X

ಸರ್ಕಾರಿ ಹಣ, ಪಕ್ಷದ ಕಾರ್ಯ : ಇದು ಭ್ರಷ್ಟರ ಕಥೆ

ಸರಕಾರಿ ಹಣದಲ್ಲಿ ಪಕ್ಷದ ಜಾಹೀರಾತು ಪ್ರಕಟಿಸಿ ಮಜಾ ಮಾಡುತ್ತಿದ್ದ ದೆಹಲಿಯ ಆಮ್ ಆದ್ಮಿ ಪಾರ್ಟಿಯ ವಿರುದ್ಧ ಮಾಹಿತಿ ಮತ್ತು ಪ್ರಚಾರ ನಿರ್ದೇಶನಾಲಯ ನೊಟೀಸ್ ಜಾರಿಗೊಳಿಸಿದೆ.

ಸರಕಾರಿ ಜಾಹೀರಾತಿನ ಹೆಸರಿನಲ್ಲಿ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರ ಆಮ್ ಆದ್ಮಿ ಪಕ್ಷವು ಪಕ್ಷಕ್ಕೆ ಸಂಬಂಧಿಸಿದ ಜಾಹೀರಾತುಗಳನ್ನು ಪ್ರಕಟಿಸುವ ಕೆಲಸವನ್ನು ಮಾಡುತ್ತಿತ್ತು. ಭ್ರಷ್ಟಾಚಾರದ ವಿರುದ್ಧ ತೊಡೆ ತಟ್ಟುವುದಾಗಿ ಹೇಳಿಕೊಂಡು ಅಧಿಕಾರಕ್ಕೇರಿದ ಪಕ್ಷ ಸದ್ಯ ಭ್ರಷ್ಟಾಚಾರದ ಮೂಲಕವೇ ಜನರಿಗೆ ಪಂಗನಾಮ ಹಾಕಲು ಹೊರಟಿರುವುದು ಖೇದಕರ.

ಸರಕಾರಿ ಹಣ ದುರುಪಯೋಗ ಪಡಿಸಿ, ಪಕ್ಷದ ಕೆಲಸ ಮಾಡಿದ ಎಎಪಿ‌ಗೆ ಮಾಹಿತಿ ಮತ್ತು ಪ್ರಚಾರ ನಿರ್ದೇಶನಾಲಯವು ಬಳಕೆ ಮಾಡಿದ ಸರಕಾರದ ೧೬೩.೬೩ ಕೋಟಿ ರೂ. ಗಳನ್ನು ಮತ್ತೆ ಸರಕಾರದ ಬೊಕ್ಕಸಕ್ಕೆ ಸೇರಿಸುವಂತೆಯೂ ಸೂಚಿಸಿದೆ. ಇದಕ್ಕಾಗಿ ಆಮ್ ಆದ್ಮಿ ಪಕ್ಷಕ್ಕೆ ೧೦ ದಿನಗಳ ಗಡುವನ್ನು ನೀಡಲಾಗಿದ್ದು, ಅದಕ್ಕೂ ಮುನ್ನವೇ ಹಣ ಪಾವತಿಸದೆ ಇದ್ದಲ್ಲಿ ಪಕ್ಷದ ಕಚೇರಿಗೆ ಬೀಗ ಜಡಿಯುವ ಎಚ್ಚರಿಕೆಯನ್ನು ಸಹ ನೀಡಿದೆ.

ದೆಹಲಿಯ ಲೆಫ್ಟಿನೆಂಟ್ ಗವರ್ನರ್ ಅವರು ಆಪ್ ಪಕ್ಷ ಸರಕಾರಿ ಹಣದಲ್ಲಿ ಪಕ್ಷದ ಜಾಹೀರಾತು ಪ್ರಕಟಿಸುತ್ತಿದ್ದ ಬಗ್ಗೆ ನಿರ್ದೇಶನಾಲಯಕ್ಕೆ ದೂರು ಸಲ್ಲಿಸಿದ್ದರು. ಇದನ್ನು ಸೂಕ್ತ ತನಿಖೆ ನಡೆಸಿ ಅಕ್ರಮ ಬಯಲಿಗೆಳೆಯುವಂತೆಯೂ ಸೂಚಿಸಿದ್ದರು. ಇದಾದ ಒಂದು ತಿಂಗಳ ಬಳಿಕ ನಿರ್ದೇಶನಾಲಯವು ಅಕ್ರಮವಾಗಿ ಬಳಸಿದ ಹಣವನ್ನು ಸರಕಾರಕ್ಕೆ ಮರುಪಾವತಿ ಮಾಡುವಂತೆ ಸೂಚಿಸಿದೆ.

ಇದರಲ್ಲಿ ೯೯.೩೧ ಕೋಟಿ ರೂ. ೨೦೧೭ ರ ಮಾರ್ಚ್ ೩೧ ರ ವರೆಗೆ ಪಕ್ಷದ ಜಾಹೀರಾತಿಗೆ ಬಳಸಿದ ಮೊತ್ತವಾಗಿದ್ದರೆ, ಉಳಿದ ೬೪.೩೧ ಕೋಟಿ ರೂ. ಬಳಸಿದ ಮೊತ್ತದ ದಂಡದ ಬಡ್ಡಿಯಾಗಿದೆ.

ಒಟ್ಟಿನಲ್ಲಿ ಭ್ರಷ್ಟರನ್ನು ಮಟ್ಟ ಹಾಕುವುದಾಗಿ ಹೇಳಿಕೊಂಡು ಅಧಿಕಾರಕ್ಕೆ ಇಳಿದ ಪಕ್ಷ, ಭ್ರಷ್ಟಾಚಾರ ಮಾಡಿ ಸುದ್ದಿಯಾಗಿದ್ದು ದುರಾದೃಷ್ಟ.

Post Card Balaga:
Related Post