X

ಬಿಗ್ ಬ್ರೇಕಿಂಗ್! ಡಿಕೆಶಿಗೆ ಅಡ್ಡಗಾಲಿಟ್ಟ ಪರಮೇಶ್ವರ್..! ಇಂಧನ ಖಾತೆ ಕೈತಪ್ಪಲು ಕಾರಣವೇನು ಗೊತ್ತಾ..?

ಕಾಂಗ್ರೆಸ್-ಜನತಾ ದಳ ಮೈತ್ರಿ ಮಾಡಿಕೊಂಡ ನಂತರ ರಾಜ್ಯದಲ್ಲಿ ರಾಜಕೀಯ ಡೊಂಬರಾಟಗಳು ಮುಗಿಲು ಮುಟ್ಟುತ್ತಿದೆ. ಇದೀಗ ಸುದ್ಧಿಮಾಧ್ಯಮಗಳಲ್ಲಿ ಒಂದೇ ಸುದ್ದಿ, “ಇನ್ನೂ ತಯಾರಾಗದ ಸಂಪುಟ ಸರ್ಕಸ್”, “ಕಾಂಗ್ರೆಸ್‍ನಲ್ಲಿ ಭಿನ್ನಮತ ಸ್ಪೋಟ”, “ಜನತಾ ದಳದಲ್ಲಿ ಸಚಿವ ಸ್ಥಾನಕ್ಕಾಗಿ ಮನಸ್ತಾಪ” ಹೀಗೆ ಇಂತಹಾ ವಿಚಾರವೇ ಬ್ರೇಕಿಂಗ್ ನ್ಯೂಸ್ ಆಗುತ್ತಿದೆ. ಕುಮಾರ ಸ್ವಾಮಿ ಮುಖ್ಯಮಂತ್ರಿಯಾಗಿ 15 ದಿನಗಳು ಕಳೆದರೂ ಇನ್ನೂ ಸಚಿವ ಸಂಪುಟ ರಚನೆ ಆಗಿಲ್ಲ ಎಂದರೆ ಏನರ್ಥ ಎಂದು ಜನರೂ ಕ್ಯಾಕರಿಸಿ ಉಗಿಯುತ್ತಿದ್ದಾರೆ.

ಈ ಮಧ್ಯೆ ಕಾಂಗ್ರೆಸ್ ಪಾಳಯದಲ್ಲಿ ಅತಿದೊಡ್ಡ ಆಘಾತದ ಸುದ್ದಿಯೊಂದು ಕೇಳಿ ಬರುತ್ತಿದೆ. ಅದು ಡಿಕೆ ಶಿವಕುಮಾರ್ ಅವರ ವಿಷಯ. ಮೊದಮೊದಲು ತನಗೆ ಉಪಮುಖ್ಯಮಂತ್ರಿ ಸ್ಥಾನ ಬೇಕೆಂದು ಹಠ ಹಿಡಿದಿದ್ದ ಮಾಜಿ ಸಚಿವ ಡಿಕೆ ಶಿವಕುಮಾರ್ ಅವರಿಗೆ ಹಿನ್ನೆಡೆಯಾಗಿತ್ತು. ನಂತರ ಈ ಹಿಂದೆ ನಿರ್ವಹಿಸುತ್ತಿದ್ದ ಇಂಧನ ಖಾತೆಯನ್ನು ನೀಡಿ ಎಂದು ಪಟ್ಟು ಹಿಡಿದಿದ್ದರು. ಆದರೆ ಕೊನೇ ಘಳಿಗೆಯಲ್ಲಿ ಜನತಾ ದಳದ ಶಾಸಕ ರೇವಣ್ಣ ಅವರ ಹಠದಿಂದ ಇಂಧನ ಖಾತೆಯೂ ಜನತಾ ದಳಕ್ಕೆ ಬರುವಂತಾಗಿತ್ತು.

ಆದರೂ ಆ ಖಾತೆಯನ್ನು ಮರಳಿ ಕಾಂಗ್ರೆಸ್‍ಗೆ ತರುವಲ್ಲಿ ಡಿಕೆ ಶಿವಕುಮಾರ್ ಸಹಿತ ಕೆಲ ಕಾಂಗ್ರೆಸ್ ನಾಯಕರು ಕೊಂಚ ಯಶಸ್ವಿಯಾಗಿದ್ದರು. ಆದಿ ಚುಂಚನ ಗಿರಿ ಮಠದ ಶ್ರೀಗಳ ಮಧ್ಯಸ್ಥಿತಿಕೆಯಲ್ಲಿ ಒಕ್ಕಲಿಗರ ನಡುವೆ ಭಿನ್ನಾಭಿಪ್ರಾಯವಿದೆ ಎಂಬ ಸಂದೇಶ ರವಾಣೆಯಾಗಬಾರದು ಎಂದು ರಾಜಿ ಮಾಡಿಸಿ ಇಂಧನ ಖಾತೆ ಕಾಂಗ್ರೆಸ್ ತೆಕ್ಕೆಗೆ ಬೀಳುವಂತಾಗಿತ್ತು. ಇನ್ನೇನು ಡಿಕೆ ಶಿವಕುಮಾರ್‍ಗೆ ಇಂಧನ ಖಾತೆ ಸಿಕ್ಕೇ ಬಿಡ್ತು ಎನ್ನುವಷ್ಟರಲ್ಲಿ ಸ್ವತಃ ಕಾಂಗ್ರೆಸ್ ನಾಯಕರೇ ಈ ಬೆಳವಣಿಗೆಗೆ ಅಡ್ಡಗಾಲು ಹಾಕಿದ್ದಾರೆ.

ಉಪಮುಖ್ಯಮಂತ್ರಿ ಸ್ಥಾನವನ್ನು ಅಲಂಕರಿಸಿದ ಜಿ.ಪರಮೇಶ್ವರ್ ಅವರು ಡಿಕೆಶಿಗೆ ಮಹತ್ವದ ಖಾತೆಯನ್ನು  ನೀಡೋದಕ್ಕೆ ಅಡ್ಡಗಾಲು ಇಟ್ಟಿದ್ದಾರೆ. ಈ ಹಿಂದೆ ಮಾಡಿಕೊಂಡಿರುವ ಒಪ್ಪಂದದಂತೆ ಇಂಧನ ಖಾತೆ ಜನತಾ ದಳಕ್ಕೇ ಸೀಮಿತವಾಗಿರಲಿ ಎಂಬ ವಾದವನ್ನು ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ರಾಹುಲ್ ಗಾಂಧಿ ನೇತೃತ್ವದಲ್ಲಿ ನಡೆಯುತ್ತಿರುವ ಸಭೆಯಲ್ಲಿ ಹೇಳಿದ್ದಾರೆ. ಈ ಮೂಲಕ ಪಕ್ಷದಲ್ಲಿ ತನಗಿಂತ ಉನ್ನತ ಹುದ್ದೆಯುಳ್ಳ ನಾಯಕರು ಇರಕೂಡದು ಎಂಬ ಸಂದೇಶವನ್ನು ಸ್ಪಷ್ಟವಾಗಿ ರವಾನಿಸಿದ್ದಾರೆ.

ಕಾಂಗ್ರೆಸ್ ಪಕ್ಷವನ್ನು ಈ ಬಾರಿ ಅಧಿಕಾರಕ್ಕೆ ತರಲು ಹಗಲು ರಾತ್ರಿ ದುಡಿದ ಡಿಕೆ ಶಿವಕುಮಾರ್ ಅವರಿಗೆ ಉಪಮುಖ್ಯಮಂತ್ರಿ ಸ್ಥಾನ ನೀಡದೆ ಮೋಸ ಮಾಡಿದ್ದ ಕಾಂಗ್ರೆಸ್ ನಾಯಕರು ಇದೀಗ ಇನ್ನೇನು ಸಿಕ್ಕೇ ಬಿಡ್ತು ಎನ್ನುವಂತಿದ್ದ ಇಂಧನ ಖಾತೆಗೂ ಕಲ್ಲು ಹಾಕಿದ್ದಾರೆ. ಇದರಿಂದ ಕಾಂಗ್ರೆಸ್‍ನಲ್ಲಿ ಒಳಜಗಳ ತಾಂಡವವಾಡುತ್ತಿರುವ ಬಗ್ಗೆ ಹರಿದಾಡುತ್ತಿದ್ದ ಗುಮಾನಿ ಸ್ಪಷ್ಟವಾಗಿದೆ.

-ಏಕಲವ್ಯ

Editor Postcard Kannada:
Related Post