X

11,400 ಕೋಟಿ ರೂ ದೋಚಿದ ನೀರವ್ ಮೋದಿಯಾದರೂ, ರಾಹುಲ್ ಗಾಂಧಿಗೆ ಕಮಿಷನ್ ದೊರೆತದ್ದು 11,600 ಕೋಟಿ ರೂಗಳಾ?! ರಾಹುಲ್ ಗಾಂಧಿಯೇ ಬಹಿರಂಗಪಡಿಸಿದ ಸ್ಫೋಟಕ ಮಾಹಿತಿ!!

ಎರಡು ವಾರಗಳಿಂದಲೂ ಕೂಡ, ಪಂಜಾಬ್ ನ್ಯಾಷನಲ್ ಬ್ಯಾಂಕಿನ ಹಗರಣವೊಂದನ್ನು ಎಡೆಯಿಲ್ಲದೇ ತೋರಿಸುತ್ತಿದೆ ಮಾಧ್ಯಮಗಳು! 2011 ರಲ್ಲಿ, ಯುಪಿಎ ಸರಕಾರದ ಆಡಳಿತಾವಧಿಯಲ್ಲಿ., ಕಾಂಗ್ರೆಸ್ ಮುಖಂಡರ ಸಹಾಯದಿಂದ ಮೆಹುಲ್ ಚೋಕ್ಸಿ ಮತ್ತು ನೀರವ್ ಮೋದಿ ಕೊಳ್ಳೆ ಹೊಡೆದದ್ದು ಕೇವಲ 11,400 ಕೋಟಿ ಮಾತ್ರವೇ ಅಲ್ಲ! ಬದಲಿಗೆ, ಅದರಕ್ಕಿಂತ ದುಪ್ಪಟ್ಟು ಎಂಬುದು ಬಹಿರಂಗವಾಗುತ್ತಿದೆ! ದಿನೇ ದಿನೇ ತಿರುವು ಪಡೆದುಕೊಂಡು ಸಾಗುತ್ತಿರುವ ಈ ಹಗರಣದಲ್ಲಿ ಈಗ ರಾಹುಲ್ ಗಾಂಧಿಯ ಹೆಸರೂ ಕೇಳಿ ಬಂದಿರುವುದು ಅಸಹಜವಲ್ಲವಾದರೂ, ಯುಪಿಎ ಸರಕಾರದ ಆಡಳಿತ ವೈಖರಿಗೆ ಹಿಡಿದ ಕನ್ನಡಿಯಿದಷ್ಟೇ!

ಏನೋ ಅಂತಾರಲ್ಲ?! ಎತ್ತು ಏರಿಗೆಳೆದರೆ, ಕೋಣ ನೀರಿಗೆಳೆಯಿತು ಎಂದು! ಈಗ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ, ನೀರವ್ ಮೋದಿ ದೋಚಿದ್ದು ಕೇವಲ 11,400 ಕೋಟಿ ಅಲ್ಲ, ಬದಲಿಗೆ 22,000 ಕೋಟಿ ಎಂದು ಟ್ವೀಟ್ ಮಾಡಿದ್ದು ಕಾಂಗಿಗಳ ಕೆಂಗಣ್ಣಿಗೆ ಗುರಿಯಾಗಿದೆ! ತಮ್ಮದೇ ಸರಕಾರದಲ್ಲಿ ನಡೆದ ಅತಿದೊಡ್ಡ ಹಗರಣ ಎಂಬಂತಾಯಿತಲ್ಲವೇ?! ಮೋದಿ ಸರಕಾರವನ್ನು ಗುರಿ ಮಾಡುವ ಭರದಲ್ಲಿ, ತಮ್ಮ ಬಣ್ಣವನ್ನು ತಾವೇ ಬಯಲು ಮಾಡಿಕೊಳ್ಳುತ್ತಿರುವ ರಾಹುಲ್ ಗಾಂಧಿಗೆ ನಿಜಕ್ಕೂ ನಮಸ್ಕಾರ ಮಾಡಬೇಕಿದೆ ಬಿಡಿ!

“ಮೋದಿ ಜಿ! ಕೊನೆಯ ತಿಂಗಳ ಮನ್ ಕಿ ಬಾತ್ ನಲ್ಲಿ ನಾನು ನೀಡಿದ ಸಲಹೆಯನ್ನು ನೀವು ಕಡೆಗಣಿಸಿದ್ದೀರಿ! ಪ್ರತಿಯೊಬ್ಬ ಭಾರತೀಯನು ನೀವು ಹೇಳಿದ್ದನ್ನೇ ಕೇಳುವಾಗ, ಯಾಕೆ ನೀವು ಸಲಹೆಗಳನ್ನು ಕೇಳುತ್ತೀರಿ?!

ನೀರವ್ ಮೋದಿಯ ಹಗರಣ 22,000 ಕೋಟಿ ರೂ! ದೋಚಿದ್ದು ಮತ್ತು ಓಡಿದ್ದು!
ರಫೇಲ್ ಹಗರಣದ 58,000 ಕೋಟಿ ರೂಗಳು!

ನಾನು ನಿಮ್ಮ ಉತ್ತರಕ್ಕಾಗಿ ಕಾಯುತ್ತಿರುತ್ತೇನೆ!” ಎಂಬರ್ಥದಲ್ಲಿ ಟ್ವೀಟ್ ಮಾಡಿರುವ ರಾಹುಲ್ ಗಾಂಧಿಗೆ, ರಫೇಲ್ ಒಂದು ಹಗರಣವಲ್ಲ ಎಂಬ ಪರಿಜ್ಞಾನವೂ ಇಲ್ಲ, ಮತ್ತು ನಿರ್ಮಲಾ ಸೀತಾರಾಮನ್ ಸಂಬಂಧಪಟ್ಟ ದಾಖಲೆಗಳನ್ನು ಒದಗಿಸಿದ್ದಾರೆ ಎಂಬುದೂ ಸುಳ್ಳಲ್ಲ! ಅಷ್ಟಾದರೂ, ಅದನ್ನು ಹಿಡಿದು ಜಗ್ಗುವ ರಾಹುಲ್ ಗಾಂಧಿಗೆ ಬೇರೆ ವಿಷಯಗಳು ಸಿಕ್ಕಿಲ್ಲ ಎಂಬುದು ಸ್ಪಷ್ಟ! ಇರಲಿ!

ರಾಹುಲ್ ಗಾಂಧಿಗೆ ಕೇಳಬೇಕಿದೆ! ನೀರವ್ ಮೋದಿ ದೋಚಿದ್ದು 11400 ಕೋಟಿ ರೂಗಳಲ್ಲ, ಬದಲಿಗೆ 22,400 ಕೋಟಿ ರೂ ಎಂಬ ಮಾಹಿತಿ ಹೇಗೆ ಸಿಕ್ಕಿತು?! ಸಂಬಂಧಪಟ್ಟ ದಾಖಲೆಗಳೇನಟದರೂ, ಕಾಂಗ್ರೆಸ್ ಕಚೇರಿಯಲ್ಲಿದೆಯೇ?!

ತನಿಖಾಧಿಕಾರಿಗಳು ಪೂರ್ಣ ಪ್ರಮಾಣ ತನಿಖೆ ನಡೆಸುತ್ತಿರುವಾಗ, ನೀರವ್ ಮೋದಿ ಮತ್ತು ಚೋಕ್ಸಿಯ ಕಂಪೆನಿಗಳ ಪ್ರತಿ ದಾಖಲೆಗಳನ್ನು ವಶ ಪಡಿಸಿಕೊಂಡು, ಹಗರಣ 11400 ಕೋಟಿ ರೂಗಳಷ್ಟು ನಡೆದಿದೆ ಎಂಬ ಅಂಕಿ ಅಂಶ ನೀಡಿದಾಗ, ರಾಹುಲ್ ಗಾಂಧಿ ಯಾವ ಆಧಾರದ ಮೇಲೆ 22000 ಕೋಟಿ ರೂ ಗಳಷ್ಟು ದೋಚಲಾಗಿದೆ ಎಂಬ ಮಾಹಿತಿ ನೀಡಿದ್ದಾರೆ?! ಅಂದರೆ, ರಾಹುಲ್ ಗಾಂಧಿ ಗೆ ತಮ್ಮ ಸರಕಾರದ ಅಡಿಯಲ್ಲಿ ನಡೆದ ಹಗರಣದ ಸಂಪೂರ್ಣ ದಾಖಲೆಗಳು ಲಭ್ಯವಾಗಿದೆಯೇ?! ಅಥವಾ, ಕಾಂಗ್ರೆಸ್ ಸರಕಾರದ ಕಚೇರಿಯಲ್ಲಿ ಲೆಕ್ಕ ಪತ್ರಗಳು ಅಡಗಿ ಕುಳಿತಿವೆಯೇ?!

ನಿರ್ಮಲಾ ಸೀತಾರಾಮನ್, ರಾಹುಲ್ ಗಾಂಧಿ ಹಾಗೂ ಉಳಿದ ಕಾಂಗ್ರೆಸ್ ನಾಯಕರು ನೀರವ್ ಮೋದಿಯ ಜೊತೆಗಿನ ನಿಕಟ ಸಂಪರ್ಕದ ಬಗ್ಗೆ ಬಹಿರಂಗಪಡಿಸಿದ್ದು ಗೊತ್ತೇ ಇದೆ! ಅಂದರೆ, ರಾಹುಲ್ ಗಾಂಧಿಗೆ ಎಷ್ಟು ಕೋಟಿಯನ್ನು ದೋಚಲಾಗಿದೆ ಎಂಬುದರ ಬಗ್ಗೆ ನಿಖರವಾದ ಮಾಹಿತಿ ಇದೆ ಎಂದಾಯಿತಲ್ಲವೇ?!

ಪ್ರಾಥಮಿಕ ತನಿಖೆಯಲ್ಲಿಯೇ, ಹಗರಣಗಳು ಪ್ರಾರಂಭವಾಗಿದ್ದು ಯುಪಿಎ ಸರಕಾರದ ಆಡಳಿತಾವಧಿಯಲ್ಲಿ ಎಂಬುದರ ಮಾಹಿತಿ ನೀಡಿತ್ತು! ಅಷ್ಟೇ! ಒಂದರ ಮೇಲೊಂದರಂತೆ ಸಾಕ್ಷಿಗಳು ಸಿಕ್ಕು, ಹಗರಣದ ವಿಚಾರ ಯುಪಿಎ ಸರಕಾರಕ್ಕೆ ಕೇವಲ ತಿಳಿದಿತ್ತು ಎಂಬುದು ಮಾತ್ರವಲ್ಲ, ನಾಲ್ಕು ಕಾಂಗ್ರೆಸ್ ನಾಯಕರು ಭಾಗಿಯಾಗಿದ್ದಾರೆ ಎಂಬ ಸತ್ಯವೂ ಹೊರಬಂದಿತ್ತಷ್ಟೇ! ಆದರೆ ., ಈಗ ರಾಹುಲ್ ಗಾಂಧಿಯ ಈ ಟ್ವೀಟ್ ಮತ್ತೆ ಕಾಂಗಿಗಳನ್ನು ಕಷ್ಟಕ್ಕೆ ಸಿಲುಕಿಸಿದೆ!

ಅಕಸ್ಮಾತ್, ಕಾಂಗ್ರೆಸ್ ಈ ಹಗರಣದಲ್ಲಿ ಭಾಗಿಯಾಗಿಲ್ಲ ವೆಂದಾದರೆ, ಅದ್ಹೇಗೆ ರಾಹುಲ್ ಗಾಂಧಿಗೆ ನಿಖರವಾದ ಹಗರಣದ ಅಂಕಿ ಅಂಶವನ್ನು ನೀಡಲು ಸಾಧ್ಯವಾಯಿತು?! ಒಬ್ಬ ಜವಾಬ್ದಾರಿಯುತ ನಾಯಕನಾಗಿ, ಇಂತಹ ವಿಚಾರದಲ್ಲಿ ಮನಸ್ಸಿಗೆ ಬಂದ ಅಂಕಿ ಅಂಶ ನೀಡಲು ಸಾಧ್ಯವೇ ಇಲ್ಲ ಅಲ್ಲವೇ?! ನೆನ್ನೆಯಷ್ಟೇ, ಅನಿತಾ ಸಿಂಗ್ವಿಗೆ, ಅವರ 60 ಮಿಲಿಯನ್ ರೂ ಗಳ ಆಭರಣದ ಖರೀದಿಯ ಬಗ್ಗೆ ಮಾಹಿತಿ ನೀಡಲು ತೆರಿ್ಗೆ ಅಧಿಕಾರಿಗಳು ನೋಟೀಸ್ ಕಳುಹಿಸಿದ್ದರು!

ಸಾಕ್ಷ್ಯಗಳನ್ನು ಕಲೆ ಹಾಕಿರುವ ತನಿಖಾಧಿಕಾರಿಗಳು, ಆಭರಣಗಳ ಖರೀದಿಯಲ್ಲಿ, 15 ಮಿಲಿಯನ್ ನ್ನಷ್ಟಿ ಮೊತ್ತವನ್ನು ಚೆಕ್ ಮುಖಾಂತರ ಹಣ ಪಾವತಿ ಮಾಡಲಾಗಿದ್ದರೆ, ಉಳಿದ 48 ಮಿಲಿಯನ್ ರೂಗಳನ್ನು ನೋಟುಗಳ ಮುಖಾಂತರ ಪಾವತಿ ಮಾಡಲಾಗಿದೆ ಎಂಬ ಆಘಾತಕಾರಿ ಮಾಹಿತಿಯನ್ನು ಬಹಿರಂಗಪಡಿಸಿದ್ದಾರೆ!

ಇಂತಹ ಕ್ಲಿಷ್ಟಕರ ಪರಿಸ್ಥಿತಿಯಲ್ಲಿ, ರಾಹುಲ್ ಗಾಂಧಿ, ಇನ್ನೂ 10000 ಕೋಟಿ ರೂಗಳನ್ನು ಸೇರಿಸಿದ್ದಾರೆ! ತನಿಖಾಧಿಕಾರಿಗಳಂತೂ, ರಾಹುಲ್ ಗಾಂಧಿಯ ಹತ್ತಿರ ವರದಿ ನೀಡುವುದಿಲ್ಲ, ಹಾಗೂ ನೀಡುವ ಹಾಗೂ ಇಲ್ಲ! ಹಾಗಿದ್ಯಾಗಿಯೂ, ರಾಗಾ ರಿಗೆ ಹೆಚ್ಚುವರಿ 10,000 ಕೋಟಿ ರೂ ಗಳ ಲೆಕ್ಕ ಸಿಕ್ಕಿದ್ದು ಹೇಗೆ?! ರಾಗಾ ಈಗ, ಇದು ಕೇಂದ್ರದಿಂದ ಬಂದ ಮಾಹಿತಿ ಎಂದು ನುಣುಚಿಕೊಳ್ಳಲೂ ಸಾಧ್ಯವಿಲ್ಲ ಅಲ್ಲವೇ?!

ಮತ್ತೆ ರಾಹುಲ್ ಗಾಂಧಿಗೆ ಹಗರಣದಲ್ಲಿ ಸಿಕ್ಕ ಕಮಿಷನ್ ಮೊತ್ತ 10000 ಕೋಟಿ ರೂ ಗಳೇ?! ಇಂತಹ ಅನುಮಾನಗಳು ಮತ್ತೆ ಸೃಷ್ಟಿಯಾಗಿವೆ! ತಕ್ಕನಾಗಿ, ಪುರಾವೆಗಳೂ ದೊರೆಯುತ್ತಲಿದೆ!

ಕೇಂದ್ರವೇ ನಿಯೋಜಿಸಿದ್ದ ಅಲಹಾಬಾದ್ ಬ್ಯಾಕ್ ನ ಡೈರೆಕ್ಟರ್ ಆದ ದಿನೇಶ್ ದುಬೆ ಸೆಪ್ಟೆಂಬರ್ 14, 2013 ರಂದು ನಡೆದ ಬೋರ್ಡ್ ಮೀಟಿಂಗ್ ನಲ್ಲಿ, ಗೀತಾಂಜಲಿ ಜ್ಯುವೆಲ್ಲರ್ಸ್ ನ ಮಾಲೀಕನಾದ ನೀರವ್ ಮೋದಿಗೆ ಹೇಗೆ 1500 + ಕೋಟಿ ರೂಗಳಷ್ಟು ಸಾಲ ನೀಡಲಾಯಿತು ಎಂದು ಪ್ರಶ್ನಿಸಿ ತೀವ್ರವಾಗಿ ವಿರೋಧಿಸಿದ್ದಾಗ ., ಸ್ವತಃ ಕಾಂಗ್ರೆಸ್ ಬೆದರಿಕೆ ಹಾಕಿದ್ದಲ್ಲದೇ, ದಿನೇಶ್ ದುಬೆಯನ್ನು ಒತ್ತಾಯಪೂರ್ವಕವಾಗಿ ರಾಜೀನಾಮೆ ನೀಡುವಂತೆ ಮಾಡಿ ಮನೆಗೆ ಕಳುಹಿಸಿತ್ತು! ಬಾಯಿ ಬಿಟ್ಟರೆ ಜೋಕೆ ಎಂಬ ಎಚ್ಚರಿಕೆ ನೀಡಿ!

ನೀರವ್ ಮೋದಿ ಮತ್ತು ರಾಹುಲ್ ಗಾಂಧಿ ಭೇಟಿಯಾದ ದಿನ, ಅಂದರೆ ಸೆಪ್ಟೆಂಬರ್ 13, 2013 ರ ಮರುದಿನವೇ ನೀರವ್ ಮೋದಿಗೆ ಸಾಲ ಮಂಜೂರಾಗಿತ್ತು! ಅಲ್ಲಿಗೆ ಸ್ಪಷ್ಟವಾಯಿತಲ್ಲವೇ?! ಸಾಲವನ್ನು ಮಂಜೂರು ಮಾಡುತ್ತಲೇ, ಕೊನೆಗೆ ಕಮಿಷನ್ ತೆಗೆದುಕೊಂಡಿದ್ದರಾ ರಾಹುಲ್ ಗಾಂಧಿ?! ಹಾಗಾದರೆ , ರಾಹುಲ್ ಗಾಂಧಿಯವರ ಅಂಕಿ ಅಂಶ ಸರಿಯಾಗಿಯೇ ಇದೆ ಬಿಡಿ!

– ಪೃಥು ಅಗ್ನಿಹೋತ್ರಿ

 

 

Editor Postcard Kannada:
Related Post