X

ಮುಗುಳ್ನಗುತ್ತಲೇ, ಮೌನವಾಗಿ ಪಾಕಿಗಳ ರಕ್ತ ಹರಿಸಬಲ್ಲರು ಮೋದಿ !! ಹೇಗೆ ಗೊತ್ತಾ?

ಭಾರತದಲ್ಲಿ  ಅನೇಕ ಸಮಸ್ಯೆಗಳು ಬೇರೂರಿವೆ. ಆದರೂ ಭಾರತದ ಪ್ರಧಾನಿ ವ್ಯಥಾ ಹಣ ಖರ್ಚು ಮಾಡಿ, ಅದೂ ಸರಕಾರದ, ಜನರ ಹಣವನ್ನು ವ್ಯಯಿಸಿ ವಿದೇಶೀ ಪ್ರವಾಸ ಮಾಡುತ್ತಾರಲ್ಲ?? ನಮ್ಮ ಪಕ್ಷ ಆಡಳಿತ ಮಾಡುತ್ತಿದ್ದ ಕಾಲದಲ್ಲಿ ಪ್ರಜಾಸೇವೆಯೇ ನಮ್ಮ ಅಜೆಂಡಾ ವಾಗಿತ್ತು. ದುರ್ದೈವ !! ಈಗಿನ ಪ್ರಧಾನಿ ಸಮಯವನ್ನೂ, ಹಣವನ್ನು ವ್ಯರ್ಥ ಮಾಡುತ್ತಿದ್ದಾರೆ!!! ಇದು ಭಾರತದ ಅನೇಕ ಬುದ್ಧಿಜೀವಿಗಳ ನಿತ್ಯದ ನುಡಿ. ಈ ಪ್ರಶ್ನೆಗಳಿಗೆ ಸಮರ್ಪವಾದ ಉತ್ತರ ಅಂತಿಮವಾಗಿ ನಿಮಗೆ ಸಿಗುತ್ತವೆ ಅನ್ನುವ ನಂಬಿಕೆ ನಮಗಿದೆ. ಓರ್ವ ಮೋದಿಯ ಅಭಿಮಾನಿಗಳಾಗಿ ಅಲ್ಲ, ಭವ್ಯ ಭಾರತದ ಪ್ರಧಾನಿಯ ನಡೆಯನ್ನು ನಿಮ್ಮ ಮುಂದೆ ವಿವರಿಸುತ್ತಿದ್ದೇವೆ ಅಷ್ಟೇ.

ನಮ್ಮ ನಾಡಿಗೆ ಏನೇ ಸಮಸ್ಯೆಗಳಾದರೂ ತಕ್ಷಣ ಅದಕ್ಕೆ ಪರಿಹಾರ ಸಿಗಬೇಕೆಂಬ ಭಾವನೆ ನಮ್ಮಲ್ಲಿದೆ. ಕೆಲವು ದಿನಗಳ ನಂತರ ಆ ಸಮಸ್ಯೆಗಳು ಪುನರಾವರ್ತನೆಯಾಗುತ್ತವೆ. ಅದಕ್ಕೆ ಪೂರ್ಣವಿರಾಮವನ್ನು ಇದುವರೆಗೆ ಯಾವ ಸರಕಾರವೂ ಕೊಟ್ಟಿಲ್ಲ. ಆದರೆ ಪ್ರಸ್ತುತ ಆಡಳಿತಾರೂಢವಾಗಿರುವ ಸರಕಾರ ಪ್ರತಿಯೊಂದು ನಿರ್ಧಾರವನ್ನು ದೂರದೃಷ್ಟಿಯನ್ನಿಟ್ಟುಕೊಂಡೇ ತೆಗೆದುಕೊಳ್ಳುತ್ತದೆ. ಇದು ಅನೇಕ ನಿದರ್ಶನಗಳಿಂದ ಸಾಬೀತಾಗಿವೆ. ಒಂದು ಮಾತು ನೀವು ಕೇಳಿರಬಹುದು, “ನೀವು ಒಂದು ವರ್ಷಕ್ಕೆ ಯೋಜನೆಗಳನ್ನು ಸಿದ್ದಪಡಿಸಿದ್ದರೆ ಭತ್ತ ಬೆಳೆಯಿರಿ, 10 ವರ್ಷಕ್ಕಾದರೆ ಮರಗಳನ್ನು ಬೆಳೆಸಿ, 100 ವರ್ಷಗಳ ಯೋಜನೆಗಳಾಗಿದ್ದರೆ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿ” ಇದೇ ತೆರನಾದ ಯೋಜನೆಗಳನ್ನು ಪ್ರಧಾನಿ ಮೋದಿಯವರು ಕೈಗೊಂಡಿರುವುದು ಅಷ್ಟೇ.

ಅನೇಕರಿಗೆ ಈ ಪ್ರಶ್ನೆ ಕಾಡಿದ್ದಿರಬಹುದು. ಪಾಪಿಸ್ತಾನ ಪದೇ ಪದೇ ಕಾಲು ಕೆರೆದು ಜಗಳ ಮಾಡುತ್ತಿದೆ. ಅನೇಕ ಸೈನಿಕರು ಹುತಾತ್ಮರಾಗುತ್ತಿದ್ದಾರೆ. ಆದರೆ ಭಾರತ ಯಾವುದೇ ನಿರ್ಣಯವನ್ನು ಅವರ ವಿರುದ್ಧ ಕೈಗೊಂಡಿಲ್ಲ. ಹೀಗೆ ಮಾತನಾಡುತ್ತಿರುವಾಗಲೇ ಮೋದಿ ಬಳಸಿದ ಬ್ರಹ್ಮಾಸ್ತ್ರ “ಸರ್ಜಿಕಲ್ ಸ್ಟ್ರೈಕ್ “!! ಮುಂದೆಂದೂ ಪಾಕಿಸ್ತಾನದ ಸೈನಿಕರಾಗಲೀ, ಭಯೋತ್ಪಾದಕರಾಗಲೀ ನೇರವಾಗಿ ಹೋರಾಡುವುದು ಬಿಡಿ, ಮಾತನಾಡುವುದುಕ್ಕೂ ಹಿಂಜರಿಯಿತು. ಅವಕ್ಕೆ ಆ ಧೈರ್ಯ ಮೊದಲೇ ಇಲ್ಲವೆನ್ನಿ. ಇದೇ ಸರ್ಜಿಕಲ್ ಸ್ಟ್ರೈಕ್ ಮಾಡೋವಾಗ ಈ ಮೊದಲೇ ನಮ್ಮ ಬಳಿ ಚರ್ಚಿಸಿ ನಿರ್ಣಯವನ್ನು ಕೈಗೊಳ್ಳಬಹುದಿತ್ತಲ್ಲಾ ಅಂದರು ಬುದ್ಧಿಜೀವಿಗಳು. ಸೈನಿಕರ ವಿಚಾರ ಬಂದಾಗ ಭಾರತೀಯರೆಲ್ಲಾ ಅತ್ಯಂತ ಭಾವುಕರಾಗುತ್ತಾರೆ ನಿಜ. ಆದರೆ ನಿರ್ಧಾರ ತೆಗೆದುಕೊಳ್ಳುವಾಗಲೂ ಅವರೊಂದಿಗೆ ವಿಚಾರವನ್ನು ಹಂಚಬೇಕೆಂದರೆ ಅದು ಎಷ್ಟು ಮೂಢತನವಾದೀತು!! ಕಾರ್ಗಿಲ್ ಯುದ್ಧದ ಸಂದರ್ಭದಲ್ಲಿ ಭಾರತೀಯ ಯೋಧರು ಪರಾಕ್ರಮವನ್ನು ಪ್ರದರ್ಶನ ಮಾಡುತ್ತಿರುವಾಗ, ಇತ್ತ ಕಡೆ ಭಾರತೀಯ ಸೇನೆಯ ರಹಸ್ಯಗಳನ್ನು ಪಾಪಿಸ್ತಾನಕ್ಕೆ ರವಾನಿಸುತ್ತಿದ್ದರು ಪಾಕಿಸ್ತಾನದ ದೇಶಪ್ರೇಮಿ ಬರ್ಖಾದತ್. ಇಂತಹ ಲದ್ಧಿಜೀವಿಗಳಿರುವಾಗ ಯೋಜನೆಗಳನ್ನು ಹಂಚಿಕೊಂಡರೆ ಅದು ಸಫಲವಾಗಲು ಸಾಧ್ಯವೇ ??

ನಂತರ ನೋಟು ನಿಷೇಧ ಯೋಜನೆ ಅಂತೂ ಯಾರೂ ಊಹಿಸಲಾಗದ ಕಾರ್ಯ. ಪಾಕಿಸ್ತಾನ ನಕಲಿ ನೋಡುಗಳನ್ನು ತಯಾರು ಮಾಡಿ ಭಾರತಕ್ಕೆ ರವಾನಿಸುತ್ತಿತ್ತು. ಭಾರತದಲ್ಲಿದ್ದ ಕಳ್ಳಹಣವನ್ನೂ ಒಂದೇ ಬಾರಿಗೆ ಹೊರತಂದ ಅಪೂರ್ವ ಯೋಜನೆಯಿದೆ. !!!

ಇಂತಹ ನಿರ್ಧಾರಗಳು ಮಾಧ್ಯಮಗಳಲ್ಲಾಗಲೀ, ಭಾಷಣಗಳಲ್ಲಾಗಲೀ ಹರಿಯಬಿಟ್ಟರೆ, ಭಾರತದ ಅಂತಃಸತ್ವ ಯಾವ ಕಡೆಗೆ ಹೋದೀತೆಂಬುದನ್ನು ಅವಲೋಕನ ಮಾಡಿ. ಮೋದಿಯವರ ಈ ನಡೆಗಳೇ ಭಾರತವನ್ನು ಎತ್ತರದ ಶಿಖರಕ್ಕೆ ಕೊಂಡೊಯ್ಯುತ್ತಿವೆ. ಅದರ ಫಲವನ್ನು ಈಗ ನಾವು ಗಮನಿಸಬಹುದು. ವಿದೇಶೀ ಪ್ರವಾಸದಿಂದ ಏನು ಲಾಭವೆಂದು ಪ್ರಶ್ನಿಸಿದ್ದರಲ್ಲಾ !! ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಪಾಕಿಸ್ತಾನದ ಸೈನಿಕರೊಂದಿಗೆ ರಶ್ಶಿಯಾ ಸೈನಿಕರು ಸೇನಾ ಕಾರ್ಯಾಚರಣೆ ಮಾಡುವ ಚಿಂತನೆಯಲ್ಲಿತ್ತು. ಆದರೆ ಭಾರತ ಅದನ್ನು ರದ್ದುಗೊಳಿಸುವಂತೆ ಮಾಡಿತು. ಅಷ್ಟೇ ಅಲ್ಲದೇ ಭಾರತದ ಕೋರಿಕೆಯ ಮೇಲೆ ಶಶ್ತ್ರಾಸ್ತ್ರವನ್ನು ಪಾಕಿಸ್ತಾನಕ್ಕೆ ರಫ್ತು ಮಾಡುವುದನ್ನು ರಶ್ಶಿಯಾ ನಿಲ್ಲಿಸಿದ್ದು ನಮ್ಮ ಮೊದಲ ಜಯ.

ಅಷ್ಟೊಂದು ಮಹತ್ವವನ್ನು ಆ ವಿಚಾರಕ್ಕೆ ಕೊಡುವ ಅಗತ್ಯವಿಲ್ಲವೆಂದು ನೀವು ತಿಳಿಯಬಹುದು. ಆದರೆ ಗೊತ್ತಿರಲಿ, ರಶ್ಶಿಯಾ ದೇಶ ಜಗತ್ತಿನ ಶಕ್ತಿಯಾಲಿ ಸೇನೆಯನ್ನು ಹೊಂದಿರುವುದರಲ್ಲಿ ಎರಡನೇ ಸ್ಥಾನವನ್ನು ಹೊಂದಿದೆ. ಅವರು ಒಂದು ವೇಳೆ ಪಾಪಿಗಳಿಗೆ ಸಹಾಯ ಹಸ್ತ ಚಾಚಿದ್ದೇ ಆದಲ್ಲಿ ಅದು ಪಾಕಿಸ್ತಾನಕ್ಕೆ ವರದಾನವಾಗುತ್ತಿತ್ತು. ಆದರೆ ಭಾರತ ಅದಕ್ಕೆ ಅವಕಾಶವನ್ನೇ ಕೊಡಲಿಲ್ಲ.

ನಿಮಗೆ ಇನ್ನೊಂದು ವಿಚಾರ ಗಮನದಲ್ಲಿರಲಿ. ಭಾರತದೊಂದಿಗೆ ಅಮೇರಿಕಾ, ರಶ್ಶಿಯಾ, ಫ್ರಾನ್ಸ್, ಜಪಾನ್, ವಿಯೆಟ್ನಾಮ್, ಇಸ್ರೇಲ್, ಅಫ್ಘಾನಿಸ್ತಾನ್, ಬಾಂಗ್ಲಾದೇಶ್, ಹಾಗೂ ಈಗ ಸೌದಿ ಅರೇಬಿಯಾ ಸ್ನೇಹ ಹಸ್ತವನ್ನು ಚಾಚಿದೆ. ಆ ಎಲ್ಲಾ ದೇಶಗಳು ಚೀನಾ ಹಾಗೂ ಪಾಕಿಸ್ತಾನಕ್ಕೆ ವಿರೋಧವನ್ನು ವ್ಯಕ್ತಪಡಿಸಿವೆ ಅನ್ನುವುದು ಸೋಜಿಗದ ಹಾಗೂ ನೆನಪಿಡಬೇಕಾದ ಅಂಶ. ವಿಶ್ವ ಮಟ್ಟದಲ್ಲಿ ಭಯೋತ್ಪಾನೆಯನ್ನು ನಿರ್ಮಾಣ ಮಾಡುವ ರಾಷ್ಟ್ರವನ್ನು ಬೇರು ಸಮೇತ ಕಿತ್ತುಹಾಕೋಣ ಎಂಬುದಾಗಿ ವಾದಿಸುತ್ತಿದೆ. ಇದೆಲ್ಲಾ ಆಗಿದ್ದು ಮೋದಿಯವರು ಭಾರತದಿಂದ ಮಾಡಿದ ಟ್ವೀಟ್ ನಿಂದಾಗಲೀ, ವಾಟ್ಸಾಪ್ ಸಂದೇಶಗಳಿಂದಾಗಲೀ ಅಲ್ಲ, ಬದಲಾಗಿ ಅವರ ಸ್ನೇಹ ಹಸ್ತ ಚಾಚಲು ಅವರ ಭೂಮಿಗಳಿಗೆ ತೆರಳಿದ್ದರಿಂದ.

ಪಾಕಿಸ್ತಾನದ ಮೂಲಕ ಸರಕುಗಳ ರಫ್ತುಗಳಿಗಾಗಿ ಇರಾನ್ ಹಾಗೂ ಅಫ್ಘಾನಿಸ್ತಾನದ ಮುಖಾಂತರ ಭಾರತ ಚಾಹಬಾರ್ ನಿಲ್ದಾಣಕ್ಕೆ ಒಪ್ಪಂದವನ್ನು ಮಾಡಿಕೊಂಡಿತು. ಚೀನಾ-ಪಾಕಿಸ್ತಾನ ನಿರ್ಮಿಸಿದ್ದ ಗ್ವಾಡರ್ ನಿಲ್ದಾಣ ಚಾಹಬಾರ್ ನಿಲ್ದಾಣದಿಂದ ಕೇವಲ 72 ಕಿಲೋಮೀಟರ್ ಅಂತರದಲ್ಲಿದ್ದು ಪಾಕಿಸ್ತಾನಕ್ಕೆ ಆರ್ಥಿಕವಾಗಿ ಚಾಹಬಾರ್ ನಿಲ್ದಾಣದಿಂದ ನಷ್ಟವಾಗುತ್ತದೆ. ಆದರೆ ವಾಜಪೇಯಿಯವರ ಸರಕಾರ ಇದ್ದಾಗ ಪ್ರಾರಂಭವಾದ ಈ ಯೋಜನೆಯನ್ನು ನಂತರ ಸರಕಾರ ಮುಂದೆ ಕೊಂಡೋಯ್ದಿರಲಿಲ್ಲ. ಈಗ ಅದಕ್ಕೆ ವೇಗ ಸಿಗುತ್ತಿದೆ.

ಪಾಕಿಸ್ತಾನವನ್ನು ಎಲ್ಲಾ ರೀತಿಯಿಂದ ಸೋಲಿಸಲು ಅಫ್ಘಾನಿಸ್ತಾನವು ಬಹಳ ಉತ್ಸುಕವಾಗಿವೆ. ಭಾರತ ಪಾಕಿಸ್ತಾನದ ವಿರುದ್ಧ ಯುದ್ಧ ಘೋಷಿಸಿದ್ದೇ ಆದಲ್ಲಿ
ಅಫ್ಘಾನಿಸ್ತಾನ ಸಂಪೂರ್ಣವಾಗಿ ಭಾರತದ ಪರವಾಗಿ ಬರಲಿದೆ ಎಂದಿದೆ.

ಒಂದು ವೇಳೆ ಚೀನಾ ಪಾಕಿಸ್ತಾನಕ್ಕೆ ಬೆಂಬಲವನ್ನು ಕೊಡುವುದೇ ಆದಲ್ಲಿ, ಇತ್ತ ಕಡೆ ಅದಕ್ಕೆ ಭಾರೀ ಹೊಡೆತ ಬೀಳಲಿದೆ. ಯಾಕೆಂದರೆ ಜಪಾನ್, ವೀಯೆಟ್ನಾಮ್ ಹಾಗೂ ಸೌದಿ ಭಾರತದ ಪರವಾಗಿ ಬೆಂಬಲಿಸಲಿವೆ. ಅಮೇರಿಕಾ ಅಂತೂ ಚೀನಾವನ್ನೂ ಬಗ್ಗುಬಡಿಯಲು ಯತ್ನಿಸುತ್ತಲೇ ಇವೆ. ಹಾಗಾಗಿ ಅಮೇರಿಕೆಯ ಬೆಂಬಲವೂ ಭಾರತಕ್ಕೆ !! ಇದೆಲ್ಲಾ ಸಾಧ್ಯವಾಗಿದ್ದು ಸ್ನೇಹವನ್ನು ವಿದೇಶಿಯರೊಂದಿಗೆ ಚಾಚಿದ್ದರಿಂದಲೇ !!!

ಒಂದು ಮಾತಂತೂ ಸತ್ಯ. ಭಾರತದ ಮಾಧ್ಯಮಗಳೂ ಈ ವಿಚಾರವನ್ನು ಪ್ರಸಾರ ಮಾಡಿರಕ್ಕಿಲ್ಲ. ಆದರೆ ಪಾಕಿಸ್ತಾನದ ರಾಜಕೀಯ ವಿಶ್ಲೇಷಕರೂ
ಹೇಳುತ್ತಿದ್ದಾರೆ. ಏನು ಗೊತ್ತಾ ?? ಯುದ್ಧವಿಲ್ಲದೇ ಭಾರತ ಪಾಕಿಸ್ತಾನವನ್ನು ನಾಶ ಮಾಡುತ್ತದೆ… ವಾಸ್ತವವಾಗಿಯೂ ಇದು ಸತ್ಯ. ಯುದ್ಧದ ಬೆಂಬಲಕ್ಕೆ ಮೋದಿಯವರಿಲ್ಲ, ಆದರೆ ಪಾಕಿಸ್ತಾನವನ್ನು ಯಾವುದೇ ಶಬ್ದವಿಲ್ಲದೇ ಅವಸಾನದತ್ತ ಕೊಂಡೊಯ್ಯುತ್ತಿದ್ದಾರೆ ಮೋದಿ. ಯಾವಾಗ ಪಾಕಿಸ್ತಾನ ಆರ್ಥಿಕವಾಗಿಯೂ ಹಿನ್ನಡೆಯನ್ನು ಅನುಭವಿಸುತ್ತದೋ ಆವಾಗ ಆ ರಾಷ್ಟ್ರಕ್ಕೆ ಯುದ್ಧ ಮಾಡುವ ಚಿಂತನೆಯೂ ಬರುವುದಕ್ಕೆ ಸಾಧ್ಯವಿಲ್ಲ. ಒಟ್ಟಾರೆಯಾಗಿ ನಿಶ್ಶಬ್ದಿಂದಲೇ ಪಾಪಿಸ್ತಾನದ ಬೆವರಿಳಿಸುತ್ತಿದ್ದಾರೆ ಮೋದಿ ಅನ್ನುವುದು ಸ್ಪಷ್ಟ!!

ಪ್ರತಿಯೊಂದಕ್ಕೂ ಯುದ್ಧ ಪರಿಹಾರವಲ್ಲ. ಯುದ್ಧದಿಂದ ಒಂದು ದೇಶದ ಆರ್ಥಿಕತೆಯೂ ಕುಸಿಯುತ್ತದೆ. ಆಗ ದೇಶದ ಹಿನ್ನಡೆಗೆ ಮೋದಿಯವರೇ ಕಾರಣ ಎಂದು ದೂಷಿಸಿಯಾರು ಭಾರತದ ಲದ್ಧಿಜೀವಿಗಳು !!

ವಿದೇಶಿ ಪ್ರವಾಸದಿಂದಲೇ ಭಾರತ, ಚೀನಾ ಹಾಗೂ ಪಾಕಿಸ್ತಾನದ ವಿರುದ್ಧ ಪರೋಕ್ಷ ಯುದ್ಧವನ್ನು ಮಾಡುವುದಷ್ಟೇ ಅಲ್ಲದೇ, ಭಾರತದ ಆರ್ಥಿಕತೆಗೆ, ರಕ್ಷಣಾ ವ್ಯವಸ್ಥೆ ಬಲವನ್ನು ಕೊಟ್ಟಿರುವುದು ಅಷ್ಟೇ ಸತ್ಯ ಹಾಗೂ ವಾಸ್ತವ.

ನೆನಪಿರಲಿ.. ಮೋದಿಯವರು ತಾತ್ಕಾಲಿಕ ಲಾಭಕ್ಕಾಗಿ ಪರಿಹಾರವನ್ನು, ನಿರ್ಧಾರವನ್ನು ತೆಗೆದುಕೊಳ್ಳುತ್ತಿಲ್ಲ, ಆದರೆ ದೂರದೃಷ್ಟಿಯನ್ನಿಟ್ಟುಕೊಂಡು
ಪ್ರತಿಯೊಂದು ನಿರ್ಧಾರವನ್ನು ತೆಗೆದುಕೊಳ್ಳುತ್ತಿದ್ದಾರೆ..

– ವಸಿಷ್ಠ

Editor Postcard Kannada:
Related Post