X

ತುರ್ತು ಪರಿಸ್ಥಿತಿ ಭಾರತದ ಅಧ್ಯಾಯದಲ್ಲಿ ಕರಾಳ ಅವಧಿ!! ಪಠ್ಯಪುಸ್ತಕದಲ್ಲಿ ಸೇರಲಿದೆ ಇಂದಿರಾ ಗಾಂಧಿಯ ಸರ್ವಾಧಿಕಾರದ ಆಡಳಿತ!!

ಮಾಜಿ ಪ್ರಧಾನಮಂತ್ರಿ ಇಂದಿರಾಗಾಂಧಿ 1975 ಜೂನ್ 25 ರಂದು ದೇಶದ ಮೇಲೆ ಹೇರಿದ್ದ ತುರ್ತು ಪರಿಸ್ಥಿತಿಗೆ ಇಂದಿಗೆ 43 ವರ್ಷಗಳಾಗಿವೆ. ಹತ್ಯೆಗಳು, ಹೋರಾಟ, ಪತ್ರಿಕಾ ಸ್ವಾತಂತ್ರ್ಯ, ರಾಜಕೀಯ ಅಶಾಂತಿ, ಕಾರ್ಯಾಂಗದಿಂದ ನ್ಯಾಯಾಂಗ ನಿಯಂತ್ರಣ, ದೌರ್ಜನ್ಯಗಳನ್ನು ನೆನಪಿಸುವ ಕರಾಳ ದಿನವೂ ಆಗಿದೆ!! ಭಾರತದ ಇತಿಹಾಸದಲ್ಲೇ ಪ್ರಜಾಪ್ರಭುತ್ವವನ್ನು ಕತ್ತಲೆಯಲ್ಲಿಟ್ಟು, ದೇಶದ ಜನರ ಮೇಲೆ ಕರಾಳ ದಿನಗಳನ್ನು ಹೇರಿದ್ದ ದಿನಗಳ ಕುರಿತು ಇದೀಗ ಪಠ್ಯಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಅಳವಡಿಸಲು ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ ಎಂದರೆ ಅದು ನಿಜಕ್ಕೂ ಕೂಡ ಹೆಮ್ಮೆಯ ವಿಚಾರವೇ ಆಗಿದೆ.

ಹೌದು… ಈಗಾಗಲೇ, ಸರ್ವಾಧಿಕಾರದ ಆಡಳಿತ ನಡೆಸಿದ ಇಂದಿರಾ ಗಾಂಧಿ ಕುರಿತು ಶಾಲೆ ಮಕ್ಕಳಲ್ಲೂ ತಿಳಿವಳಿಕೆ ಬರಲಿರುವ ಉದ್ದೇಶದಿಂದ ಕೇಂದ್ರ ಮಾನವ ಸಂಪನ್ಮೂಲ ಸಚಿವ ಪ್ರಕಾಶ ಜಾವಡೇಕರ್ ಶಾಲಾ ಪಠ್ಯಪುಸ್ತಕದಲ್ಲಿ ಅಳವಡಿಸಲು ಚಿಂತನೆ ನಡೆದಿದ್ದಾರೆ!! ಪ್ರಸ್ತುತ ಇರುವ ಪಠ್ಯಪುಸ್ತಕಗಳಲ್ಲಿ ತುರ್ತು ಪರಿಸ್ಥಿತಿ ಹೇರಿಕೆ ಕುರಿತು ಕೆಲವು ಚಾಪ್ಟರ್ ಅಥವಾ ಕಾಲಮ್ ನಷ್ಟೇ ಇದೆ. ಆದರೇ ಇಡೀ ದೇಶವನ್ನೇ ಕರಾಳತೆಯ ಬಾಹು ಬಂಧನದಲ್ಲಿಟ್ಟ ದಿನಗಳ ಕುರಿತು ಪ್ರಸ್ತುತ ಪೀಳಿಗೆಗೆ ಹೆಚ್ಚಿನ ಜ್ಞಾನ ಮೂಡಿಸುವುದು ಅತ್ಯಗತ್ಯ. ಈ ವಿಷಯವನ್ನು ಶೀಘ್ರದಲ್ಲಿಯೇ ಕಾರ್ಯರೂಪಕ್ಕೆ ಇಳಿಸಲಾಗುವುದು ಎಂದು ದೆಹಲಿಯ ಬಿಜೆಪಿ ಕೇಂದ್ರ ಕಚೇರಿಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ತಿಳಿಸಿದ್ದಾರೆ.

ಇನ್ನು, “ಸ್ವಾರ್ಥ ಹಿತಾಸಕ್ತಿಗಾಗಿ ಕಾಂಗ್ರೆಸ್ ದೇಶವನ್ನು ಒಂದು ಜೈಲಾಗಿ ಪರಿವರ್ತಿಸಿತ್ತು. ಪ್ರತಿಪಕ್ಷಗಳ ನಾಯಕರನ್ನು ಜೈಲಿಗೆ ಕಳುಹಿಸಿದ್ದರು. ಅವರಿಗೆ ದೇಶ ಮತ್ತು ಪ್ರಜಾಪ್ರಭುತ್ವದ ಬಗ್ಗೆ ಗೌರವ ಇಲ್ಲ” ಎಂದು ಪ್ರಧಾನಿ ನರೇಂದ್ರ ಮೋದಿ ಕರಾಳ ದಿನ ಕುರಿತಂತೆ ಮುಂಬೈಯ ಬಿರ್ಲಾ ಮಾತುಶ್ರಿ ಆಡಿಟೋರಿಯಂನಲ್ಲಿ ತುರ್ತು ಪರಿಸ್ಥಿತಿಯ 43 ನೇ ವಾರ್ಷಿಕೋತ್ಸವದ ಸ್ಮರಣಾರ್ಥವಾಗಿ ಏರ್ಪಡಿಸಿದ್ದ ‘ಡಾರ್ಕ್ ಡೇಸ್ ಆಫ್ ಎಮರ್ಜೆನ್ಸಿ’ ಎಂಬ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ್ದಾರೆ!!

ಪ್ರಜಾಪ್ರಭುತ್ವಕ್ಕೆ ಧಕ್ಕೆಯಾಗುವಂತೆ 1975ರಲ್ಲಿ ರಾಷ್ಟ್ರದಲ್ಲಿ ತುರ್ತುಪರಿಸ್ಥಿತಿ ಹೇರಿದ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ ಪ್ರಧಾನಿ ನರೇಂದ್ರ ಮೋದಿ, ದೇಶದ ಯುವಜನತೆ ಅಂದು ಏನಾಯಿತು ಎಂಬುದರ ಬಗ್ಗೆ ಅರಿಯಬೇಕಿದೆ ಎಂದು ಹೇಳಿದ್ದಾರೆ!! “ಒಂದು ಕುಟುಂಬದ ಅಧಿಕಾರ ದಾಹಕ್ಕೆ, ಗುಲಾಮಗಿರಿಗೆ ಇಡೀ ದೇಶವನ್ನೇ ಸೆರೆಮನೆ ಮಾಡಲಾಗುತ್ತದೆ ಎಂದು ಯಾರೂ ನಿರೀಕ್ಷಿಸಿರಲಿಲ್ಲ. ಪ್ರತಿ ಮನುಷ್ಯನೂ ಭಯದಲ್ಲೇ ಬದುಕುತ್ತಿದ್ದರಲ್ಲದೇ, ಸಂವಿಧಾನವನ್ನು ದುರ್ಬಳಕೆ ಮಾಡಿಕೊಳ್ಳಲಾಗಿತ್ತು” ಎಂದು ತುರ್ತು ಪರಿಸ್ಥಿತಿಯ ದಿನಗಳನ್ನು ನೆನಪಿಸಿಕೊಂಡರು.

ತುರ್ತುಪರಿಸ್ಥಿತಿಯ ದಿನಗಳನ್ನು ಮರಳಿ ತರಲು ಪ್ರತಿಪಕ್ಷಗಳ ಪ್ರಯತ್ನದ ಬಗ್ಗೆ ಮಾತನಾಡಿದ ಅವರು, ಬಿಜೆಪಿಯ ಉದ್ದೇಶ ಕಾಂಗ್ರೆಸ್ ಪಕ್ಷದ ಮೇಲೆ ದಾಳಿ ಮಾಡುವುದಲ್ಲ. ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಸಂಭವಿಸಿದ ಎಲ್ಲವನ್ನೂ ಈ ದೇಶದ ಯುವಜನತೆಗೆ ತಿಳಿಯುವಂತೆ ಮಾಡಬೇಕು ಎಂಬುದೇ ಈ ಕಾರ್ಯಕ್ರಮದ ಉದ್ದೇಶ ಎಂದು ಮೋದಿ ಹೇಳಿದರು. “ಯಾವಾಗ ಗಾಂಧೀ ಕುಟುಂಬಕ್ಕೆ ಅಧಿಕಾರದಿಂದ ಕೆಳಗಿಳಿಯುವ ಆತಂಕ ಎದುರಾಯಿತೋ, ಆಗ ದೇಶದಲ್ಲಿ ಭಯದ ವಾತಾವರಣ ಇದೆ. ರಾಜಕೀಯ ಪರಿಸ್ಥಿತಿ ಹದಗೆಟ್ಟಿದೆ ಎಂಬ ಕಾರಣ ನೀಡಿ ತುರ್ತು ಪರಿಸ್ಥಿತಿ ಹೇರಲಾಯಿತು. ಆಂತರಿಕ ಪ್ರಜಾಪ್ರಭುತ್ವವನ್ನು ಹೊಂದಿರದ ಕಾಂಗ್ರೆಸ್ ಪಕ್ಷ ಪ್ರಜಾಪ್ರಭುತ್ವದ ಆದರ್ಶಗಳಿಗೆ ಬದ್ಧವಾಗಿರುತ್ತದೆ ಎಂಬ ನಿರೀಕ್ಷೆಯಿಲ್ಲ” ಎಂದು ಅವರು ಹೇಳಿದ್ದಾರೆ!!

ತುರ್ತು ಪರಿಸ್ಥಿತಿಯನ್ನು ನೆನೆದು ಪ್ರಧಾನಿ ಮೋದಿಯವರು ಟ್ವೀಟ್ ಮಾಡಿದ್ದು, “43 ವರ್ಷಗಳ ಹಿಂದೆ ಘೋಷಣೆ ಮಾಡಲಾಗಿದ್ದ ತುರ್ತು ಪರಿಸ್ಥಿತಿಯನ್ನು ಧೈರ್ಯದಿಂದ ವಿರೋಧಿಸಿದ ಎಲ್ಲಾ ಮಹಿಳೆ ಹಾಗೂ ಮಹನೀಯರಿಗೆ ನನ್ನ ನಮನಗಳು. ತುರ್ತು ಪರಿಸ್ಥಿತಿಯ ಹೋರಾಟ ಸರ್ವಾಧಿಕಾರ ಮತ್ತು ನಾಗರೀಕ ಸ್ವಾತಂತ್ರ್ಯವನ್ನು ಹತ್ತಿಕ್ಕುವವರ ವಿರುದ್ಧ ಜನಶಕ್ತಿಗೆ ಸಿಕ್ಕ ಗೆಲುವಾಗಿದೆ” ಎಂದು ಹೇಳಿದ್ದಾರೆ.

ಮತ್ತೊಂದು ಟ್ವೀಟ್ ನಲ್ಲಿ, ತುರ್ತು ಪರಿಸ್ಥಿತಿ ಭಾರತದ ಅಧ್ಯಾಯದಲ್ಲಿ ಕರಾಳ ಅವಧಿಯಾಗಿದೆ. ತುರ್ತು ಪರಿಸ್ಥಿತಿಯನ್ನು ಭಾರತೀಯರು ಕರಾಳ ಅವಧಿ ಎಂದೇ ನೆನೆಯುತ್ತಿದ್ದಾರೆ. ಆ ಸಂದರ್ಭದಲ್ಲಿ ಪ್ರಜಾಪ್ರಭುತ್ವದ ಎಲ್ಲಾ ಸಂಸ್ಥೆಗಳನ್ನೂ ಕೆಳಗಿಳಿಸಲಾಗಿತ್ತು. ಜನರಲ್ಲಿ ಭಯವನ್ನು ಹುಟ್ಟುಹಾಕಲಾಗಿತ್ತು. ಜನರು ಅಷ್ಟೇ ಅಲ್ಲದೆ, ಅವರ ವೈಚಾರಿಕತೆ, ಸ್ವಾತಂತ್ರ್ಯವೆಲ್ಲವನ್ನೂ ಬಂಧಿಸಲಾಗಿತ್ತು. ರಾಜಕೀಯ ಶಕ್ತಿಯ ಮೂಲಕ ಎಲ್ಲವನ್ನೂ ಹತ್ತಿಕ್ಕಲಾಗಿತ್ತು ಎಂದು ತಿಳಿಸಿದ್ದಾರೆ.

ತುರ್ತುಪರಿಸ್ಥಿತಿ ಭಾರತದ ಪ್ರಜಾಪ್ರಭುತ್ವನ್ನು ಕತ್ತಲಲ್ಲಿಟ್ಟು ಆಡಳಿತ ನಡೆಸಲಾಗಿದೆ. ತುರ್ತುಪರಿಸ್ಥಿತಿಯೆಂದರೇ ಲಕ್ಷಾಂತರ ಹೋರಾಟಗಾರರ “ಶೌರ್ಯದ ಕಥೆ ಮತ್ತು ಹೋರಾಟಗಾರರ ಉತ್ಸವ” ಎಂದು ಬಣ್ಣಿಸಿರುವ ಮೋದಿಜೀ ಕರಾಳ ದಿನಗಳಿಂದ ಭಾರತ ಹೊರ ಬಂದಿರುವುದೇ ದೊಡ್ಡ ಇತಿಹಾಸ ಎಂದಿದ್ದಾರೆ!! ಒಟ್ಟಿನಲ್ಲಿ, ಈ ಇತಿಹಾಸವನ್ನು ಜನರಿಗೆ ಮನದಟ್ಟು ಮಾಡಲು ಪಠ್ಯಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ತುರ್ತು ಪರಿಸ್ಥಿತಿ ಕುರಿತ ಪಾಠಗಳನ್ನು ಅಳವಡಿಸುವ ಅವಶ್ಯಕತೆ ಇರುವುದಂತೂ ಅಕ್ಷರಶಃ ನಿಜ.

ಮೂಲ:
http://www.kannadaprabha.com/nation/pm-narendra-modi-targets-congress-gandhis-selfish-interests-for-emergency/318937.html

– ಅಲೋಖಾ

Editor Postcard Kannada:
Related Post