X

ಯೋಧರು ಜನಸಾಮಾನ್ಯರನ್ನು ಹತ್ಯೆ ಮಾಡುತ್ತಿದ್ದಾರೆ ಎನ್ನುತ್ತಿದ್ದವರು ಕೇಳಲೇ ಬೇಕಾದ ವಿಚಾರ!! ಮಾನವೀಯತೆ ಮೆರೆದ ಭಾರತೀಯ ರಕ್ಷಣಾ ಪಡೆ!!

“ಕಾಶ್ಮೀರದಲ್ಲಿ ಉಗ್ರರ ದಾಳಿಯಿಂದ ಉಂಟಾಗುವ ಸಾವಿಗಿಂತಲೂ ಹೆಚ್ಚಾಗಿ ಸೇನಾ ಕಾರ್ಯಾಚರಣೆಯಿಂದಲೇ ಜನರು ಸಾವನ್ನಪ್ಪುತ್ತಿದ್ದಾರೆ. ಯೋಧರ ದಾಳಿ, ಉಗ್ರರಿಗಿಂತ ಹೆಚ್ಚಾಗಿ ಜನಸಾಮಾನ್ಯರನ್ನೇ ಗುರಿಯಾಗಿಸಿದೆ” ಎಂದು ಬೊಗಳೆ ಬಿಟ್ಟಿದ್ದ ಬುದ್ದಿಜೀವಿಗಳಿಗೆ ಭಾರತೀಯ ಯೋಧರು ಮಾತ್ರ ಉಗ್ರರಂತೆ ಕಂಡಿರುವುದು ನಿಜಕ್ಕೂ ಕೂಡ ಅಚ್ಚರಿ ವಿಚಾರ!! ಆದರೆ ಭಾರತೀಯ ರಕ್ಷಣಾ ಪಡೆ ತನ್ನ ದೇಶದವರೊಂದಿಗೆ ಮಾತ್ರವಲ್ಲದೇ ನೆರೆ ರಾಷ್ಟ್ರದವರೊಂದಿಗೂ ಮಾನವೀಯತೆಯನ್ನು ಮರೆಯುತ್ತಿದ್ದಾರೆ ಎನ್ನುವುದಕ್ಕೆ ಸಾಕ್ಷಿಯಾಗಿ ನಿಂತಿದೆ ಈ ಸುದ್ದಿ!!

ಹೌದು… ಪಾಕಿಸ್ತಾನದ ಗಡಿಯೊಳಗಿರುವ ಕಾಶ್ಮೀರದ 11 ವರ್ಷದ ಬಾಲಕನೊಬ್ಬ ಆಕಸ್ಮಿಕವಾಗಿ ಗಡಿ ನಿಯಂತ್ರಣ ರೇಖೆಯನ್ನು ದಾಟಿ ಭಾರತದ ಗಡಿಯೊಳಗೆ ಪ್ರವೇಶಿಸಿದ್ದ. ಹಾಗಾಗಿ ಗಡಿ ದಾಟಿ ಬಂದ ಬಾಲಕನಿಗೆ ಭಾರತೀಯ ರಕ್ಷಣಾ ಪಡೆ ಸಿಹಿ ತಿಂಡಿಗಳನ್ನು ನೀಡಿ ಪಾಕಿಸ್ತಾನದ ಅಧಿಕಾರಿಗಳಿಗೊಪ್ಪಿಸುವ ಮೂಲಕ ತನ್ನ ಮಾನವೀಯತೆಯನ್ನು ಮೆರೆದಿದ್ದಾರೆ!! ಈ ಮೂಲಕ “ಅಥಿತಿ ದೇವೋಭವ” ಎನ್ನುವ ವೇದ ವಾಕ್ಯವನ್ನು ಪಾಲಿಸುವ ನಾವುಗಳು ಶತ್ರುಗಳನ್ನೂ ಮಿತ್ರರಂತೆ ಕಾಣುವವರು ಎಂಬುವುದನ್ನು ಮತ್ತೊಮ್ಮೆ ನಿರೂಪಿಸಿದಂತಾಗಿದೆ!!!

ಈಗಾಗಲೇ ಜೈಶೇ ಇ ಮೊಹಮ್ಮದ್, ಹಿಜ್ಬುಲ್ ಮುಜಾಹಿದ್ದೀನ್ ನಂತಹ ಪಾಕಿಸ್ತಾನದ ನಿಷೇಧಿತ ಭಯೋತ್ಪಾದನಾ ಸಂಘಟನೆಗಳು, ಕಾಶ್ಮೀರದಲ್ಲಿ ಭದ್ರತಾ ಪಡೆಗಳು ಮತ್ತು ಪ್ರತ್ಯೇಕವಾದಿಗಳ ನಡುವೆ ಕಳೆದ ವರ್ಷ ಗಲಭೆ ನಡೆದ ಸಂದರ್ಭ ಮಕ್ಕಳನ್ನು ಗುಪ್ತಚರರಾಗಿ ಬಳಸಿಕೊಂಡಿದ್ದಾರೆ ಎಂದು ವಿಶ್ವಸಂಸ್ಥೆ ಹೇಳಿದೆ!! ಅಷ್ಟೇ ಅಲ್ಲದೇ, ಮಕ್ಕಳ ಮತ್ತು ಸಶಸ್ತ್ರ ಸಂಘರ್ಷದ ವಿಶ್ವಸಂಸ್ಥೆ ಕಾರ್ಯದರ್ಶಿಯ ವಾರ್ಷಿಕ ವರದಿ ಪ್ರಕಾರ, 2017ರ ಜನವರಿ-ಡಿಸೆಂಬರ್ ಅವಧಿಯಲ್ಲಿ ಜಗತ್ತಿನಾದ್ಯಂತ 10 ಸಾವಿರ ಮಕ್ಕಳನ್ನು ಕೊಲ್ಲಲಾಯಿತು. ಕಳೆದ ವರ್ಷ 8 ಸಾವಿರಕ್ಕೂ ಹೆಚ್ಚು ಮಂದಿಯನ್ನು ಉಗ್ರ ಸಂಘಟನೆಗಳು ನೇಮಕ ಮಾಡಿಕೊಂಡಿದ್ದು ಅವರನ್ನು ವಿದ್ವಂಸಕ ಕೃತ್ಯಗಳಿಗೆ ಬಳಸಲಾಗುತ್ತಿದೆ ಎಂದು ಹೇಳಿದೆ.

ಈ ಮೂಲಕ ಪಾಕಿಸ್ತಾನ ಬೆಂಬಲಿತ ಭಯೋತ್ಪಾದಕ ಸಂಘಟನೆಗಳು ತಾವು ಮಾನವೀಯತೆಯನ್ನು ಮರೆತ ರಾಕ್ಷಸರು ಎಂಬುವುದನ್ನು ಮತ್ತೊಮ್ಮೆ ಸಾಬೀತುಪಡಿಸಿದ್ದರು. ಅಷ್ಟೇ ಅಲ್ಲದೇ, ತಮ್ಮ ದುಷ್ಟ ಕಾರ್ಯಗಳಿಗೆ ಎಳೆಯ ಮಕ್ಕಳನ್ನು ಬಳಸಿಕೊಂಡು ಅವರ ಸುಂದರ ಭವಿಷ್ಯವನ್ನು ನರಕಕ್ಕೆ ದೂಡುತ್ತಿರುವ ಸಂಗತಿಯೂ ಬೆಳಕಿಗೆ ಬಂದಿತ್ತು!! ಆದರೆ, ಇದರ ಬೆನ್ನಲ್ಲೇ ಇದೀಗ ಭಾರತೀಯ ಸೈನಿಕರು ಗಡಿ ದಾಟಿ ಬಂದ ಪಾಕ್ ಬಾಲಕನಿಗೆ ಸಿಹಿ ತಿಂಡಿಗಳನ್ನು ನೀಡಿ ಮಾನವೀಯತೆಯನ್ನು ಮೆರೆಯುವ ಮೂಲಕ ಭಾರತೀಯರೂ ಏನೆಂಬುವುದನ್ನು ಸಾಬೀತು ಮಾಡಿದ್ದಾರೆ!!

ಹೌದು… ನಾಲ್ಕು ದಿನಗಳ ಹಿಂದೆ ಜಮ್ಮು ಕಾಶ್ಮೀರದ ಪುಂಚ್ ಜಿಲ್ಲೆಯಲ್ಲಿರುವ ಭಾರತದ ಭಾಗಕ್ಕೆ ಪ್ರವೇಶಿಸಿದ್ದ ಮೊಹಮ್ಮದ್ ಅಬ್ದುಲ್ಲಾ ಹೆಸರಿನ ಈ ಬಾಲಕನನ್ನು ಜೂನ್ 24 ರಂದು ಇಲ್ಲಿನ ದೇಗ್ ವಾರ್ ಇಲಾಖೆಯಲ್ಲಿ ಸೇನೆಯು ವಶಪಡಿಸಿಕೊಂಡಿತ್ತು ಎಂದು ತಿಳಿದು ಬಂದಿದೆ!! ಜಮ್ಮು ಮತ್ತು ಕಾಶ್ಮೀರದ ಪೂಂಚ್ ಜಿಲ್ಲೆಯಲ್ಲಿ ಗಡಿನಿಯಂತ್ರಣ ರೇಖೆ ದಾಟಿ ಭಾರತ ಪ್ರವೇಶಿಸಿದ್ದ ಪಾಕ್ ಆಕ್ರಮಿತ ಕಾಶ್ಮೀರದ (ಪಿಒಕೆ) ಬಾಲಕನನ್ನು ಪಾಕಿಸ್ತಾನದ ಅಧಿಕಾರಿಗಳಿಗೆ ಹಸ್ತಾಂತರಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ!!

ಈ ಕುರಿತಾಗಿ ಮಾತನಾಡಿದ ರಕ್ಷಣಾ ಅಧಿಕಾರಿಯೊಬ್ಬರು ಉಭಯ ದೇಶಗಳ ನಡುವೆ ವಿಶ್ವಾಸವನ್ನು ಬಲಪಡಿಸುವ ನಿಟ್ಟಿನಲ್ಲಿ ಮಾನವೀಯತೆಯ ದೃಷ್ಟಿಯಲ್ಲಿ ಬಾಲಕನನ್ನು ಬಿಡುಗಡೆಗೊಳಿಸಿದ್ದೇವೆ. ಭಾರತೀಯ ಸೇನೆಯು ನಿರ್ದೋಷಿಗಳನ್ನು ಪತ್ತೆಹಚ್ಚಿದಾಗ ಸಂವೇದನಾಶೀಲತೆಯನ್ನು ಕಾಪಾಡಲು ಹಾಗೂ ಮಾನವೀಯ ಮೌಲ್ಯಗಳನ್ನು ಎತ್ತಿ ಹಿಡಿಯುವ ಕೆಲಸ ಮಾಡುತ್ತದೆ’ ಎಂದಿದ್ದಾರೆ. ಇನ್ನು ಈ ಬಾಲಕನನ್ನು ಒಪ್ಪಿಸುವ ಮೊದಲು ಆತನಿಗೆ ಹೊಸ ಬಟ್ಟೆ ಬರೆಗಳನ್ನು ತೊಡಿಸುವುದರೊಂದಿಗೆ ಸಿಹಿ ತಿಂಡಿಗಳನ್ನೂ ನೀಡಲಾಗಿದೆ ಎಂದು ತಿಳಿದು ಬಂದಿದೆ.

ಇನ್ನು, ಈ ಬಗ್ಗೆ ಪೂಂಚ್‍ನ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ರಾಜೀವ್ ಪಾಂಡೆ ಮಾತಾನಾಡಿದ್ದು, ‘ಬಾಲಕ ಆಕಸ್ಮಿಕವಾಗಿ ಗಡಿ ದಾಟಿ ಭಾರತ ಪ್ರವೇಶಿಸಿದ್ದ. ಸೇನೆ ಹಾಗೂ ಪೊಲೀಸರು ಆತನನ್ನು ವಶಕ್ಕೆ ಪಡೆದು ಅನಂತರ ಪಾಕಿಸ್ತಾನಕ್ಕೆ ಕಳುಹಿಸಿಕೊಟ್ಟಿದ್ದಾರೆ. ಅಷ್ಟೇ ಅಲ್ಲದೇ, ಇದೊಂದು ಉತ್ತಮ ಬೆಳವಣಿಗೆಯಾಗಿದ್ದು, ಮನುಷ್ಯತ್ವಕ್ಕೆ ಯಾವುದೇ ಗಡಿ ಇಲ್ಲ’ ಎಂದಿದ್ದಾರೆ.

ಒಟ್ಟಿನಲ್ಲಿ ಮಕ್ಕಳನ್ನು ಭಯೋತ್ಪಾದಕರನ್ನಾಗಿ ಮಾಡುವ ಕಲೆಯನ್ನು ಕರಗತ ಮಾಡಿಕೊಂಡಿರುವ ಪಾಕ್, ಭಾರತೀಯ ರಕ್ಷಣಾ ಪಡೆಯ ಮಾನವೀಯತೆ ಅದರಲ್ಲೂ ಭಾರತೀಯರ ಮಾನವೀಯತೆ ಮುಂದೆ ನಿಜಕ್ಕೂ ಕೂಡ ಪಾಕ್ ತಲೆ ತಗ್ಗಿಸುವಂತೆ ಮಾಡಿದೆ!!

ಮೂಲ:https://m.dailyhunt.in/

– ಅಲೋಖಾ

Editor Postcard Kannada:
Related Post