X

ಬ್ರೇಕಿಂಗ್! ಕೊನೆ ಹಂತದಲ್ಲಿ ಕೈ ಕೊಟ್ಟ ಡಿಕೆಶಿ..! ಬಹುಮತ ಸಾಧಿಸುವುದು ಅಸಾಧ್ಯ..?

ರಾಜ್ಯದ ಜನರು ತಿರಸ್ಕರಿಸಿದ ಪಕ್ಷವೊಂದು ಇದೀಗ ರಾಜ್ಯವನ್ನಾಳಲು ತಯಾರಿ ನಡೆಸಿದೆ, ಇನ್ನೊಂದೆಡೆ ಕಳೆದ ಐದು ವರ್ಷಗಳ ದುರಾಡಳಿತ ನಡೆಸಿದ ಸರಕಾರ ಮಕಾಡೆ ಮಲಗಿ, ಬೇರೊಂದು ಪಕ್ಷದ ಆಧಾರದಿಂದ ಎದ್ದು ನಿಲ್ಲಲು ಪ್ರಯತ್ನಿಸುತ್ತಿದೆ. ಇತ್ತ ರಾಜ್ಯದ ಜನರು ಆರಿಸಿಕೊಟ್ಟ ಪಕ್ಷ ಅತೀ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ ಆದರೂ ಸರಕಾರ ರಚಿಸುವಷ್ಟು ಬಹುಮತ ಸಾಧಿಸಲು ಸಾಧ್ಯವಾಗದ ಹಿನ್ನಲೆಯಲ್ಲಿ ಅಧಿಕಾರದಿಂದ ದೂರು ಉಳಿಯುವಂತಾಗಿದೆ. ಕೇವಲ ಬಿಜೆಪಿಯನ್ನು ಅಧಿಕಾರದಿಂದ ದೂರ ಇಡುವ ಸಲುವಾಗಿ ಮೈತ್ರಿ ಮಾಡಿಕೊಂಡ ಕಾಂಗ್ರೆಸ್ ಮತ್ತು ಜೆಡಿಎಸ್‌ ಒಟ್ಟಾಗಿ ಸರಕಾರ ರಚಿಸಲು ಮುಂದಾಗಿದೆಯಾದರೂ ಬಹುಮತ ಸಾಬೀತು ಇನ್ನೂ ಪಡಿಸಲಿಲ್ಲ.!

ಈಗಾಗಲೇ ಪ್ರಮಾಣವಚನ ಸ್ವೀಕರಿಸಿದ ಕುಮಾರಸ್ವಾಮಿ ಅವರು ಇಂದು ಬಹುಮತ ಸಾಬೀತು ಪಡಿಸಿ ಮುಂದಿನ ಮುಖ್ಯಮಂತ್ರಿಯಾಗಿ ಆಡಳಿತ ನಡೆಸಲಿದ್ದಾರೆ. ಕಾಂಗ್ರೆಸ್ ಮತ್ತು ಜೆಡಿಎಸ್‌ ಶಾಸಕರನ್ನು ಈಗಾಗಲೇ ರೆಸಾರ್ಟ್ ಗಳಲ್ಲಿ ಕೂಡಿ ಹಾಕಿರುವ ಪಕ್ಷದ ಮುಖಂಡರು ಇಂದು ವಿಧಾನಸೌಧಕ್ಕೆ ಹಾಜರುಪಡಿಸಲಿದ್ದಾರೆ. ಆದರೆ ಮೈತ್ರಿ ಮಾಡಿಕೊಂಡ ದಿನದಿಂದಲೂ ಅಸಮಧಾನದಿಂದ ಇದ್ದ ಕಾಂಗ್ರೆಸ್ ನ ಪ್ರಭಾವಿ ನಾಯಕ ಡಿಕೆ ಶಿವಕುಮಾರ್ ಇದೀಗ ಕೊನೆ ಗಳಿಗೆಯಲ್ಲಿ ಮತ್ತೆ ತಮ್ಮ ಆಕ್ರೋಶ ಹೊರಹಾಕಿದ್ದಾರೆ..!

ಪಕ್ಷದ ಸಭೆಗೂ ಹಾಜರಾಗದ ಡಿಕೆಶಿ..!

ಮೈತ್ರಿ ಮಾಡಿಕೊಂಡ ಕಾಂಗ್ರೆಸ್ ಮತ್ತು ಜೆಡಿಎಸ್‌ ತಮ್ಮ ಶಾಸಕರನ್ನು ರಕ್ಷಿಸುವ ಸಲುವಾಗಿ ರೆಸಾರ್ಟ್ ರಾಜಕೀಯ ನಡೆಸಿತ್ತು. ತಮ್ಮ ಬಳಿ ಇರುವ ಎಲ್ಲಾ ಶಾಸಕರನ್ನು ರೆಸಾರ್ಟ್ ಗಳಲ್ಲಿ ಕೂಡಿಹಾಕಿದ್ದ ಪಕ್ಷದ ಮುಖಂಡರು ಎಲ್ಲರ ಕಾವಲಿಗಾಗಿ ಡಿಕೆಶಿಯನ್ನು ನೇಮಿಸಿದ್ದರು. ಪಕ್ಷದ ಎಲ್ಲಾ ಕೆಲಸವನ್ನು ಅಚ್ಚುಕಟ್ಟಾಗಿ ನಿಭಾಯಿಸಿದ ಡಿಕೆಶಿಗೆ ಇದೀಗ ಪಕ್ಷದಲ್ಲಿ ಯಾವುದೇ ಸ್ಥಾನಮಾನ ನೀಡದೆ ಅವಮಾನಿಸಲಾಗಿದೆ. ಆದ್ದರಿಂದಲೇ ಪ್ರಮಾಣವಚನ ದಿನದಂದೂ ಕೂಡಾ ಅಸಮಧಾನ ವ್ಯಕ್ತಪಡಿಸಿದ ಡಿಕೆಶಿ, ಹೈಕಮಾಂಡ್‌ಗೂ ಒತ್ತಡ ಹೇರಿದ್ದರು. ಇತ್ತ ರಾಜ್ಯದಲ್ಲಿ ತನಗೆ ಯಾವುದೇ ಸ್ಥಾನ ನೀಡದೇ ಇರುವುದರಿಂದ ನೇರವಾಗಿ ಹೈಕಮಾಂಡ್ ಮೇಲೆ ಕಣ್ಣಿಟ್ಟ ಡಿಕೆಶಿ ಕೆಪಿಸಿಸಿ ಪಟ್ಟಕ್ಕೆ ಬೇಡಿಕೆ ಇಟ್ಟಿದ್ದರು. ಆದ್ದರಿಂದಲೇ ಇಂದು ನಡೆದ ಕಾಂಗ್ರೆಸ್ ನ ಸಭೆಯಲ್ಲೂ ಕಾಣಿಸದ ಡಿಕೆಶಿ ಮತ್ತೆ ಅಸಮಧಾನ ಹೊರ ಹಾಕಿದ್ದಾರೆ..!

ಕೊನೆ ಹಂತದಲ್ಲಿ ಕೈಕೊಡುತ್ತಾರಾ ಡಿಕೆಶಿ..?!

ಹೌದು ಇಂತಹ ಅನುಮಾನ ಮೂಡುವುದು ಸಹಜ, ಯಾಕೆಂದರೆ ಕುಮಾರಸ್ವಾಮಿ ಅವರು ಪ್ರಮಾಣವಚನ ಸ್ವೀಕರಿಸಿದ ದಿನದಂದೇ ಅಸಮಧಾನ ವ್ಯಕ್ತಪಡಿಸಿದ ಡಿಕೆಶಿ , ಪಕ್ಷಕ್ಕಾಗಿ ರಾಜ್ಯದಲ್ಲಿ ಸುತ್ತಾಡಿದವರಿಗೂ – ಒಂದು ಸ್ಥಾನ ಗೆದ್ದವರಿಗೂ ಒಂದೇ ಮರ್ಯಾದೆಯಾ ಎಂದು ತಮ್ಮ ಪಕ್ಷದ ಮುಖಂಡರ ವಿರುದ್ಧವೇ ಆಕ್ರೋಶ ವ್ಯಕ್ತಪಡಿಸಿದ ಡಿಕೆಶಿ ಇದೀಗ ಇಂದು ಪಕ್ಷದ ಸಭೆಗೂ ಹಾಜರಾಗದೆ ಮತ್ತೆ ಮುನಿಸಿಕೊಂಡಿದ್ದಾರೆ. ಆದ್ದರಿಂದ ಬಹುಮತ ಸಾಬೀತು ಪಡಿಸಲು ಹೊರಟ ಕುಮಾರಸ್ವಾಮಿ ಅವರಿಗೆ ಡಿಕೆಶಿ ದೊಡ್ಡ ಹೊಡೆತ ನೀಡುತ್ತಾರೆ ಎಂಬ ಅನುಮಾನ ಮತ್ತೆ ಹೆಚ್ಚಾಗಿದೆ.!

ಒಟ್ಟಾರೆಯಾಗಿ ಮೈತ್ರಿ ಮಾಡಿಕೊಂಡ ದಿನದಿಂದಲೂ ಎರಡೂ ಪಕ್ಷಗಳ ಮುಖಂಡರ ಮಧ್ಯೆ ಶೀತಲ ಸಮರ ನಡೆಯುತ್ತಲೇ ಇದ್ದು, ಇಂದು ಈ ಎಲ್ಲಾ ಅನುಮಾನಗಳಿಗೂ ತೆರೆಬೀಳಲಿದೆ..!

–ಅರ್ಜುನ್

Editor Postcard Kannada:
Related Post