X

ಭಾರತದ ಪ್ರಧಾನಿ ಮೋದಿಯನ್ನು ಮುಟ್ಟೋಕು ಮುಂಚೆ ಈ ಕೋಟೆಯನ್ನು ಭೇದಿಸಲು ಸಾಧ್ಯವೇ..! ಶತ್ರುಗಳನ್ನು ಮಟ್ಟ ಹಾಕಲು ತಯಾರಾಗಿದೆ ಹೊಸ ಟೀಂ..!

ಒಂದು ರಾಜ್ಯದ ಮುಖ್ಯಮಂತ್ರಿಯಾಗಿದ್ದಾಗಲೇ ಭಯೋತ್ಪಾದಕರ ವಿರುದ್ಧ ಘರ್ಜಿಸುತ್ತಿದ್ದ ನರೇಂದ್ರ ಮೋದಿಯವರು ಭಾರತದ ಪ್ರಧಾನಮಂತ್ರಿ ಆಗುತ್ತಲೇ ನೇರವಾಗಿ ಉಗ್ರರ ವಿರುದ್ಧ ಬಾಣ ಬಿಡಲು ಪ್ರಾರಂಭಿಸಿದ್ದರು. ಭಾರತದ ಮೇಲೆ ಪದೇ ಪದೇ ಕತ್ತಿ ಮಸಿಯುತ್ತಿದ್ದ ಪಾಕಿಸ್ತಾನ ಉಗ್ರರನ್ನು ಬಳಸಿಕೊಂಡು ಭಾರತದಲ್ಲಿ ದುಶ್ಕೃತ್ಯ ಎಸಗಲು ಪ್ರಯತ್ನಿಸುತ್ತಲೇ ಇದೆ. ಯುಪಿಎ ಸರಕಾರದ ಅವಧಿಯಲ್ಲಿ ಸರಾಗವಾಗಿ ದೇಶದ ಒಳ ನುಸುಳುತ್ತಿದ್ದ ಉಗ್ರರು ಅನೇಕ ಬಾರಿ ದೇಶದೊಳಗೆ ಬಂದು ಒಂದೊಂದೇ ಅವಘಡಗಳನ್ನು ನಡೆಸಿದ್ದರು. ಆದರೆ ಯಾವಾಗ ನರೇಂದ್ರ ಮೋದಿಯವರು ಭಾರತದ ಪ್ರಧಾನಮಂತ್ರಿ ಆದರೋ ಅಂದಿನಿಂದ ಒಬ್ಬ ಉಗ್ರನೂ ಕೂಡ ಜಮ್ಮು ಕಾಶ್ಮೀರದಿಂದ ಈಚೆ ಬರಲು ಸಾಧ್ಯವಾಗಿಲ್ಲ. ಯಾಕೆಂದರೆ ಉಗ್ರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಸೈನಿಕರಿಗೆ ಸಂಪೂರ್ಣ ಅನುಮತಿ ನೀಡಿದ ಮೋದಿ ಸರಕಾರ ದೇಶದ ರಕ್ಷಣೆಗೆ ಬೇಕಾಗಿ ಯಾವುದೇ ನಿರ್ಧಾರಕ್ಕೂ ಸಿದ್ಧ ಎಂದು ಜಗತ್ತಿಗೆ ಸಾರಿತ್ತು. ಆದ್ದರಿಂದಲೇ ಉಗ್ರರ ಹಿಟ್ ಲಿಸ್ಟ್‌ನಲ್ಲಿ ನರೇಂದ್ರ ಮೋದಿಯವರ‌ ಹೆಸರು ಮೊದಲನೇ ಸಾಲಿನಲ್ಲಿ ಬಂದು ಬಿಟ್ಟಿತು. ನರೇಂದ್ರ ಮೋದಿಯವರಿಗೆ ಪದೇ ಪದೇ ಉಗ್ರರ ಬೆದರಿಕೆಗಳು ಬರುತ್ತಲೇ ಇದೆ. ಆದರೆ ಅದ್ಯಾವುದನ್ನೂ ಕ್ಯಾರೇ ಅನ್ನದ ನಮ್ಮ ಪ್ರಧಾನಿ , ದೇಶದ ಸೈನಿಕರ ಮತ್ತು ಬೆಂಗಾವಲು ಪಡೆಯ ಮೇಲೆ ಇಟ್ಟಿರುವ ನಂಬಿಕೆಯಿಂದ ಯಾವುದೇ ಪ್ರದೇಶಕ್ಕೂ ಯಾವುದೇ ಅಂಜಿಕೆಯಿಲ್ಲದೆ ಹೋಗುತ್ತಾರೆ.!

ಎಲ್ಲದಕ್ಕೂ ಮಿಗಿಲಾಗಿ ಯಾವ ದೇಶ ಪ್ರಧಾನಿ ಮೋದಿಯವರ ವಿರುದ್ಧ ಕೆಂಡಕಾರುತ್ತಿತ್ತೋ ಅದೇ ದೇಶಕ್ಕೆ ಯಾರ ಭಯವೂ ಇಲ್ಲದೆ ಹೋಗಿ ಬಂದಿದ್ದಾರೆ ನಮ್ಮ ಪ್ರಧಾನಿ ನರೇಂದ್ರ ಮೋದಿ. ದೇಶದಲ್ಲಿ ಮೋದಿಯನ್ನು ಹತ್ಯೆ ಮಾಡುವುದಾಗಿ ಪಾಕ್ ಉಗ್ರರು ಬೆದರಿಕೆ ಒಡ್ಡಿದರೆ , ನಮ್ಮ ಪ್ರಧಾನಿ ಮಾತ್ರ ನೇರವಾಗಿ ಪಾಕಿಸ್ತಾನಕ್ಕೆ ಎಂಟ್ರಿ ಕೊಟ್ಟು ಇಡೀ ಜಗತ್ತೇ ನಿಬ್ಬೆರಗಾಗುವಂತೆ ಮಾಡಿದ್ದರು. ಆದ್ದರಿಂದಲೇ ಮತ್ತಷ್ಟು ವಿಚಲಿತರಾದ ಉಗ್ರರು ಇದೀಗ ಮತ್ತೊಮ್ಮೆ ನರೇಂದ್ರ ಮೋದಿಯವರನ್ನು ಹತ್ಯೆ ಮಾಡುವುದಾಗಿ ಹೇಳಿಕೊಂಡಿದ್ದಾರೆ. ಆದರೆ ನರೇಂದ್ರ ಮೋದಿಯನ್ನು ಹತ್ಯೆ ಮಾಡುವುದು ಬಿಡಿ , ಅವರ ಒಂದು ಕೂದಲು ಮುಟ್ಟುವುದಕ್ಕೂ ಮೊದಲು ವಿರೋಧಿಗಳು ಈ ಮೋದಿ ಸೈನ್ಯವನ್ನು ಮುಟ್ಟಲು ಸಾಧ್ಯವೇ?  ಅಷ್ಟಕ್ಕೂ ಮೋದಿ ವಿರುದ್ಧ ಕೇವಲ ಬೆದರಿಕೆ ಹಾಕುತ್ತಾ ತಮ್ಮ ತೀಟೆ ತೀರಿಸಿಕೊಳ್ಳುತ್ತಿರುವ ಭಯೋತ್ಪಾದಕರು ಮೋದಿ ಜೊತೆಗಿರುವ ಕೋಟೆಯನ್ನು ದಾಟಲು ಸಾಧ್ಯವೇ.? ಹಾಗಾದರೆ ಬನ್ನಿ, ಮೋದಿ ಯಾವುದೇ ಅಂಜಿಕೆಯಿಲ್ಲದೆ ಯಾವ ದೇಶಕ್ಕೂ ಹೋಗಿ ಬರುವಂತೆ ೨೪ ಗಂಟೆ ಜೊತೆಗಿರುವ ಈ ಹೊಸ ಸೈನ್ಯವನ್ನು ನೋಡೇ ಬಿಡೋಣ.!

ಹದ್ದಿನ ಕಣ್ಣಿಟ್ಟು ಕಾಯುತ್ತಿರುತ್ತೆ ಈ ಸೈನ್ಯ..!

ನರೇಂದ್ರ ಮೋದಿ ಯಾವುದೇ ಸಭೆ ಸಮಾವೇಶಗಳಿಗೆ ಹೋದರೂ , ಅವರು ಹೋಗುವುದಕ್ಕೆ ೧೫ ದಿನಗಳ ಮೊದಲೇ ಆ ಪ್ರದೇಶದ ಸಂಪೂರ್ಣ ಚಿತ್ರಣವನ್ನು ಮೋದಿ ಬೆಂಗಾವಲು ಪಡೆಯ ಅಧಿಕಾರಿಗಳು ಪಡೆದಿರುತ್ತಾರೆ. ಯಾವ ಪ್ರದೇಶದಲ್ಲಿ ಏನೇನಿದೆ ಎಂಬುದರ ಬಗ್ಗೆ ಇಂಚು ಇಂಚು ಮಾಹಿತಿ ಕಲೆಹಾಕಿಕೊಂಡು ಯಾವುದೇ ರೀತಿಯ ಅಡೆತಡೆ ತೊಂದರೆಗಳು ಇಲ್ಲದೇ ಇದ್ದಾಗ ಮಾತ್ರ ಮೋದಿಯವರನ್ನು ಆ ಕಾರ್ಯಕ್ರಮದಲ್ಲಿ ಭಾಗವಹಿಸಲು ಅವಕಾಶ ಮಾಡಿಕೊಡುತ್ತಾರೆ. ಯಾಕೆಂದರೆ ಉಗ್ರರು ದೇಶದ ಹೊರಗಿನಿಂದ ಬೆದರಿಕೆ ಹಾಕಿದರೆ , ಇತ್ತ ಮಾವೋವಾದಿಗಳು ದೇಶದ ಒಳಗಿಂದಲೇ ಮೋದಿ ವಿರುದ್ಧ ಕತ್ತಿ ಮಸೆಯುತ್ತಿದ್ದಾರೆ. ಆದ್ದರಿಂದ ನರೇಂದ್ರ ಮೋದಿಗೆ ವಿಶೇಷ ಭದ್ರತೆ ಒದಗಿಸಲಾಗಿದೆ. ನರೇಂದ್ರ ಮೋದಿಯವರು ಭಾಗವಹಿಸುವ ಕಾರ್ಯಕ್ರಮದ ವೇದಿಕೆಯನ್ನು ಒಂಚೂರು ಬಿಡದೆ ಪರಿಶೀಲಿಸುವ ಬೆಂಗಾವಲು ಪಡೆಯ ಅಧಿಕಾರಿಗಳು, ಮೋದಿ ವೇದಿಕೆಗೆ ಬರುವುದಕ್ಕೂ ಮೊದಲೇ ಆ ಜಾಗದಲ್ಲಿ ಹಾಜರಿರುತ್ತಾರೆ. ನರೇಂದ್ರ ಮೋದಿಯವರು ಸಂಚರಿಸುವ ಕಾರಿನ ಹಿಂದೆ ಮತ್ತು ಮುಂದೆ ಒಂದೇ ರೀತಿಯ ಹಲವಾರು ಬೆಂಗಾವಲು ಪಡೆಯ ಕಾರುಗಳು ಒಟ್ಟಿಗೆ ಸಂಚರಿಸುವುದರಿಂದ ಯಾರಿಗೂ ಪ್ರಧಾನಿ ಮೋದಿ ಯಾವ ಕಾರಿನಲ್ಲಿ ಇರುತ್ತಾರೆ ಎಂಬುದು ಗೊತ್ತಾಗುವುದಿಲ್ಲ. ಆದ್ದರಿಂದ ಬೆಂಗಾವಲು ಪಡೆಯ‌ ಕಣ್ತಪ್ಪಿಸಿ ಯಾವುದೇ ದುಶ್ಕೃತ್ಯ ನಡೆಸಲು ವಿರೋಧಿಗಳು ಹೊಂಚು ಹಾಕಿದರೂ ಕೂಡ ವಿಫಲವಾಗುವುದು ಖಂಡಿತ.!

ಮೋದಿ ಜೊತೆ ಭದ್ರತಾ ಪಡೆಯ ಅಧಿಕಾರಿಗಳು ೨೪ ಗಂಟೆಯೂ ಜೊತೆಗಿರುವುದರಿಂದ ಯಾವುದೇ ಉಗ್ರ ಚಟುವಟಿಕೆಗಳು ನಡೆಯಲು ಸಾಧ್ಯವಿಲ್ಲ. ಯಾಕೆಂದರೆ ಈ ಅಧಿಕಾರಿಗಳು ಎಲ್ಲಾ ರೀತಿಯಲ್ಲೂ ಪರಿಣಿತಿ ಹೊಂದಿದವರಾಗಿದ್ದು, ಮೋದಿ ಸುತ್ತಮುತ್ತ ನಡೆಯುವ ಪ್ರತಿಯೊಂದು ಸನ್ನಿವೇಶವನ್ನು ಗಮನಿಸುತ್ತಾ ಇರುತ್ತಾರೆ. ಈ ಅಧಿಕಾರಿಗಳು ಧರಿಸುವ ಕನ್ನಡಕಗಳನ್ನು ಕೂಡ ವಿಶೇಷ ರೀತಿಯಲ್ಲಿ ತಯಾರಿಸಿರುವುದರಿಂದ ತಾವಿರುವ ಸ್ಥಳದಿಂದ ಅದೆಷ್ಟೋ ದೂರ ನಡೆಯುವ ಎಲ್ಲಾ ವಿಚಾರಗಳನ್ನು ಗಮನಿಸುತ್ತಾ ಇರುತ್ತಾರೆ. ಆದ್ದರಿಂದಲೇ ಮೋದಿಯನ್ನು ಮುಟ್ಟುವುದಕ್ಕೂ ಮೊದಲು ಈ ಒಂದು ಸೈನ್ಯವನ್ನು ದಾಟಲು ಸಾಧ್ಯವೇ ಎಂದಿದ್ದು.!

ಭದ್ರತಾ ಪಡೆಯ ಕೈಯಲ್ಲೇ ಇರುತ್ತೆ ೬ ಇಂಚಿನ ಕವಚ..!

ಹೌದು , ಈ ವಿಚಾರ ಕೇಳುತ್ತಲೇ ಒಮ್ಮೆ ಕಿವಿ ನೆಟ್ಟಗಾಗುವುದು ಖಂಡಿತ. ಯಾಕೆಂದರೆ ಯಾರೂ ಊಹಿಸಿದ ರೀತಿಯಲ್ಲಿ ತಯಾರಾಗಿದೆ ಈ ಕವಚ. ಪ್ರಧಾನಿ ನರೇಂದ್ರ ಮೋದಿ ಎಲ್ಲಿಯೇ ಸಂಚರಿಸಿದರೂ ಅವರ ಹಿಂದೆ ಮತ್ತು ಮುಂದೆ ಇಬ್ಬರು ಕೈಯಲ್ಲಿ ಒಂದು ಸೂಟ್‌ಕೇಸ್ ಇಟ್ಟುಕೊಂಡು ಜೊತೆಯಲ್ಲೇ ಇರುತ್ತಾರೆ. ನೋಡುಗರಿಗೆ ಇದು ಕೇವಲ ಸೂಟ್‌ಕೇಸ್ , ಆದರೆ ಇದರ ಅಸಲಿಯತ್ತೇ ಬೇರೆ. ಭದ್ರತಾ ಪಡೆಯ ಅಧಿಕಾರಿಗಳ ಕೈಯಲ್ಲಿರುವ ಈ ಸೂಟ್‌ಕೇಸ್ ನರೇಂದ್ರ ಮೋದಿಯವರನ್ನು ಸಂಪೂರ್ಣ ಕಾಪಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ.‌ ಯಾಕೆಂದರೆ ಯಾವುದೇ ಕ್ಷಣದಲ್ಲಿ ಯಾವುದೇ ರೀತಿಯ ದಾಳಿ ನಡೆದರೂ ಕೂಡ ತತ್‌ಕ್ಷಣ ಅಧಿಕಾರಿಗಳ ಕೈಯಲ್ಲಿರುವ ಈ ಸೂಟ್‌ಕೇಸ್ನ್ನು ಬಿಚ್ಚಿದರೆ ಸಾಕು ೬ ಇಂಚುಗಳಷ್ಟು ತೆರೆಯುತ್ತದೆ. ಇದು ಒಬ್ಬ ಮನುಷ್ಯನನ್ನು ಸಂಪೂರ್ಣ ಮುಚ್ಚುವಷ್ಟು ಸಾಮಾರ್ಥ್ಯ ಹೊಂದಿರುವುದರಿಂದ ಯಾವುದೇ ದಾಳಿಗೂ ಹೆದರಬೇಕಾಗಿಲ್ಲ. ಈ ಸೂಟ್‌ಕೇಸ್‌ನ ಮತ್ತೊಂದು ವಿಶೇಷತೆ ಎಂದರೆ, ಯಾವ ಗುಂಡಿನ ದಾಳಿಗೂ ಈ ಸೂಟ್‌ಕೇಸ್ ಅಂಜುವುದಿಲ್ಲ. ಅದ್ಯಾವುದೇ ದಾಳಿಯನ್ನೂ ಮಟ್ಟ ಹಾಕಲು ಈ ಒಂದು ಸೂಟ್‌ಕೇಸ್ ತಯಾರಿಸಲಾಗಿದ್ದು, ನಮ್ಮ ಪ್ರಧಾನಿ ನರೇಂದ್ರ ಮೋದಿಯವರನ್ನು ಯಾವುದೇ ದಾಳಿಯಿಂದ ರಕ್ಷಿಸಲು ಸಂಪೂರ್ಣ ಸಹಕಾರಿಯಾಗಿರುತ್ತದೆ.!

 

ಆದ್ದರಿಂದ ನೋಡುವಾಗ ಕೇವಲ‌ ಅಧಿಕಾರಿಗಳ ಸೂಟ್‌ಕೇಸ್ ಎಂದು ನಾವು ಊಹಿಸಿದರೆ ಅದು ತಪ್ಪು. ಯಾಕೆಂದರೆ ಇದು ನರೇಂದ್ರ ಮೋದಿಯವರ ರಕ್ಷಣೆಗೆ ಇರುವ ಮೊದಲ ರಕ್ಷಾ ಕವಚ ಎಂದರೆ ತಪ್ಪಾಗದು..!

ಯಾವುದೇ ಶಸ್ತ್ರ ಸಜ್ಜಿತ ಉಗ್ರರಿಗೂ ಅಂಜುವುದಿಲ್ಲ ಈ ಕಮಾಂಡೋಗಳು..!

ಉಗ್ರರು ಪಾಕಿಸ್ತಾನದಲ್ಲಿ ಕೂತು ಭಾರತದ ಪ್ರಧಾನಿ ನರೇಂದ್ರ ಮೋದಿಯವರ ವಿರುದ್ಧ ಕಿಡಿಕಾರುತ್ತಿದ್ದರೆ, ಇತ್ತ ನಮ್ಮ ಪ್ರಧಾನಿಯ ರಕ್ಷಣೆಗೆ ಭದ್ರತಾ ಪಡೆಯ ಅಧಿಕಾರಿಗಳು ತಯಾರಾಗಿದ್ದಾರೆ. ಯಾವುದೇ ರೀತಿಯ ಶಸ್ತ್ರಸಜ್ಜಿತ ಉಗ್ರರು ದಾಳಿ ನಡೆಸಿದರೂ ಕ್ಷಣ ಮಾತ್ರದಲ್ಲಿ ಅವರನ್ನು ಮಟ್ಟಹಾಕುವ ಸಾಮಾರ್ಥ್ಯ ನಮ್ಮ‌ ಈ ಕಮಾಂಡೋಗಳಿಗಿದೆ. ಯಾಕೆಂದರೆ ಎಸ್‌ಪಿಜಿ ಕಮಾಂಡೋಗಳು ಎಂದರೆ ಸಾಕು ಇಡೀ ಜಗತ್ತೇ ಒಮ್ಮೆ‌ ಒಂದು ಹೆಜ್ಜೆ ಹಿಂದೆ ಇಡುತ್ತೆ. ಯಾಕೆಂದರೆ ಅಷ್ಷು ಡೇಂಜರಸ್ ಈ ಕಮಾಂಡೋಗಳು. ಆದ್ದರಿಂದಲೇ ಎಸ್‌ಪಿಜಿ ಕಮಾಂಡೋಗಳನ್ನು ನರೇಂದ್ರ ಮೋದಿಯವರ ರಕ್ಷಣೆಗೆ ನೇಮಿಸಿದ್ದು, ಮೋದಿ ಸುತ್ತಮುತ್ತ ಒಂದು ಇಲಿ ಕೂಡ ಸುಳಿಯದಂತೆ ನೋಡಿಕೊಳ್ಳುತ್ತಾರೆ‌‌.

ಭಾರತದ ಸೈನ್ಯದ ವಾಯುನೆಲೆಗೆ ನುಗ್ಗಿ ನಮ್ಮ ಸೈನಿಕರನ್ನೇ ಬಲಿ ಪಡೆದುಕೊಂಡಿದ್ದ ಪಾಕಿಸ್ತಾನ, ಉಗ್ರರನ್ನು ಬಳಸಿಕೊಂಡು ತನ್ನ ತೀಟೆ ತೀರಿಸಿಕೊಂಡಿತ್ತು. ಆದರೆ ಭಾರತ ಸುಮ್ಮನಾಗಲಿಲ್ಲ, ತನ್ನ ಸೈನಿಕರ ಪ್ರಾಣಕ್ಕೆ ತಕ್ಕ ಬೆಲೆ ಕಟ್ಟಿದ ನಮ್ಮ ಸೈನಿಕರು ಪಾಕಿಸ್ತಾನದ ಮೇಲೆ ಸರ್ಜಿಕಲ್ ಸ್ಟ್ರೈಕ್ ನಡೆಸಿ ಪಾಕಿಸ್ತಾನದ ಜೊತೆಗೆ ಇಡೀ ಜಗತ್ತಿಗೆ ಭಾರತದ ಶಕ್ತಿ ಏನೆಂಬುದನ್ನು ತೋರಿಸಿಕೊಟ್ಟಿತ್ತು. ಅಂದಿನಿಂದ ಪಾಕಿಸ್ತಾನದ ಉಪಟಳ ಕಡಿಮೆಯಾಗಿದೆ ಎಂದರೆ ತಪ್ಪಾಗದು. ಗಡಿ ಪ್ರದೇಶದಲ್ಲಿ ಪಾಕಿಸ್ತಾನ ಪದೇ ಪದೇ ಕದನ ವಿರಾಮ ಉಲ್ಲಂಘನೆ ಮಾಡುತ್ತಲೇ ಇದ್ದರು, ನಮ್ಮ ಸೈನಿಕರ ತಕ್ಕ ತಿರುಗೇಟಿಗೆ ಪಾಕಿಸ್ತಾನಕ್ಕೆ ಭಾರೀ ಮುಖಭಂಗ ಉಂಟಾಗಿದೆ. ಇತ್ತ ರಕ್ಷಣಾ ಸಚಿವೆ ಕೂಡ ನೇರವಾಗಿ ಪಾಕಿಸ್ತಾನಕ್ಕೆ ಎಚ್ಚರಿಕೆ ನೀಡಿದ್ದು, ಭಾರತದ ಸೈನಿಕರ ವಿಚಾರಕ್ಕೆ ಬಂದರೆ ಪಾಕಿಸ್ತಾನವನ್ನು ನಿರ್ನಾಮ ಮಾಡಲು ಹಿಂದೇಟು ಹಾಕುವುದಿಲ್ಲ ಎಂದಿದ್ದಾರೆ. ಆದ್ದರಿಂದ ನರೇಂದ್ರ ಮೋದಿಯವರ ಭದ್ರತಾ ಪಡೆಯನ್ನು ಮುಟ್ಟಿದರೆ ಉಗ್ರರು ಸುಟ್ಟು ಹೋಗುವುದು ಗ್ಯಾರಂಟಿ..!

ನರೇಂದ್ರ ಮೋದಿ ಇರೋವರೆಗೂ ಜಿಹಾದ್ ನಡೆಸಲು ಸಾಧ್ಯವಿಲ್ಲ ಎಂದು ಅರಿತಿರುವ ಮತಾಂಧರರು ಮೋದಿ ಹತ್ಯೆಗೆ ಸಂಚು ರೂಪಿಸಿದ್ದಾರೆ. ಆದರೆ ಅದು ಅಷ್ಟು ಸುಲಭದ ಮಾತಲ್ಲ, ಯಾಕೆಂದರೆ ಮೋದಿಯವರನ್ನು ಮುಟ್ಟೋಕು ಮುಂಚೆ ಈ ಬೃಹತ್ ಸೈನ್ಯವನ್ನು ದಾಟುವ ಧೈರ್ಯ ಉಗ್ರರು ಮಾಡಬೇಕು.‌ ಅಷ್ಟಕ್ಕೂ ಮೋದಿ ಜೊತೆಗಿರುವುದು ಜಗತ್ತಿನ ದೊಡ್ಡಣ್ಣ ಅಮೇರಿಕಾದ ಅಧ್ಯಕ್ಷರಿಗಿರುವ ಮಾದರಿಯ ಭದ್ರತೆ. ಆದ್ದರಿಂದ ಬೆದರಿಕೆ ಬಂದ ತಕ್ಷಣ ಹೆದರಬೇಕಾದ ಅವಶ್ಯಕತೆ ನಮಗಿಲ್ಲ. ನಮ್ಮ ಸೈನಿಕರ ಮೇಲೆ ಸ್ವತಃ ನರೇಂದ್ರ ಮೋದಿಯವರೇ ನಂಬಿಕೆ ಇಟ್ಟಿದ್ದಾರೆ ಎಂದರೆ ನಾವು ನಂಬುವುದರಲ್ಲಿ ಸಂಶಯವೇ ಇಲ್ಲ.!

–ಪಿ ಆರ್ ಶೆಟ್ಟಿ

Editor Postcard Kannada:
Related Post