X

ಶತ್ರು ರಾಷ್ಟ್ರವನ್ನು ಬಗ್ಗು ಬಡಿಯಲು ಇಸ್ರೇಲ್‍ನಿಂದ 4,500 ಸ್ಪೈಕ್ ಮಿಸೆಲ್ ಖರೀದಿಗೆ ಮುಂದಾದ ಮೋದಿ ಸರಕಾರ!! ಪಾಕಿಸ್ತಾನಕ್ಕೆ ಶುರುವಾಗಿದೆ ನಡುಕ…

ನರೇಂದ್ರ ಮೋದಿಜೀ ಅಧಿಕಾರಕ್ಕೆ ಬರುತ್ತಲೇ ಜಗತ್ತಿಗೆ ಮಾರಕವಾಗಿರುವ ಭಯೋತ್ಪಾದನೆಯ ವಿರುದ್ಧ ಗುಡುಗಿದರು. ಭಯೋತ್ಪಾದನೆಯ ನಿರ್ಮೂಲನೆಗೆ ಜಗತ್ತಿನ ಎಲ್ಲಾ ರಾಷ್ಟ್ರಗಳು ಕೈಜೋಡಿಸಬೇಕು ಎಂದು ಸಾರಿದರು! ಉಗ್ರರಿಗೆ ಆಶ್ರಯ ತಾಣವಾಗಿರುವ ಪಾಕಿಸ್ತಾನ ತನ್ನ ಶತ್ರು ರಾಷ್ಟ್ರಗಳ ವಿರುದ್ಧ ಉಗ್ರರನ್ನು ಕಳುಹಿಸಿ ಭಯೋತ್ಪಾದಕ ಕೃತ್ಯಗಳನ್ನು ನಡೆಸುತ್ತಲೇ ಬರುತ್ತಿದೆ!!. ದಿನ ಕಳೆದಂತೆ ಪಾಕಿಸ್ತಾನದಲ್ಲಿ ಉಗ್ರ ಸಂಘಟನೆಗಳು ಹೆಚ್ಚುತ್ತಿದ್ದು ಇದು ಜಗತ್ತಿಗೆ ಮಾರಕವಾಗಿದೆ!! ಈಗಾಗಲೇ ಉಗ್ರರಿಗೆ ಪೋಷಣೆ ನೀಡುವ ಹಿನ್ನಲೆಯಲ್ಲಿ ಪಾಕಿಸ್ತಾನಕ್ಕೆ ಯಾವುದೇ ಸಹಾಯ ಮಾಡಬಾರದು ಎಂದು ನಿರ್ಧರಿಸಿದರೂ ಸಹ ಇನ್ನೂ ಆ ಪಾಪಿ ಪಾಕಿಸ್ತಾನಕ್ಕೆ ಬುದ್ದಿ ಬಂದಂತೆ ಕಾಣುತ್ತಿಲ್ಲ!! ಇದೀಗ ಶತ್ರು ರಾಷ್ಟ್ರವಾದ ಪಾಕಿಸ್ತಾನಕ್ಕೆ ಸರಿಯಾಗಿಯೇ ಬುದ್ಧಿ ಕಲಿಸಬೇಕೆಂಬ ಉದ್ಧೇಶದಿಂದ ಮತ್ತೊಂದು ಮಾಸ್ಟರ್ ಪ್ಲಾನ್ ಅನ್ನೇ ಮಾಡಿದೆ!!

ಈಗಾಗಲೇ ಪ್ರಧಾನಿ ನರೇಂದ್ರ ಮೋದಿಯವರು ವಿದೇಶಿ ಪ್ರವಾಸ ಮಾಡುತ್ತಾರೆ ಎಂದು ಜರಿಯುತ್ತಿರುವ ಕೆಲವು ವಿರೋಧಿಗಳು ಇಲ್ಲಿ ಗಮನಿಸಬೇಕಾದ ಅಂಶವೆಂದರೆ ಮೋದೀ ಏನಾದರೂ ವಿದೇಶಿ ಪ್ರವಾಸ ಹೋಗಿಲ್ಲವೆಂದರೆ ಅಲ್ಲಿ ಏನಾದರೂ ಇಸ್ರೇಲ್‍ನಂತಹ ರಾಷ್ಟ್ರದೊಂದಿಗೆ ಸಂಬಂಧ ಬೆಳೆಸಿಕೊಳ್ಳದಿದ್ದರೆ ಭಾರತದಲ್ಲಿ ನಾವು ಇಂದು ಸುಖವಾಗಿ ಜೀವನ ನಡೆಸಲು ಸಾಧ್ಯವಿರುತ್ತಿರಲಿಲ್ಲ!! ಭಾರತಕ್ಕೆ ಏನೇ ತೊಂದರೆ ಆದರೂ ಮೊದಲು ಸಹಾಯಕ್ಕೆ ಧಾವಿಸುವುದೇ ಇದೇ ಇಸ್ರೇಲ್ ದೇಶ!! ಹಿಂದೆ ವಿದೇಶಿಯರು ದಾಳಿ ಮಾಡಿ, ಇಸ್ರೇಲಿಗರನ್ನು ಅಲ್ಲಿಂದ ಓಡಿಸಿದಾಗ, ಜಗತ್ತಿನ ಯಾವ ರಾಷ್ಟ್ರಗಳೂ ಇಸ್ರೇಲಿಗರಿಗೆ ಜಾಗ ಕೊಟ್ಟಿರಲಿಲ್ಲ. ಆಗ ಭಾರತವೇ ಇಸ್ರೇಲಿಗರ ನೆರವಿಗೆ ಬಂದು ಭಾರತದಲ್ಲಿರುವಂತೆ ಮಾಡಿತ್ತು. ಹೀಗಾಗಿಯೇ ಇಸ್ರೇಲಿಗರು ಭಾರತವನ್ನು ತಮ್ಮ ಮಾತೃಭೂಮಿ ಮತ್ತು ಇಸ್ರೇಲನ್ನು ಧರ್ಮಭೂಮಿ ಎಂದು ಕರೆಯುತ್ತಾರೆ. ಇದೀಗ ಇಸ್ರೇಲ್‍ನೊಂದಿಗೆ ಒಪ್ಪಂದವನ್ನು ಮಾಡಿಕೊಂಡು ಪಾಕಿಸ್ಥಾನದ ಸೊಕ್ಕು ಮುರಿಯಲು ಭಾರತ ಮುಂದಾಗಿದ್ದು ಇದಕ್ಕೆ ಈಗಾಗಲೇ ಇಸ್ರೇಲ್ ಸಾಥ್ ನೀಡಿದ್ದು ಇದೀಗ ಮತ್ತೆ ಇಸ್ರೇಲ್‍ನೊಂದಿಗೆ ಒಪ್ಪಂದವನ್ನು ಮಾಡಲು ಮೋದಿ ಸರಕಾರ ಮುಂದಾಗಿದೆ!!

4,500 ಸ್ಪೈಕ್ ಮಿಸೈಲ್ ಖರೀದಿಗೆ ಮುಂದಾದ ಮೋದಿ ಸರಕಾರ!!

ಇಸ್ರೇಲ್‍ನೊಂದಿಗೆ ಅತ್ಯುತ್ತಮ ಬಾಂಧವ್ಯ ಹೊಂದಿರುವ ಭಾರತ ಆ ದೇಶದಿಂದ ಸುಮಾರು 4,500 ಸ್ಪೈಕ್ ಯ್ಯಾಂಟಿ ಗೈನಡ್ ಮಿಸೈಲ್ ಅನ್ನು ಖರೀದಿ ಮಾಡಲು ಮುಂದಾಗಿದೆ!! ಈ ಬಗೆಗಿನ ಒಪ್ಪಂದವನ್ನು ಅಂತಿಮಗೊಳಿಸಿವೆ!! ಸುಮಾರು 500 ಮಿಲಿಯನ್ ಡಾಲರ್ ಒಪ್ಪಂದ ಇದಾಗಿದ್ದು ಇಸ್ರೇಲ್ ರಕ್ಷಣಾ ಕಾರ್ಯದರ್ಶಿ ಯುಡಿ ಆಡಂ ಭಾರತಕ್ಕೆ ಆಗಮಿಸುವ ವೇಳೆ ಈ ಒಪ್ಪಂದಕ್ಕೆ ಸಹಿ ಬೀಳುವ ನಿರೀಕ್ಷೆ ಇದೆ!! ಆಡಂ ಅವರು ಜುಲೈ 2ಕ್ಕೆ ನವದೆಹಲಿಗೆ ಆಗಮಿಸಲಿದ್ದು ಭಾರತದ ರಕ್ಷಣಾ ಕಾರ್ಯದರ್ಶಿ ಸಂಜಯ್ ಮಿತ್ರಾ ಅವರೊಂದಿಗೆ ಸಭೆ ನಡೆಸಲಿದ್ದಾರೆ!! ರಕ್ಷಣಾ ಸಚಿವೆ ಸುಷ್ಮಾ ಸ್ವರಾಜ್ ಅವರನ್ನೂ ಭೇಟಿಯಾಗಲಿದ್ದಾರೆ!! ಸ್ಪೈಕ್ ಮಿಸೈಲ್‍ಗಳು 800 ಮೀಟರ್‍ನಿಂದ 8 ಕಿಲೋ ಮೀಟರ್‍ವರೆಗೆ ರೇಂಜ್ ಹೊಂದಿದ್ದು ಇದರ ಖರೀದಿಗೆ ಭಾರತೀಯ ಸೇನೆ ಭಾರೀ ಉತ್ಸಾಹ ತೋರಿಸಿದೆ!!

ಅದಲ್ಲದೆ ಈಗಾಗಲೇ ಶತ್ರುರಾಷ್ಟ್ರದ ಯುದ್ಧ ಟ್ಯಾಂಕರ್ಗಳನ್ನು ಕ್ಷಣ ಮಾತ್ರದಲ್ಲಿ ಹೊಡೆದುರುಳಿಸುವ ಟ್ಯಾಂಕ್ ನಿರೋಧಕ ಸ್ಕೈಪ್ ಕ್ಷಿಪಣಿಗಳನ್ನು ಕೂಡಾ ಆಮದು ಮಾಡಿಕೊಳ್ಳಲು ಮುಂದಾಗಿದ್ದು, ಈ ಟ್ಯಾಂಕ್ ನಿರೋಧಕ ಸ್ಪೈಕ್ ಕ್ಷಿಪಣಿಗಳು ಆಧುನಿಕ ತಂತ್ರಜ್ಞಾನವನ್ನು ಹೊಂದಿದ್ದು, ಶತ್ರುರಾಷ್ಟ್ರಗಳ ಯುದ್ಧದ ಟ್ಯಾಂಕರ್ ಗಳನ್ನು ಕ್ಷಣಮಾತ್ರದಲ್ಲೇ ಹೊಡೆದುರುಳಿಸುವ ಶಕ್ತಿ ಹೊಂದಿವೆ. ಭಾರತಕ್ಕೆ ಪ್ರಸ್ತುತ ಇಂತಹ 8 ಸಾವಿರ ಕ್ಷಿಪಣಿಗಳ ಅವಶ್ಯವಿದ್ದು, ಮುಂದಿನ ಮೂರು ವರ್ಷದಲ್ಲಿ ಇಸ್ರೇಲ್ ಭಾರತಕ್ಕೆ ಬಹುತೇಕ ಕ್ಷಿಪಣಿ ಪೂರೈಸಲಿದೆ!!

ಈ ಸ್ಪೈಕ್ ಕ್ಷಿಪಣಿ ಹಾಗೂ ಯ್ಯಾಂಟಿ ಗೈನಡ್ ಮಿಸೈಲ್ ಖರೀದಿಯಿಂದ ಪಾಕಿಸ್ತಾನ ಬೆಚ್ಚಿಬಿದ್ದಿರುವುದಂತೂ ಖಂಡಿತ!! ಇಸ್ರೇಲ್ ಕ್ಷಿಪಣಿ ಖರೀದಿಯಿಂದ ಭಾರತವು ಪಾಕಿಸ್ತಾನಕ್ಕೆ ಸೆಡ್ಡು ಹೊಡೆಯಲಿದೆ. ಭಾರತ ಕ್ಷಿಪಣಿ ಖರೀದಿ ಮಾಡಲು ಮುಂದಾಗುವಾಗಲೇ ಈ ರೀತಿಯಾಗಿ ಹೆದರಿದರೆ ಮುಂದೆ ಕ್ಷಿಪಣಿ ತಯಾರಾಗಿ ಬಂದರೆ ಪಾಕಿಸ್ತಾನ ಭಾರತದ ಗಡಿಯತ್ತ ಮುಖಮಾಡಿ ನಿಲ್ಲಲೂ ಸಾಧ್ಯವಾಗುತ್ತಿಲ್ಲ!! ಇದಾಗಲೇ ಪಾಕಿಸ್ತಾನಕ್ಕೆ ಭಾರತದ ಒಂದೊಂದು ನಡೆಯೂ ಭಯವನ್ನು ಹುಟ್ಟಿಸಿದ್ದು ಮುಂದೆ ಇದೇ ರೀತಿ ಪ್ರಧಾನಿ ನರೇಂದ್ರ ಮೋದಿ ಸರಕಾರ ಸೇನೆಗೆ ಇಂತಹ ಸವಲತ್ತನ್ನು ನೀಡಿದ್ದಲ್ಲಿ ಭಾರತ ಎಂದು ಹೆಸರು ಹೇಳಲು ನಡುಗುವಂತಾಗಬೇಕು!! ಇಸ್ರೇಲ್‍ನ ಜೊತೆ ಈಗಾಗಲೇ ಒಪ್ಪಂದವಾದ ಪ್ರಕಾರ ಆದಷ್ಟು ಬೇಗ ಇಸ್ರೇಲ್ ಕ್ಷಿಪಣಿಯನ್ನು ತಯಾರಿಸಿ ಭಾರತೀಯ ಸೇನೆಗೆ ಕೊಡಲಿದ್ದು ಮುಂದೆ ಪಾಪಿ ಪಾಕಿಸ್ತಾನಕ್ಕೆ ನಡುಕವುಂಟುಮಾಡಲಿದೆ ಎನ್ನುವುದು ಅಕ್ಷರಸಃ ನಿಜ!!

source: www.hindustantimes.com

  • ಪವಿತ್ರ
Editor Postcard Kannada:
Related Post