ್ಥಾನಕ್ಕೂ ರೆಡ್ಡಿ ಪ್ರಯತ್ನಿಸುತ್ತಿದ್ದು ಪರಮೇಶ್ವರ್ ಅವರು ಸಚಿವ ಸ್ಥಾನ ಸಿಗದಂತೆ ತಪ್ಪಿಸಲು ಪ್ರಯತ್ನಿಸುತ್ತಿದ್ದಾರೆ.!

ಕಾಂಗ್ರೆಸ್‌‌ನ ಹಿರಿಯ ಶಾಸಕರಿಗಿಲ್ಲ ಸಚಿವ ಸ್ಥಾನ..!?

ಕುಮಾರಸ್ವಾಮಿ ಅವರು ಈಗಾಗಲೇ ಹೇಳಿಕೊಂಡಿರುವ ಪ್ರಕಾರ ಮೈತ್ರಿ ಸರಕಾರದಲ್ಲಿ ನಮ್ಮ ಮೇಲೆ ಯಾವುದೇ ಒತ್ತಡ ಹೇರುವಂತಿಲ್ಲ, ನಮ್ಮ ನಿರ್ಧಾರಕ್ಕೂ ಬೆಲೆ ಕೊಡಲೇಬೇಕು ಎಂದಿದ್ದರು. ಅದೇ ರೀತಿ ಇದೀಗ ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗಿರುವುದರಿಂದ ತಮ್ಮ ಸರಕಾರದ ಸಚಿವ ಸ್ಥಾನಗಳು ಜೆಡಿಎಸ್‌ ಶಾಸಕರಿಗೆ ಸಿಗಬೇಕೆಂಬ ಲೆಕ್ಕಾಚಾರ ಹಾಕಿಕೊಂಡಿದ್ದಾರೆ. ಕಾಂಗ್ರೆಸ್‌ನ ಹಿರಿಯ ಶಾಸಕರಿಗೆ ಈ ಬಾರಿ ಸಚಿವ ಸ್ಥಾನ ಸಿಗುವುದು ಅಸಾಧ್ಯವೆಂಬಂತಿದೆ ಸದ್ಯದ ಪರಿಸ್ಥಿತಿ. ಆದ್ದರಿಂದ ಮೈತ್ರಿ ಸರಕಾರದಲ್ಲಿ ಪದೇ ಪದೇ ಭಿನ್ನಮತ ಉಂಟಾಗುತ್ತಿದ್ದು, ಇದೀಗ ಸ್ವತಃ ಕಾಂಗ್ರೆಸ್‌ನಲ್ಲೇ ಸಚಿವ ಸ್ಥಾನಕ್ಕಾಗಿ ಪೈಪೋಟಿ ಆರಂಭವಾಗಿದೆ..!

–ಅರ್ಜುನ್

Editor Postcard Kannada:
Related Post