X

ಸೈನಿಕರ ಬಗ್ಗೆ ಮತ್ತೊಮ್ಮೆ ಕಾಳಜಿ ವ್ಯಕ್ತಪಡಿಸಿದ ಪ್ರಧಾನ ಸೇವಕ!! ಕಾರ್ಯಕ್ರಮದ ವೇಳೆ ಕುಸಿದು ಬಿದ್ದ ವಾಯುಪಡೆ ಸಿಬ್ಬಂದಿ ಬಳಿ ತೆರಳಿ ಯೋಗಕ್ಷೇಮ ವಿಚಾರಿಸಿದ ಪ್ರಧಾನಿ ಮೋದಿ!!

ಪ್ರಧಾನಿ ನರೆಂದ್ರ ಮೋದಿ ಅಧಿಕಾರ ಸ್ವೀಕರಿಸಿದ ಬಳಿಕ ನಮ್ಮ ಸೈನಿಕರ ಬಗ್ಗೆ ಹೆಚ್ಚಿನ ಕಾಳಜಿಯನ್ನು ವಹಿಸುತ್ತನೇ ಬರುತ್ತಿದ್ದಾರೆ!! ಯಾಕೆಂದರೆ ರೈತರು ದೇಶದ ಬೆನ್ನೆಲುಬು ಹೇಗೋ ಹಾಗೇ ಸೈನಿಕರು ಕೂಡಾ ದೇಶಕ್ಕೆ ಅಷ್ಟೇ ಮುಖ್ಯ!! ನಾವು ಇಂದು ಸುಖವಾಗಿ ಜೀವನ ನಡೆಸುತ್ತಿದ್ದೇವೆ ಎಂದರೆ ಅದಕ್ಕೆ ದೇಶದ ಗಡಿ ಕಾಯುವ ನಮ್ಮ ಸೈನಿಕರೇ ಕಾರಣ!! ಕೆಲ ವಿರೋಧಿ ಪಕ್ಷಗಳು ಮಾತ್ರ ಮೋದೀಜೀ ದೇಶ ರಕ್ಷಣೆ ಮಾಡುವ ಯೋಧರಿಗೆ ಬೇಕಾದ ಯಾವುದೇ ವಸ್ತುಗಳನ್ನು ನೀಡುತ್ತಿಲ್ಲ!! ಅವರಿಗೆ ಬೇಕಾದ ಸಮವಸ್ತ್ರ, ಶೂಗಳನ್ನು ಅವರೇ ಖರೀದಿಸಬೇಕು!! ಮೋದೀಜೀಯವರ ಮೇಕ್ ಇನ್ ಇಂಡಿಯಾ ಎಂಬ ಯೋಜನೆಯೇ ಸುಳ್ಳು ಎಂಬ ವದಂತಿಯನ್ನು ಹಬ್ಬಿಸಿದ್ದರು!! ಕಾಂಗ್ರೆಸ್ಸಿಗರು ಯಾಕೆ ಮೋದೀಜೀಯನ್ನು ಸುಖಾಸುಮ್ಮನೆ ತೆಗಳುತ್ತಾರೆ ಎಂದರೆ ತಾವು ಮಾಡಲಾಗದ್ದನ್ನು ಮೋದೀಜೀ ಪ್ರತೀಯೊಂದು ಕ್ಷೇತ್ರದಲ್ಲಿ ಮಾಡಿ ತೋರಿಸುತ್ತಿದ್ದಾರೆ.. ಅವರಿಗೆ ಅಭೂತಪೂರ್ವ ಯಶಸ್ಸು ಕೂಡಾ ದೊರಕಿದೆ ಅಂತಾನೇ ಹೇಳಬಹುದು!! ಅದನ್ನು ತಡೆಯಲಾರದೆ ಮೋದೀಜೀ ಬಗ್ಗೆ ಏನೇನೋ ಹೇಳುತ್ತಾರೆ!! ಆದರೆ ಮೋದೀಜೀ ಮಾತ್ರ ಯಾವುದಕ್ಕೂ ಕ್ಯಾರೇ ಅನ್ನಲ್ಲ!! ಜನರು ಕಷ್ಟದಲ್ಲಿದ್ದಾರೆ ಎಂದರೆ ಅವರ ಸೇವೆಗೆ ಸದಾ ಸಿದ್ಧರಿರುತ್ತಾರೆ ನಮ್ಮ ಮೋದೀಜಿ!!
ನರೇಂದ್ರ ಮೋದಿ ಅವರು ಪ್ರಧಾನಿಯಾದ ಬಳಿಕ ದೇಶದ ಯೋಧರಿಗೆ ಹೆಚ್ಚಿನ ಸ್ವಾತಂತ್ರ್ಯ, ಭದ್ರತೆ ಸೇರಿ ಹಲವು ಸೌಲಭ್ಯಗಳನ್ನು ದೊರಕಿಸಿ ಕೊಟ್ಟಿದ್ದಾರೆ!! ಅದರಲ್ಲೂ ನರೇಂದ್ರ ಮೋದಿ ಅವರಂತೂ ಯೋಧರೆಂದರೆ ಸಾಕು ವಿಶೇಷ ಕಾಳಜಿಯನ್ನು ತೊರಿಸುತ್ತಾರೆ!! ಅದೇ ಕಾರಣಕ್ಕಾಗಿ ಮೋದಿಜೀ ಅವರು ಪ್ರತಿ ದೀಪಾವಳಿಯನ್ನು ಗಡಿಗೆ ತೆರಳಿ ಯೋಧರೊಂದಿಗೆ ಆಚರಿಸುತ್ತಾರೆ!! ಅದೇ ಬೇರೆಯವರಾದರೆ ತಮ್ಮ ತಮ್ಮ ಮನೆಯಲ್ಲಿ ದೀಪಾಳಿಯನ್ನು ಸಂಭ್ರಮದಿಂದನೇ ಆಚರಿಸುತ್ತಿದ್ದರು.. ಆದರೆ ಮೋದೀಜೀ ಮಾತ್ರ ಆ ರೀತಿ ಮಾಡಲ್ಲ… ನಮ್ಮ ದೇಶದ ಗಡಿ ಕಾಯುವ ಯೋಧರ ಜೊತೆ ಸೇರಿ ಅವರಿಗೂ ಸಿಹಿ ಹಂಚಿ ತಾನೂ ಸಂಭ್ರಮಿಸಿ ಬರುತ್ತಾರೆ!! ಇದಕ್ಕೇ ಅಲ್ಲವೇ ಮೋದೀಜೀ ಎಂದರೆ ಎಲ್ಲರಿಗೂ ಇಷ್ಟವಾಗುವುದು!!ಇಂತಹ ನರೇಂದ್ರ ಮೋದಿ ಅವರು ಈಗ ತಾವು ಯೋಧರ ಬಗ್ಗೆ ಎಂಥಹ ಕಾಳಜಿ ಎಂಬುದನ್ನು ಸ್ವಾಭಾವಿಕವಾಗಿ ವ್ಯಕ್ತಪಡಿಸಿದ ರೀತಿ ಎಲ್ಲರ ಮನಸ್ಸನ್ನೂ ಸೆಳೆಯುವಂತಿದೆ. ಆ ಮೂಲಕ ಮೋದಿ ಅವರು ಸೈನಿಕರ ಬಗ್ಗೆ ಎಂತಹ ಕಾಳಜಿ ಹೊಂದಿದ್ದಾರೆ ಎಂಬುದು ಸಾಬೀತಾಗಿದೆ.
ನಿನ್ನೆ ಹೊಸದಿಲ್ಲಿಗೆ ಸೆಷಲ್ಸ್ ಅಧ್ಯಕ್ಷ ಡ್ಯಾನಿ ಫೌರ್ ಆಗಮಿಸಿದ್ದು, ರಾಷ್ಟ್ರಪತಿ ಭವನದಲ್ಲಿ ಅವರಿಗೊಂದು ಗೌರವ ಸಲ್ಲಿಸುವ ಕಾರ್ಯಕ್ರಮ ಆಯೋಜಿಸಲಾಗಿತ್ತು. ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರು ಸಹ ಉಪಸ್ಥಿತಿಯಿದ್ದರು. ಹೀಗೆ ದ್ವೀಪರಾಷ್ಟ್ರ ಅಧ್ಯಕ್ಷರಿಗೆ ಗೌರವ ಸಲ್ಲಿಸುವ ವೇಳೆ ವಾಯುಪಡೆಯ ಸಿಬ್ಬಂದಿಯೊಬ್ಬರು ಬಿಸಿಲಿನ ತಾಪ ತಾಳಲಾರದೆ ಕುಸಿದು ಬಿದ್ದಿದ್ದಾರೆ. ಬಳಿಕ ವಾಯುಪಡೆಯ ಸಿಬ್ಬಂದಿಯೇ ಅವರನ್ನು ಮೇಲೆ ಎಬ್ಬಿಸಿ, ವಿರಾಮ ನೀಡಿದ್ದಾರೆ. ಹೀಗೆ ಸಮಾರಂಭ ಮುಗಿದ ಬಳಿಕ ಹಲವು ಗಣ್ಯರು ಕಾರ್ಯಕ್ರಮ ನಡೆದ ಸ್ಥಳದಿಂದ ನಿರ್ಗಮಿಸಿದ್ದಾರೆ. ಆದರೆ ನರೇಂದ್ರ ಮೋದಿ ಅವರು ಮಾತ್ರ ವಾಯುಪಡೆ ಸಿಬ್ಬಂದಿ ಬಳಿ ತೆರಳಿ ಅವರ ಯೋಗಕ್ಷೇಮ ವಿಚಾರಿಸಿದ್ದಾರೆ. ಅಲ್ಲದೆ ಆರೋಗ್ಯದ ಕಡೆ ಹೆಚ್ಚಿನ ಗಮನ ಕೊಡಬೇಕು ಎಂದು ಸಲಹೆ ಸಹ ನೀಡಿದ್ದಾರೆ. ಒಂದು ದೇಶದ ಪ್ರಧಾನಿಯಾದವರು, ಸೇನಾ ಸಿಬ್ಬಂದಿಯೊಬ್ಬರು ಕುಸಿದು ಬಿದ್ದಿದ್ದನ್ನು ಮರೆತು ಗಣ್ಯರೊಂದಿಗೆ ತೆರಳಬಹುದಿತ್ತು. ಆದರೆ ಮೋದಿ ಅವರು ಹಾಗಲ್ಲ, ಅವರಿಗೆ ಯೋಧರ ಮೇಲೆ ಇನ್ನಿಲ್ಲದ ಪ್ರೀತಿ, ಕಾಳಜಿ. ಅದು ಆಗಾಗ ಹೀಗೆ ಸ್ವಾಭಾವಿಕವಾಗಿ ವ್ಯಕ್ತವಾಗುತ್ತದೆ.
ಪ್ರಧಾನಿ ನರೇಂದ್ರ ಮೋದಿಯವರು ಯಾವಾಗ ಅಧಿಕಾರದ ಚುಕ್ಕಾಣಿಯನ್ನು ಹಿಡಿದರೋ ಅಂದಿನಿಂದ ಯಾವಾಗಲೂ ದೇಶದ ಗಡಿ ಕಾಯುವ ಯೋಧರ ಬಗ್ಗೆ ನೆನಪಿಸುತ್ತಾ ಅವರ ಅಭಿವೃದ್ಧಿ ಕಾರ್ಯಗಳ ಬಗ್ಗೆಯೇ ಯಾವಾಗಲೂ ಶ್ರಮಿಸುತ್ತಿರುತ್ತಾರೆ!! ಒಂದಲ್ಲ ಒಂದು ವಿಷಯಗಳಲ್ಲಿ ಸೈನಿಕರ ಬಗ್ಗೆ ಕಾಳಜಿ ವಹಿಸಿ ಅವರಿಗೆ ಅವಶ್ಯ ವಸ್ತುಗಳನ್ನು ಪೂರೈಸುವಲ್ಲಿ ಕೂಡಾ ಶ್ರಮಿಸುತ್ತಿರುತ್ತಾರೆ!! ಪದೇ ಪದೇ ಭಾರತೀಯ ಸೇನೆ ತನ್ನ ನೆರೆ ರಾಷ್ಟ್ರದ ಉಪಟಳದಿಂದ ಅದೆಷ್ಟೋ ಬಾರಿ ಶತ್ರುರಾಷ್ಟ್ರವನ್ನು ಹೀನಾಯವಾಗಿ ಸೋಲಿಸಿದರೂ ಕೂಡ ತಮ್ಮ ನರಿ ಬುದ್ದಿಯನ್ನು ಬಿಡುವಲ್ಲಿ ಮಾತ್ರ ಶತ್ರು ರಾಷ್ಟ್ರ ತಯಾರಾಗಿಲ್ಲ ಎನ್ನುವುದು ವಿಪರ್ಯಾಸ!! ಆದರೆ ಈಗಾಗಲೇ ವಿಶ್ವದಲ್ಲೇ ಎರಡನೇ ಅತಿದೊಡ್ಡ ಸೇನಾಪಡೆಯನ್ನು ಹೊಂದಿರುವ ಭಾರತ ಇನ್ನಷ್ಟು ಬಲಿಷ್ಠ ರಾಷ್ಟ್ರವಾಗಲು ಸಿದ್ಧತೆಗಳನ್ನು ನಡೆಸುತ್ತಿದೆ!! ಇದಕ್ಕೆಲ್ಲ ಮೋದೀಜೀಯ ಆಡಳಿತ ವೈಖರಿಯೇ ಕಾರಣ!!
ಪ್ರಧಾನಿ ನರೇಂದ್ರ ಮೋದಿ ಸರಕಾರ ತನ್ನ ಅಧಿಕಾರದ ಗದ್ದುಗೆಯನ್ನು ಹಿಡಿದ ನಂತರದಿಂದ ಭಾರತೀಯ ಸೇನೆ ನಾನಾ ರೀತಿಯಲ್ಲಿ ಮುಂದುವರೆದಿದೆ!! ಈಗಾಗಲೇ ಮೋದಿ ಸರಕಾರ ಭಾರತೀಯ ಸೈನಿಕರಿಗೆ ಬುಲೆಟ್ ಫ್ರೂಫ್ ಜಾಕೆಟ್, ಬುಲೆಟ್ ಫ್ರೂಫ್ ಹೆಲ್ಮೆಟ್, ಸಿಆರ್ಫಿಎಫ್ ಸೈನ್ಯಕ್ಕೆ 100 ನೂತನ ಬುಲೆಟ್ ಫ್ರೂಫ್ ವಾಹನಗಳನ್ನು ನೀಡುವ ಮೂಲಕ ಸೈನಿಕರಿಗೆ ಮಾನಸಿಕ ಸ್ಥೈರ್ಯವನ್ನು ನೀಡಿದೆ!! ಹೀಗೆ ಹಲವಾರು ಸೌಲಭ್ಯಗಳನ್ನು ಮೋದೀಜೀ ಸರಕಾರ ನೀಡುತ್ತಲೇ ಬಂದಿದೆ!! ಶತ್ರುಗಳನ್ನು ಎದುರಿಸಲು ಭಾರತೀಯ ಸೇನೆ ಸಮರ್ಥವಾಗಿದ್ದಲ್ಲದೇ, ಶತ್ರುರಾಷ್ಟ್ರವನ್ನು ಯುದ್ದಕ್ಕಾಗಿ ಆಹ್ವಾನ ನೀಡುವಷ್ಟರ ಮಟ್ಟಿಗೆ ಇದೀಗ ಭಾರತೀಯ ಸೇನೆ ಬೆಳೆದಿದೆ ಎಂದರೆ ಅದಕ್ಕೆ ಕಾರಣ ಪ್ರಧಾನಿ ನರೇಂದ್ರ ಮೋದಿ ಸರಕಾರ ಎಂದು ಹೇಳಲು ನಮಗೆ ಹೆಮ್ಮೆಯಾಗುತ್ತಿದೆ!!
ಪವಿತ್ರ
Editor Postcard Kannada:
Related Post