X

ಕರ್ನಾಟಕ ಬಂದ್! ಸೋಮವಾರ ಕರ್ನಾಟಕ ಬಂದ್‍ಗೆ ಕರೆಕೊಟ್ಟ ಬಿಎಸ್‍ವೈ..! ಕುಮಾರ ಸ್ವಾಮಿಗೆ ಮೊದಲ ಬಾರಿಗೇ ಆಘಾತ..!

ಅದೆಷ್ಟೋ ಕಾಲಗಳ ನಂತರ ವಿಧಾನ ಸಭೆಯಲ್ಲಿ ಇಂದು ವಿರೋಧ ಪಕ್ಷದ ಅಬ್ಬರವೊಂದು ಗೋಚರಿಸಿದೆ. ಮಾಜಿ ಮುಖ್ಯಮಂತ್ರಿ ಹಾಗೂ ವಿಧಾನ ಸಭಾ ವಿರೋಧ ಪಕ್ಷದ ನಾಯಕ ಬಿಎಸ್ ಯಡಿಯೂರಪ್ಪನವರು ಇಂದು ವಿಧಾನ ಸಭೆಯಲ್ಲಿ ಘರ್ಜಿಸಿಯೇ ಬಿಟ್ಟಿದ್ದರು. ನಿರೀಕ್ಷೆಯಂತೆ ಇಂದು ಕಾಂಗ್ರೆಸ್ ಜೆಡಿಎಸ್‍ನ ಅಪವಿತ್ರ ಮೈತ್ರಿಯ ಬಗ್ಗೆ ಆಕ್ರೋಶಭರಿತವಾಗಿ ಮಾತನಾಡಿಬಿಟ್ಟರು. ಬಿಎಸ್‍ವೈ ಮಾತಿಗೆ ಇಡಿಯ ಸದಸನವೇ ಸ್ಥಬ್ಧವಾಗಿತ್ತು. 

ರಾಜ್ಯ ಬಂದ್ ಘೋಷಣೆ ಮಾಡಿದ ಯಡಿಯೂರಪ್ಪ..!

ಇಂದು ವಿಧಾನ ಸಭೆಯಲ್ಲಿ ವಿಶ್ವಾಸ ಮತಯಾಚನೆಯ ಹಾಗೂ ಸ್ಪೀಕರ್ ಆಯ್ಕೆಯ ಪ್ರಕ್ರಿಯೆ ನಡೆದಿತ್ತು. ಈ ವೇಳೆ ಸ್ಪೀಕರ್ ಆಯ್ಕೆಯ ನಂತರ ಸ್ಪೀಕರ್ ಅವರ ಬಗೆಗಿನ ಅಭಿನಂದನಾ ಭಾಷಣದ ಬಗ್ಗೆ ಮಾತನಾಡಿದ್ದರು. ಆಡಳಿತ ಹಾಗೂ ವಿರೋಧ ಪಕ್ಷದ ನಾಯಕರೂ ಅಭಿನಂದನಾ ಭಾಷಣವನ್ನು ಮಾಡಿದ್ದರು. ನಂತರ ವಿರೋಧ ಪಕ್ಷದ ನಾಯಕ ಯಡಿಯೂರಪ್ಪ ಅಬ್ಬರಿಸಿಯೇ ಬಿಟ್ಟಿದ್ದರು.

“ನಾನು ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ 14 ಗಂಟೆಯ ಒಳಗಾಗಿ ರಾಜ್ಯದ ಎಲ್ಲಾ ರೈತರ ಸಹಕಾರಿ ಹಾಗೂ ರಾಷ್ಟ್ರೀಯ ಬ್ಯಾಂಕ್‍ಗಳಲ್ಲಿ ಮಾಡಿರುವ ಸಾಲವನ್ನು ಮನ್ನಾ ಮಾಡುವುದಾಗಿ ಘೋಷಣೆ ನೀಡಿದ್ದೆ. ಆದರೆ ಇದೀಗ ನೀವು ಅಧಿಕಾರಕ್ಕೆ ಬಂದಿದ್ದೀರಿ. ನೀವು ಕೂಡಾ ನಿಮ್ಮ ಪ್ರಣಾಳಿಕೆಯಲ್ಲಿ 24 ಗಂಟೆಯ ಒಳಗಾಗಿ ರೈತರ ಸಾಲವನ್ನು ಮನ್ನಾ ಮಾಡುವುದಾಗಿ ಘೋಷಿಸಿದ್ರಿ. ಇಂದು ಸಂಜೆಯ ಒಳಗೆ ರಾಜ್ಯದ ರೈತರ ಸಂಪೂರ್ಣ ಸಾಲವನ್ನು ಮನ್ನಾ ಮಾಡಿ. ಇಲ್ಲವಾದರೆ ಸೋಮವಾರ ಕರ್ನಾಟಕ ರಾಜ್ಯ ಬಂದ್‍ಮನ್ನು ಘೋಷಿಸುತ್ತೇವೆ” ಎಂದು ಅಬ್ಬರಿಸಿದ್ದರು.

ಸಭಾತ್ಯಾಗ ಮಾಡಿದ ಬಿಜೆಪಿ..!
ವಿಧಾನ ಸಭೆಯಲ್ಲಿ ವಿರೋಧ ಪಕ್ಷದ ನಾಯಕ ಬಿಎಸ್ ಯಡಿಯೂರಪ್ಪ ಭಾಷಣ ಮಾಡಿದ ನಂತರ ಭಾರತೀಯ ಜನತಾ ಪಕ್ಷದ ಶಾಸಕರು ಸಭಾ ತ್ಯಾಗ ಮಾಡಿದ್ದಾರೆ. “ಇಂದು ಸಂಜೆಯೊಳಗೆ ರೈತರ ಸಂಪೂರ್ಣ ಸಾಲ ಮನ್ನಾ ಮಾಡಿ. ಇಲ್ಲವಾದಲ್ಲಿ ಸೋಮವಾರವೇ ಕರ್ನಾಟಕ ರಾಜ್ಯ ಬಂದ್‍ಗೆ ಕರೆಕೊಡುತ್ತಿದ್ದೇವೆ” ಎಂದು ಅಪವಿತ್ರ ಆಡಳಿತ ಮೈತ್ರಿ ಸರ್ಕಾರದ ವಿರುದ್ಧ ಮೊದಲ ಹೋರಾಟವನ್ನು ಘೋಷಣೆ ಮಾಡಿದ್ದಾರೆ.
 ಒಟ್ಟಾರೆ ವಿಧಾನ ಸಭೆ ಪ್ರವೇಶಿಸಿದ ಮೊದಲ ದಿನವೇ ಆಡಳಿತ ಪಕ್ಷದ ವಿರುದ್ಧ ಅಬ್ಬರಿಸಿ ಮುಂದಿನ ಹೋರಾಟಗಳ ಬಗ್ಗೆ ಸ್ಪಷ್ಟ ಚಿತ್ರಣವನ್ನು ಬಿಂಬಿಸಿ ಭಾಷಣ ಮಾಡಿದ ಮಾಜಿ ಮುಖ್ಯಮಂತ್ರಿ ಹಾಗೂ ವಿಧಾನ ಸಭಾ ವಿರೋಧ ಪಕ್ಷದ ನಾಯಕ ಬಿಎಸ್ ಯಡಿಯೂರಪ್ಪನವರು ಮುಂದೆ ಭಾರೀ ಹೋರಾಟವನ್ನೇ ನಡೆಸುತ್ತೇವೆ ಎಂಬ ಸಂದೇಶವನ್ನೇ ನೀಡಿದ್ದಾರೆ.
-ಸುನಿಲ್ ಪಣಪಿಲ
Editor Postcard Kannada:
Related Post