X

ಶಾಕಿಂಗ್! ಸಿಎಂ ಕುಮಾರಸ್ವಾಮಿ ವಿರುದ್ಧ ಮತ್ತೊಮ್ಮೆ ಆಕ್ರೋಶ ಹೊರಹಾಕಿದ ಸಿದ್ದರಾಮಯ್ಯ.! ಕಾಂಗ್ರೆಸ್ ದಿಗ್ಗಜರ ಸಮ್ಮುಖದಲ್ಲೇ ಮೈತ್ರಿ ಸರಕಾರಕ್ಕೆ ಶಾಕ್..!

ಇದೇಕೋ ಮನಸ್ಥಾಪ ಕಡಿಮೆ ಆಗುವ ರೀತಿ ಕಾಣುತ್ತಿಲ್ಲ. ಎಷ್ಟೇ ಪ್ರಯತ್ನ ಪಟ್ಟರೂ ಮೈತ್ರಿ ಸರಕಾರಕ್ಕೆ ಕಂಟಕ ಮಾತ್ರ ತಪ್ಪಿದ್ದಲ್ಲ. ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಮಾಡಿಕೊಂಡು ಆರಾಮವಾಗಿ ಆಡಳಿತ ನಡೆಸಬಹುದು ಎಂಬ ಲೆಕ್ಕಾಚಾರ ಹಾಕಿಕೊಂಡಿದ್ದ ಎರಡೂ ಪಕ್ಷಗಳಿಗೆ ಇದೀಗ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅಡ್ಡಿಯಾಗಿದ್ದಾರೆ. ಯಾಕೆಂದರೆ ಮೈತ್ರಿ ಮಾಡಿಕೊಂಡ ನಂತರ ಸಿದ್ದರಾಮಯ್ಯನವರನ್ನು ಮೂಲೆಗುಂಪು ಮಾಡಲಾಗುತ್ತಿದೆ ಎಂಬ ಮಾತು ಕೇಳಿ ಬರುತ್ತಿರುವ ಹಿನ್ನೆಲೆಯಲ್ಲಿ ಅಸಮಧಾನಗೊಂಡ ಮಾಜಿ ಮುಖ್ಯಮಂತ್ರಿಯನ್ನು ಸಮಧಾನಪಡಿಸಲು ಕಾಂಗ್ರೆಸ್ ಮುಖಂಡರಾದ ಪವರ್‌ಫುಲ್ ಸಚಿವ ಡಿಕೆ ಶಿವಕುಮಾರ್, ಎಂ ವೀರಪ್ಪ ಮೊಯ್ಲಿ ಮತ್ತು ದೇಶಪಾಂಡೆ ಅವರು ಭೇಟಿಗೆ ತೆರಳಿದ್ದರು. ಸಮಧಾನಪಡಿಸಲು ಹೋದ ಕಾಂಗ್ರೆಸ್ ನಾಯಕರಿಗೆ ಸಿದ್ದರಾಮಯ್ಯನವರು ಶಾಕ್ ನೀಡಿದ್ದಾರೆ. ಯಾರ ಮಾತಿಗೂ ಬಗ್ಗದ ಸಿದ್ದರಾಮಯ್ಯ, ನೇರವಾಗಿ ಮತ್ತೊಮ್ಮೆ ಮುಖ್ಯಮಂತ್ರಿ ಕುಮಾರಸ್ವಾಮಿ ವಿರುದ್ಧ ಮಾತೆತ್ತಿದ್ದಾರೆ.!

ಒಂದೆಡೆ ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗಿರುವ ಅಸಮಧಾನ ಮತ್ತೊಂದೆಡೆ ತಮ್ಮ ಪಕ್ಷದಲ್ಲೇ ಸಿದ್ದರಾಮಯ್ಯನವರನ್ನು ಕಡೆಗಣಿಸಲಾಗುತ್ತಿದೆ ಎಂಬ ಭಾವನೆ ಇವೆಲ್ಲವೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಮತ್ತಷ್ಟು ಕೆರಳಿಸುವಂತೆ ಮಾಡುತ್ತಿದೆ. ಯಾಕೆಂದರೆ ಸಿದ್ದರಾಮಯ್ಯನವರು ತಮ್ಮ ಬೆಂಬಲಿತ ಶಾಸಕರನ್ನು ಸೇರಿಸಿಕೊಂಡು ಸರ್ಕಾರ ಉರುಳಿಸುವ ತಂತ್ರ ನಡೆಸುತ್ತಿದ್ದಾರೆ ಎಂಬ ಆತಂಕ ಮೈತ್ರಿ ಸರಕಾರದ ಮುಖಂಡರಲ್ಲಿದೆ. ಆದ್ದರಿಂದಲೇ ಸಿದ್ದರಾಮಯ್ಯನವರನ್ನು ಸಮಾಧಾನ ಪಡಿಸುವ ಕೆಲಸ ನಡೆಯುತ್ತಿದೆ.!

ಜೆಡಿಎಸ್ ನಮ್ಮ ಯೋಜನೆಗೆ ಅಡ್ಡಿಪಡಿಸುತ್ತಿದೆ..!

ಸಿದ್ದರಾಮಯ್ಯನವರ ಭೇಟಿಗೆ ತೆರಳಿದ ಕಾಂಗ್ರೆಸ್ ಮುಖಂಡರ ಬಳಿ ಮಾತುಕತೆ ನಡೆಸಿದ ಸಿದ್ದರಾಮಯ್ಯ, ಜೆಡಿಎಸ್ ನಾವು ಜಾರಿಗೊಳಿಸಿರುವ ಯೋಜನೆಗಳಿಗೆ ಕಲ್ಲು ಹಾಕಲು ಪ್ರಯತ್ನಿಸುತ್ತಿದೆ. ಅಂತಹ ಯಾವುದೇ ಪ್ರಯತ್ನಕ್ಕೆ ಅವಕಾಶ ಮಾಡಿಕೊಡಬೇಡಿ, ಯಾಕೆಂದರೆ ನಾವು ಜಾರಿಗೊಳಿಸಿರುವ ಯೋಜನೆಗಳು ಈಗ ಕಾರ್ಯರೂಪಕ್ಕೆ ತಂದರೆ ಅದರ ಕ್ರೆಡಿಟ್ ಎಲ್ಲಾ ನಮ್ಮ ಸರಕಾರಕ್ಕೆ ಬರುತ್ತದೆ. ಆದ್ದರಿಂದ ಜೆಡಿಎಸ್‌ನವರು ಯೋಜನೆಗಳನ್ನು ಮೊಟಕುಗೊಳಿಸುವ ಸಾಧ್ಯತೆ ಇದೆ. ಆದರೆ ಯಾವುದೇ ಕಾರಣಕ್ಕೂ ಇದಕ್ಕೆ ಕಾಂಗ್ರೆಸ್ ಅವಕಾಶ ಮಾಡಿಕೊಡಬಾರದು. ಪಟ್ಟು ಹಿಡಿದು ಕಾಂಗ್ರೆಸ್ ವರದಿಯನ್ನು ಅಂತಿಮಗೊಳಿಸುವಂತೆ ಮಾಡಬೇಕು ಎಂದು ಸಲಹೆ ನೀಡಿದ್ದಾರೆ. ಸಿಎಂಪಿ ಸಭೆ ನಡೆಯುವ ಸಂದರ್ಭದಲ್ಲಿ ನಮ್ಮ ಪಕ್ಷದ ವರದಿಯನ್ನೇ ಎಲ್ಲರೂ ಎತ್ತಿಹಿಡಿಯಬೇಕು. ಜೆಡಿಎಸ್ ನಮ್ಮ ಯೋಜನೆಗಳಿಗೆ ಅಡ್ಡಿಪಡಿಸಿದ್ದೇ ಆದರೆ ಅದಕ್ಕೆ ಅವಕಾಶ ನೀಡಿಬಾರದು ಎಂದು ಕಾಂಗ್ರೆಸ್ ಮುಖಂಡರಿಗೆ ಸಿದ್ದರಾಮಯ್ಯ ಹೇಳಿಕೊಂಡಿದ್ದಾರೆ.!

ಸಿಎಂ ವಿರುದ್ಧ ಮತ್ತೆ ಅಸಮಧಾನ ವ್ಯಕ್ತಪಡಿಸಿದ ಸಿದ್ದರಾಮಯ್ಯ..!

ಕಾಂಗ್ರೆಸ್ ಪಕ್ಷದ ಸಹಾಯವಿಲ್ಲದೆ ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗಲು ಸಾಧ್ಯವಿರಲಿಲ್ಲ. ಆದರೆ ಅಧಿಕಾರ ಕೈಗೆ ಸಿಗುತ್ತಿದ್ದಂತೆ ಕುಮಾರಸ್ವಾಮಿ ಅವರು ನಮ್ಮನ್ನು ಕಡೆಗಣಿಸಲು ಆರಂಭಿಸಿದ್ದಾರೆ. ಇದು ಯಾವುದೇ ಕಾರಣಕ್ಕೂ ಸಾಧ್ಯವಾಗದ ಮಾತು. ಯಾಕೆಂದರೆ ಕಾಂಗ್ರೆಸ್‌ನ್ನು ಕಡೆಗಣಿಸಿ ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿ ಮುಂದುವರಿಯಲು ಸಾಧ್ಯವೇ ಇಲ್ಲ ಎಂದು ಎಚ್ಚರಿಕೆ ಕೂಡ ನೀಡಿದ್ದಾರೆ. ಮೈತ್ರಿ ಸರಕಾರ ಅಸ್ತಿತ್ವಕ್ಕೆ ಬಂದ ನಂತರ ಎಲ್ಲಾ ರೀತಿಯಲ್ಲೂ ಮೂಲೆಗುಂಪಾಗುತ್ತಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಮಾತಿಗೆ ಸ್ವತಃ ಭೇಟಿಗೆ ತೆರಳಿದ್ದ ಕಾಂಗ್ರೆಸ್ ಮುಖಂಡರು ಕಂಗಾಲಾಗಿದ್ದಾರೆ.!

–ಅರ್ಜುನ್

Editor Postcard Kannada:
Related Post