X

ಬ್ರೇಕಿಂಗ್: ಚಿದು ಪುತ್ರನಿಗೆ ಮತ್ತೆ ಜೈಲೇ ಗತಿ!! ಸಿಬಿಐ ಕೋರ್ಟ್‍ನಿಂದ ಮಹತ್ವದ ಆದೇಶ…

ಸಾವಿರಾರು ಕೋಟಿ ರೂಗಳನ್ನು ತನ್ನ ಅಧಿಕಾರವಧಿಯಲ್ಲಿ ಲೂಟಿ ಮಾಡಿ. ಈಗ ಅದರ ಪಾಪವನ್ನು ಅನುಭವಿಸುತ್ತಿರುವ ಕಾಂಗ್ರೆಸ್‍ನ ರಾಷ್ಟ್ರೀಯ ನಾಯಕರು ಹಾಗೂ ಅವರ ಕುಟುಂಬಸ್ಥರಿಗೆ ಈಗ ಮೋದಿ ಸರ್ಕಾರದಲ್ಲಿ ಶಾಕ್ ಮೇಲೆ ಶಾಕ್ ಕಾದಿದೆ. ಒಂದಲ್ಲಾ ಒಂದು ಕಾರಣದಿಂದ ಯುಪಿಎ ಸರ್ಕಾರದ ಅವಧಿಯ ಭ್ರಷ್ಟಾಚಾರಗಳು ಈಗ ಬಯಲಾಗುತ್ತಿದ್ದು, ಈಗ ಅದು ತನ್ನತ್ತ ಮುಖಮಾಡುತ್ತಿದೆ. ಈ ಮೂಲಕ ತಾವುಗಳ ಅಂದರೆ ಕಾಂಗ್ರೆಸ್ ನಾಯಕರು ತನ್ನ ಅಧಿಕಾರಾವಧಿಯಲ್ಲಿ ಮಾಡಿದ್ದ ಅಷ್ಟೂ ಅವಾಂತರಗಳ ಬಗ್ಗೆಯೂ ಈಗ ಪರಿತಪಿಸುತ್ತಿದ್ದಾರೆ. ಮಾತ್ರವಲ್ಲದೆ ತಮ್ಮ ಪಾಪಗಳನ್ನೂ ಕಾಂಗ್ರೆಸ್ ನಾಯಕರು ಅನುಭವಿಸುತ್ತಿದ್ದಾರೆ.

ಮತ್ತೆ ಕಸ್ಟಡಿ ಆದೇಶಿಸಿದ ಸಿಬಿಐ ಕೋರ್ಟ್…

ಇತ್ತೀಚೆಗೆ ಲಂಚಾವತರದಿಂದ ಜೈಲು ಪಾಲಾಗಿದ್ದ ಮಾಜಿ ಕೇಂದ್ರ ವಿತ್ತ ಸಚಿವ ಚಿದಂಬರಂ ಅವರ ಪುತ್ರ ಕಾರ್ತಿ ಚಿದಂಬರಂ ಅವರನ್ನು ಸಿಬಿಐ ಪೊಲೀಸರು ಬಂಧಿಸಿ ಕಸ್ಟಡಿಗೆ ತೆಗೆದುಕೊಂಡಿದ್ದರು. ಮಹಿಳೆಯೋರ್ವರಿಂದ ಬರೋಬ್ಬರಿ 6 ಕೋಟಿ ಲಂಚವನ್ನು ಸ್ವೀಕರಿಸಿದ ವಿಚಾರವಾಗಿ ಸಿಬಿಐ ಕಾರ್ತಿಯನ್ನು ಬಂಧಿಸಿತ್ತು. ಕಾರ್ತಿಯನ್ನು ಬಂಧಿಸಿ ವಿಚಾರಣೆ ನಡೆಸಿದ ನ್ಯಾಯಾಲಯ ಇಂದು ಮತ್ತೆ ಜಾಮೀನಿನ ಅರ್ಜಿಯ ವಿಚಾರಣೆ ನಡೆಸಿದೆ. ಈ ವೇಳೆ ಕಾರ್ತಿಯ ಜಾಮೀನು ಅರ್ಜಿಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಸಿಬಿಐ ಪೊಲೀಸರು ಕಾರ್ತಿಯನ್ನು ಇನ್ನಷ್ಟು ದಿನ ಕಸ್ಟಡಿಗೆ ನೀಡಬೇಕು. ನಮ್ಮ ತನಿಖೆ ಪೂರ್ಣಗೊಂಡಿಲ್ಲ. ಹೀಗಾಗಿ ಇನ್ನೂ ಕೆಲ ದಿನಗಳು ನಮಗೆ ತನಿಖೆ ಹಾಗೂ ವಿಚಾರಣೆ ನಡೆಸಲು ಸಮಯಾವಕಾಶ ಬೇಕು ಎಂದು ಕೋರಿದೆ.

“ಮಾಜಿ ಕೇಂದ್ರ ವಿತ್ತ ಸಚಿವ ಚಿದಂಬರಂ ಅವರ ಪುತ್ರ ಕಾರ್ತಿಯನ್ನು ಇನ್ನಷ್ಟು ತನಿಖೆ ನಡೆಸಲು ಕಸ್ಟಡಿಗೆ ನೀಡಬೇಕು. ಕಾರ್ತಿ ಜೈಲಿನ ಒಳಗಿರುವಾಗಲೇ ತಮ್ಮ ಮೇಲಿನ ಪ್ರಕರಣದ ತನಿಖೆಯ ಸಾಕ್ಷಿಯನ್ನು ನಾಶ ಪಡಿಸಲು ಪ್ರಯತ್ನಿಸಿದ್ದರು. ಹೀಗಾಗಿ ಅವರನ್ನು ಬಂಧಮುಕ್ತಗೊಳಿಸಿದರೆ ಇನ್ನಷ್ಟು ಸಾಕ್ಷ್ಯ ನಾಶ ಆಗುವ ಭೀತಿಯೂ ಎದುರಾಗಿದೆ. ಮಾತ್ರವಲ್ಲದೆ ಆತನನ್ನು ಇನ್ನಷ್ಟು ತನಿಖೆಯನ್ನು ನಡೆಸಲಿದ್ದು, ಇನ್ನಷ್ಟು ವಿಚಾರಣೆ ನಡೆಯಲಿದೆ. ಹೀಗಾಗಿ ಕಾರ್ತಿಯನ್ನು ಮತ್ತೆ ತಮ್ಮ ಕಸ್ಟಡಿಗೆ ನೀಡಬೇಕಾಗಿ ಕೇಳಿಕೊಳ್ಳುತ್ತೇವೆ” ಎಂದು ಹೇಳಿದ್ದಾರೆ. ಇದಕ್ಕೆ ಸಮ್ಮತಿ ಸೂಚಿಸಿರುವ ಸಿಬಿಐ ವಿಶೇಷ ನ್ಯಾಯಾಲಯ ಕಾರ್ತಿಯನ್ನು ಇನ್ನೂ ಮೂರು ದಿನ ಕಸ್ಟಡಿಗೆ ನೀಡಿ ಆದೇಶಿಸಿದೆ.

ಪ್ರಕರಣ ಏನು..?

ಹಗರಣಗಳ ಮೇಲೆ ಹಗರಣಗಳ ಸುರಿಮಳೆಯನ್ನೇ ಹೊತ್ತಿರುವ ಮಾಜಿ ಕೇಂದ್ರ ಹಣಕಾಸು ಸಚಿವ ಪಿ ಚಿದಂಬರಂ ಕುಟುಂಬ ಇದೀಗ ಮತ್ತೊಂದು ಸಂಕಷ್ಟವನ್ನು ಎದುರು ನೋಡುತ್ತಿದೆ. ಐಎನ್ ಎಕ್ಸ್ ಮೀಡಿಯಾ ಸಂಸ್ಥೆಯಲ್ಲಿ ಅಕ್ರಮ ಹಣಕಾಸು ವರ್ಗಾವಣೆ ಪ್ರಕರಣ ಸಂಬಂಧ ಕೇಂದ್ರ ಮಾಜಿ ಸಚಿವ ಕಾರ್ತಿ ಚಿದಂಬರಂ ಇಂದು ಬೆಳಗ್ಗೆ ಸಿಬಿಐ, ಚೆನ್ನೈ ಏರ್ ಪೆÇೀರ್ಟ್‍ನಲ್ಲಿ ಬಂಧಿಸಿದೆ.

ಕಾರ್ತಿ ಸಂಸ್ಥೆಯ ಸಿಎ ಭಾಸ್ಕರ್ ರಾಮನ್ ಅವರನ್ನು ಬಂಧಿಸಲಾಗಿದ್ದು, ಲಂಡನ್ ನಿಂದ ವಾಪಸ್ ಆಗುತ್ತಿದ್ದಂತೆಯೇ ಚೆನ್ನೈನ ವಿಮಾನ ನಿಲ್ದಾಣದಲ್ಲಿ ಕಾರ್ತಿ ಚಿದಂಬರ್ ಅವರನ್ನು ಸಿಬಿಐ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ!!

ಐಎನ್ ಎಕ್ಸ್ ಮೀಡಿಯಾ ಭ್ರಷ್ಟಾಚಾರ ಹಾಗೂ ವಿದೇಶಿ ವಿನಿಮಯ ನಿರ್ವಹಣಾ ಕಾಯ್ದೆ (ಫೆಮಾ) ಉಲ್ಲಂಘಿಸಿದ ಆರೋಪ ಎದುರಿಸುತ್ತಿರುವ ಕಾರ್ತಿ ಚಿದಂಬರಂ ಅವರ ವಿರುದ್ಧ ಸಿಬಿಐ ಸಹ ಪ್ರಕರಣ ದಾಖಲಿಸಿಕೊಂಡಿತ್ತು. ಹಲವು ದಿನಗಳಿಂದ ಪ್ರಕರಣ ಸಂಬಂಧ ಕಾರ್ತಿ ಚಿದಂಬರಂ ಅವರ ವಿರುದ್ಧ ದಾಖಲಾಗಿದ್ದ ದೂರಿನ ಅನ್ವಯ ಹಲವು ಬಾರಿ ವಿಚಾರಣೆಗೆ ಒಳಗಾಗಿದ್ದರು.

ಅಷ್ಟೇ ಅಲ್ಲದೇ, ಕೇಂದ್ರದಲ್ಲಿ ಯುಪಿಎ ಸರ್ಕಾರವಿದ್ದಾಗ ಚಿದಂಬರಂ ಸಚಿವರಾಗಿದ್ದರು, ಈ ವೇಳೆ ಐಎನ್ ಎಕ್ಸ್ ಮೀಡಿಯಾ ಸಂಸ್ಥೆ ಹಗರಣ ನಡೆದಿತ್ತು. ಆದರೆ ಅಕ್ರಮ ಹಣ ವಹಿವಾಟು ತಡೆ ಕಾಯ್ದೆ ಅಡಿ ಕಾರ್ತಿ ಚಿದಂಬರಂ ವಿರುದ್ಧ ಇಡಿ ಮೇ, 2017ರಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದು, ವಿದೇಶಿ ವಿನಿಮಯ ನಿರ್ವಹಣಾ ಕಾಯಿದೆ ಉಲ್ಲಂಘನೆ ಆರೋಪದಲ್ಲಿ ಕಾರ್ತಿ ಚಿದಂರಬರಂ ನನ್ನು ಬಂಧಿಸಲಾಗಿದೆ.

ಏನಿದು ಐಎನ್ಎಕ್ಸ್ ಮೀಡಿಯಾ ಪ್ರಕರಣ?

2008ರಲ್ಲಿ ಐಎನ್‍ಎಕ್ಸ್ ಮೀಡಿಯಾ ಕಾರ್ತಿ ಅವರ ಅಡ್ವಾಂಟೇಜ್ ಸ್ಟ್ರಾಟೆಜಿಕ್ ಕನ್ಸಲ್ಟಿಂಗ್ ಸಂಸ್ಥೆ ಹಾಗೂ ಅದರ ಸಹ ಸಂಸ್ಥೆಗಳಿಗೆ ಹಣ ಪಾವತಿಸಿ ಶೇರ್ ಗಳನು ನೀಡಿತ್ತು. ಅಷ್ಟೇ ಅಲ್ಲದೇ, ಪೀಟರ್ ಮುಖರ್ಜಿ ಅವರ ಐಎನ್‍ಎಕ್ಸ್ ಮೀಡಿಯಾ ಸಂಸ್ಥೆ ಹಲವು ಕಂತುಗಳಲ್ಲಿ ಹಣವನ್ನು ಪಾವತಿಸಿದ್ದು, 60 ಶೇರುಗಳನ್ನು ಲಂಡನ್ ಮೂಲದ ಆರ್ಟಿವಿಯಾ ಡಿಜಿಟಲ್ ಯುಕೆ ಲಿಮಿಟಡ್ ಕಂಪೆನಿಯಿಂದ ಕಾರ್ತಿ ಅವರ ಸಂಸ್ಥೆಗೆ ವರ್ಗಾಯಿಸಲಾಗಿತ್ತು ಎಂದು ವರದಿಯಾಗಿದೆ.

ಈ ಹಿಂದೆ ಕಾರ್ತಿ ಅವರ ಮನೆ ಮೇಲೆ ಆದಾಯ ತೆರಿಗೆ ಇಲಾಖೆ ದಾಳಿ ನಡೆಸಿದಾಗ ಕಾರ್ತಿ ಅವರ ಸಂಸ್ಥೆಯ ಬಗ್ಗೆ ಮಾಹಿತಿವುಳ್ಳ ಹಾರ್ಡ್ ಡಿಸ್ಕ್‍ಗಳನ್ನ ಜಪ್ತಿ ಮಾಡಲಾಗಿತ್ತು. ಕಾರ್ತಿ ಅವರು ಐಎನ್‍ಎಕ್ಸ್ ಮೀಡಿಯಾದಿಂದ ಕಿಕ್ ಬ್ಯಾಕ್ ಪಡೆದಿದ್ದಾರೆಂಬುದು ತನಿಖೆಯಿಂದ ಬಹಿರಂಗವಾಗಿತ್ತು. 2008 ಸೆಪ್ಟೆಂಬರ್ 22ರಂದು ಎಫ್ ಐಪಿಬಿ(ವಿದೇಶಿ ಹೂಡಿಕೆ ಉತ್ತೇಜನ ಮಂಡಳಿ) ನಿಂದ 220 ಮಿಲಿಯನ್ ಡಾಲರ್ ಕ್ಲಿಯರೆನ್ಸ್‍ಗಾಗಿ ಅರ್ಜಿ ಹಾಕಿದ್ದ ಐಎನ್‍ಎಕ್ಸ್ ಮೀಡಿಯಾ, ಕಾರ್ತಿ ಅವರ ಸಂಸ್ಥೆಗೆ 35 ಲಕ್ಷ ರೂಪಾಯಿ ನೀಡಿದೆ ಎನ್ನುವ ಆರೋಪ ಕೇಳಿ ಬಂಧಿಸಿತ್ತು.

ಪೀಟರ್ ಮುಖರ್ಜಿ ಹಾಗೂ ಇಂದ್ರಾಣಿ ಮುಖರ್ಜಿ ನೇತೃತ್ವದ ಐಎನ್ ಎಕ್ಸ್ ಮೀಡಿಯಾ ಸಂಸ್ಥೆಯಲ್ಲಿ ವಿದೇಶಿ ಹೂಡಿಕೆಗೆ 2007ರಲ್ಲಿ ಅಂದಿನ ಹಣಕಾಸು ಸಚಿವ ಪಿ. ಚಿದಂಬರಂ ಅನುಮತಿ ನೀಡಿದ್ದರು. ಇದಕ್ಕಾಗಿ ಸಂಸ್ಥೆಯಿಂದ ಕಾರ್ತಿ ಚಿದಂಬರಂಗೆ 10 ಲಕ್ಷ ರೂಪಾಯಿ ಕಿಕ್ ಬ್ಯಾಕ್ ದೊರೆತಿತ್ತು ಎನ್ನಲಾಗಿದೆ. ಅಲ್ಲದೇ, ವಿದೇಶಿ ಹೂಡಿಕೆ ಪೆÇ್ರೀತ್ಸಾಹ ಮಂಡಳಿ 4 ಕೋಟಿ ರೂಪಾಯಿ ಹೂಡಿಕೆಗೆ ಅನುಮತಿ ಕಲ್ಪಿಸಿದ್ದರೂ, ಇದನ್ನು ಮೀರಿ 305 ಕೋಟಿ ರೂಪಾಯಿ ವಿದೇಶಿ ಹೂಡಿಕೆ ಮಾಡಲಾಗಿತ್ತು. ಕಾರ್ತಿ ಚಿದಂಬರಂ ಹೆಸರಿನಲ್ಲಿರುವ ಚೆಸ್ ಮ್ಯಾನೇಜ್ ಮೆಂಟ್ ಸರ್ವಿಸಸ್ ಸಂಸ್ಥೆಗೆ 3.5 ಕೋಟಿ ರೂಪಾಯಿ ನೀಡಲಾಗಿತ್ತು.

ಹಾಗಾಗಿ, 2007ರಲ್ಲಿ ಮಾರಿಷಸ್‍ನಿಂದ ಬಂಡವಾಳ ಪಡೆಯುವ ವೇಳೆ ಎಫ್ ಐಪಿಬಿ ನಿಯಮಾವಳಿ ಉಲ್ಲಂಘನೆ ಮಾಡಲಾಗಿರುವುದು ಕಂಡು ಬಂದ ಹಿನ್ನಲೆಯಲ್ಲಿ ಇ ಡಿ ಪ್ರಕರಣ ದಾಖಲಿಸಿಕೊಂಡು ತನಿಖೆಗೆ ಇಳಿದಿದೆ. ಅಕ್ರಮ ಹಣ ವರ್ಗಾವಣೆ ಸೇರಿದಂತೆ ವಿವಿಧ ಪ್ರಕರಣಗಳಲ್ಲಿ ಕಾರ್ತಿ ವಿರುದ್ಧ ಜಾರಿ ನಿರ್ದೇಶನಾಲಯ ಮತ್ತು ಸಿಬಿಐ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ. ಒಟ್ಟಿನಲ್ಲಿ ಪಿ. ಚಿದಂಬರಂ ಕುಟುಂಬವು ಒಟ್ಟು ಹತ್ತು ಹಗರಣಗಳನ್ನು ಎದುರಿಸುತ್ತಿದ್ದು, ಅದರಲ್ಲಿ ಇದೀಗ ಈ ಹಗರಣ ಸಾಬಿತಾಗಿ ಪಿ. ಚಿದಂಬರಂ ಮಗಾ ಪೊಲೀಸರ ಅಥಿತಿಯಾಗಿದ್ದಾನೇ.

ಒಟ್ಟಿನಲ್ಲಿ ತಂದೆ ಭ್ರಷ್ಟಾಚಾರ ಮಾಡಿಟ್ಟಿದ್ದ ಅಷ್ಟೂ ಅಕ್ರಮ ಆಸ್ತಿಯೂ ಸಾಲದೆ ತಾನೂ ಲಂಚದ ಮೊರೆ ಹೋಗಿ ಸಿಬಿಐ ಬಲೆಗೆ ಬಿದ್ದಿದ್ದ ಚಿದು ಪುತ್ರ ಕಾರ್ತಿ ಚಿದಂಬರಂಗೆ ಇಂದು ಬಿಡುಗಡೆ ಭಾಗ್ಯ ದೊರಕಲೇ ಇಲ್ಲ. ಇಂದಾದರೂ ಬಿಡುಗಡೆಯಾಗಬಹುದು ಎಂದು ನಂಬಿಕೊಂಡಿದ್ದ ಕಾರ್ತಿ ಚಿದಂಬರಂ ಸಿಬಿಐ ಪಂಜರದ ಪಕ್ಷಿಯಾಗಿಯೇ ಉಳಿದಿದ್ದಾರೆ. ಇದು ಕಾಂಗ್ರೆಸ್‍ನ ಮೊದಲ ಹಕ್ಕಿಯಾಗಿದ್ದು ಮೋದಿ ಆಡಳಿತದಲ್ಲಿ ಇನ್ನೂ ಅನೇಕ ಕಾಂಗ್ರೆಸ್ ಭ್ರಷ್ಟರನ್ನು ಜೈಲಿಗೆ ಕಳಿಸುವ ಎಲ್ಲಾ ಮುನ್ಸೂಚನೆಯೂ ಕಾಣುತ್ತಿದೆ.

-ಸುನಿಲ್ ಪಣಪಿಲ

Editor Postcard Kannada:
Related Post